ಪ್ರತಿದಿನದ ಪೂಜೆಗೆ, ಹಬ್ಬ ಹರಿದಿನಗಳಲ್ಲಿ, ದೇವಸ್ಥಾನ ಮದುವೆ ಮನೆ ಅಲಂಕಾರಕ್ಕೆ, ಇತ್ಯಾದಿ ಕಾರಣಗಳಿಗಾಗಿ ಸೇವಂತಿಗೆ ಹೂವಿಗೆ ಬಾರಿ ಡಿಮ್ಯಾಂಡ್ ಇದೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬದಿಂದ ಶುರುವಾಗುವ ಸೀಸನ್ ಗೌರಿ ಗಣೇಶ, ನವರಾತ್ರಿ, ದೀಪಾವಳಿ ಮುಗಿಯುವವರೆಗೂ ಕೂಡ ಬಹಳ ಬೇಡಿಕೆಯಲ್ಲಿರುತ್ತದೆ. ಇಂತಹ ಸೀಸನ್ ನೋಡಿಕೊಂಡು ರೈತನೇನಾದರೂ ಸೇವಂತಿಗೆ ಕೃಷಿ ಮಾಡುವುದಾದರೆ ಆತನಿಗೆ ಕೈತುಂಬ ಆದಾಯ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಈ ಟ್ರಿಕ್ ಉಪಯೋಗಿಸಿ ಸೇವಂತಿಗೆ ಕೃಷಿ ಮಾಡಿ ಮೊದಲ ಕುಯ್ಲಿಗೆ 7.50 ಲಕ್ಷ ಆದಾಯ ಕಂಡಿರುವ ರೈತರೊಬ್ಬರು ಉದಾಹರಣೆಯೊಂದಿಗೆ ಸೇವಂತಿಗೆ ಕೃಷಿ ಬಗ್ಗೆ ಅವರು ತಿಳಿಸಿದ ಕೆಲವು ಪಾಯಿಂಟ್ ಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಮಾಹಿತಿಯು ಯಾವುದಾದರೂ ಒಬ್ಬ ರೈತನಿಗೆ ಅನುಕೂಲವಾದರೂ ನಮ್ಮ ಬರಹಕ್ಕೆ ಬೆಲೆ ಸಿಕ್ಕಂತೆ ಹಾಗಾಗಿ ತಪ್ಪದೆ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಶೇರ್ ಮಾಡಿ.
ಈ ಸುದ್ದಿ ಓದಿ:- 5 ಗ್ಯಾರೆಂಟಿ ಘೋಷಣೆ ಮಾಡಿದ ನರೇಂದ್ರ ಮೋದಿ.! ಗದ್ದುಗೆಗಾಗಿ BJP ಸರ್ಕಾರದ ರಣತಂತ್ರ.!
ಹೊಸಕೋಟೆ ಸಮೀಪದ ರೈತರೊಬ್ಬರು ತಮ್ಮ ಒಂದು ಎಕರೆ ಜಮೀನಿಗೆ ಸೇವಂತಿಗೆ ಕೃಷಿ ಮಾಡಿದ್ದಾರೆ. ಈ ಹಿಂದೆಯೂ ಕೂಡ ಇವರಿಗೆ ಸೇವಂತಿಗೆ ಬೆಳೆದು ಈ ಬೆಳೆ ಬಗ್ಗೆ ಚೆನ್ನಾಗಿ ಅನುಭವವಿದೆ. ಒಂದು ಎಕರೆಗೆ 9,000 ಗಿಡಗಳನ್ನು ನೆಡುವ ಇವರು ಕೊಲ್ಕತ್ತಾದಿಂದ ಕಸಿ ಮಾಡಿಸಿ ತಂದ ಗಿಡಗಳನ್ನು ನರ್ಸರಿಯಿಂದ ಒಂದು ಗಿಡಕ್ಕೆ 5-6 ರೂಪಾಯಿ ಕೊಟ್ಟು ಖರೀದಿಸುತ್ತಾರಂತೆ ಮತ್ತು ಸಾಲಿನಲ್ಲಿ ಒಂದು ಸಾಲಿನಿಂದ ಇನ್ನೊಂದು ಸಾಲಿಗೆ 4-5 ಅಡಿ ಜಾಗ ಬಿಟ್ಟು ಒಂದು ಅಡಿ ಅಂತರದಲ್ಲಿ ನಾಟಿ ಮಾಡಿಸುತ್ತಾರಂತೆ.
ಸಾಮಾನ್ಯವಾಗಿ ಮಳೆಗಾಲವಿದ್ದರೆ ಹನಿ ನೀರಾವರಿ ಪದ್ಧತಿ ಅಳವಡಿಸುವ ಇವರು ಈಗ ಬೇಸಿಗೆ ಕಾಲ ಆಗಿರುವುದರಿಂದ ಸಾಲಿಗೆ ನೀರು ಹರಿಸಿ, ಗಿಡದ ಬೆಳವಣಿಗೆ ನೋಡಿ ಅವಶ್ಯಕತೆ ಇದ್ದರೆ ನೀರನ್ನು ಸ್ಪ್ರೇ ಮಾಡಿಸಿ ಸಾಕುತ್ತಿದ್ದಾರಂತೆ. ನಾಟಿ ಒಂದೇ ದಿನಕ್ಕೆ ಆಗುತ್ತದೆ ಆದರೆ ವಾರಕ್ಕೊಮ್ಮೆ ಔಷದಿ ಹೊಡೆಯುತ್ತಲೇ ಇರಬೇಕು ಇಲ್ಲವಾದಲ್ಲಿ ಹುಳಗಳು ಕೀಟಗಳ ಭಾದೆ ಬರುತ್ತದೆ ಜೊತೆಗೆ ಕೊಟ್ಟಿಗೆ ಗೊಬ್ಬರ ಕೆಂಪು ಮಣ್ಣು ಮಿಕ್ಸ್ ಮಾಡಿ ನಾಟಿಗೂ ಮೊದಲು ಹಾಕಿರುತ್ತೇವೆ ಇದಾದ ಬಳಿಕವೂ ಗೊಬ್ಬರ ಹಾಕುತ್ತಿರಬೇಕು.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
1KG ಗೆ ರೂ.2000 ದಂತೆ ಗೊಬ್ಬರದ ಚಾರ್ಜ್ ಬೀಳುತ್ತದೆ ನಾವು ಎಷ್ಟು ಗೊಬ್ಬರ ಕೊಡುತ್ತೇವೆ ಅಷ್ಟು ಚೆನ್ನಾಗಿ ಗಿಡ ಬರುತ್ತದೆ. ಗಿಡದ ಬೆಳವಣಿಗೆ ನೋಡಿಕೊಂಡು ಹಾಕುತ್ತೇವೆ. ರಸ ಗೊಬ್ಬ, ಔಷಧಿ, ಕ್ರಿಮಿಕೀಟ ನಾಶಕಗಳಿಗೆ ಬಂಡವಾಳ ಸುರಿಯಬೇಕು. ಕೂಲಿ ಆಳುಗಳಿಗೂ ಕೂಡ ಬಾರಿ ಡಿಮ್ಯಾಂಡ್ ಇದೆ. ಬೆಳಗ್ಗೆ 6 ರಿಂದ 10 ಅವಧಿಗೆ 200 ಮತ್ತು ಸಂಜೆ 4 ರಿಂದ 6:30 ವರೆಗೆ 150 ರೂಪಾಯಿ ಕೂಲಿ ತೆಗೆದುಕೊಳ್ಳುತ್ತಾರೆ, ಒಬ್ಬರು 30KG ಕಟಾವು ಮಾಡುತ್ತಾರೆ.
ಮೂರು ತಿಂಗಳಿಗೆ ಇದು ಇಳುವರಿ ಕೊಡುತ್ತದೆ ಆದರೆ ಅದಕ್ಕೂ ಮುನ್ನ ಗಿಡ ಒಂದು ತಿಂಗಳು ಇರುವಾಗಲೇ ಮೊಗ್ಗು ಕಚ್ಚಿಬಿಡುತ್ತದೆ ಅದು ವೇಸ್ಟ್ ಆಗಲೇ ಹೂವು ಅರಳಿದರೆ ಇಳುವರಿ ಚೆನ್ನಾಗಿ ಬರುವುದಿಲ್ಲ ಮತ್ತು ಹೂವು ಅರಳುವುದು ಇಲ್ಲ, ಗಿಡ ಬೆಳೆಯುವುದಿಲ್ಲ. ಹಾಗಾಗಿ ಒಂದು ತಿಂಗಳು ಪೂರ್ತಿ ರಾತ್ರಿ ಹೊತ್ತು ಲೈಟಿಂಗ್ ಮಾಡುತ್ತೇವೆ ನಂತರ ಇನ್ನೊಂದು ಬಾರಿ ಈ ರೀತಿ ಬೇಗನೆ ಮೊಗ್ಗಾದವುಗಳನ್ನು ಕತ್ತರಿಸುತ್ತೇವೆ.
ಈ ಸುದ್ದಿ ಓದಿ:- ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಹೀಗೆ ಮಾಡಿದಾಗ ಗಿಡ ಚೆನ್ನಾಗಿ ಬೆಳವಣಿಗೆಯಾಗುತ್ತದೆ. ಗಿಡ ಚೆನ್ನಾಗಿ ಬೆಳವಣಿಗೆ ಆದಮೇಲೆ ಮೊಗ್ಗು ಕಚ್ಚಿ ಹೂವು ಬಿಟ್ಟರೆ ಚೆನ್ನಾಗಿ ಇಳುವರಿ ಕೊಡುತ್ತದೆ. ಹತ್ತಿರದಲ್ಲಿರುವ ಸಿಟಿ ಮಾರ್ಕೆಟ್ ಗೆ ಹಾಕುತ್ತೇವೆ. KGಗೆ 150 ರಿಂದ 200 ರೂಪಾಯಿ ಬರುತ್ತದೆ ಎಂದು ಮಾಹಿತಿ ನೀಡುತ್ತಾರೆ. ಸೇವಂತಿಕೆ ಕೃಷಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಆಸಕ್ತಿ ಇದ್ದವರು ನಿಮ್ಮ ತಾಲೂಕು ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿಕೊಟ್ಟು ಮಾಹಿತಿ ಪಡೆದು ಸೇವಂತಿಗೆ ಕೃಷಿ ಮಾಡಿ.