ಮಾರ್ಚ್ 08 ಅಂತರಾಷ್ಟ್ರೀಯ ಮಹಿಳಾ ದಿನ(International women’s day). ಈ ವಿಶೇಷ ದಿನದ ಪ್ರಯುಕ್ತ ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ನಾರಿಮಣಿಯರಿಗೆ ಒಂದು ಗಿಫ್ಟ್ ಸಿಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಅಧ್ಯಕ್ಷತೆಯ ಭಾರತೀಯ ಜನತಾ ಪಕ್ಷ (BJP) ಸರ್ಕಾರವು ಮತ್ತೊಮ್ಮೆ ದೇಶದಾದ್ಯಂತ ಎಲ್ಲರಿಗೂ ಅನ್ವಯವಾಗುವಂತೆ LPG ಸಿಲಿಂಡರ್ ಬೆಲಯನ್ನು (LPG cylinder price)ಯನ್ನು ರೂ.100 ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಪ್ರಧಾನಿಗಳೇ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕೂಡ ವಿಷಯ ಹಂಚಿಕೊಂಡು ಸ್ಪಷ್ಟಪಡಿಸಿದ್ದಾರೆ. ಅಡುಗೆ ಅನಿಲವನ್ನು ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಗೆ ನೀಡಿ ಈ ಮೂಲಕ ಕುಟುಂಬಗಳ ಮೇಲಿನ ಹೊರೆಯನ್ನು ಕೊಂಚ ಕಡಿಮೆ ಮಾಡಿ ಈ ಮೂಲಕ ಕುಟುಂಬಗಳ ಯೋಗ ಕ್ಷೇಮವನ್ನು ಬೆಂಬಲಿಸಲು ಮತ್ತು ಆರೋಗ್ಯಕರ ವಾತಾವರಣದಲ್ಲಿ ಹೆಣ್ಣು ಮಕ್ಕಳು ಅಡುಗೆ ಮಾಡಲು ಸಾಧ್ಯವಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ.
ಇದು ಮಹಿಳೆಯರ ಸಬಲೀಕರಣ ಮತ್ತು ಅವರ ಬದುಕನ್ನು ಸರಳಗೊಳಿಸಿ ಇದನ್ನು ಖಾತ್ರಿಪಡಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ ಎಂದು ಹೇಳಿರುವ ಪ್ರಧಾನಿಗಳು ಎಲ್ಲಾ ಅವಶ್ಯಕತೆಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಸ್ವಲ್ಪ ರಿಲೀಫ್ ನೀಡಿದ್ದಾರೆ. ಈ ಹಿಂದೆ ರಕ್ಷಾಬಂಧನ ಸಮಯದಲ್ಲಿ ಕೂಡ ಇಂತಹ ಬಂಪರ್ ಗಿಫ್ಟ್ ನೀಡಲಾಗಿತ್ತು.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ತಿದ್ದುಪಡಿಗೆ ಅರ್ಜಿ ಆರಂಭ, 2 ದಿನ ಮಾತ್ರ ಅವಕಾಶ.!
ಈಗ ಮತ್ತೊಮ್ಮೆ LPG ಸಿಲಿಂಡರ್ಗಳ ಬೆಲೆ ಎಲ್ಲರಿಗೂ ಅನ್ವಯವಾಗುವಂತೆ ಕಡಿಮೆಯಾಗಿದೆ. ಮತ್ತೊಮ್ಮೆ LPG ಸಿಲಿಂಡರ್ ಬೆಲೆಯನ್ನು 100 ರೂ ಇಳಿಸಲಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನದ ಶುಭಕೋರಿ ಈ ಮಾಹಿತಿಯನ್ನು ಪ್ರಧಾನಿ ಮೋದಿ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನಲ್ಲಿ ಇಂದು ನಾವು LPG ಸಿಲಿಂಡರ್ಗಳ ಬೆಲೆಯಲ್ಲಿ 100 ರೂಪಾಯಿಗಳ ರಿಯಾಯಿತಿಯ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಸರ್ಕಾರದ ಈ ಕೊಡುಗೆಯಿಂದ ದೇಶದಾದ್ಯಂತ ಲಕ್ಷಾಂತರ ಕುಟುಂಬಗಳ ಆರ್ಥಿಕ ಹೊರೆಯು ಕಡಿಮೆಯಾಗಲಿದೆ. ಇದರ ಜೊತೆಗೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ (PMUY) ಲಭ್ಯವಿರುವ ಸಬ್ಸಿಡಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ಕೂಡ ಅನುಕೂಲತೆ ಮಾಡಿಕೊಡಲಾಗಿದೆ.
ಹೀಗಾಗಿ ಉಜ್ವಲ ಯೋಜನೆಯ LPG ಸಿಲಿಂಡರ್ಗಳ ಮೇಲಿನ ಸಬ್ಸಿಡಿಯು 31 ಮಾರ್ಚ್ 2025 ರವರೆಗೆ ಲಭ್ಯವಿರುತ್ತದೆ. ಇದರ ಮೂಲಕ ಉಜ್ವಲ್ ಯೋಜನೆಗೆ ಒಳಪಡುವ ಕುಟುಂಬಗಳ 12 LPG ಸಿಲಿಂಡರ್ ಬುಕಿಂಗ್ ಗೆ ಪ್ರತಿ ಸಿಲಿಂಡರ್ಗೆ 300 ರೂ. ಸಬ್ಸಿಡಿ ಸಿಗಲಿದೆ ಇದರಿಂದ ದೇಶದ ಬಡ ಕುಟುಂಬಗಳಿಕೆ ಬಹಳಷ್ಟು ಅನುಕೂಲವಾಗುತ್ತದೆ.
ಈ ಸುದ್ದಿ ಓದಿ:- ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ, PUC ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 42,000/-
ಲೋಕಸಭೆ ಚುನಾವಣೆ (Parliment Election) ಸಮಯದಲ್ಲಿ ಈ ನಿರ್ಧಾರಕ್ಕೆ ಬಂದಿರುವುದರಿಂದ ವಿರೋಧ ಪಕ್ಷಗಳ ಆರೋಪ ಕೂಡ ಇದೆ ಆದರೆ ಇದೆಲ್ಲವನ್ನು ಮೀರಿ ಕೇಂದ್ರ ಸರ್ಕಾರ ಇಂತಹದೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಪ್ರಕಾರ ಬಗ್ಗೆ ಇನ್ನು ಮುಂದೆ ಸಿಲಿಂಡರ್ ಬೆಲೆ ಎಷ್ಟಿರುತ್ತದೆ ಎಂದು ನೋಡುವುದಾದರೆ 14.2KG ಯ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯು ಬೆಂಗಳೂರಿನಲ್ಲಿ ರೂ.805.50, ದೆಹಲಿಯಲ್ಲಿ ಗೃಹಬಳಕೆಯ ಮನೆಗಳಿಗೆ LPG ಸಿಲಿಂಡರ್ನ ಬೆಲೆ ರೂ. 903 ಇತ್ತು ಸರ್ಕಾರದ ಘೋಷಣೆಯಿಂದ ಇನ್ನು ಮುಂದೆ ರೂ.803 ಕ್ಕೆ ಸಿಗುತ್ತದೆ. ಮುಂಬೈನಲ್ಲಿ ರೂ. 902.5 ಇದ್ದರೆ ಕೋಲ್ಕತ್ತಾ ಮತ್ತು ಚೆನ್ನೈ ರೂ.929 ಮತ್ತು ರೂ.918.50 ಗೆ ಮಾರಾಟವಾಗುತ್ತಿದೆ.