ಸ್ವಂತ ಡೈರಿ ಫಾರ್ಮ್ ಮಾಡುವ ಐಡಿಯಾ ಇದ್ದವರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಸಿಗಲಿದೆ 7 ಲಕ್ಷ.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಬೇರೆ ಕಂಪನಿ ಅಥವಾ ಕಚೇರಿಗಳಿಗೆ ಹೋಗಿ ದುಡಿಮೆ ಮಾಡಲು ಇಚ್ಛೆ ಪಡುವವರಿಗಿಂತ ಸ್ವಂತ ಉದ್ಯಮವನ್ನು ಮಾಡಿ ಹಣ ಗಳಿಕೆ ಮಾಡಲು ಇಚ್ಛಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹಳ್ಳಿಗಾಡಿನಲ್ಲಿ ಇದಕ್ಕೆ ಕಡಿಮೆ ಅವಕಾಶವಿದ್ದರೂ ಇರುವ ಅವಕಾಶವನ್ನೇ ಸದುಪಯೋಗ ಮಾಡಿಕೊಂಡು ತಾವು ಸರ್ಕಾರದ ಸಹಾಯದ ಜೊತೆಗೆ ಬದುಕು ಕಟ್ಟಿಕೊಳ್ಳುವ ನಿರ್ಧಾರಕ್ಕೆ, ಹಳ್ಳಿ ಕಾಡಿನ ರೈತ ಯುವಜನತೆ ಮನಸ್ಸು ಮಾಡುತ್ತಿದ್ದಾರೆ.

ಹಳ್ಳಿಗಳಲ್ಲಿ ಹೆಚ್ಚಾಗಿ ಜನರು ಹೈನುಗಾರಿಕೆ ಕೋಳಿ ಸಾಕಾಣಿಕೆ ಮೀನು ಸಾಕಾಣಿಕೆ ಅಥವಾಯ ಗುಡಿ ಕೈಗಾರಿಕೆಗಳ ಕಡೆ ಹೆಚ್ಚು ಗಮನ ಕೊಡುತ್ತಾರೆ. ಇವರಿಗೆ ಸಹಾಯ ಮಾಡುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳ ಮೂಲಕ ಇವರಿಗೆ ಸಹಾಯ ಮಾಡುತ್ತಾ ಬಂದಿವೆ. ಕೃಷಿಯ ಒಂದು ಭಾಗವಾಗಿರುವ ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಜಾನುವಾರು ಸಾಕಾಣಿಕೆ ಅಥವಾ ಡೈರಿ ಫಾರ್ಮ್ ನಿರ್ಮಾಣ ಮಾಡುವುದಕ್ಕೆ 7 ಲಕ್ಷಗಳ ಸಾಲ ಅದರಲ್ಲೂ 33% ಸಹಾಯಧನ ನೀಡುವ ಮೂಲಕ ನೆರವಾಗುತ್ತಿದೆ.

ಡೈರಿ ಉದ್ಯಮ ಅಭಿವೃದ್ಧಿ ಯೋಜನೆ ಅಡಿ ಇಂತಹದೊಂದು ಯೋಜನೆಯನ್ನು ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ಹಾಲು ಉತ್ಪಾದನೆಯನ್ನು ದೇಶದಲ್ಲಿ ಹೆಚ್ಚಿಸಬೇಕು ಜೊತೆಗೆ ಹಾಲು ಉತ್ಪಾದನೆ ಹೆಚ್ಚಳವಾದರೆ ಡೈರಿ ಉತ್ಪನ್ನಗಳ ಸಂಖ್ಯೆಯು ಹೆಚ್ಚಾಗುತ್ತದೆ. ಈ ಮೂಲಕ ಪರೋಕ್ಷವಾಗಿ ಉದ್ಯೋಗ ಸೃಷ್ಟಿ ಮಾಡಿದ ರೀತಿ ಆಗುತ್ತದೆ.

ಅದೇ ರೀತಿ ಹಾಲು ಒಂದು ಅವಶ್ಯಕ ಆಹಾರ ಪದಾರ್ಥ ಆದ್ದರಿಂದ ದೇಶದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸಮರ್ಪಕವಾಗಿ ಹಂಚಲು ಸಹಾಯ ಆಗುತ್ತದೆ ಜೊತೆಗೆ ಹಳ್ಳಿಗಾಡಿನಲ್ಲಿ ಇರುವ ಯುವ ಜನತೆಗೆ ಉದ್ಯಮ ಮಾಡಲು ಅವಕಾಶ ಮಾಡಿಕೊಟ್ಟ ರೀತಿ ಆಗುತ್ತದೆ ಎನ್ನುವುದು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಆಗಿದೆ. ಆದ್ದರಿಂದ ಈ ಯೋಜನೆಯಲ್ಲಿ ಇಷ್ಟೊಂದು ವಿನಾಯಿತಿಯನ್ನು ಸಹ ನೀಡಿ ಪ್ರೋತ್ಸಾಹಿಸುತ್ತಿದೆ.

DEDS ಯೋಜನೆಯ ಇನ್ನಷ್ಟು ಪ್ರಮುಖ ಅಂಶಗಳು ಏನೆಂದರೆ ಕನಿಷ್ಠ 2 ಹಸುಗಳ ಖರೀದಿಗೂ ಕೂಡ ಸಹಾಯಧನ ಮತ್ತು ಸಾಲ ಸೌಲಭ್ಯವನ್ನು ಪಡೆಯಬಹುದು. ಗರಿಷ್ಠ 10 ಹಸುಗಳನ್ನು ಖರೀದಿಸಿ ಡೈರಿ ಫಾರಂ ಆರಂಭಿಸಲು ಇಚ್ಛಿಸುವವರಿಗೆ ಮೊದಲ ಹಂತದಲ್ಲಿಯೇ 7 ಲಕ್ಷ ರೂಪಾಯಿ ಸಾಲ ಸಿಗುತ್ತದೆ. ಇದನ್ನು ಸಾಲ ಪಡೆಯಲು ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಒದಗಿಸಿದ ಎರಡೇ ದಿನಗಳಲ್ಲಿ ಫಲಾನುಭವಿಯ ಖಾತೆಗೆ ಜಮೆ ಮಾಡಲಾಗುತ್ತದೆ.

ಒಂದು ವೇಳೆ ಈ ಸಾಲ ಸೌಲಭ್ಯವನ್ನು ಪಡೆಯುವ ಫಲಾನುಭವಿಯು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದರೆ ಇದರಲ್ಲಿ 25% ಸಬ್ಸಿಡಿ ಉಳಿಯುತ್ತದೆ ಅಥವಾ SC/ST ವರ್ಗಕ್ಕೆ ಸೇರಿದವರಾಗಿದ್ದರೆ 33% ವರೆಗೂ ಕೂಡ ಈ ಸಾಲದಲ್ಲಿ ಸಬ್ಸಿಡಿ ಪಡೆಯಬಹುದು. ರಾಜ್ಯದಲ್ಲಿರುವ ಪ್ರತಿಯೊಬ್ಬ ರೈತ ಕೂಡ ಈ ಯೋಜನೆಯ ಫಲಾನುಭವಿ ಆಗಬಹುದು.

ಹಳ್ಳಿಗಳಲ್ಲಿ ಪಶುಸಂಗೋಪನೆಯೂ ಕೂಡ ಕೃಷಿಯ ಒಂದು ಭಾಗವೇ ಆಗಿರುವುದರಿಂದ ಈ ಮೂಲಕ ರೈತನಿಗೆ ಜೀವನೋಪಾಯವಾಗಿದೆ. ಹೈನುಗಾರಿಕೆಯಲ್ಲಿ ಕೂಡ ಅನೇಕ ವೈಜ್ಞಾನಿಕ ವಿಧಾನಗಳು ಬಂದಿರುವುದರಿಂದ ಇವುಗಳ ಪ್ರಯೋಜನ ಪಡೆದುಕೊಂಡು ಜೊತೆಗೆ ಸರ್ಕಾರ ನೀಡುವ ಸಾಲ ಸೌಲಭ್ಯವನ್ನು ಪಡೆದುಕೊಂಡು ಇದರಲ್ಲಿ ಆಸಕ್ತಿ ಇರುವ ರೈತರು ತೊಡಗಿಕೊಳ್ಳಬಹುದು.

ಇತ್ತೀಚೆಗೆ ನಬಾರ್ಡ್ ಡೈರಿ ಫಾರ್ಮಿಂಗ್ ಸ್ಕೀಮ್ 2024ರಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಾರಂಭಿಸಿದೆ. ಈ ನಬಾರ್ಡ್ ಹೈನುಗಾರಿಕೆ ಯೋಜನೆಯ ಮೂಲಕ ದೇಶದ ರೈತರಿಗೆ 30,000 ಕೋಟಿ ರೂಪಾಯಿ ಹೆಚ್ಚುವರಿ ಆರ್ಥಿಕ ನೆರವು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂತಹ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸುವ ಉದ್ದೇಶದಿಂದ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಮಾಹಿತಿಯನ್ನು ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now