ತುಂಬಾ ಜನರಿಗೆ ತಲೆಹೊಟ್ಟಿನ ಸಮಸ್ಯೆ ಎನ್ನುವಂತಹದ್ದು ಕಾಡುತ್ತಲೇ ಇರುತ್ತದೆ ಈ ಒಂದು ತಲೆಹೊಟ್ಟಿನ ಸಮಸ್ಯೆಯಿಂದ ನಮಗೆ ತಲೆಯಲ್ಲಿ ತುರಿಕೆ ಸಹ ಉಂಟಾಗುತ್ತದೆ ಹಾಗೆಯೇ ಹೇರ್ ಫಾಲ್ ಸಹ ಜಾಸ್ತಿ ಆಗುತ್ತಾ ಇರುತ್ತದೆ. ನಾವಿಲ್ಲಿ ತಿಳಿಸುವಂತಹ ಮೂರು ಪರಿಹಾರಗಳನ್ನು ನೀವು ಮಾಡಿದ್ದೆ ಆದಲ್ಲಿ ನಿಮ್ಮ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತಾ ಬರುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಕೂದಲಿನ ಬೆಳವಣಿಗೆ ಆಗಲು ಹಾಗೂ ಶೈನಿಂಗ್ ಆಗುತ್ತದೆ. ಚಳಿಗಾಲದಲ್ಲಿ ಆದರೆ ಡ್ರೈ ಸ್ಕಿನ್ ನಿಂದ ನಿಮಗೆ ತಲೆಹೊಟ್ಟಿನ ಸಮಸ್ಯೆ ಉಂಟಾಗಬಹುದು ಇಲ್ಲವಾದರೆ ಯಾವುದಾದರೂ ಇನ್ಫೆಕ್ಷನ್ ನಿಂದಲೂ ಕೂಡ ನಿಮ್ಮ ತಲೆ ಹೊಟ್ಟಿನ ಸಮಸ್ಯೆ ಕಂಡು ಬರುತ್ತದೆ.
ಮೊದಲನೆಯ ಮನೆಮದ್ದು ನೋಡುವುದಾದರೆ ತಲೆ ಹೊಟ್ಟನ್ನು ಕಡಿಮೆ ಮಾಡಿಕೊಳ್ಳಲು ನಿಂಬೆಹಣ್ಣು ತುಂಬಾ ಸಹಾಯ ಮನೆಯಲ್ಲಿ ಸಾಮಾನ್ಯವಾಗಿ ನಿಂಬೆಹಣ್ಣು ಇದ್ದೇ ಇರುತ್ತದೆ. ಈ ನಿಂಬೆಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಇದು ನಮ್ಮ ತಲೆಯಲ್ಲಿ ಬುಡದಲ್ಲಿ ಇರುವಂತಹ ಡ್ಯಾಂಡ್ರಫ್ ಅನ್ನು ನಿವಾರಣೆ ಮಾಡುತ್ತದೆ ನಿಮ್ಮ ಕೂದಲಿನ ಬುಡಕ್ಕೆ ಎಷ್ಟು ನಿಂಬೆಹಣ್ಣಿನ ರಸ ಬೇಕು ಅಷ್ಟು ನಿಂಬೆಹಣ್ಣಿನ ರಸವನ್ನು ನೀವು ಹಿಂಡಿ ತೆಗೆದುಕೊಂಡು ಶೋಧಿಸಿಕೊಳ್ಳಿ ನೀವು ಈ ನಿಂಬೆಹಣ್ಣಿನ ರಸಕ್ಕೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬೇಕು. ಏಕೆಂದರೆ ನಿಮ್ಮ ತಲೆಗೆ ಹಾಗೆ ಹಚ್ಚುವುದರಿಂದ ನಿಮ್ಮ ತಲೆಯಲ್ಲಿ ತುರಿಕೆ ಉಂಟಾಗಬಹುದು ಆದ್ದರಿಂದ ಸ್ವಲ್ಪ ಪ್ರಮಾಣದಲ್ಲಿ ನೀರನ್ನು ಇದಕ್ಕೆ ಸೇರಿಸಿ.
ನಂತರ ಒಂದು ಹತ್ತಿಯ ಸಹಾಯದಿಂದ ಇದನ್ನು ನೀವು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಳ್ಳಬಹುದು. ಅಥವಾ ಅದನ್ನು ನೀವು ಒಂದು ಸ್ಪ್ರೇ ಬಾಟಲಿನಲ್ಲೂ ಹಾಕಿ ನಿಮ್ಮ ತಲೆಗೆ ಸ್ಪ್ರೇ ಮಾಡಿಕೊಳ್ಳಬಹುದು ಹೀಗೆ ನಿಮ್ಮ ತಲೆಯ ಕೂದಲಿಗೆ ಹಚ್ಚಿದ ನಂತರ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ನೀವು ತಲೆ ತೊಳೆದುಕೊಳ್ಳಬಹುದು. ಎರಡನೆಯದಾಗಿ ಮೆಂತ್ಯ ಪೌಡರ್ ಬೇಕಾಗುತ್ತದೆ ಮೂರು ಟೇಬಲ್ ಸ್ಪೂನ್ ನಷ್ಟು ಮೆಂತ್ಯ ಪೌಡರ್ ಅನ್ನು ತೆಗೆದುಕೊಂಡು ಅದನ್ನು ನೀರನ್ನು ಹಾಕಿ ಚೆನ್ನಾಗಿ ಕಲಸಿ ಸ್ವಲ್ಪ ಹೊತ್ತು ಬಿಟ್ಟರೆ ಅದು ಸರಿಯಾದ ಹದಕ್ಕೆ ಬಂದಿರುತ್ತದೆ ನಂತರ ಅದನ್ನು ನಿಮ್ಮ ತಲೆಯ ಬುಡಕ್ಕೆ ಹಚ್ಚಿಕೊಳ್ಳಿ ನಂತರ ಒಂದು ಗಂಟೆಗಳ ಕಾಲ ಹಾಗೆ ಬಿಟ್ಟು ನೀವು ತಲೆ ಸ್ನಾನ ಮಾಡಿಕೊಳ್ಳಿ.
ಮೂರನೆಯದಾಗಿ ಮೊಸರು, ಮೊಸರು ಸಹ ನಿಮ್ಮ ತಲೆಯಲ್ಲಿ ಇರುವಂತಹ ಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡಲು ತುಂಬಾ ಸಹಾಯ ಮಾಡುತ್ತದೆ ಮೊಸರನ್ನು ನಿಮ್ಮ ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನೀವು ತಲೆಯ ಸ್ನಾನ ಮಾಡಿಕೊಂಡರೆ ಇದು ಸಹ ನಿಮ್ಮ ಕೂದಲಿನ ಬೆಳವಣಿಗೆ ಹಾಗೂ ನಿಮ್ಮ ಕೂದಲು ಶೈನಿಂಗ್ ಆಗಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಡ್ಯಾಂಡ್ರಫ್ ಅಂದರೆ ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಇದು ಸಹಾಯ. ನಾವಿಲ್ಲಿ ತಿಳಿಸಿರುವಂತಹ ಮನೆಮದ್ದುಗಳನ್ನು ಉಪಯೋಗ ಮಾಡಿದರೆ ಕೇವಲ ತಲೆ ಹುಟ್ಟು ನಿವಾರಣೆ ಆಗುವುದು ಅಷ್ಟೇ ಅಲ್ಲದೆ ನಿಮ್ಮ ಕೂದಲಿನ ಆರೋಗ್ಯವನ್ನು ಉತ್ತಮಪಡಿಸುತ್ತದೆ ಹಾಗೆಯೆ ನಿಮ್ಮ ಕೂದಲು ಬೆಳೆಯಲು ಸಹ ಇದು ಸಹಾಯ ಮಾಡುತ್ತದೆ.