ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಇವುಗಳಲ್ಲಿ ಒಂದಾಗಿ ಮಹಿಳೆಯರ ಆರೋಗ್ಯದ ಹಿತ ಕಾಯುವ ಹಾಗೂ ಪರಿಸರ ಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಹೊಗೆಮುಕ್ತ ಅಡುಗೆ ಮನೆ ಕಾನ್ಸೆಪ್ಟ್ ನಲ್ಲಿ 2015ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು (Prime Minister Ujwal Yojane) ಜಾರಿಗೆ ತಂದರು.
ಈ ಯೋಜನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರು ಉಚಿತವಾಗಿ ತಮ್ಮ ಮನೆಗೆ ಗ್ಯಾಸ್ ಸಂಪರ್ಕ ಪಡೆಯಬಹುದು (free LPG connection) ಮತ್ತು ಉಜ್ವಲ್ ಯೋಜನೆಯಲ್ಲಿ ಗ್ಯಾಸ್ ಖರೀದಿಸಿದವರಿಗೆ ಗ್ಯಾಸ್ ಬೆಲೆಯಲ್ಲಿ ಸಬ್ಸಿಡಿ (Subsidy) ಕೂಡ ಸಿಗುತ್ತದೆ. ಈವರೆಗೆ ಪ್ರತಿ ಬುಕ್ಕಿಂಗ್ ಗೆ 200ರೂ. ಸಬ್ಸಿಡಿ ಪಡೆಯುತ್ತಿದ್ದರು, ರಕ್ಷಾಬಂಧನದ ಸಮಯದಲ್ಲಿ ಪ್ರಧಾನ ಮಂತ್ರಿಗಳು ಎಲ್ಲಾ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 200ರೂ. ಕಡಿತಗೊಳಿಸಿದ ಕಾರಣ ಒಟ್ಟು 400ರೂ. ಸಬ್ಸಿಡಿ ಪಡೆಯುತ್ತಿದ್ದಾರೆ.
ಇದರೊಂದಿಗೆ 2023-24 ಸಾಲಿನಲ್ಲಿ ಉಜ್ವಲ ಯೋಜನೆ ಉಚಿತ ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಕೂಡ ಆಹ್ವಾನಿಸಲಾಗಿತ್ತು, ಈಗ ಈ ವಿಚಾರವಾಗಿ ಕೂಡ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ ಕೇಂದ್ರ ಸರ್ಕಾರ. ದೇಶವೇ ನವರಾತ್ರಿಯ ಆಚರಣೆಯಲ್ಲಿರುವ ಈ ಶುಭ ಸಮಾರಂಭದಲ್ಲಿ, ಶಕ್ತಿ ದೇವತೆಯನ್ನು ಆಚರಿಸಿ ಪೂಜಿಸುವ ಶುಭ ಸಮಯದಲ್ಲಿ ದೇಶದ ನಾರಿಯರಿಗೆ ದಸರಾ ಗಿಫ್ಟ್ (Dasara Gift from Government) ಘೋಷಣೆ ಮಾಡಿದ್ದಾರೆ.
ದಸರಾ ಗಿಫ್ಟ್ ಏನೆಂದರೆ ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶವನ್ನು ವಿಸ್ತರಿಸಿದ್ದಾರೆ. ಇನ್ನೂ ಯಾರೆಲ್ಲ ತಮ್ಮ ಮನೆಗಳಿಗೆ ಗ್ಯಾಸ್ ಸಂಪರ್ಕ ಪಡೆದಿಲ್ಲ ಮತ್ತು ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಅರ್ಜಿ ಸಲ್ಲಿಸಲು ಮಿಸ್ ಮಾಡಿಕೊಂಡಿದ್ದಾರೆ ಈ ವರ್ಷದಲ್ಲಿ ಅವರಿಗಿದು ಎರಡನೇ ಅವಕಾಶವಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆಗಳು ಬೇಕು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಹೇಗೆ ಸಲ್ಲಿಸಬೇಕು ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಯಾರು ಅರ್ಜಿ ಸಲ್ಲಿಸಬಹುದು:-
● ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅವಕಾಶ
● ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು
● ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸೇರಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
● ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಮಹಿಳೆಯರ ಕುಟುಂಬದ ಯಾವ ಸದಸ್ಯರ ಹೆಸರಲ್ಲೂ ಕೂಡ ಗ್ಯಾಸ್ ಸಂಪರ್ಕ ಪಡೆದಿರಬಾರದು
● ಒಂದು ಕುಟುಂಬಕ್ಕೆ ಒಬ್ಬ ಮಹಿಳೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಬೇಕಾಗುವ ದಾಖಲೆಗಳು:-
● ಮಹಿಳೆಯ ಆಧಾರ್ ಕಾರ್ಡ್ ಪ್ರತಿ
● BPL ರೇಷನ್ ಕಾರ್ಡ್
● ಜಾತಿ ಪ್ರಮಾಣ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ವಿಳಾಸ ಪುರಾವೆ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಅರ್ಜಿ ಸಲ್ಲಿಸುವ ವಿಧಾನ:-
ಆನ್ಲೈನ್ ಮತ್ತು ಆಫ್ಲೈನ್ 2 ವಿಧಾನದಲ್ಲೂ ಕೂಡ ಅರ್ಜಿ ಸಲ್ಲಿಸಬಹುದು.
● ಆನ್ಲೈನ್ ವಿಧಾನ
1. ಮೊದಲಿಗೆ https://www.pmuy.gov.in/ ವೆಬ್ಸೈಟ್ ಗೆ ಭೇಟಿ ನೀಡಿ, ಮುಖಪುಟ ತೆರೆಯುತ್ತದೆ
2. ಅದರಲ್ಲಿ PMUY ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸು ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ
3. ಮತ್ತೊಂದು ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಮೂರು ತೈಲ ಕಂಪನಿಯ ( HP, Indian, bharat gas ) ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿ.
4. ಆಟೋಮ್ಯಾಟಿಕ್ ಹೊಸ ಪೇಜ್ ಓಪನ್ ಆಗುತ್ತದೆ, ಇದರಲ್ಲಿ ಕೇಳಲಾಗುವ ಹೆಸರು, ವಿಳಾಸ, ಮೊಬೈಲ್ ನಂಬರ್ ಮುಂತಾದ ವಿವರಗಳನ್ನು ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಸ್ವೀಕೃತಿ ಪತ್ರ ಪ್ರಿಂಟ್ ಪಡೆಯಿರಿ.
ಆಫ್ಲೈನ್ ವಿಧಾನ
1. ಈ ಮೇಲೆ ತಿಳಿಸಿದ ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಪ್ರಿಂಟ್ ಪಡೆಯಿರಿ
2. ಎಲ್ಲಾ ವಿವರಗಳನ್ನು ಭರ್ತಿಮಾಡಿ, ಪೂರಕ ದಾಖಲೆಗಳನ್ನು ಲಗತ್ತಿಸಿ
3. ಹತ್ತಿರದ LPG ವಿತರಣಾ ಏಜನ್ಸಿಯಲ್ಲಿ ಇದನ್ನು ಸಲ್ಲಿಸಿ.