ಮಗಳು ಕೊಟ್ಟಿದ್ದ ಆಸ್ತಿಯನ್ನು ಮಾರಾಟ ಮಾಡಿದರೆ ಹಿರಿಯ ನಾಗರಿಕರ ಕಾಯ್ದೆ ಪ್ರಕಾರ ಅದನ್ನು ವಾಪಸ್ಸು ಪಡೆಯಬಹುದೇ. ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಈಗ ಸಾಕಷ್ಟು ತಿದ್ದುಪಡಿಗಳಾಗಿವೆ. 2005ರಲ್ಲಿ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಷ್ಟೇ ತಂದೆ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎನ್ನುವ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಡಿಯಿತು. ಅದಾದ ನಂತರ 2007ರಲ್ಲಿ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಎನ್ನುವ ಹೊಸ ಕಾಯ್ದೆಯನ್ನು ಜಾರಿಗೆ ತಂದಿತ್ತು.
ಈ ಎರಡು ಕಾನೂನಿಗಳ ಬಗ್ಗೆ ಭಾರತ ದೇಶದಲ್ಲಿನ ಕುಟುಂಬದ ಪ್ರತಿ ಸದಸ್ಯನಿಗೂ ಕೂಡ ಅರಿವಿರಬೇಕು. ಯಾಕೆಂದರೆ ಇಂದು ನ್ಯಾಯಾಲಯದಲ್ಲಿ ಹೂಡುತ್ತಿರುವ ದಾವೆಗಳಲ್ಲಿ ಅನೇಕ ಕೇಸ್ಗಳು ಈ ಎರಡು ಕಾಯ್ದೆಗಳನ್ನು ಕುರಿತೇ ಆಗಿದೆ. ಈ ಕಾಯ್ದೆಯ ಪ್ರಕಾರ ನಮಗೆ ಆಸ್ತಿ ಬರಬೇಕು ಈ ಕಾನೂನಿನ ಮೂಲಕ ನಮ್ಮ ಹಕ್ಕುಚ್ಯುತಿ ಆಗಿರುವುದನ್ನು ತಪ್ಪಿಸಿ ನ್ಯಾಯ ಕೊಡಿಸಿ ಎಂದು ನ್ಯಾಯಲಾಯದ ಬಾಗಿಲುಗಳನ್ನು ತಟ್ಟುತ್ತಿರುವುದು.
ಅದರಲ್ಲೂ 2007ರಲ್ಲಿ ಜಾರಿಯಾದ ಹಿರಿಯ ನಾಗರಿಕರ ಹಕ್ಕು ಕಾಯ್ದೆ ಏನು ಹೇಳುತ್ತದೆ ಎಂದರೆ ಈ ಕಾನೂನನ್ನು ಬಳಸಿಕೊಂಡು ಹಿರಿಯ ನಾಗರಿಕರು ತಾವು ತಮ್ಮ ಮಕ್ಕಳಿಗೆ ಕೊಟ್ಟಿದ್ದ ಆಸ್ತಿಯನ್ನು ಹಿಂಪಡೆಯಬಹುದು. ಯಾವುದೇ ಸಂದರ್ಭದಲ್ಲಿ ತಮ್ಮ ನಂಬಿಕೆಗೆ ಅನರ್ಹರಾಗಿ ಮಕ್ಕಳು ನಡೆದುಕೊಂಡಿದ್ದರೆ ಅಥವಾ ತಾವು ಕೊಡುವಾಗ ಹೇಳಿದ್ದ ಉದ್ದೇಶವನ್ನು ಬಿಟ್ಟು ಬೇರೆ ಉದ್ದೇಶಗಳಿಗಾಗಿ ಅವರ ಆಸ್ತಿಯನ್ನು ಬಳಸಿಕೊಳ್ಳುತ್ತಿದ್ದರೆ.
ಅಥವಾ ಅವರ ಒಪ್ಪಿಗೆ ಇಲ್ಲದೆ ಬಲವಂತವಾಗಿ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿದ್ದರೆ, ಆಸ್ತಿ ಪಡೆದ ನಂತರ ಹೆತ್ತ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಅವರ ಜವಾಬ್ದಾರಿ ನಿರ್ವಹಿಸದೆ ಹೋದರೆ 2007ರ ಈ ಹಿರಿಯ ನಾಗರಿಕರ ಕಾಯ್ದೆ ಮೂಲಕ ಕೊಟ್ಟಿದ್ದ ಆಸ್ತಿಯನ್ನು ವಾಪಸ್ಸು ಪಡೆಯಬಹುದು ಆದರೆ ಇದರಲ್ಲೂ ಸಹ ಕೆಲವು ನಿಯಮ ಇದೆ.
ಅದೇನೆಂದರೆ ಉದಾಹರಣೆಯೊಂದಿಗೆ ಹೇಳುವುದಾದರೆ ಒಬ್ಬ ತಾಯಿಯು ತನ್ನ ಮಗಳಿಗೆ ಒಂದು ಆಸ್ತಿಯನ್ನು ಕೊಟ್ಟಿರುತ್ತಾರೆ. ತನ್ನ ಮಗಳಿಗೆ ಅದು ಭದ್ರತೆ ಆಗಿರಲಿ ಎನ್ನುವ ಉದ್ದೇಶಕ್ಕಾಗಿ ನೀಡಿರುತ್ತಾರೆ. ಆ ಮಕ್ಕಳಿಗೆ ಪತಿ ಇರುವುದಿಲ್ಲ ಎಂದಿಟ್ಟುಕೊಳ್ಳೋಣ. ಆದರೆ ಆಕೆ ಯಾವುದೋ ಕಷ್ಟ ಸಂದರ್ಭ ಬಂದಾಗ ತಾಯಿಯ ಒಪ್ಪಿಗೆ ಇಲ್ಲದೆ ಆಸ್ತಿಯನ್ನು ಮಾರಿ ಬಿಟ್ಟರೆ ಆಗ ತಾಯಿಯು ನಾಗರಿಕರ ಕಾಯ್ದೆ ಪ್ರಕಾರ ಆ ಮಾರಾಟವನ್ನು ರದ್ದುಪಡಿಸಬಹುದೇ ಎಂದು ನೋಡುವುದಾದರೆ ಇದನ್ನು ಎರಡು ರೀತಿಯಾಗಿ ನೋಡಬಹುದು.
ಒಂದು ವೇಳೆ ಆಕೆ 2007 ಕ್ಕೂ ಮೊದಲು. ಗಿಫ್ಟ್ ಡೀಡ್ ಆಗಿ ಆಸ್ತಿ ಪಡೆದು ನಂತರ ಅದನ್ನು ಸೇಲ್ ಡೀಡ್ ಮಾಡಿದ್ದರೆ ಆಗ ಆಕೆಯ ತಾಯಿ ಯಾವುದೇ ಕಾರಣಕ್ಕೂ ಬಳಸಿಕೊಂಡು ತನ್ನ ಆಸ್ತಿಯ ಹಕ್ಕನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಯಾಕೆಂದರೆ 2007 ನಂತರ ಆದ ಪ್ರಕರಣಗಳಲ್ಲಿ ಮಾತ್ರ ಈ ಒಂದು ಕಾನೂನು ಅನ್ವಯವಾಗುತ್ತದೆ.
ಒಂದು ವೇಳೆ ಆಸ್ತಿಯನ್ನು ಆಕೆ 2007ರ ನಂತರ ತನ್ನ ತಾಯಿಯಿಂದ ಪಡೆದು ನಂತರ ಮಾರಾಟ ಮಾಡಿದ್ದರೆ ಅದು ರಿಜಿಸ್ಟರ್ ಆಗಿದ್ದರು, ಸೇಲ್ ಆಗಿದ್ದರೂ, ಆಕೆ ಮಾರಾಟ ಮಾಡಿ ಪಡೆದ ಹಣವನ್ನು ಬಳಸಿಕೊಂಡಿದ್ದರು ಕೂಡ ಆಕೆಯ ತಾಯಿಗೆ ತನ್ನ ಹಕ್ಕನ್ನು ಚಲಾಯಿಸಿ ಆಸ್ತಿಯನ್ನು ವಾಪಸ್ಸು ಪಡೆದುಕೊಳ್ಳುವ ಅದನ್ನು ಚಾಲೆಂಜ್ ಮಾಡುವ ಅವಕಾಶ ಇರುತ್ತದೆ. ಈ ಒಂದು ಅಧಿಕಾರವನ್ನು ಹಿರಿಯ ನಾಗರಿಕರ ಕಾಯ್ದೆಯು ನೀಡಿರುತ್ತದೆ. ಇಂತಹದೇ ಯಾವುದೇ ಕಾನೂನಿನ ತೊಡಕು ಉಂಟಾದ ಸಂದರ್ಭದಲ್ಲಿ ನಿಮ್ಮ ಹಕ್ಕು ವಾಪಸ್ಸು ಪಡೆಯಬಹುದು ಅದಕ್ಕೂ ಮುನ್ನ ನಿಮ್ಮ ಹತ್ತಿರದ ವಕೀಲರನ್ನು ಸಂಪರ್ಕಿಸಿ ಈ ವಿಚಾರದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.