ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಜನಸಾಮಾನ್ಯರಿಗೆ ಅನೇಕ ಸಹಾಯಧನಗಳು ಸಿಗುತ್ತವೆ. ಸದ್ಯಕ್ಕೆ ಈಗ ಕರ್ನಾಟಕ ರಾಜ್ಯದ ರೈತರಿಗೆ ಅನ್ನಭಾಗ್ಯಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುತ್ತಿದೆ. ಇದೇ ರೀತಿಯಾಗಿ DBT ಮೂಲಕ ನಮ್ಮ ಬ್ಯಾಂಕ್ ಖಾತೆಗೆ ಸರ್ಕಾರದಿಂದ ವರ್ಗಾವಣೆ ಆಗುವ ಯಾವುದೇ ಸಹಾಯಧನ ವಿದ್ದರೂ ಕೂಡ ಅದು ಬಿಡುಗಡೆ ಆಗಿದೆಯೇ ಇಲ್ಲವೇ ಎನ್ನುವುದರ ಸಂಪೂರ್ಣ ವಿವರವನ್ನು ನಾವು DBT ಕರ್ನಾಟಕ ಎನ್ನುವ ಆಪ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು.
ಇತ್ತೀಚಿನ ದಿನಗಳಲ್ಲಿ ಎಲ್ಲವೂ ಆನ್ಲೈನ್ ಮೂಲಕವೇ ವ್ಯವಹಾರ ನಡೆಯುತ್ತಿರುವುದರಿಂದ ಪಾಸ್ ಪುಸ್ತಕವನ್ನು ಬ್ಯಾಂಕ್ ಗೆ ತೆಗೆದುಕೊಂಡು ಹೋಗಿ ಅದನ್ನು ಎಂಟ್ರಿ ಮಾಡಿಸಿ ಚೆಕ್ ಮಾಡುವಷ್ಟು ಹೆಚ್ಚು ಸಮಯ ಇರದ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದ್ದರೆ DBT ಕರ್ನಾಟಕದ ಆಪ್ ಮೂಲಕವೇ ನೀವು ಸಂಪೂರ್ಣ ವಿವರ ಪಡೆದುಕೊಳ್ಳಬಹುದು.
DBT ಕರ್ನಾಟಕ ಆಪ್ ಮೂಲಕ ವಿವರವನ್ನು ಚೆಕ್ ಮಾಡುವ ವಿಧಾನ:-
● ಮೊದಲಿಗೆ ನಿಮ್ಮಲ್ಲಿರುವ ಆಂಡ್ರಾಯ್ಡ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗುವ ಮೂಲಕ DBT Karnataka ಆಪ್ ಅನ್ನು ಫ್ರೀ ಆಗಿ ಡೌನ್ಲೋಡ್ ಮಾಡಿಕೊಳ್ಳಿ.
ಅಥವಾ https://play.google.com/store/apps/details?id=com.dbtkarnataka ಲಿಂಕ್ ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.
● ಯಾರ ಬ್ಯಾಂಕ್ ಖಾತೆ ವಿವರಗಳನ್ನು ಚೆಕ್ ಮಾಡಬೇಕು ಅವರ ಆಧಾರ ಸಂಖ್ಯೆಯನ್ನು ಹಾಕಿ, ಕೆಳಗೆ DBT Karnataka ಆಪ್ ಸರ್ಕಾರದ ಆಪ್ ಆಗಿರುವುದರಿಂದ ಕರ್ನಾಟಕ ಸರ್ಕಾರದ ಘೋಷಣೆ ಬರುತ್ತದೆ ಅದನ್ನು ಪೂರ್ತಿ ಓದಿ, ಪಕ್ಕದಲ್ಲಿರುವ ಚೆಟ್ ಬಾಕ್ಸ್ ಮೇಲೆ ರೈಟ್ ಮಾರ್ಕ್ ಕ್ಲಿಕ್ ಮಾಡಿ.
● ಆಧಾರ್ ಸಂಖ್ಯೆಯಲ್ಲಿ ಇರುವ ಮೊಬೈಲ್ ನಂಬರ್ ಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿ. ಈಗ ಆಧಾರ್ ಕಾರ್ಡ್ ವಿವರ ಮೊಬೈಲ್ ಸ್ಕ್ರೀನ್ ಮೇಲೆ ಕಾಣುತ್ತದೆ. ಆಧಾರ್ ಕಾರ್ಡ್ ಅಲ್ಲಿರುವ ಭಾವಚಿತ್ರ, ಹುಟ್ಟಿದ ದಿನಾಂಕ, ವಿಳಾಸ ಎಲ್ಲವೂ ಸಹ ಬರುತ್ತದೆ.
● ನೀವು ಒಂದು Mpin ಅಂದರೆ ಪಾಸ್ವರ್ಡ್ ಸೆಟ್ ಮಾಡಿಕೊಳ್ಳಬೇಕಾಗುತ್ತದೆ ನಿಮ್ಮ ಇಷ್ಟನ್ನು 4 ಸಂಖ್ಯೆಯನ್ನು ಆರಿಸಿ ಸೆಟ್ ಮಾಡಿಕೊಳ್ಳಿ ಮತ್ತೊಮ್ಮೆ ಅದನ್ನೇ ನಮೂದಿಸುವ ಮೂಲಕ ಕಂಫರ್ಮ್ ಮಾಡಿ ಸಬ್ಮಿಟ್ ಕೊಡಿ.
● ಈಗ ನಿಮಗೆ ನಾಲ್ಕು ಆಪ್ಷನ್ ಕಾಣುತ್ತದೆ ಪೇಮೆಂಟ್ ಸ್ಟೇಟಸ್, ಆಧಾರ್ ಸೀಡಿಂಗ್, ಪ್ರೊಫೈಲ್ ಮತ್ತು ಕಾಂಟಾಕ್ಟ್ ಇದರಲ್ಲಿ ಪೇಮೆಂಟ್ ಸ್ಟೇಟಸ್ ಎನ್ನುವುದರ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ಆಧಾರ್ ಸೀಡಿಂಗ್ ಯಾವ ಬ್ಯಾಂಕ್ ಅಕೌಂಟ್ ಗೆ ಆಗಿದೆಯೋ ಆ ಅಕೌಂಟ್ ಗೆ ಬಂದಿರುವ ಸರ್ಕಾರಿ ಸಹಾಯಧನಗಳ ವಿವರ ಬರುತ್ತದೆ.
ನೀವು ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿದೆಯೇ ಎನ್ನುವುದನ್ನು ಚೆಕ್ ಮಾಡಲು DBT ಕರ್ನಾಟಕ ಆಪ್ ಉಪಯೋಗಿಸುತ್ತಿದ್ದರೆ ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿ, ಆಧಾರ್ ಕಾರ್ಡ್ ನಿಮ್ಮ ಉಳಿತಾಯ ಖಾತೆ ಅಕೌಂಟಿಗೆ ಸೀಡಿಂಗ್ ಆಗಿ NPCI ಮ್ಯಾಚಿಂಗ್ ಆಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಇದೆಲ್ಲಾ ಸರಿಯಾಗಿದ್ದರೆ ಮಾತ್ರ ನಿಮಗೆ ಅನ್ನಭಾಗ್ಯ ಯೋಜನೆ ಹಣ ಬರುತ್ತದೆ. ಇಲ್ಲವಾದಲ್ಲಿ ತಕ್ಷಣವೇ ಈ ಪ್ರಕ್ರಿಯೆಗಳನ್ನು ಪೂರೈಸಿ. ಆಗ ಮುಂದಿನಗಳಿಂದ ನೀವು ಅನ್ನ ಭಾಗ್ಯ ಯೋಜನೆ ಹಣಕ್ಕೆ ಅರ್ಹರಾಗಿರುತ್ತೀರಿ.