ಸ್ವಂತ ವಾಹನ ಇರುವವರಿಗೆ ಡೆಡ್ ಲೈನ್.! ಈ ದಿನಾಂಕದೊಳಗೆ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ.!

ಈಗಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲೂ ಕೂಡ ದ್ವಿಚಕ್ರ ಅಥವಾ ನಾಲ್ಕು ಚಕ್ರದ ಸ್ವಂತ ವಾಹನ ಇದ್ದೇ ಇರುತ್ತದೆ. ಈ ರೀತಿ ವಾಹನ ಹೊಂದಿರುವ ಎಲ್ಲರಿಗೂ ಕೂಡ ಸರ್ಕಾರ ಒಂದು ಆದೇಶ ಹೊರಡಿಸಿದೆ. ಅದೇನೆಂದರೆ, ಯಾರು 2019ಕ್ಕೂ ಮುಂಚೆ ವಾಹನಗಳನ್ನು ಖರೀದಿಸಿದ್ದರು ಅವರೆಲ್ಲ ತಮ್ಮ ನಂಬರ್ ಪ್ಲೇಟ್ ಅನ್ನು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ (HSRP) ಆಗಿ ಬದಲಾಯಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now

ಈಗಾಗಲೇ ದೇಶದ ಹಲವು ರಾಜ್ಯಗಳನ್ನು ಇದನ್ನು ಅಳವಡಿಸಿಕೊಳ್ಳಲಾಗಿದೆ ಮತ್ತು ಆ ರಾಜ್ಯಗಳಲ್ಲಿ ಇದನ್ನು ಉಲ್ಲಂಘಿಸಿದವರಿಗೆ ಸಾರಿಗೆ ಇಲಾಖೆಯಿಂದ ದಂಡ ಕೂಡ ಬೀಳುತ್ತಿದೆ. ರಾಜ್ಯದಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಕರ್ನಾಟಕದಲ್ಲಿ ಈ ರೀತಿ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದ್ದು ಈಗಾಗಲೇ ಇದಕ್ಕೆ ನೀಡಿದ ಗಡುವನ್ನು ಎರಡು ಬಾರಿ ಮುಂದೂಡಲಾಗಿದೆ.

ಅಂತಿಮವಾಗಿ 17 ಫೆಬ್ರವರಿ 2024ರ ಒಳಗೆ ಎಲ್ಲಾ ವಾಹನಗಳಿಗೂ HSRP ನಂಬರ್ ಪ್ಲೇಟ್ ಇರಬೇಕು, ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಕಡ್ಡಾಯವಾಗಿ ನಿಯಮ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಒಂದು ಪ್ರಮುಖವಾದ ಕಾರಣ ಇದೆ. ಏನೆಂದರೆ ಇತ್ತೀಚೆಗೆ ದೇಶ ಬಾಹಿರ ಚಟುವಟಿಕೆಗಳಿಗೆ ಈ ರೀತಿ ಖಾಸಗಿ ವಾಹನಗಳು ಹೆಚ್ಚಾಗಿ ಬಳಕೆಯಾಗುತ್ತಿರುವುದು ತಿಳಿದು ಬಂದಿದೆ.

ರಾಷ್ಟ್ರೀಯ ಭದ್ರತೆಯ ಪ್ರಮುಖ ಉದ್ದೇಶ ಹಾಗೂ ವಾಹನ ಮಾಲೀಕರಿಗೆ ಕೂಡ ತಮ್ಮ ವಾಹನಗಳನ್ನು ಕಳೆದುಕೊಂಡಾಗ ಪೊಲೀಸರು ಅತಿ ಶೀಘ್ರವಾಗಿ ಹುಡುಕಲು ಇದು ಅನುಕೂಲ ಮಾಡಿಕೊಡುತ್ತದೆ. ನೀವು ಹಾಕುವ HSRP ನಂಬರ್ ಪ್ಲೇಟ್‌ನಲ್ಲಿ ಆ ವಾಹನದ ಎಲ್ಲ ಮಾಹಿತಿ ಅಡಕವಾಗಿರುತ್ತದೆ. ಈ ಮಾಹಿತಿಗಳು ಸರ್ಕಾರದ ಕಚೇರಿಯಲ್ಲಿ (Database) ನಲ್ಲೂ ಸಂಗ್ರಹವಾಗಿರುತ್ತದೆ.

ವಾಹನಕ್ಕೆ ಹಾಕಿರುವ ನಂಬರ್ ಪ್ಲೇಟ್ ಅನಧಿಕೃತ ಬದಲಾವಣೆ ಅಸಾಧ್ಯವಾಗಿರುವುದರಿಂದ ಈ ನಂಬರ್ ಪ್ಲೇಟ್‌ ನ ಮಾಹಿತಿ ತಿದ್ದಲು ಆಗುವುದಿಲ್ಲ. ಇದು ವಾಟರ್ ಪ್ರೂಫ್ ನಂಬರ್ ಗಳನ್ನು ಹೊಂದಿರುತ್ತದೆ ಹಾಗಾಗಿ ಒಂದು ಬಾರಿ ಈ ನಂಬರ್ ಪ್ಲೇಟ್ ಅನ್ನು ಹಾಕಿ ವಾಹನಕ್ಕೆ ಅಳವಡಿಸಿದರೆ ಮತ್ತೆ ಅದನ್ನು ಸುಲಭವಾಗಿ ತೆಗೆದುಹಾಕಲು ಆಗುವುದಿಲ್ಲ.

ಹಾಗೇನಾದರೂ ಈ ನಂಬ‌ರ್ ಪ್ಲೇಟ್ ಅನ್ನು ಬದಲಾಯಿಸಲು ಪ್ರಯತ್ನಿಸಿದರೆ ಈ ನಂಬ‌ರ್ ಪ್ಲೇಟ್ ಹಾಳಾಗುತ್ತದೆ. ಮತ್ತೆ ಅದನ್ನು ಮರು ಬಳಕೆ ಮಾಡಲು ಸಾಧ್ಯವಿಲ್ಲ ಮತ್ತು ಈ ಮೂಲಕ ಅಪರಾಧಿ ಕೃ’ತ್ಯಗಳಿಗೆ ಅಕ್ರಮವಾಗಿ ಬಳಕೆ ಆಗುವದನ್ನು ತಡೆಯಬಹುದು.

ಜವಾಬ್ದಾರಿ ಇರುವ ಪ್ರತಿಯೊಬ್ಬ ದೇಶದ ನಾಗರಿಕರನೂ ಸಹ ಸರ್ಕಾರದ ಆದೇಶದ ಪ್ರಕಾರ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು ಮತ್ತು ಈ ಪ್ರಕ್ರಿಯೆಗೆ ಕೇಂದ್ರ ಸರ್ಕಾರವು ಯಾವುದೇ ಹಣವನ್ನು ನಿಗದಿಪಡಿಸಿಲ್ಲ ಆದರೆ ಪ್ರತಿಯೊಂದು ರಾಜ್ಯದಲ್ಲಿ ಈ ರೀತಿ HSRP ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವುದಕ್ಕೆ ಬೇರೆ ಬೇರೆ ಬೆಲೆಗಳು ನಿಗದಿ ಆಗಿವೆ.

ನಮ್ಮ ರಾಜ್ಯದಲ್ಲಿ ದ್ವಿಚಕ್ರ ವಾಹನಗಳಿಗೆ ರೂ. 400 ರಿಂದ ನಾಲ್ಕು ಚಕ್ರದ ವಾಹನಗಳಿಗೆ ರೂ.1,100 ವರೆಗೆ ಇದೆ. ಕಡ್ಡಾಯವಾಗಿರುವ ಬಣ್ಣ-ಕೋಡೆಡ್ ಇಗಿರುವ ಅಶೋಕ ಚಕ್ರದ ಸ್ಟಿಕ್ಕರ್ ಅನ್ನು ಪಡೆದುಕೊಳ್ಳಲು ರೂ. 100 ವೆಚ್ಚವಾಗುತ್ತದೆ.

ಶೋರೂಮ್ ಅಥವಾ ಯಾವುದೇ ಡೀಲರ್ ಬಳಿ ಈ ರೀತಿ HSRP ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಬಹುದು ಅಥವಾ ನೀವೆ ಆರ್ಡರ್ ಮಾಡಿಕೊಂಡು ತ ಅಳವಡಿಸಿಕೊಳ್ಳಬಹುದು. ಈ ಹೊಸ HSRP ನಂಬರ್ ಪ್ಲೇಟ್ ಬುಕ್ಕಿಂಗ್ ‌ಗಾಗಿ www.siam.in ಅಥವಾ https://bookmyhsrp.com/ ವೆಬ್ಸೈಟ್ ಗೆ ಭೇಟಿ ನೀಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now