ಪ್ರತಿದಿನವೂ ಕೂಡ ನಮಗೆ ಸಾಕಷ್ಟು ಚಾಲೆಂಜ್ ಗಳು ಎದುರಾಗುತ್ತವೆ. ಕೆಲವು ಸಣ್ಣಪುಟ್ಟವಾಗಿ ಸಮಸ್ಯೆಗಳಿಗೆ ನಾವೇ ಅದಕ್ಕೆ ಪರಿಹಾರ ಹುಡುಕುತ್ತೇವೆ, ಸಮಸ್ಯೆಗಳನ್ನು ಸುಧಾರಿಸಿಕೊಂಡು ಮತ್ತೆ ಬದುಕಲು ಪ್ರಯತ್ನಿಸುತ್ತೇವೆ ಆದರೆ ಜೀವನದಲ್ಲಿ ಕೆಲವೊಂದು ದೊಡ್ಡ ಮಟ್ಟದ ಸವಾಲುಗಳಾಗಿರುತ್ತವೆ. ಅವುಗಳನ್ನು ಎದುರಿಸಲು ನಮಗೆ ಶಕ್ತಿ ಇದೆಯೇ ಎನ್ನುವ ಅನುಮಾನ ಮೂಡುತ್ತದೆ ಅಥವಾ ನಾವೇ ಹೊಸದೊಂದು ಸವಾಲಿಗೆ ನಮ್ಮನ್ನು ಒಡ್ಡಿಕೊಳ್ಳುತ್ತೇವೆ.
ಉದಾಹರಣೆಗೆ ಯಾವುದಾದರೂ ಹೊಸ ವ್ಯಾಪಾರ, ವ್ಯವಹಾರ ಶುರು ಮಾಡೋಣ ಎಂದುಕೊಳ್ಳುತ್ತೇವೆ ಅಥವಾ ಯಾವುದಾದರೂ ಆಸ್ತಿ ಖರೀದಿಸಬೇಕು ಎಂದುಕೊಳ್ಳುತ್ತೇವೆ ಅಥವಾ ಹೊಸದಾಗಿ ಯಾವುದಾದರೂ ವಿಷಯಗಳನ್ನು ಕಲಿತು ಆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತೇವೆ ಹೀಗೆ ಯಾವುದಾದರೂ ಒಂದು ಹೊಸದಾದ ವಿಷಯ ಎದುರಾಗುತ್ತದೆ.
ಮನಸ್ಸಿನಲ್ಲಿರುವ ನಮ್ಮ ಇಚ್ಛೆಯ ಪ್ರಕಾರ ಇಂತಹ ಚಾಲೆಂಜ್ಗಳನ್ನು ನಾವು ಸ್ವೀಕರಿಸಲು ಹೊರಟರು ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾದಾಗ ಇದನ್ನು ಮಾಡುವುದೋ ಅಥವಾ ಬೇಡವೋ ಎನ್ನುವ ಗೊಂದಲಗಳು ಮೂಡುತ್ತದೆ. ಒಂದು ವೇಳೆ ನಾನೇನಾದರೂ ಈ ಕಾರ್ಯ ಮಾಡಿದರೆ ಅದು ಸಕ್ಸಸ್ ಆಗದೆ ಹೋದರೆ ಅಥವಾ ಇದು ಕೈಗೂಡುತ್ತದೆಯಾ ಅಥವಾ ಈ ಕಾರ್ಯ ನಿಧಾನವಾಗಿ ನಡೆಯುತ್ತದೆಯಾ ಅಥವಾ ಬೇಗ ಫಲ ಕೊಡುತ್ತದೆಯಾ ಎನ್ನುವ 108 ಪ್ರಶ್ನೆಗಳು ಉದ್ಭವವಾಗುತ್ತವೆ.
ಆಗ ಈ ಕಾರ್ಯ ಮಾಡುವುದೋ ಬೇಡವೋ ಎನ್ನುವ ಮಟ್ಟಕ್ಕೆ ನಾವು ಯೋಚಿಸಿ ಸುಮ್ಮನಾಗುತ್ತೇವೆ. ಇದಕ್ಕೆ ಸ್ಪಷ್ಟವಾದ ಪರಿಹಾರ ಯಾರಿಂದಲೂ ಕೊಡುವುದು ಸಾಧ್ಯವಲ್ಲ. ಯಾಕೆಂದರೆ ಭವಿಷ್ಯವನ್ನು ಯಾರು ಕೂಡ ನೋಡಿ ಬಂದು ಹೇಳಲು ಆಗುವುದಿಲ್ಲ ಆದರೆ ಒಂದು ವಿಶೇಷವಾದ ವಿಧಾನದ ಮೂಲಕ ಭವಿಷ್ಯದಲ್ಲಿ ಏನಾಗಬಹುದು ಎನ್ನುವುದನ್ನು ಊಹಿಸಬಹುದು.
ನಮಗೆಲ್ಲ ತಿಳಿದಿರುವಂತೆ ಮಹಾಭಾರತದಲ್ಲಿ ಸಹದೇವನಿಗೆ ಭವಿಷ್ಯದಲ್ಲಿ ಆಗುವ ಎಲ್ಲಾ ವಿಷಯಗಳು ಕೂಡ ಮೊದಲೇ ಗೊತ್ತಾಗುತ್ತಿತ್ತು ಆದರೆ ಆತ ಅದನ್ನು ಹೇಳುವಂತಿರಲಿಲ್ಲ ಕೆಲವು ಸೂಚನೆಗಳನ್ನು ಕೊಟ್ಟು ಸುಳಿವು ನೀಡುತ್ತಿದ್ದರು. ಹಾಗೆ ಸಹದೇವ ಶಾಸ್ತ್ರದಲ್ಲಿ ಈ ರೀತಿ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಕೆಲವು ಮಾರ್ಗ ಸೂಚಿಸಲಾಗಿದೆ.
ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವ ಶಕ್ತಿಶಾಲಿ ಸರ್ವಸಿದ್ದಿಚಕ್ರ ಪ್ರಯೋಗದ ಮೂಲಕ ನಾವು ಕೈಗೊಳ್ಳುವ ಕಾರ್ಯ ಆಗುತ್ತದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು. ಇದನ್ನು ಯಾರು ಯಾವಾಗ ಎಲ್ಲಿ ಬೇಕಾದರೂ ಮಾಡಬಹುದು ಆದರೆ ಈ ಪ್ರಯೋಗವನ್ನು ಮಾಡಬೇಕು ಎಂದುಕೊಳ್ಳುವ ದಿನ ಸ್ನಾನ ಮಾಡಿ, ಪೂಜೆ ಮಾಡಿ ಇಷ್ಟ ದೇವರ ಹಾಗೂ ಕುಲದೇವರಿಗೆ ಪ್ರಾರ್ಥನೆ ಮಾಡಿ ಮಾಡಬೇಕು.
ಅಂದು ಮಾಂಸಹಾರ ಸೇವನೆ ಮಾಡಬಾರದು, ಸಾತ್ವಿಕ ಆಹಾರ ಸೇವನೆ ಮಾಡಬೇಕು ಒಂದು ಹಾಳೆ ತೆಗೆದುಕೊಂಡು ಅದರ ಮೇಲೆ ಚೌಕ ಬರೆದು ಮೂರು ಅಡ್ಡಗೆರೆ ಹಾಗೂ ಎರಡು ಲಂಬ ಗೆರೆ ಹಾಕಬೇಕು. ಕ್ರಮವಾಗಿ 5 11 6, 10 3 2, 4 7 8, 1 9 12 ಈ ಸಂಖ್ಯೆಗಳನ್ನು ಬರೆದು ಮನೆಯಲ್ಲಿ ಯಾವುದಾದರೂ ಚಿಕ್ಕ ಮಕ್ಕಳಿದ್ದರೆ ಈ ಸಂಖ್ಯೆಗಳಲ್ಲಿ ಒಂದನ್ನು ಮುಟ್ಟಲು ಹೇಳಬೇಕು.
ಯಾರು ಇಲ್ಲ ಎಂದರೆ ನೀವೇ ಕಣ್ಣು ಮುಚ್ಚಿ ಒಂದು ಕಡ್ಡಿಯ ಸಹಾಯದಿಂದ ಯಾವುದಾದರೂ ಒಂದು ಸಂಖ್ಯೆಯನ್ನು ಮುಟ್ಟಿ ಆ ಸಂಖ್ಯೆಗಳು 10 8 4 ಆಗಿದ್ದರೆ ಆ ಕೆಲಸ ನಡೆಯುವುದು ಬಹಳ ಕಷ್ಟವಿದೆ, ಬಹಳ ವಿ’ಜ್ಞಗಳು ಎದುರಾಗುತ್ತವೆ ಎಂದು ಅರ್ಥ. 1 5 9 ಆಗಿದ್ದರೆ ಬಹಳ ನಿಧಾನವಾಗಿ ಈ ಕಾರ್ಯ ಜರುಗುತ್ತದೆ ಎಂದು ಅರ್ಥ.
6 12 3 ಆಗಿದ್ದರೆ ಖಂಡಿತವಾಗಿಯೂ ಈ ಕೆಲಸ ನಡೆದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಅರ್ಥ, 2 11 7 ಆಗಿದ್ದರೆ ನಿರಾಯವಾಗಿ ಈ ಕಾರ್ಯ ನಡೆಯುತ್ತದೆ ಎಂದು ಅರ್ಥ.