ಒಬ್ಬ ವ್ಯಕ್ತಿಯು ತನ್ನ ಜೀವಮಾನದಲ್ಲಿ ಆಸ್ತಿ ವಿಚಾರವಾಗಿ ಒಮ್ಮೆಯಾದರೂ ದಾನ ಪತ್ರ ಅಥವಾ ಕ್ರಯ ಪತ್ರ ವಿಭಾಗ ಪತ್ರ ಕ್ರಿಯೆಗೆ ಒಳಪಡಲೇಬೇಕಾಗುತ್ತದೆ ಏಕೆಂದರೆ ಒಂದು ಕುಟುಂಬ ಅಂದ ಮೇಲೆ ಈ ರೀತಿಯ ವ್ಯವಹಾರಗಳು ಒಮ್ಮೆಯಾದರೂ ಬಂದೇ ಬರುತ್ತದೆ. ಕೆಲವರು ಜಮೀನು ಖರೀದಿಸಬಹುದು ಅಥವಾ ತಮ್ಮ ಜಮೀನು ಮಾರಾಟ ಮಾಡಬಹುದು ಅಥವಾ ಇನ್ನೂ ಕೆಲವರು ತಮ್ಮ ಆಸ್ತಿಯನ್ನು ದಾನ ಮಾಡುತ್ತಾರೆ.
ಒಂದು ಆಸ್ತಿಯನ್ನು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಮಾಡಲು ಹಲವಾರು ಮಾರ್ಗಗಳಿವೆ, ಅದರಲ್ಲಿ ದಾನ, ಕ್ರಯಾ, ವಿಭಾಗ ಪ್ರಮುಖವಾಗಿ ಆಸ್ತಿ ರಿಜಿಸ್ಟರ್ ಮಾಡುವಾಗ ಬಳಸುವ ವಿಧಗಳು. ದಾನ ಪತ್ರ ಎಂದರೆ ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಮನಸ್ಸಿಗೆ ಬಂದ ವ್ಯಕ್ತಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ನೀಡುವಂತಹದ್ದನ್ನು ದಾನಪತ್ರ ಎಂದು ಕರೆಯುತ್ತಾರೆ.
ಕೆಲವು ನಿರ್ಬಂಧಗಳು ಅಥವಾ ಷರತ್ತುಗಳನ್ನು ಹಾಕಿ ಆಸ್ತಿಯನ್ನು ದಾನ ಮಾಡಬಹುದು. ಕ್ರಯ ಪತ್ರದ ಬಗ್ಗೆ ನೋಡುವುದಾದರೆ ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ ಅದರ ಪ್ರಕ್ರಿಯೆ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಖರೀದಿ ಪತ್ರದ ಮೂಲಕ ನೊಂದಣಿ ಮಾಡುತ್ತಾರೆ ಖರೀದಿ ವಿಚಾರವಾಗಿ ಆಸ್ತಿ ಕೊಂಡುಕೊಳ್ಳುವುದು ಮತ್ತು ಮಾರಾಟ ಮಾಡುವುದನ್ನು ಕ್ರಯ ಪತ್ರದ ಮೂಲಕ ಆಗುತ್ತದೆ ಇದನ್ನು ಕ್ರಯಪತ್ರ ನೋಂದಣಿ ಎಂದು ಕರೆಯುತ್ತಾರೆ.
ದಾನ ಪತ್ರ ಮತ್ತು ಕ್ರಯ ಪತ್ರಗಳ ನಡುವೆ ಇರುವಂತಹ ವ್ಯತ್ಯಾಸವನ್ನು ನೋಡುವುದಾದರೆ. ಮೊದಲನೆಯದು ಒಬ್ಬ ವ್ಯಕ್ತಿ ತನ್ನ ಸ್ವಯಾರ್ಜಿತ ಆಸ್ತಿಯನ್ನು ತನ್ನ ಮನಸ್ಸಿಗೆ ಬಂದ ವ್ಯಕ್ತಿಗೆ ಫಲಾಫೇಕ್ಷೆ ಇಲ್ಲದೆ ನೀಡುವುದನ್ನು ದಾನ ಪತ್ರ ಎಂದು ಕರೆಯುತ್ತಾರೆ, ಒಬ್ಬ ವ್ಯಕ್ತಿ ತನ್ನ ಆಸ್ತಿಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರೆ ಅದನ್ನು ಕ್ರಯ ಪತ್ರ ಎಂದು ಕರೆಯುತ್ತಾರೆ.
ಎರಡನೆಯದು ಒಬ್ಬ ವ್ಯಕ್ತಿ ತನ್ನ ಸ್ವಂತ ಆಸ್ತಿ ಅಥವಾ ಜಮೀನನ್ನು ಇಷ್ಟವಾದ ವ್ಯಕ್ತಿಗೆ ದಾನ ಮಾಡಬಹುದು ಇದನ್ನು ದಾನ ಪತ್ರ ಎನ್ನುತ್ತಾರೆ. ಆದರೆ ಖರೀದಿಯಲ್ಲಿ ಈ ಪ್ರಕ್ರಿಯೆ ಇರುವುದಿಲ್ಲ ಯಾರು ಹೆಚ್ಚಿಗೆ ಹಣವನ್ನು ಕೊಡುತ್ತಾರೋ ಅವರಿಗೆ ಆಸ್ತಿಯನ್ನು ಮಾರಾಟ ಮಾಡುತ್ತಾರೆ. ಮೂರನೇ ವ್ಯತ್ಯಾಸ ದಾನ ನೀಡಿರುವ ವ್ಯಕ್ತಿ ಷರತ್ತುಗಳನ್ನು ಪಾಲಿಸದೆ ಇದ್ದರೆ ದಾನ ಪತ್ರ ರದ್ದು ಪಡಿಸುವಿಕೆಗೆ ಅವಕಾಶ ಇರುತ್ತದೆ.
ಕ್ರಯ ಪತ್ರದಲ್ಲಿ ಮ್ಯುಟೇಶನ್ ಪ್ರಕ್ರಿಯೆ ಪೂರ್ಣ ಆದರೆ ರದ್ದುಪಡಿಸುವಿಕೆ ಕಷ್ಟವಾಗುತ್ತದೆ. ನಾಲ್ಕನೇದು ಕುಟುಂಬದೊಳಗೆ ಆಸ್ತಿ ದಾನ ಪತ್ರದ ಮೂಲಕ ಕೊಟ್ಟು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡಿಸುವುದು ಉತ್ತಮ ಯಾಕೆಂದರೆ ಇದಕ್ಕೆ ನೋಂದಣಿ ಶುಲ್ಕ ಸ್ಟ್ಯಾಂಪ್ ಚಾರ್ಜ್ ಸಹ ಕಡಿಮೆ ಇರುತ್ತದೆ. ಕುಟುಂಬದವರನ್ನು ಬಿಟ್ಟು ಹೊರಗಿನ ವ್ಯಕ್ತಿಗಳಿಗೆ ಆಸ್ತಿಯನ್ನು ದಾನ ಕೊಟ್ಟರೆ ಸ್ಟಾಂಪ್ ಶುಲ್ಕ ಹಾಗೆ ನೋಂದಣಿ ಶುಲ್ಕ ಹೆಚ್ಚಾಗಿ ಇರುತ್ತದೆ.
ಕ್ರಯ ಪತ್ರದಲ್ಲಿ ಖರೀದಿ ಪ್ರಕ್ರಿಯೆ 5% ತೆರಿಗೆ ಮತ್ತು ನೋಂದಣಿ ಶುಲ್ಕ ಇರುತ್ತದೆ. ಐದನೇದು ಯಾವುದೇ ವ್ಯಕ್ತಿಗಳ ನಡುವೆ ಹಣಕಾಸಿನ ವ್ಯವಹಾರ ಇರುವುದಿಲ್ಲ ಕ್ರಯಪತ್ರದಲ್ಲಿ ಹಣಕಾಸಿನ ವಹಿವಾಟು ಇರುತ್ತದೆ ಯಾಕೆಂದರೆ ಆರ್ಥಿಕ ಖರೀದಿ ನಡೆಯೋ ಕಾರಣಕ್ಕಾಗಿ. ಖರೀದಿ ಮಾಡುವಾಗ ಅಥವಾ ದಾನ ನೀಡುವಾಗ ಪಾಲಿಸಬೇಕಾದ ಕೆಲವೊಂದು ನಿಯಮಗಳು ಒಬ್ಬರಿಂದ ಇನ್ನೊಬ್ಬರಿಗೆ ಟ್ರಾನ್ಸ್ಫರ್ ಮಾಡುವ ಸಂದರ್ಭದಲ್ಲಿ ರಿಜಿಸ್ಟರ್ ಮಾಡುವುದು ಕಡ್ಡಾಯವಾಗಿದೆ ಆಸ್ತಿ ವ್ಯವಹಾರವನ್ನು ಬಾಯಿ ಮಾತಿನಲ್ಲಿ ಮಾಡಬಾರದು. ಇದು ಭವಿಷ್ಯದಲ್ಲಿ ತೊಂದರೆಯಾಗುತ್ತದೆ ಕರಾರು ಪತ್ರ ಮತ್ತು ರಿಜಿಸ್ಟರ್ ಮಾಡಿಸುವ ಮೂಲಕ ನೀವು ಆಸ್ತಿಯನ್ನು ನೊಂದಾಯಿಸಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.