ಈ ವರ್ಷ ಕರ್ನಾಟಕದಲ್ಲಿ (Karnataka) ಕಂಡು ಕೇಳರಿಯದ ಬರಗಾಲ(drought) ಎದುರಾಗಿದೆ. ಕೃಷಿ (agriculture) ಚಟುವಟಿಕೆ ಸಂಪೂರ್ಣವಾಗಿ ನೆಲಕಚ್ಚಿದ್ದು(loss) ರಾಜ್ಯದ ಬಹುತೇಕ ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಿತವಾಗಿವೆ.
ಇದರ ನಡುವೆ ರಾಜ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಪರಿಸ್ಥಿತಿ ನಿಭಾಯಿಸುವಂತಹ ಜವಾಬ್ದಾರಿ ಸರ್ಕಾರದ ಹೆಗಲೇರಿದೆ. ಈ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗೆ ಪೂರಕವಾಗಿರುವ ಹೈನುಗಾರಿಕೆಗೆ (government support to dairy farming) ಪ್ರೋತ್ಸಾಹ ನೀಡಿ ರೈತರಿಗೆ ಅನುಕೂಲ ಮಾಡಿಕೊಡಲು ಚಿಂತಿಸಿದೆ.
ಬರ ನಿರ್ವಹಣೆ ವಿಶೇಷ ಯೋಜನೆಯಡಿ ಪಶುಸಂಗೋಪನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಉಚಿತವಾಗಿ ಮೇವಿನಕಿಟ್ ವಿತರಣೆ (Free fodder seed) ಮಾಡುವ ಬಗ್ಗೆ ಸರ್ಕಾರ ಘೋಷಣೆ ಮಾಡಿದೆ. ಆ ಪ್ರಕಾರವಾಗಿ ಯಾವ ರೈತರು ಈ ಕಿಟ್ ಪಡೆಯಲು ಅರ್ಹರು ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವುದರ ಕುರಿತ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
20 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ ಎಲ್ಲ ಬರಪೀಡಿತ ತಾಲೂಕುಗಳಲ್ಲಿ ಮೇವಿನಕಿಟ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸುಮಾರು 7 ಲಕ್ಷ ಕಿಟ್ ವಿತರಣೆಗೆ ಸರ್ಕಾರ ಮುಂದಾಗಿದೆ. 5Kg ರಷ್ಟು ತೂಕದ ಮಿನಿ ಕಿಟ್ (mini kit) ನೀಡಲಾಗುತ್ತಿದ್ದು, ಇದರಿಂದ ಸುಮಾರು ಹತ್ತರಿಂದ ಹದಿನೈದು ಎಕರೆವರೆಗೂ ಮೇವು ಬೆಳೆಯಬಹುದು.
ಆಫ್ರಿಕನ್ ಟಾಲ್ ಮೇವಿನ ಜೋಳ, ಮೇವಿನ ಅಲಸಂದೆ, ಬಹುವಾಷಿಕ ಜೋಳ ಮತ್ತು ಸಜ್ಜೆ ಸೇರಿದಂತೆ ವಿವಿಧ ಮೇಬಿನ ಕಿಟ್ ಆಗಿರುಗುತ್ತದೆ. 45 ರಿಂದ 90 ದಿನದ ಒಳಗಡೆ ಈ ಬೀಜಗಳಿಂದ ಮೇವನ್ನು ಬೆಳೆದು ಕಟಾವು ಮಾಡಬಹುದು. ಇದರೊಂದಿಗೆ ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಗಡಿ ಜಿಲ್ಲೆಗಳಲ್ಲಿ ಮೇವು ಸಾಗಣೆ ತಡೆಗಟ್ಟಲು ನಿಯಮ ಕೈಗೊಂಡಿರುವ ಬಗ್ಗೆ ಮತ್ತು ಕಟ್ಟುನಿಟ್ಟಾಗಿ ಮೇವಿನ ಸಾಗಣೆ ನಿರ್ಬಂಧಿಸುವುದಾಗಿ ಕೂಡ ತಿಳಿಸಿದ್ದಾರೆ.
ಯಾವ ರೈತರು ಪಡೆಯಬಹುದು:-
* ರೈತರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿರಬೇಕು, ಜಾನುವಾರುಗಳ ಹೊಂದಿರುವ ತಮ್ಮ ಜಮೀನಿನಲ್ಲಿ ಕೊಳವೆಬಾವಿ, ನಾಲೆ ಅಥವಾ ಕೆರೆ ನೀರಾವರಿ ಅಥವಾ ಬಾವಿ ನೀರಾವರಿ ಮೂಲಕ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರಿಗೆ ಈ ಮೇವಿನ ಕಿಟ್ ವಿತರಣೆ ಮಾಡಲಾಗುತ್ತದೆ.
* ತೀವ್ರ ಮತ್ತು ಸಾಧಾರಣ ಬರಪೀಡಿತ ಎಂದು ಘೋಷಿಸಿರುವ ತಾಲೂಕುಗಳ ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
* ಮುಖ್ಯವಾದ ವಿಷಯವೇನೆಂದರೆ ಜಾನುವಾರುಗಳ ಸಂಖ್ಯೆಗಳ ಆಧಾರದ ಮೇಲೆ ರೈತನಿಗೆ ಮೇವಿನ ವಿತರಣೆ ಮಾಡಲಾಗುತ್ತದೆ.
* ರೈತನು ಕಡ್ಡಾಯವಾಗಿ FRUITS ತಂತ್ರಾಂಶದಲ್ಲಿ ನೋಂದಣಿಯಾಗಿ ID ಪಡೆದಿರಬೇಕು.
* ಸ್ಥಳೀಯವಾಗಿ ಯಾರಿಗೆ ಮೇವಿನ ಅಗತ್ಯವಿದೆ ಎನ್ನುವುದನ್ನು ಕಲೆ ಹಾಕಿ ಮೇವಿನ ಕಿಟ್ ವಿತರಣೆ ಮಾಡಲಾಗುತ್ತದೆ.
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ಮೊದಲನೇ ಆದ್ಯತೆ.
ಹೇಗೆ ಪಡೆಯಬಹುದು:-
* ಆಸಕ್ತ ಅರ್ಹ ರೈತನು ಹತ್ತಿರದಲ್ಲಿರುವ ಪಶು ವೈದ್ಯರನ್ನು ಅಥವಾ ಪಶುಪಾಲನ ಇಲಾಖೆಯನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆಯಬಹುದು.
* ಅಲ್ಲಿಯೇ ಅರ್ಜಿ ಫಾರ್ಮ್ ಸಿಗುತ್ತದೆ, ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಜೊತೆಗೆ ಲಗತ್ತಿಸಬೇಕು.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಜಮೀನಿನಲ್ಲಿ ನೀರಾವರಿ ಸೌಲಭ್ಯ ಇರುವ ಬಗ್ಗೆ ದಾಖಲೆ
* ಜಾನುವಾರುಗಳನ್ನು ಹೊಂದಿರುವುದರ ಬಗ್ಗೆ ದಾಖಲೆ
* ಜಾತಿ ಪ್ರಮಾಣ ಪತ್ರ
* FRUITS ID
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ