ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಲವಾರು ಪದ್ದತಿಗಳಿವೆ. ಇಲ್ಲಿಯ ಪದ್ಧತಿ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಅದಕ್ಕೆ ಸಹಾಯಕವಾಗಲೂ ಹಲವಾರು ಗ್ರಂಥಗಳಲ್ಲಿ ಇವುಗಳ ಬಗ್ಗೆ ಉಲ್ಲೇಖವಿದೆ. ಹಾಗೂ ಗುರುಗಳಿಂದ ಮತ್ತು ಮನೆಯ ಹಿರಿಯರಿಂದ ನಾವು ಈ ಪದ್ಧತಿಗಳ ವಿಚಾರವಾಗಿ ತಿಳಿದುಕೊಳ್ಳುತ್ತೇವೆ. ಪದ್ಧತಿ ಎನ್ನುವ ಪದದಲ್ಲಿ ಹಲವಾರು ಸಂಗತಿಗಳು ಅಡಗಿವೆ. ಕೆಲವು ಕಟ್ಟುಪಾಡುಗಳು ಆಚಾರಗಳು ಆಚರಣೆಗಳು ಇವೆಲ್ಲ ಸೇರಿ ಶಿಷ್ಟಾಚಾರವಾಗಿ ಬದಲಾಗಿ ಅದನ್ನೇ ಪದ್ಧತಿ ಎಂದು ಸಹ ಅನ್ನಬಹುದು. ಇವುಗಳನ್ನು ಸಂಪೂರ್ಣವಾಗಿ ಕೆಲವರು ಮೂಢನಂಬಿಕೆ ಎಂದು ಅಲ್ಲ ಕರೆಯುವುದು ಉಂಟು ಆದರೆ ಇವುಗಳ ಹಿಂದೆ ವಿಚಾರ ಮಾಡಿ ನೋಡಿದಾಗ ಇವುಗಳ ಹಿಂದಿರುವ ಮಹತ್ವ ಹಾಗೂ ಅವುಗಳಿಗೆ ಇರುವ ವೈಜ್ಞಾನಿಕ ಕಾರಣಗಳು ಮತ್ತು ಅವುಗಳನ್ನು ಪಾಲನೆ ಮಾಡುವುದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬದಲಾಗುವ ಪರಿಣಾಮಗಳು ನಮ್ಮ ಅರಿವಿಗೆ ಬರುತ್ತದೆ.
ನಾವು ಪ್ರತಿ ದಿನ ಬೆಳಗ್ಗೆ ಸೂರ್ಯೋದಯ ಆಗುವ ಒಂದು ತಾಸು ಮೊದಲೇ ಎದ್ದಿರಬೇಕು ಎನ್ನುವ ನಿಯಮದಿಂದ ಶುರುವಾಗುವ ಈ ವಿಷಯಗಳು ರಾತ್ರಿ ಹೊತ್ತು ನಾವು ಕಣ್ಣು ಮುಚ್ಚುವವರೆಗೂ ಹಲವಾರು ಇಂತಹದೇ ನಿಯಮಗಳನ್ನು ಮತ್ತು ಕಟ್ಟುಪಾಡುಗಳನ್ನು ಒಳಗೊಂಡಿದೆ. ನಮ್ಮಲ್ಲಿ ಬೆಳಿಗ್ಗೆ ಹಾಸಿಗೆಯಿಂದ ಏಳುವುದು, ನಿತ್ಯ ಕರ್ಮಗಳಲ್ಲಿ ತೊಡಗಿಕೊಳ್ಳುವುದು, ರಂಗೋಲಿ ಬಿಡಿಸುವುದು, ಸ್ನಾನ ಮಾಡುವುದು, ಮನೆ ಕೆಲಸ ಮಾಡುವುದು, ಹೂ ಬಿಡಿಸುವುದು, ದೇವರ ಸ್ತುತಿ ಹೇಳುವುದು, ಪೂಜೆ ಮಾಡುವುದು, ಕುಟುಂಬದ ಇತರ ಸದಸ್ಯರೊಂದಿಗೆ ನಾವು ನಡೆದುಕೊಳ್ಳುವ ರೀತಿ, ಮಕ್ಕಳ ಜೊತೆ ನಮ್ಮ ನಡವಳಿಕೆ, ಅಡುಗೆ ಮಾಡುವುದು, ನಾವು ಧರಿಸುವ ವಸ್ತ್ರ, ಹಾಕಿಕೊಳ್ಳುವ ಆಭರಣಗಳು ಹೀಗೆ ಪ್ರತಿಯೊಂದಕ್ಕೂ ಕೂಡ ಒಂದೊಂದು ನಿಯಮ ಇದೆ. ಹಾಗೆ ಅವುಗಳನ್ನು ಪಾಲಿಸುವುದರಿಂದ ಮನುಷ್ಯನಿಗೆ ಅಷ್ಟೇ ಅನುಕೂಲತೆ ಕೂಡ ಇದೆ.
ಅಡುಗೆ ವಿಚಾರವಾಗಿ ಹೇಳುವುದಾದರೆ ನಮ್ಮಲ್ಲಿ ವೈಜ್ಞಾನಿಕವಾಗಿಯೂ ಕೂಡ ಆಧ್ಯಾತ್ಮಿಕವಾಗಿಯೂ ಕೂಡ ಆಹಾರ ಎನ್ನುವುದಕ್ಕೆ ವಿಶೇಷ ಶಕ್ತಿ ಇದೆ ಎನ್ನುವುದನ್ನು ಒಪ್ಪಿಕೊಳ್ಳಲಾಗಿದೆ. ಮನುಷ್ಯನ ದೇಹಕ್ಕೆ ಶಕ್ತಿ ಬೇಕಾದರೆ ಅದು ಆಹಾರದ ಮೂಲಕವೇ ಬರಬೇಕು ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಹಾಗೆಯೇ ಅನ್ನಂ ಪರಬ್ರಹ್ಮ ಸ್ವರೂಪಂ ಎನ್ನುವ ಉಕ್ತಿ ಕೂಡ ನಾವು ಕೇಳಿದ್ದೇವೆ ಅಂದರೆ ನಾವು ತಿನ್ನುವ ಆಹಾರಕ್ಕೆ ಎಷ್ಟು ಬೆಲೆ ಇದೆ ಎನ್ನುವುದನ್ನು ಅದರ ಮಹತ್ವವನ್ನು ಈ ಉಕ್ತಿಯು ನಮಗೆ ತಿಳಿಸುತ್ತದೆ. ಆಹಾರ ಎನ್ನುವುದು ಮನುಷ್ಯನ ದಿನಪೂರ್ತಿ ಚಟುವಟಿಕೆಗೆ ಹಾಗೂ ಅವನ ಆರೋಗ್ಯದ ವಿಚಾರವಾಗಿ ಮತ್ತು ಅವನ ಆಯಸ್ಸಿನ ವಿಚಾರವಾಗಿ ಬಹಳ ಪ್ರಾಮುಖ್ಯತೆ ಇರುವ ಅಂಶವಾಗಿದೆ ಹಾಗಾಗಿ ಈ ಆಹಾರದ ವಿಚಾರವಾಗಿಯೂ ಕೂಡ ನಮ್ಮ ಹಿರಿಯರು ಅನೇಕ ಪದ್ಧತಿಗಳನ್ನು ರೂಢಿಸಿ ಕೊಟ್ಟಿದ್ದಾರೆ.
ಆಹಾರಕ್ಕೆ ಇಷ್ಟೆಲ್ಲಾ ಶಕ್ತಿ ಇದೆ ಎನ್ನುವುದು ಈಗ ಎಲ್ಲರಿಗೂ ತಿಳಿದಿದೆ. ಆದರೆ ಆಹಾರದ ವಿಚಾರದಿಂದ ಮನೆಯಲ್ಲಿ ದೈವಾನುಗ್ರಹ ಹೇಗೆ ಉಂಟಾಗುತ್ತದೆ ಎನ್ನುವ ವಿಚಾರದ ಬಗ್ಗೆ ಕೂಡ ಈಗ ಸ್ವಲ್ಪ ತಿಳಿಯೋಣ. ಆಹಾರವನ್ನು ನಾವು ಪರಬ್ರಹ್ಮ ಸ್ವರೂಪದಲ್ಲಿ ಕಾಣುತ್ತೇವೆ ಎನ್ನುವುದು ಈಗಾಗಲೇ ಹೇಳಾಯಿತು ಆದರೆ ಇದೇ ಆಹಾರವನ್ನು ಮಹಾಲಕ್ಷ್ಮಿ ಎಂದು ಕೂಡ ಕರೆಯುತ್ತಾರೆ ಹಾಗೂ ಇದನ್ನು ಅನ್ನಪೂರ್ಣೇಶ್ವರಿ ಪ್ರಸಾದ ಎಂದು ಕೂಡ ಹೇಳುತ್ತಾರೆ. ಮನೆಯಲ್ಲಿ ನಾವು ಆಹಾರವನ್ನು ಮಾಡುವ ಪದ್ಧತಿ ಹಾಗೂ ಅದನ್ನು ಇತರರಿಗೆ ಬಡಿಸುವ ಪದ್ಧತಿ ಇವುಗಳಿಂದ ಮಹಾಲಕ್ಷ್ಮಿ ಹಾಗೂ ಅನ್ನಪೂರ್ಣೇಶ್ವರಿ ಅನುಗ್ರಹ ನಮ್ಮ ಮೇಲೆ ಉಂಟಾಗುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳುತ್ತಿರುವುದನ್ನು ನಾವು ಕೇಳಿದ್ದೇವೆ.ಈ ವಿಚಾರದ ಕುರಿತು ಇನ್ನಷ್ಟು ಉಪಯುಕ್ತ ಮಾಹಿತಿಗಳನ್ನು ಹೇಳುವ ಪ್ರಯತ್ನ ಇದು.
ಅದೇನೆಂದರೆ, ನಾವು ರಾತ್ರಿ ಹೊತ್ತು ಊಟ ಮಾಡಿದ ಬಳಿಕ ಎಲ್ಲಾ ಪಾತ್ರೆಗಳನ್ನು ತೊಳೆದಿಟ್ಟು ಮಲಗುತ್ತೇವೆ. ಅಕಸ್ಮಾತ್ ಆಹಾರ ಏನಾದರೂ ಸ್ವಲ್ಪ ಹೆಚ್ಚಾಗಿ ಉಳಿದರೆ ಅದನ್ನು ಕಸದ ಬುಟ್ಟಿಗೆ ಹಾಕಿಬಿಡುತ್ತೇವೆ. ಆದರೆ ಈ ರೀತಿ ಮಾಡುವುದು ಮಹಾ ತಪ್ಪು. ಅದರ ಬದಲಾಗಿ ಈ ರೀತಿ ಮಾಡುವುದನ್ನು ನಾವು ರೂಢಿಸಿಕೊಳ್ಳಬೇಕು. ಪ್ರತಿದಿನ ರಾತ್ರಿ ನಾವು ಊಟ ಆದ ಬಳಿಕ ಸ್ವಲ್ಪ ಊಟವಾದರೂ ಉಳಿಯುವ ರೀತಿ ನೋಡಿಕೊಳ್ಳಬೇಕು ಅದನ್ನು ಒಂದು ಪಾತ್ರೆಯಲ್ಲಿ ಎತ್ತಿ ಇಡಬೇಕು ಹಾಗೂ ಉಳಿದ ಪಾತ್ರೆಗಳನ್ನೆಲ್ಲ ಸ್ವಚ್ಛ ಮಾಡಿ ನಂತರ ಮಲಗಬೇಕು ಈ ರೀತಿ ಮಾಡುವುದರಿಂದ ಮಹಾಲಕ್ಷ್ಮಿಯು ಹಾಗೂ ನಮ್ಮ ಮನೆಯಲ್ಲಿ ಈಗಾಗಲೇ ತೀರಿಕೊಂಡಿರುವ ಹಿರಿಯರು ನಾವೆಲ್ಲಾ ಮಲಗಿದ ಮೇಲೆ ಭೂ ಸಂಚಾರಕ್ಕೆ ಬರ್ತಾರಂತೆ. ಆ ಸಮಯದಲ್ಲಿ ನಾವು ಮನೆಯಲ್ಲಿ ಒಂದು ಅಗಳು ಕೂಡ ಇಲ್ಲದಂತೆ ಖಾಲಿ ಮಾಡಿ ಪಾತ್ರೆಗಳನ್ನು ಖಾಲಿ ಇಡಬಾರದಂತೆ.
ಈ ರೀತಿ ಆದರೆ ಅವರುಗಳು ಮನಸಿನಲ್ಲಿ ನೊಂದುಕೊಳ್ಳುತ್ತಾರಂತೆ. ಅದಕ್ಕಾಗಿ ನಾವು ಸ್ವಲ್ಪವೇ ಸ್ವಲ್ಪ ಹೆಚ್ಚು ಅಡುಗೆ ಮಾಡಿ ಅದನ್ನು ಒಂದು ಪಾತ್ರೆಯಲ್ಲಿ ಎತ್ತಿಡಬೇಕು ವಿಶೇಷವಾಗಿ ಇದಕ್ಕೇನು ತಯಾರಿಸುವ ಅಗತ್ಯವಿಲ್ಲ. ನಾವು ಮನೆಯಲ್ಲಿ ತಯಾರಿಸಿದ ನಾವು ಊಟ ಮಾಡಲು ತಯಾರಿಸಿದ ಆಹಾರ ಪದಾರ್ಥವನ್ನು ಈ ರೀತಿ ಮಾಡಿದರೆ ಸಾಕು. ಹಾಗೂ ಮರುದಿನ ಬೆಳಿಗ್ಗೆ ಎದ್ದ ಮೇಲೆ ಸಾಧ್ಯವಾದರೆ ನಮ್ಮ ಮನೆಯ ಸುತ್ತಮುತ್ತ ಇರುವ ಮೂಕ ಪ್ರಾಣಿಗಳಿಗೆ ಪಕ್ಷಿಗಳಿಗೆ ಈ ಆಹಾರವನ್ನು ಕೊಡಬೇಕು ಇದರಿಂದ ಅವುಗಳು ಕೂಡ ಆಹಾರ ಪಡೆದುಕೊಂಡು ಸಂತೋಷದಿಂದ ನಮ್ಮನ್ನು ಹರಸುತ್ತವೆ ಅಥವಾ ಸಾಧ್ಯವಾಗದೆ ಹೋದರೆ ಅದನ್ನು ವೇಸ್ಟ್ ಮಾಡುವ ಬದಲು ನಾವೇ ಊಟ ಮಾಡುವುದು ಒಳ್ಳೆಯದು. ಈ ರೀತಿ ಏನಾದರೂ ನಾವು ಇನ್ನು ಮುಂದೆ ನಡೆದುಕೊಂಡರೆ ನಮ್ಮ ಮೇಲೆ ಹಾಗೂ ನಮ್ಮ ಕುಟುಂಬದ ಮೇಲೆ ಶ್ರೀ ಮಹಾಲಕ್ಷ್ಮಿ ಹಾಗೂ ತಾಯಿ ಅನ್ನಪೂರ್ಣೇಶ್ವರಿ ಅನುಗ್ರಹ ಆಗುವುದು ಖಂಡಿತ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.