ಆಸ್ತಿ ಹಕ್ಕಿನ ಕುರಿತು ಜನಸಾಮಾನ್ಯರಿಗೆ ಸಾಕಷ್ಟು ಗೊಂದಲಗಳಿವೆ. ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ಪ್ರಕಾರ ತಂದೆ ತಾಯಿ ಆಸ್ತಿಯಲ್ಲಿ ಮಕ್ಕಳಿಗೆ ಯಾವ ಹಕ್ಕು ಇರುತ್ತದೆ ಮತ್ತು ಯಾವ ಸಂದರ್ಭದಲ್ಲಿ ಹಕ್ಕು ಇರುತ್ತದೆ ಅಥವಾ ಅಭಿಜಿತ ಕುಟುಂಬದ ಆಸ್ತಿಯಲ್ಲಿ ಆ ಕುಟುಂಬದ ಸದಸ್ಯರ ಹಕ್ಕು ಏನು, ಅಥವಾ ತಂದೆಯ ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯಲ್ಲಿ ಮಕ್ಕಳ ಹಕ್ಕು ಏನು.
ಮೂರ್ನಾಲ್ಕು ತಲೆಮಾರಿನಿಂದ ವರ್ಗಾವಣೆ ಆಗಿ ಬಂದ ತಂದೆ ಹಾಗೂ ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಏನು, ಆಸ್ತಿ ಹಕ್ಕಿನ ಕುರಿತು ಹೆಣ್ಣು ಮಕ್ಕಳಿಗೆ ಎಷ್ಟು ಅಧಿಕಾರ ಇದೆ, ಗಂಡು ಮಕ್ಕಳಿಗೆ ಎಷ್ಟು ಅಧಿಕಾರ ಇದೆ. ಹೆಣ್ಣುಮಕ್ಕಳ ಮಕ್ಕಳಿಗೂ ಕೂಡ ಅವರ ತಾತ, ಅಜ್ಜಿ ಆಸ್ತಿಯಲ್ಲಿ ಪಾಲು ಕೇಳುವ ಅಧಿಕಾರ ಇದೆಯೇ, ಒಬ್ಬ ವ್ಯಕ್ತಿಯ ಮರಣದ ನಂತರ ಆತನ ಆಸ್ತಿಯ ವಾರಸುದಾರರು ಯಾರಾಗುತ್ತಾರೆ ಎನ್ನುವ ಸಾಮಾನ್ಯ ಪ್ರಶ್ನೆಗೆ ಕೂಡ ನಮ್ಮಲ್ಲಿ ಅನೇಕರಿಗೆ ಉತ್ತರ ತಿಳಿದಿಲ್ಲ.
ಹೀಗಾಗಿ ಗೊಂದಲಕ್ಕೆ ಒಳಗಾಗಿ ಎಲ್ಲರೂ ಕೂಡ ಪರಸ್ಪರ ಸಂಬಂಧಗಳಲ್ಲಿ ವೈ ಮನಸು ಉಂಟು ಮಾಡಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಈ ಪರಿಸ್ಥಿತಿ ವಿಪರೀತಕ್ಕೆ ಏರಿ ಪೊಲೀಸ್ ಸ್ಟೇಷನ್ ಕೋರ್ಟು ಮೆಟ್ಟಿಲು ಏರುವ ತನಕ ಕೂಡ ಬೆಳೆದಿದೆ. ಇಂದು ಕೌಟುಂಬಿಕ ನ್ಯಾಯಾಲಯಗಳಲ್ಲಿ ಧಾವೇ ಆಗುತ್ತಿರುವ ಅತಿಹೆಚ್ಚಿನ ಪ್ರಕರಣಗಳು ಈ ರೀತಿ ಸಂಬಂಧಗಳ ನಡುವೆ ಆಸ್ತಿ ಹಂಚಿಕೆ ಕುರಿತು ಆಗಿರುತ್ತದೆ.
ಈ ರೀತಿ ಯಾವುದೇ ಗೊಂದಲಗಳು ಇದ್ದರೂ ಕೂಡ ಕಾನೂನಿನಲ್ಲಿ ಅದಕ್ಕೆ ಪರಿಹಾರ ಇದ್ದೇ ಇರುತ್ತದೆ. ಪ್ರತಿಯೊಂದು ವಿಷಯಕ್ಕೂ ಕೂಡ ಕಾನೂನಿನಲ್ಲಿ ಪರಿಹಾರ ಇರುವುದರಿಂದ ಸೂಕ್ತ ವಕೀಲರ ಬಳಿ ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂದು ಕೇಳಿ ತಿಳಿದುಕೊಳ್ಳುವುದು ಉತ್ತಮ. ಇತ್ತೀಚೆಗೆ ಒಂದು ಪ್ರಶ್ನೆ ಎಲ್ಲೆಡೆ ಹೆಚ್ಚು ಚರ್ಚೆ ಆಗುತ್ತದೆ. ಯಾಕೆಂದರೆ ಈಗಿನ ದಿನಗಳಲ್ಲಿ ಪ್ರೇಮ ವಿವಾಹಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಕುಟುಂಬದವರ ವಿರುದ್ಧವಾಗಿ ಬೇರೆ ಜಾತಿ ಅಥವಾ ಬೇರೆ ಧರ್ಮಗಳ ಸಂಗಾತಿಯನ್ನು ಆರಿಸಿಕೊಂಡಾಗ ಅವರಿಗೆ ತಂದೆ ತಾಯಿ ಆಸ್ತಿ ಮೇಲೆ ಹಕ್ಕು ಇರುತ್ತದೆಯೋ ಇಲ್ಲವೇ ಎನ್ನುವ ಪ್ರಶ್ನೆ ಹಲವರಲ್ಲಿ ಇದೆ. ಈ ಪ್ರಶ್ನೆ ಕುರಿತು ಉತ್ತರ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ. ಒಬ್ಬ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ಅವರು ಘೋಷಿಸದೆ ತೀರಿಕೊಂಡಿದ್ದ ಪಕ್ಷದಲ್ಲಿ ಅವರ ಸ್ವಯಾರ್ಜಿತ ಆಸ್ತಿಯಲ್ಲಿ ಅವರ ಪಾಲಿನ ಹಕ್ಕು ಕೇಳಲು ಮದುವೆ ಆಗಿರುವ ವಿಷಯ ಅಡ್ಡಿ ಬರುವುದಿಲ್ಲ ಅದರಲ್ಲೂ ಬೇರೆ ಜಾತಿ ಅಥವಾ ಧರ್ಮದವರನ್ನು ವಿವಾಹವಾಗಿದ್ದರೂ ಸಹ ಆ ವಿಷಯ ಇಲ್ಲಿ ಅಡ್ಡಿ ಬರುವುದಿಲ್ಲ.
ಪೋಷಕರ ಒಪ್ಪಿಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ ಎನ್ನುವ ಕಾರಣಕ್ಕಾಗಿ ಅವರ ಪಾಲಿನ ಆಸ್ತಿಯನ್ನು ನೀಡದೆ ಇರಲು ಸಾಧ್ಯವಿಲ್ಲ, ಇಂಥಹ ಪ್ರಕರಣಗಳು ಆದಾಗ ನ್ಯಾಯಾಂಗ ವ್ಯವಸ್ಥೆ ಸಹಾಯದ ಮೂಲಕ ಅವರ ಪಾಲಿನ ಆಸ್ತಿಯನ್ನು ಪಡೆಯಬಹುದು ಎನ್ನುವುದು ಕಾನೂನಿನಲ್ಲಿದೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿ ಅನ್ಯ ಜಾತಿ ಅಥವಾ ಧರ್ಮದ ವಿವಾಹವಾದವರ ಮಕ್ಕಳು ಇದರಲ್ಲಿ ಪಾಲು ಕೇಳಲು ಬರುವುದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹತ್ತಿರದ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ತಿಳಿದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.