ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಉದ್ಯೋಗಾವಕಾಶ, ವೇತನ 70,850 ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆಲ್ಲಾ ಸಿಹಿ ವಿಚಾರ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ (KARBWWB) ಖಾಲಿ ಇರುವ ಮಿಕ್ಕುಳಿದ ವೃಂದ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ವೃಂದದ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ.

ಈ ಸದರಿ ಸಂಸ್ಥೆಯ ವಿವಿಧ ಹುದ್ದೆಗಳಿಗೆ ನೇಮಕಾತಿ ಪಡೆಯಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗಿಯಾಗಿ ಹುದ್ದೆಯನ್ನು ಪಡೆಯಬಹುದು. ಈ ಬಗ್ಗೆ ಕರ್ನಾಟಕ ಪರೀಕ್ಷಾ ಅಧಿಕಾರವೇ ಪ್ರಕಟಣೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ಈ ಮೇಲ್ಕಂಡ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

ಉದ್ಯೋಗ ಕ್ಷೇತ್ರ:- ಕರ್ನಾಟಕ ಸರ್ಕಾರಿ ಸಂಸ್ಥೆ ಹುದ್ದೆಗಳು
ಇಲಾಖೆ:- ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KARBWWB).
ಒಟ್ಟು ಹುದ್ದೆಗಳ ಸಂಖ್ಯೆ:- 186
ಹುದ್ದೆಯ ಬಗೆ:- ಗ್ರೂಪ್ – ಸಿ ಹುದ್ದೆಗಳು

ಹುದ್ದೆಗಳ ವಿವರ:-
● ಕಲ್ಯಾಣ ಅಧಿಕಾರಿ – 12
● ಕ್ಷೇತ್ರ ನಿರೀಕ್ಷಕರು – 60
● ಪ್ರಥಮ ದರ್ಜೆ ಸಹಾಯಕರು – 12
● ಆಪ್ತ ಸಹಾಯಕರು – 02
● ದ್ವಿತೀಯ ದರ್ಜೆ ಸಹಾಯಕರು – 100.

ವೇತನ ಶ್ರೇಣಿ:-
● ಕಲ್ಯಾಣ ಅಧಿಕಾರಿ – ರೂ.37,900-70,850.
● ಕ್ಷೇತ್ರ ನಿರೀಕ್ಷಕರು – ರೂ.33,450-62,600.
● ಪ್ರಥಮ ದರ್ಜೆ ಸಹಾಯಕರು – ರೂ.27,650-52,650.
● ಆಪ್ತ ಸಹಾಯಕರು – ರೂ.27,650-52,650.
● ದ್ವಿತೀಯ ದರ್ಜೆ ಸಹಾಯಕರು – ರೂ.21,400-42000.

ಶೈಕ್ಷಣಿಕ ವಿದ್ಯಾರ್ಹತೆ:-
● ಕಲ್ಯಾಣ ಅಧಿಕಾರಿ – ಪದವಿ
● ಕ್ಷೇತ್ರ ನಿರೀಕ್ಷಕರು – ಪದವಿ
● ಪ್ರಥಮ ದರ್ಜೆ ಸಹಾಯಕರು – ಪದವಿ
● ಆಪ್ತ ಸಹಾಯಕರು – ಪದವಿ ಜತೆಗೆ, ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್‌ ಹಾಗೂ ಕಡ್ಡಾಯವಾಗಿ ಟೈಪಿಂಗ್ ಜ್ಞಾನ ಹೊಂದಿರಬೇಕು.
● ದ್ವಿತೀಯ ದರ್ಜೆ ಸಹಾಯಕರು – ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ:-
● ಕನಿಷ್ಠ 18 ವರ್ಷ ಪೂರೈಸಿರಬೇಕು.
● ಗರಿಷ್ಠ 35 ವರ್ಷಗಳನ್ನು ಮೀರಿದಬಾರದು

ವಯೋಮಿತಿ ಸಡಿಲಿಕೆ:-
● ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು.
● SC/ ST / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳು.

ಅರ್ಜಿ ಶುಲ್ಕ:-
● ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.1000.
● ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
● SC/ ST / ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.250.

ಆಯ್ಕೆ ವಿಧಾನ:-
● ಸ್ಪರ್ಧಾತ್ಮಕ ಪರೀಕ್ಷೆ
● ದಾಖಲೆಗಳ ಪರಿಶೀಲನೆ

ಅರ್ಜಿ ಸಲ್ಲಿಸುವ ವಿಧಾನ:-
● ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸುವ ಮುನ್ನ ಆ ಪ್ರಕಾರದ ವಯೋಮಿತಿ ಹಾಗೂ ಶೈಕ್ಷಣಿಕ ವಿದ್ಯಾರ್ಹತೆ ಹೊಂದಿರುವ ಬಗ್ಗೆ ಧೃಡಪಡಿಸಿಕೊಳ್ಳಬೇಕು.
ಮತ್ತು ನಿಮ್ಮ ವಿದ್ಯಾರ್ಹತೆ ಅನುಸಾರ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಸಲ್ಲಿಕೆ ಆದ ಬಳಿಕ ಅರ್ಜಿ ಸ್ವೀಕೃತಿಯನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು
ಯ● ಅರ್ಜಿ ಶುಲ್ಕವನ್ನು ಇ-ಅಂಚೆ ಮೂಲಕ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:-
● KEA ವೆಬ್‌ಸೈಟ್‌ನಲ್ಲಿ ಅಧಿಸೂಚನೆ ಬಿಡುಗಡೆ ಮಾಡಿದ ದಿನಾಂಕ – 22.06.2023.
● ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 23.06.2023.
● ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 22.07.2023.
● ಇ-ಅಂಚೆ ಕಛೇರಿಗಳಲ್ಲಿ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆ ದಿನಾಂಕ – 25.07.2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now