ಆಧಾರ್ ಕಾರ್ಡ್ (Aadhar Card) ಈಗ ಎಷ್ಟು ಮುಖ್ಯ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದರೆ ಖಾಸಗಿ ಹಾಗೂ ಸರ್ಕಾರಿ ವಲಯದ ಎಷ್ಟೋ ಕಾರ್ಯಗಳು ನಡೆಯುವುದೇ ಇಲ್ಲ. ಗುರುತಿನ ಪುರಾವೆಗಾಗಿ (POI) ಹಾಗೂ ವಿಳಾಸದ ಪುರಾವೆಗಾಗಿ (POA) ಆಧಾರ್ ಕಾರ್ಡ್ ನ್ನು ಕೇಳಲಾಗುತ್ತದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿರುವ 12 ಅಂಕೆಗಳುಳ್ಳ ಈ ದಾಖಲೆಯನ್ನು ದೇಶದ ಪ್ರತಿಯೊಬ್ಬ ನಾಗರಿಕಗಳು ಕೂಡ ಪಡೆದಿರಲೇಬೇಕು ಎನ್ನುವ ಸ್ಥಿತಿ ಇದೆ.
ಶಾಲಾ ದಾಖಲಾತಿಯಿಂದ ಹಿಡಿದು ಉದ್ಯೋಗ ಪಡೆದುಕೊಳ್ಳುವವರೆಗೆ ಹಾಗೂ ಸರ್ಕಾರಿ ವಲಯದಲ್ಲಿನ ಉಪಯೋಗಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಮಾತ್ರ ಸರ್ಕಾರದ ಅನುದಾನಗಳು DBT ಮೂಲಕ ನೇರವಾಗಿ ಖಾತೆಗೆ ವರ್ಗಾವಣೆಯಾಗುವುದು. ಅನೇಕರಿಗೆ ಇದೇ ಕಾರಣದಿಂದಾಗಿ ಅನ್ನಭಾಗ್ಯ ಹಣ ಹಾಗೂ ಗೃಹಲಕ್ಷ್ಮಿ ಸಹಾಯಧನ (Annabhagya and Gruhalakshmi) ಪಡೆಯಲು ಸಾಧ್ಯವಾಗಿಲ್ಲ.
ಸೆಪ್ಟೆಂಬರ್ 30 ರ ಬಳಿಕ ಇಂತವರ ಬ್ಯಾಂಕ್ ಅಕೌಂಟ್ ಬಂದ್.! RBI ನಿಂದ ಹೊಸ ಆದೇಶ…!
ನೀವೇನಾದರೂ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದರೆ ಅಥವಾ ಬಹಳ ಹಿಂದೆಯೇ ಬ್ಯಾಂಕ್ ಗಳಲ್ಲಿ ಖಾತೆ ತೆರೆದಿದ್ದರೆ ಯಾವ ಬ್ಯಾಂಕ್ ಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದೆ ಎನ್ನುವುದು ತಿಳಿದುಕೊಳ್ಳಲೇಬೇಕು. ಯಾಕೆಂದರೆ ಆ ಖಾತೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೂ ಅದು ಆಕ್ಟಿವ್ ಆಗಿ ಇದ್ದಾಗ ಮಾತ್ರ ಆ ಖಾತೆಗೆ ಹಣ ವರ್ಗಾವಣೆ ಆಗುವುದು.
ಹಾಗಾಗಿ ನಿಮಗೂ ಕೂಡ ಈ ರೀತಿ ಸರ್ಕಾರದ ಸಹಾಯಧನಗಳನ್ನು ಪಡೆದುಕೊಳ್ಳಲು ಸಮಸ್ಯೆ ಉಂಟಾಗಿ ಖಾತೆ ವಿಚಾರವಾಗಿ ಗೊಂದಲಕ್ಕೆ ಒಳಗಾಗಿದ್ದರೆ ಈಗ ನಾವು ಹೇಳುವ ಈ ಸುಲಭ ವಿಧಾನದ ಮೂಲಕ ನಿಮ್ಮ ಯಾವ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿದೆ ಅನ್ನೋದನ್ನ ತಿಳಿದುಕೊಳ್ಳಿ.
● UIDAI ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ, NPCI ಮ್ಯಾಪರ್ನಲ್ಲಿ ನಿಮ್ಮ ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರುವ ಸ್ಥಿತಿಯನ್ನು ಪರಿಶೀಲಿಸಬಹುದು.
● ಮೊದಲಿಗೆ UIDAI ನ ವೆಬ್ಸೈಟ್ಗೆ ಭೇಟಿ ನೀಡಿ. https://uidai.gov.in ನಂತರ ಆಧಾರ್/ಬ್ಯಾಂಕ್ ಸೀಡಿಂಗ್ ಸ್ಥಿತಿಯನ್ನು ಪರಿಶೀಲಿಸಿ ಇನ್ನು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ನೀವು UID/VID, ಭದ್ರತಾ ಕೋಡ್ ಅನ್ನು ನಮೂದಿಸಬೇಕಾದ ಬ್ಯಾಂಕ್ ಮ್ಯಾಪರ್ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ, ಅದರಲ್ಲಿ Generate OTP ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
● ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ನಿಗದಿತ ವಿಭಾಗದಲ್ಲಿ OTP ಅನ್ನು ನಮೂದಿಸಿ ಮತ್ತು Submit ಬಟನ್ ಕ್ಲಿಕ್ ಮಾಡಿ .
● ಆಧಾರ್ನೊಂದಿಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಪೂರ್ತಿ ವಿವರ ಸ್ಕ್ರೀನ್ ಮೇಲೆ ಕಾಣುತ್ತದೆ. ಬ್ಯಾಂಕ್ ಸೀಡಿಂಗ್ ಸ್ಟೇಟಸ್, ಬ್ಯಾಂಕ್ ಹೆಸರು, ಶಾಖೆ, ಯಾವ ದಿನಾಂಕದಂದು ಲಿಂಕ್ ಆಗಿದೆ ಎಲ್ಲಾ ವಿವರ ಸ್ಕ್ರೀನ್ ಮೇಲೆ ತೋರಿಸುತ್ತದೆ.
● ನೀವು ಒಂದೇ ಬ್ಯಾಂಕ್ನಲ್ಲಿ ಬೇರೆ ಬೇರೆ ಖಾತೆಗಳನ್ನು ಹೊಂದಿದ್ದರೆ, ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಸಂಖ್ಯೆಯನ್ನು ಖಚಿತ ಪಡಿಸಲು ನೀವು ಬ್ಯಾಂಕ್ಗೆ ಭೇಟಿ ನೀಡಬೇಕಾಗುತ್ತದೆ. ಕೆಲವೊಮ್ಮೆ ಎರಡು ಪ್ರತ್ಯೇಕ ಬ್ಯಾಂಕ್ ಗಳು ಮರ್ಜ್ ಆದಾಗ ಇಂತಹ ಸ್ಥಿತಿ ಉಂಟಾಗಿರುವ ಸಾಧ್ಯತೆ ಇರುತ್ತದೆ.