Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ದೇಶದ ಯಾವುದೇ ಖಾಸಗಿ ಅಥವಾ ಸರ್ಕಾರದ ಹಣಕಾಸು ಸಂಸ್ಥೆ ಆದರೂ ಕೂಡ ಅದು RBI ನ ನಿಯಮಗಳಿಗೆ ಬದ್ಧವಾಗಿರಬೇಕು ಇದರ ಜೊತೆಗೆ ಪ್ರತಿಯೊಂದು ಬ್ಯಾಂಕ್ ಗಳು (Bank) ಕೂಡ ತಮ್ಮದೇ ಆದ ಇನ್ನಷ್ಟು ನಿಯಮ ನಿಬಂಧನೆಗಳನ್ನು ಹೊಂದಿರುತ್ತವೆ. ಆ ಬ್ಯಾಂಕ್ ಗ್ರಾಹಕನು ಅವುಗಳನ್ನು ಪಾಲಿಸದೆ ಇದ್ದ ಪಕ್ಷದಲ್ಲಿ ದಂಡ ತೆರಬೇಕಾಗುತ್ತದೆ.
ಕೆಲವೊಂದು ಸಂದರ್ಭದಲ್ಲಿ ಆ ಖಾತೆಗಳು ರದ್ದಾಗುವ (fine or punishment) ಸಾಧ್ಯತೆಗಳು ಕೂಡ ಇರುತ್ತವೆ. ಕೆಲವೊಮ್ಮೆ ಆದಾಯ ತೆರಿಗೆ (Income Tax department) ಇಲಾಖೆಯೂ ಕೂಡ ಬ್ಯಾಂಕ್ ಗಳ ಮೇಲೆ ನಿಯಮ ಹೇರುತ್ತವೆ. ಸದ್ಯಕ್ಕೆ ಈಗ ಬ್ಯಾಂಕ್ ಹೊರಡಿಸಿರುವ ಹೊಸ ನಿಯಮಗಳು ಏನು ಎನ್ನುವುದರ ಕುರಿತು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಒಂದು ವೇಳೆ ನೀವು ಈ ಮಾಹಿತಿಯನ್ನು ತಿಳಿದುಕೊಂಡಿಲ್ಲ ಎಂದರೆ ಮತ್ತು ಈ ಪ್ರಕಾರವಾಗಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಲ್ಲ ಎಂದರೆ ನಿಮ್ಮ ಉಳಿತಾಯ ಖಾತೆಗಳು ಸೆಪ್ಟೆಂಬರ್ 30ರ ನಂತರ ರದ್ದಾಗಬಹುದು. ಇತ್ತೀಚೆಗಷ್ಟೇ ಆದಾಯ ತೆರಿಗೆ ಇಲಾಖೆ ತನ್ನ ಎಲ್ಲಾ ಆದಾಯದ ಮೂಲವನ್ನು ಘೋಷಿಸಿಕೊಳ್ಳಬೇಕು ಎಂದು ಹೇಳಿತ್ತು.
ಕೆಲವರು ತಮ್ಮ ಉಳಿತಾಯ ಖಾತೆಯಲ್ಲಿ ಇರುವ ಮೊತ್ತವನ್ನು ಆದಾಯ ತೆರಿಗೆ ಸಲ್ಲಿಸುವ ವೇಳೆ ಘೋಷಿಸಿಕೊಳ್ಳುವುದಿಲ್ಲ ಎನ್ನುವುದು ಇಲಾಖೆಗೆ ಕಂಡು ಬಂದಿರುವುದರಿಂದ ಈ ಕುರಿತು ಕಟ್ಟುನಿಟ್ಟಾದ ಆದೇಶವನ್ನು ಆದಾಯ ತೆರಿಗೆ ಇಲಾಖೆ ಹೊರಡಿಸಿದೆ. ಈ ರೀತಿ ಉಳಿತಾಯ ಖಾತೆಯಲ್ಲಿ ಇರುವ ಹಣವನ್ನು ಘೋಷಿಸಿಕೊಳ್ಳದೆ ತೆರಿಗೆ ವಂಚನೆ ಮಾಡುವವರು ಸೆಪ್ಟೆಂಬರ್ 30 ರಿಂದ ನಷ್ಟ ಅನುಭವಿಸಬೇಕಾಗುತ್ತದೆ.
ಯಾಕೆಂದರೆ ಬ್ಯಾಂಕ್ ಗಳ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ತಮ್ಮ ಉಳಿತಾಯ ಖಾತೆಗಳಿಗೆ ಆಧಾರ್ ಲಿಂಕ್ (Adhar link to Bank account compulsory) ಕಡ್ಡಾಯವಾಗಿ ಮಾಡಿಸಬೇಕು ಎನ್ನುವ ಕಂಡೀಶನ್ ಹಾಕಿದೆ. ಆಧಾರ್ ಮಾಹಿತಿಯಿಂದ ಉಳಿತಾಯ ಖಾತೆಯಲ್ಲಿರುವ ಹಣವನ್ನು ಲೆಕ್ಕ ಪಡೆಯಬಹುದು ಹಾಗಾಗಿ ಬ್ಯಾಂಕ್ ಗಳಲ್ಲಿ ಗ್ರಾಹಕರು ತಮ್ಮ ಉಳಿತಾಯ ಖಾತೆಗಳಿಗೆ ಸೆಪ್ಟೆಂಬರ್ 30ರ ಒಳಗೆ ಆಧಾರ್ ಲಿಂಕ್ ಮಾಡಬೇಕು, ಈ ಪ್ರಕ್ರಿಯ ಪೂರ್ತಿ ಗೊಳಿಸಿದ ಖಾತೆಗಳು ರದ್ದಾಗುವ ಸಾಧ್ಯತೆಗಳು ಇವೆ.
ಇಲ್ಲವಾದರೆ ಬಾರಿ ದೊಡ್ಡ ಮೊತ್ತದ ದಂಡವನ್ನು ತೇರಬೇಕಾಗುತ್ತದೆ ಇಂತಹ ಒಂದು ಸೂಚನೆಯನ್ನು ಆದಾಯ ಇಲಾಖೆ ಹೊರಡಿಸಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ತಪ್ಪದೇ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಒಳ್ಳೆಯದು ಇದರ ಜೊತೆಗೆ ಸರ್ಕಾರಗಳು ತಮ್ಮ ಯೋಜನೆಗಳ ಅನುದಾನಗಳನ್ನು DBT ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದರಿಂದ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಸೀಡಿಂಗ್ ಆಗಿ NPCI ಮ್ಯಾಪಿಂಗ್ ಆಗದೆ ಇದ್ದಲ್ಲಿ ಅವರು ವಂಚಿತರಾಗುತ್ತಾರೆ.
ಹಾಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಕೂಡ ಈ ನಿಯಮ ಎಲ್ಲರಿಗೂ ಒಳಿತಾಗಿದೆ ಎಂದೇ ಹೇಳಬಹುದು. ಅಂಚೆ ಕಚೇರಿಯಲ್ಲಿ (Post office small Saving Account) ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳಿವೆ. ಇದೀಗ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಳಿಗೂ ಆಧಾರ್ ಲಿಂಕ್ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.
ಅಂಚೆ ಕಚೇರಿಯ ಉಳಿತಾಯ ಖಾತೆಗಳಿಗೂ ಕೂಡ ಸೆಪ್ಟೆಂಬರ್ 30 ರ ಒಳಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಬೇಕಿದೆ. ಒಂದು ವೇಳೆ ಉಳಿತಾಯ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಹೂಡಿಕೆಯ ಆಯ್ಕೆಯ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.