ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುವುದು ಎಷ್ಟು ಡೇಂಜರ್ ಗೊತ್ತಾ.? ಚೀಟಿ ವ್ಯಾವರ ಮಾಡೋರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

 

WhatsApp Group Join Now
Telegram Group Join Now

ಮ್ಯಾಟ್ರಿಮೋನಿಲ್ ಕೇಸ್ ಗಳನ್ನು ಹೊರತುಪಡಿಸಿ ಕೋರ್ಟ್ ಗಳಲ್ಲಿ ವರ್ಷದಲ್ಲಿ ದಾಖಲಾಗುವ ಎರಡನೇ ಅತಿ ಹೆಚ್ಚು ಕೇಸ್ ಗಳು ಚೆಕ್ ಬೌನ್ಸ್ ಕೇಸ್ ಗಳೇ ಆಗಿರುತ್ತವೆ. ಹಾಗೆಯೇ ಈ ಚೆಕ್ ಬೌನ್ಸ್ ಕೇಸ್ ಗಳಲ್ಲಿ ಬಹುತೇಕ ಪ್ರಮಾಣದ ಕೇಸ್ ಗಳು ಸುಳ್ಳು ಕೇಸ್ ಗಳೇ ಆಗಿರುತ್ತವೆ ಹಾಗಾಗಿ ಲೋಕ್ ಅದಾಲತ್ ಗಳಲ್ಲಿ ಇವುಗಳನ್ನು ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತದೆ.

ಈ ರೀತಿ ಚೆಕ್ ಬೌನ್ಸ್ ಕೇಸ್ ಹಾಕಲು ದಾವೇ ಹೂಡಿ ಆ ಚೆಕ್ ಮಾಲಿಕತ್ವದಲ್ಲಿರುವ ವ್ಯಕ್ತಿಗೆ ನೋಟಿಸ್ ಕಳುಹಿಸಲು ಆತನ ಖಾಲಿ ಚೆಕ್ ಇದ್ದರೆ ಸಾಕು. ಆ ಚೆಕ್ ನೋಟಿಸ್ ಕಳಿಸಿರುವ ವ್ಯಕ್ತಿಗೆ ಯಾವ ರೀತಿ ಸಿಕ್ಕಿತು ಅದು ಕಳ್ಳತನವಾಯಿತೇ ಅಥವಾ ಅವರೇ ಕೊಟ್ಟಿದ್ದರೇ ಅಥವಾ ಕಳೆದುಕೊಂಡು ಸಿಕ್ಕಿದ್ದೇ ಇದ್ಯಾವುದೂ ಕೂಡ ಮ್ಯಾಟರ್ ಆಗುವುದಿಲ್ಲ.

ಈ ಸುದ್ದಿ ಓದಿ:-ಮನೆ ಮಾಲೀಕರೆ ಎಚ್ಛರ, ಈ ನಿಯಮ ಪಾಲಿಸದೆ ಇದ್ದಲ್ಲಿ ಬಾಡಿಗೆದಾರರೇ ಮನೆ ಮಾಲೀಕರಾಗಿ ಬಿಡಬಹುದು…

ನಂತರ ಕೋರ್ಟ್ ನಲ್ಲಿ ವಿಚಾರಣೆಗಳು ನಡೆದು ಕೊನೆಯಲ್ಲಿ ತೀರ್ಮಾನ ಆಗುತ್ತದೆ ಆದರೆ ಅಲ್ಲಿಯವರೆಗೂ ಕೂಡ ವ್ಯಕ್ತಿ ಕೋರ್ಟು ಕಚೇರಿ ಎಂದು ಅಲೆಯಬೇಕು. ಹಾಗಾಗಿ ಖಾಲಿ ಚೆಕ್ ಕೊಟ್ಟು ಸಾಲ ಪಡೆದುಕೊಳ್ಳುವ ವೇಳೆ ಎಚ್ಚರಿಕೆಯಿಂದ ಇರಬೇಕು. ಸಾಲ ಮಾತ್ರವಲ್ಲದೆ ಚೀಟಿ ವ್ಯವಹಾರಕ್ಕೆ ಕೂಡ ಖಾಲಿ ಚೆಕ್ ಗಳನ್ನು ಸೆಕ್ಯೂರಿಟಿಗಾಗಿ ಇಂದು ತೆಗೆದುಕೊಳ್ಳಲಾಗುತ್ತದೆ.‌

ಚೀಟಿ ವ್ಯವಹಾರದಲ್ಲಿಯೂ ಕೂಡ ಕೆಲವರು ಮೊದಲು ಅಥವಾ ಮಧ್ಯದಲ್ಲಿ ಹಣ ತೆಗೆದುಕೊಳ್ಳುತ್ತಾರೆ, ಆ ಕಾರಣದಿಂದಾಗಿ ಅವರು ಕೊನೆಯವರೆಗೆ ಕಟ್ಟುತ್ತಾರೋ ಇಲ್ಲವೋ ಎನ್ನುವ ಅನುಮಾನದಿಂದ ಖಾಲಿ ಚೆಕ್ ತೆಗೆದುಕೊಳ್ಳಲಾಗುತ್ತದೆ. ಕೊನೆಗೆ ಚೀಟಿ ವ್ಯವಹಾರ ಮುಗಿದು ಅವರು ಹಣಕಾಸಿನ ನಿರ್ವಹಣೆಯನ್ನು ಕೂಡ ಸರಿಯಾಗಿ ಮಾಡಿದರೂ ಕೆಲವರು ಚೆಕ್ ವಾಪಸ್ ಕೊಡುವುದಿಲ್ಲ.

ಈ ಸುದ್ದಿ ಓದಿ:-HDFC ಬ್ಯಾಂಕ್ ಸ್ಕಾಲರ್ಶಿಪ್ 75,000 ವಿದ್ಯಾರ್ಥಿ ವೇತನ ಪಡೆಯಿರಿ. 1 ನೇ ತರಗತಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುತ್ತಿರುವವರು ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.!

ಏನಾದರೂ ನೆಪ ಹೇಳಿ ಕೊಡುವುದಿಲ್ಲ ಅಥವಾ ಕೇಳಿ ತೆಗೆದುಕೊಳ್ಳುವುದನ್ನು ಕೂಡ ಮರೆಯಬಹುದು. ಈ ರೀತಿ ಏನಾದರೂ ನೀವು ಚೀಟಿ ವ್ಯವಹಾರಕ್ಕೆ ಖಾಲಿ ಚೆಕ್ ಕೊಡುತ್ತಿದ್ದರೆ ಇಂದು ನಾವು ಹೇಳುವ ಈ ವಿಷಯವನ್ನು ಗಮನವಿಟ್ಟು ಕೇಳಿ ಇಲ್ಲವಾದಲ್ಲಿ ನಿಮ್ಮ ಇಂತಹ ತಪ್ಪಿಗಾಗಿ ಬಹಳ ದೊಡ್ಡ ಮೊತ್ತದ ದಂಡ ತೆರಬೇಕಾಗುತ್ತದೆ.

ಈ ಮೇಲೆ ಹೇಳಿದಂತೆ ಅನ್ ಆರ್ಗನೈಜ್ ಅಂದರೆ ರಿಜಿಸ್ಟರ್ ಆಗಿರದ ಚಿಟ್ ವ್ಯವಹಾರಗಳಲ್ಲಿ ನೀವು ಖಾಲಿ ಚೆಕ್ ಕೊಟ್ಟು ಹಣ ಪಡೆದಿದ್ದರೆ ಅವರು ನಿಮ್ಮ ಖಾಲಿ ಚೆಕ್ ತೆಗೆದುಕೊಂಡು ಚೆಕ್ ಬೌನ್ಸ್ ಕೇಸ್ ಹಾಕಿದರೆ ನೀವು ಆ ಹಣವನ್ನು ಕೊಡಲೇಬೇಕಾಗುತ್ತದೆ. ಯಾಕೆಂದರೆ ಅದು ರಿಜಿಸ್ಟರ್ ಆಗಿರದೆ ಇರುವುದರಿಂದ ನೀವು ಯಾವ ಕಾರಣಕ್ಕೆ ಕೊಟ್ಟಿದ್ದೀರಾ ಎನ್ನುವುದನ್ನು ನೀವು ಸಾಬೀತು ಪಡಿಸಲು ಬಹಳ ಕಷ್ಟ ಮತ್ತು ಅದಕ್ಕೆ ಸರಿಯಾದ ದಾಖಲೆ ಸಿಕ್ಕುವುದಿಲ್ಲ.

ಈ ಸುದ್ದಿ ಓದಿ:-ಜಮೀನು, ಮನೆ, ಸೈಟ್, ಇನ್ನಿತರ ಆಸ್ತಿಗೆ ತಕರಾರು ಅರ್ಜಿ ಸಲ್ಲಿಸುವುದು ಹೇಗೆ.? ತಕರಾರು ಪ್ರಕ್ರಿಯೆ ಹೇಗೆ ಇರುತ್ತೆ ಸಂಪೂರ್ಣ ಮಾಹಿತಿ.!

ಆದರೆ ನೀವೇನಾದರೂ ರಿಜಿಸ್ಟರ್ ಆಗಿರುವ ಚಿಕ್ ಫಂಡ್ ಗಳಲ್ಲಿ ಹಣ ಹಾಕಿದ್ದರೆ ಒಂದು ಅವಕಾಶ ಇರುತ್ತಿತ್ತು, ಆಗ ನಿಮ್ಮ ಕೇಸ್ ಗೆ ಒಂದು ಬಲ ಬರುತ್ತಿತ್ತು. ಈ ರೀತಿ ಅನ್ ರಿಜಿಸ್ಟರ್ ಆಗಿರುವ ಚಿಟ್ ಫಂಡ್ ಗಳಲ್ಲಿ ಖಾಲಿ ಚೆಕ್ ಕೊಟ್ಟು ನಂತರ ಏನಾದರೂ ಚೆಕ್ ಬೌನ್ಸ್ ಕೇಸ್ ಹಾಕಿದರೆ ನೀವು ಆ ಹಣವನ್ನು ಅವರಿಗೆ ಕಟ್ಟಲೇ ಬೇಕಾಗುತ್ತದೆ ಈ ರೀತಿ ಅನೇಕ ಪ್ರಕರಣಗಳಲ್ಲಿ ನಡೆದಿದೆ.

ಹಾಗಾಗಿ ತಪ್ಪದೆ ಈ ವಿಚಾರಗಳಲ್ಲಿ ಎಚ್ಚರಿಕೆಯಿರಲಿ ನಿಮ್ಮ ಹಣಕಾಸಿನ ವ್ಯವಹಾರ ಮುಗಿದ ತಕ್ಷಣವೇ ತಪ್ಪದೆ ಖಾಲಿ ಚೆಕ್ ವಾಪಸ್ ಪಡೆದುಕೊಳ್ಳಿ ಅಥವಾ ಖಾಲಿ ಚೆಕ್ ಅವರಿಗೆ ನೀಡುವ ಮುನ್ನವೇ ಯೋಚನೆ ಮಾಡಿ. ಚೆಕ್ ಬೌನ್ಸ್ ಪ್ರಕರಣಗಳಲ್ಲಿ 30% – 40% ಈ ರೀತಿ ಚೀಟಿ ವ್ಯವಹಾರಕ್ಕಾಗಿ ನೀಡಿದ ಖಾಲಿ ಚೆಕ್ ಪ್ರಕರಣಗಳೇ ಇರುತ್ತವೆ ಎನ್ನುವುದನ್ನು ವರದಿಯೊಂದು ಹೇಳುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now