ಆಪಲ್ ಬೆಳೆ ಎಂದ ತಕ್ಷಣ ಎಲ್ಲರಿಗೂ ತಲೆಯಲ್ಲಿ ಬರುವುದು ಆಪಲ್ ಕಾಶ್ಮೀರದಲ್ಲಿ ಮಾತ್ರ ಬೆಳೆಯಲು ಆಗುತ್ತದೆ. ಅಲ್ಲಿನ ವಾತಾವರಣ ಹಾಗೂ ಆ ಪ್ರದೇಶದ ಮಣ್ಣಿಗೆ ಮಾತ್ರ ಆಪಲ್ ಬೆಳೆ ಬರುವುದು ಬೇರೆ ಕಡೆ ಬೆಳೆಯಲು ಆಗುವುದಿಲ್ಲ ಇತ್ಯಾದಿ ಇತ್ಯಾದಿ ಆದರೆ ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಸ್ವಲ್ಪ ಹೆಚ್ಚಿನ ಶ್ರಮವಹಿಸಿ ಸೂಕ್ತ ತರಬೇತಿ ಜೊತೆಗೆ ಕೈ ಹಾಕಿದರೆ ಕೆಸರಾದ ಕೈ ಖಂಡಿತವಾಗಿಯೂ ಮೊಸರಾಗುತ್ತದೆ.
ಇದಕ್ಕೆ ಕರ್ನಾಟಕ ರಾಜ್ಯದಲ್ಲಿ ಹೊಸಕೋಟೆ ಸಮೀಪದ ಬಸವರಾಜು ಎಂಬ ರೈತ ತಮ್ಮ ಜಮೀನಿನಲ್ಲಿ ಆಪಲ್ ಬೆಳೆದಿರುವುದು ಸಾಕ್ಷಿ. ಈ ರೈತರು ಹೇಳುವ ಮಾಹಿತಿ ಪ್ರಕಾರವಾಗಿ ಆಪಲ್ ಬೆಳೆಯುವುದು ಬಹಳ ಸುಲಭವಂತೆ, ಅದರಲ್ಲೂ ಇವರು ಯಾವುದೇ ಹೆಚ್ಚಿನ ರಾಸಾಯನಿಕಗಳನ್ನು ಬಳಸದೆ ಆರಂಭದಲ್ಲಿ ತೋಟಕ್ಕೆ ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣನ್ನು ಹದ ಮಾಡಿ.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಯಾರಿಗೆ ಬಂದಿಲ್ಲ ಅವರು ಈ ರೀತಿ ಮಾಡಿ.! ನಿಮ್ಮ ಅಕೌಂಟ್ ಗೆ ಹಣ ಜಮೆ ಆಗುತ್ತೆ.!
ಒಂದು ಬಾರಿ ಆಪಲ್ ಕಸಿ ಮಾಡಿಸಿ ತಂದು ನೆಟ್ಟ ಮೇಲೆ ಬರಿ ಬೇವಿನ ಎಣ್ಣೆಯನ್ನು ಸ್ಪ್ರೇ ಮಾಡುತ್ತಾ ಆದಷ್ಟು ಸಾವಯುವವಾಗಿ ಆಪಲ್ ಬೆಳೆದು ಕೈ ತುಂಬಾ ಲಾಭ ಪಡೆಯುತ್ತಿದ್ದಾರಂತೆ, ತಮಗಿರುವ ಸ್ವಲ್ಪ ಜಮೀನಿನಲ್ಲಿ 440 ಆಪಲ್ ಗಿಡಗಳನ್ನು ಹಾಕಿರುವ ಇವರು ತನಗೆ 440 ಮಕ್ಕಳು ಎನ್ನುವ ರೀತಿ ಇವುಗಳನ್ನು ನೋಡಿಕೊಂಡಿದ್ದಾರಂತೆ.
ಇಷ್ಟು ಚೆನ್ನಾಗಿ ಆರೈಕೆ ಮಾಡಿದ ಕಾರಣ ಅಷ್ಟು ಚೆನ್ನಾಗಿ ಇವು ಕಳೆದ ಏಳು ವರ್ಷಗಳಿಂದ ಲಾಭ ಮಾಡಿ ಕೊಟ್ಟಿವೆ ಎನ್ನುತ್ತಾರೆ ಇವರು. ಇನ್ನು ಈ ಕೃಷಿ ಬಗ್ಗೆ ಇವರು ಹೇಳುವ ಮಾತು ಏನು ಎಂದರೆ ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ಸ್, ನಂತರ ನಿರ್ವಹಣೆ ತುಂಬಾ ಸುಲಭ ನಿಶ್ಚಿತ ಲಾಭ ಎನ್ನುವ ಭರವಸೆ ಕೊಡುತ್ತಾರೆ.
ಎಲ್ಲರಿಗೂ ಗೊತ್ತಿರುವಂತೆ ಮಾರ್ಕೆಟ್ ನಲ್ಲಿ ಆಪಲ್ ಗೆ ಬಹಳ ಬೇಡಿಕೆ ಇದೆ ಯಾವಾಗಲೂ ಹೆಚ್ಚಿಗೆ ಬೆಲೆ ಇದ್ದೇ ಇರುತ್ತದೆ. ಇನ್ನು ಹಬ್ಬ ಹರಿದಿನದ ಸೀಸನ್ ಬಂದರೆ ನಮ್ಮ ತೋಟಕ್ಕೆ ಬಂದು ಅಕ್ಕಪಕ್ಕದವರೇ ಖರೀದಿಸಿ ಹೋಗುತ್ತಾರೆ ಹಾಗಾಗಿ ಸರಿಯಾದ ಸೀಸನ್ ನೋಡಿಕೊಂಡು ಬೆಳೆ ಬರುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು.
ಈ ಸುದ್ದಿ ಓದಿ:- ಕೇವಲ 18 ಲಕ್ಷಕ್ಕೆ ಯಾವುದೇ ಕ್ವಾಲಿಟಿ ಕಾಂಪ್ರಮೈಸ್ ಇಲ್ಲದೆ ಡುಪ್ಲೆಕ್ಸ್ ಮನೆ ಕಟ್ಟಿದ್ದರೆ ನೋಡಿ.!
ಕಟಿಂಗ್ ಮಾಡಿದರೆ ಮಾತ್ರ ಅದು ಫಲ ಕೊಡುವುದು ಈ ಕಟ್ಟಿಂಗ್ ಯಾವಾಗ ನಮ್ಮ ದೇಹಕ್ಕೆ ಚಳಿ ಬರುತ್ತದೆ ಅದೇ ಕಾಲದಲ್ಲಿ ಆಪಲ್ ಗಿಡಕ್ಕೆ ಕಟಿಂಗ್ ಮಾಡಬೇಕು ಕಟಿಂಗ್ ಮಾಡಿದ ಜಾಗಕ್ಕೆ ಫಂಗಸ್ ಆಗದಂತೆ ಔಷಧಿ ಹಚ್ಚಬೇಕು ಇದಿಷ್ಟೇ ಇದರ ಕೆಲಸ. ಇನ್ನು ಪ್ರತಿನಿತ್ಯ ನೀರು ಹಾಯಿಸಿಕೊಂಡು ಆರಾಮಾಗಿ ನೋಡಿಕೊಳ್ಳಬಹುದು. ಆಸಕ್ತಿ ಇದ್ದವರು ಮಿಶ್ರಬೆಳೆ ಕೂಡ ಬೆಳೆಯಬಹುದು ಆದರೆ ನಾನು ಆಪಲ್ ಒಂದೇ ಸಾಕು ಎಂದು ನೆಮ್ಮದಿಯಾಗಿದ್ದೇನೆ ಎಂದು ಹೇಳುತ್ತಾರೆ ಇವರು.
ಇನ್ನು ಕೂಲಿ ಕಾರ್ಮಿಕರ ವಿಚಾರಕ್ಕೆ ಬರುವುದಾದರೆ ಆರಂಭದಲ್ಲಿ ಗಿಡ ನೆಡುವಾಗ ಅವಶ್ಯಕತೆ ಇರುತ್ತದೆ, ಅಷ್ಟೇ ಇಳುವರಿ ಹೆಚ್ಚಿದಾಗ ನಮಗೆ ಹೆಚ್ಚಿನ ಆಳು ಬೇಕೆಂದರೆ ಆ ಸಮಯದಲ್ಲಿ ಮಾತ್ರ ಕರೆಸಿಕೊಳ್ಳುತ್ತೇವೆ. ಇಲ್ಲವಾದಲ್ಲಿ ನಮ್ಮ ಮನೆಯ ಜನರೇ ಮಾಡುತ್ತೇವೆ. ತೋಟಕ್ಕೆ ಕಾವಲು ಇರಬೇಕಾಗುತ್ತದೆ,
ತೋಟಗಾರಿಕೆ ಇಲಾಖೆ ಸಹಕಾರದೊಂದಿಗೆ ಇಲ್ಲೇ ಶೆಡ್ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದೇನೆ. ಯಾರಿಗೆ ಆಸಕ್ತಿ ಇದೆ ಅಂತಹ ರೈತರು ಧೈರ್ಯವಾಗಿ ಆಪಲ್ ಕೃಷಿ ಮಾಡಿ, ಯಾರು ಎಲ್ಲಿ ಬೇಕಾದರೂ ಬೆಳೆಯಬಹುದು. ಹೆಚ್ಚಿನ ಮಾಹಿತಿ ಬೇಕಿದ್ದವರು ನನಗೆ ಸಂಪರ್ಕಿಸಿದರೆ ನನಗೆ ತಿಳಿದಷ್ಟು ವಿಷಯ ಹೇಳುತ್ತೇನೆ ಅಥವಾ ತೋಟಗಾರಿಕೆ ಇಲಾಖೆ ನೆರವು ಪಡೆಯಿರಿ ಎನ್ನುತ್ತಾರೆ ಈ ರೈತ.
ಈ ಸುದ್ದಿ ಓದಿ:- IDBI ನೇಮಕಾತಿ 2024, ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸುವರ್ಣ ಅವಕಾಶ ತಪ್ಪದೇ ಅರ್ಜಿ ಸಲ್ಲಿಸಿ. ವೇತನ 1.6 ಲಕ್ಷ
ರೈತನ ವಿಳಾಸ:-
ಬಸವರಾಜು,
ಸಿದ್ದೇನಹಳ್ಳಿ, ಸೂಲಿಬೆಲೆ,
ಹೊಸಕೋಟೆ ತಾಲೂಕು,
ಬೆಂಗಳೂರು ಜಿಲ್ಲೆ.
98440 16237.