ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಎಲ್ಲರೂ ಕೂಡ ಸ್ವಂತ ಮನೆಯನ್ನು ಹೊಂದಿರುತ್ತಾರೆ. ಆದರೆ ಆ ಮನೆಯನ್ನು ಖಾತೆ ಮಾಡಿಸಿಕೊಂಡಿರುವುದಿಲ್ಲ. ಕುಟುಂಬದ ಮುಖ್ಯಸ್ಥನ ಹೆಸರಿನಲ್ಲಿ ಮನೆ ಇದ್ದರೆ ಆತ ಮೃ’ತ ಹೊಂದಿದ ನಂತರ ಅವನ ವಾರಸುದಾರರುಗಳು ಆ ಮನೆಯಲ್ಲಿ ವಾಸಿಸುತ್ತಾರೆ ಆದರೆ ಖಾತೆ ಬದಲಾವಣೆ ಮಾಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ.
ಇದರಿಂದ ಮುಂದೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದಷ್ಟು ತಮ್ಮ ಪಾಲಿನ ಆಸ್ತಿಯು ಖಾತೆ ಆಗಿರುವುದು ಅದರಲ್ಲೂ ಮನೆಯಾದರೆ ಇ-ಸ್ವತ್ತು (E-swattu) ಮಾಡಿಸುವುದು ಬಹಳ ಮುಖ್ಯ. ಈ ಸ್ವತ್ತು ಎಂದರೇನು? ಯಾಕೆ ಇದನ್ನು ಮಾಡಿಸಬೇಕು ಇದರಿಂದ ಆಗುವ ಪ್ರಯೋಜನಗಳೇನು? ಇ-ಸ್ವತ್ತು ಮಾಡಿಸುವುದು ಹೇಗೆ ಹಾಗೂ ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಎನ್ನುವುದು ಪ್ರತಿಯೊಬ್ಬ ಗ್ರಾಮೀಣ ಭಾಗದ ವ್ಯಕ್ತಿಗೂ ತಿಳಿದಿರಲೇಬೇಕಾದ ಮಾಹಿತಿ ಹಾಗಾಗಿ ಇದರ ಕುರಿತು ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
1. ಆಸ್ತಿಯ ವಿವರಗಳನ್ನು ತಂತ್ರಾಂಶದಲ್ಲಿ ದಾಖಲಿಸಿ ಖಾತೆ ಮಾಡಿ ಒದಗಿಸುವ ಸೇವೆಯನ್ನು ಈಸ್ಪತ್ತು ಎನ್ನುತ್ತೇವೆ.
2. ಬೇಕಾಗುವ ದಾಖಲೆಗಳು:-
* ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಮನೆ ಹಕ್ಕು ಪತ್ರ (ಮನೆ ಕ್ರಯಪಟ್ಟ ಅಥವಾ ನೋಂದಣಿ ಪತ್ರವು ಮಾನ್ಯವಾಗುತ್ತದೆ)
* ಅರ್ಜಿದಾರರ ಆಧಾರ್ ಕಾರ್ಡ್
* ಆರ್ಜಿದಾರರ ಫೋಟೋ
* ಮನೆಯ ನಕ್ಷೆ ( ತಹಶೀಲ್ದಾರ್ ಕಚೇರಿಯಿಂದ ಪಡೆದ ಕಚ್ಚಾ ನಕ್ಷೆ ಕೂಡ ಮಾನ್ಯವಾಗುತ್ತದೆ)
* ಇ-ಸ್ವತ್ತು ಮಾಡಿಸಲು ನಿಗದಿಪಡಿಸಿರುವ ಫಾರಂ ನ್ನು ಭರ್ತಿ ಮಾಡಿ ಸಲ್ಲಿಸಬೇಕು
* ಕಟ್ಟಡದ ತೆರಿಗೆ ರಶೀದಿ ಅಥವಾ ವಿದ್ಯುತ್ ಬಿಲ್
3. ಇ-ಸ್ವತ್ತು ಮಾಡಿಸುವ ವಿಧಾನ:-
* ಇ-ಸ್ವತ್ತು ಮಾಡಿಸಲು ಇರುವ ಅರ್ಜಿ ಫಾರಂನಲ್ಲಿ ಸ್ವ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಇ-ಸ್ವತ್ತು ಮಾಡಿಸಲು ಬೇಕಾಗುವ ದಾಖಲೆಗಳನ್ನು ಲಗತ್ತಿಸಿ ನಿಮ್ಮ ಗ್ರಾಮ ಪಂಚಾಯಿತಿಗೆ ಸಲ್ಲಿಸಿ ತಪ್ಪದೇ ಅರ್ಜಿ ಸ್ವೀಕೃತಿ ಪತ್ರ / ರಸೀದಿ ಪಡೆದುಕೊಳ್ಳಿ.
* ನಿಮ್ಮ ಪಂಚಾಯಿತಿಯಲ್ಲಿರುವ ಡಾಟಾ ಎಂಟ್ರಿ ಆಪರೇಟರ್ ನಿಮ್ಮ ಮಾಹಿತಿಯನ್ನು ತಂತ್ರಾಂಶದಲ್ಲಿ ಎಂಟ್ರಿ ಮಾಡುತ್ತಾರೆ ತದನಂತರ PDO ದಾಖಲೆ ಹಾಗೂ ಸ್ಥಳ ಪರಿಶೀಲನೆಯನ್ನು ಮಾಡುತ್ತಾರೆ.
* ಆಸ್ತಿಯ ನಕ್ಷೆ ಈಗಾಗಲೇ ಗ್ರಾಮ ಪಂಚಾಯಿತಿಯಲ್ಲಿ ಇದ್ದರೆ ಹೊಸ ಸಂಖ್ಯೆ ನೀಡಿ ನಿಮಗೆ ಇ-ಸ್ವತ್ತು ಪ್ರಮಾಣ ಪತ್ರಗಳನ್ನು ನೀಡುತ್ತಾರೆ
* ಒಂದು ವೇಳೆ ಆ ಆಸ್ತಿಗೆ ನಕ್ಷೆ ಇಲ್ಲದಿದ್ದಾಗ ಆಸ್ತಿಯನ್ನು ಅಳತೆ ಮಾಡಿ ನಕ್ಷೆ ತಯಾರಿಸಲು ಸರ್ವೇ ಇಲಾಖೆಗೆ ದಾಖಲೆಗಳನ್ನು ಕಳುಹಿಸಿಕೊಡುತ್ತಾರೆ
* ಗೊತ್ತು ಮಾಡಿದ ದಿನಾಂಕದಂದು ಸರ್ವೆ ಇಲಾಖೆ ಸಿಬ್ಬಂದಿಗಳು ಬಂದು ಅಳತೆ ಮಾಡಿ ನಕ್ಷೆ ತಯಾರಿಸಿ ಅದನ್ನು ಗ್ರಾಮ ಪಂಚಾಯಿತಿಗೆ ಕೊಡುತ್ತಾರೆ, PDOಅದನ್ನು ಪರಿಶೀಲಿಸಿ ಅನುಮೋದಿಸಿದರೆ ಆ ಕಾರ್ಯ ಮುಗಿಯುತ್ತದೆ.
4. ಇನ್ನಿತರ ಪ್ರಮುಖ ವಿಷಯಗಳು:-
* ಗ್ರಾಮಠಾಣಾ ವ್ಯಾಪ್ತಿ ಹೊರತುಪಡಿಸಿ ಇನ್ನಿತರ ಪ್ರದೇಶಗಳಲ್ಲಿ ಇರುವ ಮನೆಗಳಿಗೆ ಈ ಸ್ವತ್ತು ಮಾಡಿಸಲು ಆಗುವುದಿಲ್ಲ
* ಹಳ್ಳಿಗಳಲ್ಲಿರುವ ಸೈಟು ಹಾಗೂ ಮನೆಗಳಿಗೆ ಇ-ಸ್ವತ್ತು ಮಾಡಿಸಲೇಬೇಕು ಇಲ್ಲವಾದಲ್ಲಿ ಹಕ್ಕು ವರ್ಗಾವಣೆ ಮಾಡಲಾಗುವುದಿಲ್ಲ ಮತ್ತು ಬ್ಯಾಂಕ್ ಗಳಲ್ಲಿ ಈ ಆಸ್ತಿಯ ಮೇಲೆ ಸಾಲ ಸೌಲಭ್ಯ ಸಿಗುವುದಿಲ್ಲ
* ಫಾರಂ ನಂಬರ್ 9 ಮತ್ತು 11 ನಿಮ್ಮ ಕೈ ಸೇರಿದರೆ ನಿಮ್ಮ ಆಸ್ತಿ ಇ-ಸ್ವತ್ತು ಆಗಿದೆ ಎಂದರ್ಥ
* ಸಕಾಲ ತಂತ್ರಾಂಶದ ಮೂಲಕ ಇ-ಸ್ವತ್ತು ಪ್ರಕ್ರಿಯೆ ನಡೆಯುತ್ತಿರುವುದರಿಂದ ಒಂದು ವಾರದ ಒಳಗೆ ನಿಮ್ಮ ಆಸ್ತಿಗೆ ಇ-ಸ್ವತ್ತು ಪ್ರಮಾಣ ಪತ್ರ ಪಡೆದುಕೊಳ್ಳಬಹುದು.