ಹಣ ಸಂಪಾದನೆ ಮಾಡುವುದು ಮಾತ್ರವಲ್ಲದೇ, ಆ ಹಣವನ್ನು ಉಳಿಸಿಕೊಳ್ಳುವುದು (Saving) ಕೂಡ ಮುಖ್ಯ. ದುಡಿಯುವ ವಯಸ್ಸಿನಲ್ಲಿ ಭವಿಷ್ಯದ ಉದ್ದೇಶಗಳಿಗಾಗಿ ನಮ್ಮ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಜೊತೆಗೆ ತಪ್ಪದೆ ಉಳಿತಾಯಕ್ಕೂ ಕೂಡ ಒಂದು ಮೊತ್ತದ ಹಣವನ್ನು ಮೀಸಲಿಡಬೇಕು.
ಉಳಿತಾಯ ಖಾತೆಯಲ್ಲಿ ಹಣವನ್ನು ಇಡುವುದರಿಂದ ಹೆಚ್ಚಿನ ಲಾಭ ಸಿಗುವುದಿಲ್ಲ, ಹಾಗಾಗಿ ಹೂಡಿಕೆ ರೂಪದಲ್ಲಿ ಉಳಿತಾಯ ಮಾಡಬಹುದು. ಹೀಗೆ ಮಾಡುವುದಕ್ಕೆ ಸಾಕಷ್ಟು ಯೋಜನೆಗಳಿವೆ, ಕೇಂದ್ರ ಸರ್ಕಾರವು ಕೂಡ ಉಳಿತಾಯ ಮಾಡುವವರಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಹೆಣ್ಣು ಮಕ್ಕಳಿಗಾಗಿ, ಮಾಸಿಕ ಉಳಿತಾಯ ಮಾಡುವವರಿಗಾಗಿ, ಹಿರಿಯ ನಾಗರಿಕರಿಗೆ, ಪಿಂಚಣಿ ಬಗ್ಗೆ ಪ್ಲಾನ್ ಮಾಡುವವರಿಗೆ ಎಂದೇ ಪ್ರತ್ಯೇಕ ಯೋಜನೆಗಳಿವೆ.
ಬ್ಯಾಂಕ್, ಅಂಚೆ ಕಚೇರಿ ಇವುಗಳನ್ನು ಕೂಡ ನಾವು ಈ ಉಳಿತಾಯ ಮಾಡಬಹುದು. ಈ ರೀತಿ ಉಳಿತಾಯ ಮಾಡಬಹುದಾದ ಯೋಜನೆಗಳಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed deposit) ಎನ್ನುವ ಆಪ್ಷನ್ ಕೂಡ ಒಂದು, ಇದರ ಬಗ್ಗೆ ಅಂಕಣದಲ್ಲಿ ಕೆಲ ಮಾಹಿತಿ ತಿಳಿಸುತ್ತಿದ್ದೇವೆ.
ಈ ಫಿಕ್ಸೆಡ್ ಡೆಪಾಸಿಟ್ ಎಂದರೆ ಇದರಲ್ಲಿ ಒಂದು ಮೊತ್ತದ ಹಣವನ್ನು ಒಂದು ನಿರ್ದಿಷ್ಟದ ಅವಧಿವರೆಗೆ ಹೂಡಿಕೆಯಲ್ಲಿ ಇಡುವುದಾಗಿದೆ. ಅದಕ್ಕೆ ಅನ್ವಯವಾಗುವ ಬಡ್ಡಿದರವನ್ನು ನಿಮಗೆ ಮೆಚ್ಯುರಿಟಿ ಸಮಯದಲ್ಲಿ ಬ್ಯಾಂಕ್ ನೀಡುತ್ತದೆ. ಇದರಲ್ಲಿ ನೀವು ಹೂಡಿಕೆ ಮಾಡಲು ಆರಿಸಿಕೊಳ್ಳುವ ಅವಧಿಯಿಂದ ಹಿಡಿದು ನೀವು ಸೆಲೆಕ್ಟ್ ಮಾಡುವ ಬ್ಯಾಂಕ್ ಆಧಾರದ ಮೇಲೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಎಷ್ಟು ಬಡ್ಡಿದರ (intrest rate) ನಿಮಗೆ ಆದಾಯವಾಗಿ ಸಿಗುತ್ತದೆ ಎನ್ನುವುದು ನಿರ್ಧಾರವಾಗುತ್ತದೆ.
ಎಲ್ಲಾ ಬ್ಯಾಂಕ್ ಗಳಲ್ಲೂ ಸಾಮಾನ್ಯರಿಗಿಂತ ಹಿರಿಯ ನಾಗರಿಕ 0.50% ಹೆಚ್ಚಿನ ಬಡ್ಡಿದರ ಇರುತ್ತದೆ. ಸದ್ಯಕ್ಕೆ ಅತಿ ಹೆಚ್ಚಿನ ಬಡ್ಡಿದರ ನೀಡುತ್ತಿರುವ ಕೆನರಾ ಬ್ಯಾಂಕ್ ನಲ್ಲಿ (Canara bank) ಎಷ್ಟು ಬಡ್ಡಿ ಸಿಗುತ್ತಿದೆ ಮತ್ತು FD ಇಡುವ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
● ನಿಶ್ಚಿತ ಠೇವಣಿ (FD) ಇಡಬೇಕು ಎಂದರೆ ನೀವು ಮೊದಲು ಅದರಲ್ಲಿ ಉಳಿತಾಯ ಖಾತೆಯನ್ನು ತೆರೆಯಬೇಕು.
● ಕನಿಷ್ಠ 10,000 ದಿಂದ ಗರಿಷ್ಠ ಯಾವುದೇ ಮಿತಿ ಇಲ್ಲ ಎಷ್ಟು ಹಣ ಬೇಕಾದರೂ ನೀವು ಠೇವಣಿ ಇಡಬಹುದು.
● ಯೋಜನೆ ಅವಧಿ ಆರು ತಿಂಗಳಿಂದ ಶುರುವಾಗುತ್ತದೆ, ಹೆಚ್ಚಿನವರು ಒಂದು ವರ್ಷ ಅವಧಿಗೆ ಠೇವಣಿ ಇಡಲು ಬಯಸುತ್ತಾರೆ.
● ಠೇವಣಿ ಇಟ್ಟ ಸಮಯದಲ್ಲಿ ಬ್ಯಾಂಕ್ ಎಷ್ಟು ನಿಗದಿಪಡಿಸಿರುತ್ತದೋ ಅಷ್ಟು ಬಡ್ಡಿದರ ನಿಮಗೆ ಅನ್ವಯವಾಗುತ್ತದೆ, ನೀವು ಒಂದು ವರ್ಷಕ್ಕೆ FD ಇಟ್ಟರೆ ಒಂದು ವರ್ಷದ ನಂತರ ನೀವು ಅದನ್ನು ವಿತ್ ಡ್ರಾ ಮಾಡಬಹುದು ಅಥವಾ ಮತ್ತೆ ಮುಂದುವರಿಸುವುದಾದರೆ ಎಷ್ಟು ಬಡ್ಡಿದರ ನಿಗದಿಯಾಗಿದೆ ಮುಂದಿನ ಒಂದು ವರ್ಷದವರೆಗೆ ಹಣಕ್ಕೆ ಅಷ್ಟು ಬಡ್ಡಿ ಸಿಗುತ್ತದೆ.
● ನಾಮಿನಿ (Nominee) ವ್ಯವಸ್ಥೆ ಕೂಡ ಲಭ್ಯವಿರುತ್ತದೆ, ಒಂದು ವೇಳೆ ಹೂಡಿಕೆ ಮಾಡಿದವರು ಮೃತಪಟ್ಟಲ್ಲಿ ಕಾನೂನು ಪ್ರಕಾರವಾಗಿ ಸೇರಬೇಕಾದ ಮೊತ್ತ ನಾಮಿನಿಗೆ ಸೇರುತ್ತದೆ.
● ಅಂಚೆ ಕಚೇರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಒಂದು ವೇಳೆ ನೀವು ಹೂಡಿಕೆ ಮಾಡಿಟ್ಟ ರಾಷ್ಟ್ರೀಕೃತ ಬ್ಯಾಂಕ್ ದಿವಾಳಿಯಿದರೆ RBI ನಿಮಗೆ ಒಂದು ಲಕ್ಷದವರೆಗೆ ವಿಮೆ ಕಟ್ಟಿಕೊಡುತ್ತದೆ. ಸಹಕಾರಿ ವಲಯದ ಬ್ಯಾಂಕ್ ಗಳಲ್ಲಿ ಮತ್ತು ಫೈನಾನ್ಸ್ ಕಂಪನಿಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಬಡ್ಡಿದರ ಸಿಗುತ್ತದೆ.
● ಪ್ರಸ್ತುತವಾಗಿ ಕೆನರಾ ಬ್ಯಾಂಕ್ನಲ್ಲಿ FD ಇಟ್ಟರೆ ಶೇ. 4% – 7.40% ರವರೆಗೆ ಬಡ್ಡಿ ಸಿಗುತ್ತದೆ. ಈ ಬ್ಯಾಂಕ್ನಲ್ಲಿ ನೀವು 1 ಲಕ್ಷ ರೂಪಾಯಿ FD ಮಾಡಿದರೆ, ಸುಮಾರು 1,350 ರೂ. ಹೆಚ್ಚು ಬಡ್ಡಿ ಸಿಗುತ್ತದೆ. ಒಂದು ವರ್ಷದ ಅವಧಿಯ ಠೇವಣಿಗೆ ಶೇ. 7.05 % ವರೆಗೆ ಬಡ್ಡಿ ಹೆಚ್ಚು ಸಿಗುತ್ತದೆ. ಹಿರಿಯ ನಾಗರಿಕರಿಗೆ 7.50% ವರೆಗೆ ಬಡ್ಡಿದರ ಸಿಗುತ್ತದೆ.
● ಕೆಲವು ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಆಕರ್ಷಣೀಯ ಬಡ್ಡಿದರದ ಆಫರ್ ಗಳನ್ನು ಸಹ ಬ್ಯಾಂಕ್ ಗಳು ನೀಡುತ್ತವೆ.