ನಾಟಿ ಬಟಾಣಿ ಎಷ್ಟು ಲಾಭದಾಯಕ ಕೃಷಿ ಗೊತ್ತಾ.?

 

WhatsApp Group Join Now
Telegram Group Join Now

 

ನಮ್ಮ ಮನೆಗಳಲ್ಲಿ ಪ್ರತಿದಿನ ಬಳಕೆ ಮಾಡುವ ತರಕಾರಿಗಳಲ್ಲಿ ಬಟಾಣಿ ಕೂಡ ಒಂದು. ಬಟಾಣಿಯನ್ನು ಹಸಿ ಬಟಾಣಿ ಹಾಗೂ ಒಣ ಬಟಾಣಿಯಾಗಿ ಕೂಡ ಬಳಸುತ್ತೇವೆ. ಬಟಾಣಿ ಉಪಯೋಗಿಸಿ ಮಾಡಿದ ಅಡುಗೆಯ ರುಚಿಗೆ ಬೇರೆ ರೀತಿ ಇರುತ್ತದೆ ಅಲ್ಲದೆ ಬಟಾಣಿಯಲ್ಲಿ ದೇಹಕ್ಕೆ ಪೂರಕವಾದ ಅನೇಕ ಪೋಷಕಾಂಶಗಳಿವೆ. ಮೆಗ್ನಿಷಿಯಂ, ಝಿಂಕ್, ವಿಟಮಿನ್ ಸಿ ಪ್ರೋಟೀನ್ ಗಳು ಹೇರಳವಾಗಿರುವ ಈ ಬಟಾಣಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ಇಷ್ಟೆಲ್ಲಾ ಕಾರಣದಿಂದಾಗಿ ಬಟಾಣಿಗೆ ಮಾರ್ಕೆಟ್ ನಲ್ಲಿ ಬಟಾಣಿಗೆ ವಿಪರೀತ ಬೇಡಿಕೆ ಇದೆ. 1 KG ಗೆ ಹಸಿ ಬಟಾಣಿ 60-70 ರೂಪಾಯಿ ಹಾಗೂ ಒಣಗಿದ ಬಟಾಣಿ ಕಾಳುಗಳಿಗೆ ಇನ್ನು ಹೆಚ್ಚಿನ ಬೆಲೆ ಇದೆ. ಈ ಬೆಳೆಯನ್ನು ರೈತ ಬೆಳೆದಿದ್ದೇ ಆದಲ್ಲಿ ಲಕ್ಷಾಧಿಪತಿ ಆಗುವುದು ಗ್ಯಾರಂಟಿ ಬಟಾಣಿಯಲ್ಲೂ ಕೂಡ ಹಲವಾರು ತಳಿಗಳು ಇವೆ. ಬಾನ್ ಎಲ್ಲೆ, ಆರ್ಲಿ ಬ್ಕಾಡ್ಜರ್, ಅರ್ಕಾ ಅಜಿತ್, ಅರ್ಕಾ ಕಾರ್ತಿಕಾ, ಅರ್ಕಾ ಪ್ರಿಯಾ, ಅರ್ಕಾ ಪ್ರಮೋದ, ಅರ್ಕಾ ಸಂಪೂರ್ಣ, ಅರ್ಕೆಲ್ ಹೀಗೆ ಹತ್ತಾರು ತಳಿಗಳು ಇವೆ.

ಇದನ್ನು ಬೆಳೆಯುವುದಕ್ಕೆ ಮರುಳು ಮಿಶ್ರಿತ ಕಪ್ಪು ಅಥವಾ ಕೆಂಪು ಮಣ್ಣು ಅತ್ಯುತ್ತಮವಾಗಿದೆ. ಭಾರತದಲ್ಲಿ ಅತಿ ಹೆಚ್ಚಾಗಿ ಉತ್ತರ ಭಾರತದ ಕಡೆಯಲ್ಲಿ ಬಟಾಣಿಗಳನ್ನು ಬೆಳೆಯುತ್ತಾರೆ ಮತ್ತು ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಅತಿ ಹೆಚ್ಚು ಬಟಾಣಿ ಬಳಸುತ್ತಾರೆ ಎಂದು ಕೂಡ ಹೇಳಲಾಗುತ್ತದೆ. ದಕ್ಷಿಣದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಹಲವಾರು ಭಾಗದಲ್ಲಿ ಈ ಮಣ್ಣಿನ ಗುಣಕ್ಕೆ ಬಟಾಣಿ ಬೆಳೆ ಹೊಂದಿಕೊಳ್ಳುತ್ತದೆ ಇಂತಹ ಜಮೀನುಗಳಲ್ಲಿ ಬಟಾಣಿ ಬೆಳೆದರೆ ರೈತ ತನ್ನ ಬಂಡವಾಳಕ್ಕಿಂತ 3-4 ಪಟ್ಟು ಹೆಚ್ಚು ಲಾಭ ಕಾಣಬಹುದು.

ಈ ಸುದ್ದಿ ಓದಿ:- ಜಮೀನಿನ ಮ್ಯೂಟೇಷನ್ ರಿಪೋರ್ಟ್ ಡೌನ್ಲೋಡ್ ಮಾಡುವ ಸುಲಭ ವಿಧಾನ.!

ವರ್ಷದ ಯಾವುದೇ ಕಾಲದಲ್ಲಿ ಬೇಕಾದರೂ ಬಟಾಣಿ ಕೃಷಿ ಮಾಡಬಹುದು ಆದರೆ ಆಗಸ್ಟ್ ತಿಂಗಳಲ್ಲಿ ಇವುಗಳನ್ನು ನಾಟಿ ಮಾಡುವುದರಿಂದ ಇಳುವರಿ ಚೆನ್ನಾಗಿ ಬರುತ್ತದೆ ಎನ್ನುವುದು ಬಟಾಣಿ ಬೆಳೆಗಾರರ ಸಲಹೆ. ಇದಲ್ಲದೆ ಬೇಸಿಗೆ ಕಾಲ, ಮಳೆಗಾಲ ಹೀಗೆ ಯಾವುದೇ ಕಾಲದಲ್ಲಿ ಬೇಕಾದರೂ ಪಡೆಯಬಹುದು. ಬೇಸಿಗೆ ಕಾಲದಲ್ಲಿ ದಿನನಿತ್ಯ. ಮಳೆಗಾಲದಲ್ಲಿ ನೋಡಿಕೊಂಡು ಮೂರು ದಿನಗಳಿಗೊಮ್ಮ ನೀರು ಹಾಯಿಸಬೇಕಾಗುತ್ತದೆ.

ಇದು ಅಲ್ಪಾವಧಿ ಬೆಳೆಯಾಗಿದೆ ಆದರೆ ದ್ವಿದಳ ಧಾನ್ಯ ಆಗಿರುವುದರಿಂದ ಇದನ್ನು ಬೆಳೆದರೆ ನೆಟ್ರೋಜೆನ್ ಸಾರಾಂಶ ಭೂಮಿಯಲ್ಲಿ ಸೇರುವುದರಿಂದ ಭೂಮಿ ಫಲವತ್ತಾಗುತ್ತದೆ ಎನ್ನುವ ನಂಬಿಕೆ ರೈತರಲ್ಲಿ ಇದೆ. ಮಿಶ್ರ ಬೆಳೆ ಬೆಳೆಯ ಬಯಸುವ ರೈತನು ಬಟಾಣಿಯನ್ನು ಆರಿಸಿದರೆ ಆತನಿಗೆ ಭೂಮಿ ಸಾರ ಹೆಚ್ಚಾಗುವುದರ ಜೊತೆಗೆ ಆರ್ಥಿಕವಾಗಿ ಕೂಡ ಲಾಭವಾಗುತ್ತದೆ ಈ ಬೆಳೆಗೆ ಇರುವ ಇನ್ನಿತರ ಸವಾಲುಗಳೇನೆಂದರೆ ಕಳೆ ಬರುವುದು.

ಇದು ಸೂಕ್ಷ್ಮವಾದ ಸಸ್ಯವಾದ ಕಾರಣದಿಂದಾಗಿ ಕಳೆ ಔಷಧಿ ಹೊಡೆಯಲು ಬರುವುದಿಲ್ಲ ಆಳುಗಳನ್ನು ಬಿಟ್ಟು ಕಳೆ ಕೀಳಿಸುವುದು ಉತ್ತಮ. ಇನ್ನು ಬೂದಿ ರೋಗ ಹಾಗೂ ಇನ್ನಿತರ ಕ್ರಿಮಿ-ಕೀಟಗಳಿಂದ ಕಾಡುವ ರೋಗಗಳು ಕೂಡ ಗಿಡಕ್ಕೆ ಹತ್ತುತ್ತವೆ. ಇದು ಇನ್ನಷ್ಟು ಸವಾಲಿನ ಕೆಲಸವಾಗಿದೆ ಇದೆಲ್ಲವನ್ನು ಮೀರಿ ರೈತ ಬಂಡವಾಳ ಹೂಡಿ ಗಿಡವನ್ನು ಕಾಪಾಡಿಕೊಂಡಿದ್ದೇ ಆದರೆ ಎಕರೆಗೆ ರೂ.50,000 ಖರ್ಚು ಮಾಡಿ ರೂ. 5ಲಕ್ಷ ದವರೆಗೆ ಲಾಭ ಮಾಡಬಹುದು.

ಈ ಸುದ್ದಿ ಓದಿ:- ಎಲ್ಲಾ ವಿದ್ಯಾರ್ಥಿಗಳಿಗೆ ₹10,000 ಪ್ರೋತ್ಸಾಹ ಧನ ಆಸಕ್ತರು ಅರ್ಜಿ ಆಹ್ವಾನ.!

ಮಾರ್ಕೆಟಿಂಗ್ ಕೂಡ ಬಹಳ ಸುಲಭ ಹತ್ತಿರದ ಯಾವುದೇ ಮಾರ್ಕೆಟ್ ತಲುಪಿಸಬಹುದು ಅಥವಾ ಬಿಗ್ ಬಾಸ್ಕೆಟ್, ರಿಲಯನ್ಸ್ ಗಳಲ್ಲಿ ಕಾಂಟ್ರಾಕ್ಟ್ ಗಳಲ್ಲಿ ಮಾಡಿಕೊಂಡರೆ ಅವರೇ ತೆಗೆದುಕೊಂಡು ಹೋಗುತ್ತಾರೆ. ಈ ವಿಚಾರವಾಗಿ ಇನ್ನು ಹೆಚ್ಚಿನ ಡಿಟೇಲ್ಸ್ ಬೇಕಿದ್ದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now