ಹೂ ಕೋಸು ಬೆಳೆಯುವುದರಿಂದ ಎಷ್ಟು ಲಾಭ ಇದೆ ಗೊತ್ತಾ.? 90 ದಿನಕ್ಕೆ ಎಕರೆಗೆ 1 ಲಕ್ಷಕ್ಕೂ ಹೆಚ್ಚು ಲಾಭ ಗಳಿಸಿದ ರೈತ.!

ಕೃಷಿ ಮಾಡುವುದು ಈಗಿನ ಕಾಲದಲ್ಲಿ ಸುಲಭದ ಮಾತಲ್ಲ. ನಮ್ಮ ದೇಶದಲ್ಲಿ ಕೃಷಿ ಯಾವಾಗಲೂ ಮಳೆ ಜೊತೆ ಆಡುವ ಜೂಜಾಟವಾಗಿದೆ ಆದರೆ ನೀರಾವರಿ ಸೌಲಭ್ಯ ಇದ್ದವರಿಗೆ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ ಎಂದುಕೊಂಡರೂ ನೀರಿನ ಸೌಲಭ್ಯ ಇರಬಹುದು ಆದರೆ ಹಾಕಿದ ಬೆಳೆಗಳಿಗೆ ಅಷ್ಟೇ ಲಾಭ ಬರುತ್ತದೆ ಎಂದು ನಿಖರವಾಗಿ ಹೇಳಲು ಆಗುವುದಿಲ್ಲ.

WhatsApp Group Join Now
Telegram Group Join Now

ಇಷ್ಟೆಲ್ಲಾ ರಿಸ್ಕ್ ನಡುವೆ ದೇಶದ ಆಹಾರ ಕೊರತೆ ನೀಗಿಸಲು ಮತ್ತು ತನ್ನ ಕುಟುಂಬ ನಿರ್ವಹಣೆಗಾಗಿ ಅನ್ನದಾತ ಭೂಮಿ ತಾಯಿಯನ್ನು ನಂಬಿ ಕೃಷಿ ಮಾಡುತ್ತಾನೆ. ಶ್ರಮಜೀವಿಯಾದ ರೈತನೇನಾದರೂ ಕಮರ್ಷಿಯಲ್ ಆಗಿ ಯೋಚಿಸಿ ಲಾಭ ಬರುವಂತಹ ಪ್ರಸ್ತುತವಾಗಿ ಮಾರುಕಟ್ಟೆಯಲ್ಲಿ ಅತಿ ಬೇಡಿಕೆ ಇರುವ ಮತ್ತು ಹೆಚ್ಚು ಆದಾಯ ತರುವ ಬೆಳೆಗಳನ್ನು ಆರಿಸಿಕೊಂಡರೆ ಆತ ಆರ್ಥಿಕವಾಗಿ ಸದೃಢ ನಾಗಬಹುದು.

ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, 4660 ರೈಲ್ವೆ ಪೊಲೀಸ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!

ಪ್ರಗತಿಪರ ರೈತರೊಬ್ಬರ ಹೂಕೋಸು ಬೆಳೆ ಉದಾಹರಣೆ ಜೊತೆಗೆ ಇದನ್ನು ವಿವರಿಸುತ್ತಿದ್ದೇವೆ. ಬೆಂಗಳೂರು ನಗರ ಸಮೀಪ ದೇವನಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿರುವ ರೈತರೊಬ್ಬರು ಈ ವರ್ಷದ ಬೇಸಿಗೆ ಸಮಯದಲ್ಲೂ ಕೂಡ ಎಕರೆಗೆ ಲಕ್ಷ ಆದಾಯ ಕೊಡುವ ಬೆಳೆ ಬೆಳೆದು ಲಾಭದಲ್ಲಿದ್ದಾರೆ. ಅಷ್ಟಕ್ಕೂ ಅವರು ಮಾಡಿರುವ ಕೃಷಿ ಯಾವುದು ಎಂದರೆ ಹೂಕೋಸು ಬೆಳೆ ತೆಗೆದಿದ್ದಾರೆ.

ಮಾರುಕಟ್ಟೆಯಲ್ಲಿ ಹೂಕೋಸಿಗೆ ಯಾವಾಗಲೂ ಡಿಮ್ಯಾಂಡ್ ಇದ್ದೇ ಇರುತ್ತದೆ. ಯಾಕೆಂದರೆ ನಾವು ಮನೆಬಳಕೆಗೆ ಇದನ್ನು ಸಾಂಬಾರ್ ಹಾಗೂ ಪಲ್ಯ ಮಾಡಲು ಖರೀದಿಸುತ್ತಿವೆ. ಇನ್ನು ಹೋಟೆಲ್ ರೆಸ್ಟೋರೆಂಟ್ ಗಳು, ಚಾಟ್ ಸೆಂಟರ್ ಗಳಲ್ಲೂ ಕೂಡ ಈ ತರಕಾರಿಗೆ ಬೇಡಿಕೆ ಇದ್ದೇ ಇದೆ. ಇನ್ನು ಮದುವೆ ಸೀಸನ್ ಗಳಂತೂ ಯಾವುದೇ ಶುಭ ಸಮಾರಂಭಗಳಾದರೂ ಈ ಹೂಕೋಸಿನ ಖಾದ್ಯಳಿಗೆ ಆದ್ಯತೆ ಇದ್ದೇ ಇರುತ್ತದೆ.

ಈ ಸುದ್ದಿ ಓದಿ:- KPSC ನೇಮಕಾತಿ, ಲೆಕ್ಕ ಪರಿಶೋಧನಾಧಿಕಾರಿ ಸಹಾಯಕ ನಿಯಂತ್ರಕರು ಹುದ್ದೆಗಳಿಗಾಗಿ ಅರ್ಜಿ ಆಹ್ವಾನ.! ವೇತನ 97,100 ಆಸಕ್ತರು ಅರ್ಜಿ ಸಲ್ಲಿಸಿ.!

ಹಾಗಾಗಿ ಇದು ಒಂದು ಮಟ್ಟಕ್ಕೆ ಸದಾ ರೈತನನ್ನು ಕೈ ಹಿಡಿಯುವ ಬೆಳೆ ಎಂದೇ ನಂಬಬಹುದು. ಇದೆ ಹೂಕೋಸನ್ನು ತಮ್ಮ ಒಂದು ಕಾಲು ಎಕರೆ ಜಮೀನಿನಲ್ಲಿ ನಾಟಿ ಮಾಡಿ ಎಕರೆಗೆ ಹತ್ತಿರ ಲಕ್ಷದಷ್ಟು ಲಾಭ ತಂದುಕೊಂಡಿದ್ದಾರೆ ನಮ್ಮ ರೈತ. ಬೇಸಿಗೆ ಈ ವರ್ಷದ ಬರದ ಪರಿಸ್ಥಿತಿ ಮತ್ತು ಬೇಸಿಗೆ ಉರಿಬಿಸಿಲಿನ ಸಮಯದಲ್ಲಿ ಇರುವ ಕಡಿಮೆ ನೀರಿನ ಫ್ಲೋ ಸವಲತ್ತಿನಲ್ಲೇ ಹೂಕೋಸಿನ ಬೆಳೆ ಕೈ ಹಿಡಿದಿರುವುದು ಸಂತೋಷದ ವಿಚಾರವೇ ಆಗಿದೆ.

ಈ ಬೆಳೆ ಬೆಳೆ ಬೆಳೆಯುವುದರ ಬಗ್ಗೆ ವಿವರಿಸಿದ ಅವರು ಹೇಳಿದ್ದು ಏನೆಂದರೆ ತಮ್ಮ 1 1/4 ಎಕರೆಗೆ 17,000 ನಾಟಿ ಮಾಡಿದೆವು, ನಮಗೆ ನಾಟಿಗೆ ಒಂದು ಗೆಡ್ಡೆಗೆ ಎಲ್ಲಾ ಖರ್ಚು ಸೇರಿ 1 ರುಪಾಯಿ ಬಿದ್ದಿತು. ಒಟ್ಟು 17,000 ನಾಟಿ ದಿನವೇ ಬಂಡವಾಳ ಹಾಕಿದೆವು. ಈ ಹೂಕೋಸು ಬೆಳೆಗೆ ಮುಖ್ಯವಾಗಿ ಔಷಧಿ ಹೊಡೆಯುವುದೇ ಹೆಚ್ಚು ಖರ್ಚು ಕೊಡುತ್ತದೆ. ಯಾಕೆಂದರೆ ನಾಟಿ ಮಾಡಿದ ಮೇಲೆ ವಾರಕ್ಕೆ 15 ದಿನಕ್ಕೆ ಮತ್ತೆ ವಾರಕ್ಕೆ ಈ ರೀತಿ ಏಳೆಂಟು ಬಾರಿ ಔಷಧಿ ಹೊಡೆಯಬೇಕು.

ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!

ಕಾಯಿಲೆ ಕಾ’ಟಕ್ಕಿಂತ ಹುಳಗಳ ಕಾಟ ಹೆಚ್ಚು ಹಾಗಾಗಿ ಔಷಧಿ ಹೊಡೆಯುತ್ತೇವೆ. ಬಿತ್ತನೆ, ಔಷಧಿ, ಲೇಬರ್ ಖರ್ಚು, ಸಾಗಣೆ ಎಲ್ಲಾ ಸೇರಿ ನಮ್ಮ ಒಂದು ಕಾಲು ಎಕರೆ ಜಮೀನಿಗೆ ಹತ್ತಿರ ರೂ.80,000 ದಷ್ಟು ಖರ್ಚು ಬರುತ್ತದೆ. ಮಳೆ ಸೀಸನ್ ಇದ್ದರೆ ಇದರಲ್ಲಿ ರೂ.15,000 ದಷ್ಟು ಕಡಿಮೆ ಆಗುತ್ತದೆ. ಮಳೆ ಇರುವುದರಿಂದ ಒಂದೆರಡು ಬಾರಿ ಔಷದಿ ಹೊಡೆಯುವುದು ತಪ್ಪುತ್ತದೆ.

ಹನಿ ನೀರಾವರಿ ಪದ್ಧತಿಗಿಂತ ನೀರು ಕಟ್ಟುವುದು ಒಳ್ಳೆಯದು ಆದರೆ ಸಂಜೆ ಸಮಯ ಬಿಸಿಲು ಕಡಿಮೆ ಆದ ಮೇಲೆ ನೀರು ಕಟ್ಟಬೇಕು ಎನ್ನುವ ಸಲಹೆ ನೀಡುತ್ತಾರೆ. ಒಂದು KGಗೆ 25 ರೂಪಾಯಿಗಿಂತ ಬೆಲೆ ದಾಟಿದರೆ ಹೀಗೆ ಲಕ್ಷದವರೆಗೂ ಇದೇ ಭೂಮಿಯಲ್ಲಿ ಬಂಡವಾಳ ಕಳೆದು ಲಾಭ ಮಾಡಬಹುದು ಎನ್ನುವ ಮಾತನ್ನು ಬಹಳ ಸಂತೋಷದಿಂದ ಈ ರೈತರು ಹೇಳುತ್ತಿದ್ದಾರೆ. ಹೂ ಕೋಸು 90 ದಿನಗಳಲ್ಲಿ ಬೆಳೆಯುವ ಬೆಳೆಯಾಗಿದ್ದು, ಈ ಕೃಷಿ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now