ಮನೆ ಕಟ್ಟುವುದೇ ಒಂದು ಚಿಂತೆ ಆದರೆ, ಮನೆ ಕಟ್ಟಲು ಬಳಸುವ ವಸ್ತುಗಳನ್ನು ಆಯ್ಕೆ ಮಾಡುವುದು ಕೂಡ ಅದೇ ಮಟ್ಟಕ್ಕೆ ಯೋಚನೆ ತರುವ ಮತ್ತೊಂದು ಚಿಂತೆ. ಯಾಕೆಂದರೆ ಯಾವ ಕಂಪನಿಯ ವಸ್ತುಗಳು ಹೆಚ್ಚು ಬಾಳಿಕೆ ಬರುತ್ತವೆ, ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ವಸ್ತುಗಳು ಎಲ್ಲಿ ಸಿಗುತ್ತವೆ ಈ ರೀತಿ ಕನ್ಫ್ಯೂಷನ್ ಗಳನ್ನು ಆ ಸಮಯದಲ್ಲಿ ಇದು ಹುಟ್ಟು ಹಾಕುತ್ತದೆ.
ಮನೆ ಕಟ್ಟುವ ವಿಷಯ ಶುರು ಆಗುವುದೇ ಇಟ್ಟಿಗೆಗಳಿಂದ ಹಾಗಾಗಿ ಇವುಗಳ ಬೆಲೆ ಹಾಗೂ ಗುಣಮಟ್ಟದ ಎಲ್ಲರೂ ತಿಳಿದುಕೊಂಡಿರಲೇಬೇಕು. ಇಟ್ಟಿಗೆ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಎಲ್ಲಾ ಕಡೆ ಸಿಮೆಂಟ್ ಸಾಲಿಡ್ ಇಟ್ಟಿಗೆಗಳನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ ಇದು 16 ಇಂಚು ಉದ್ದ ಇರುತ್ತದೆ ಎಂಟು ಇಂಚು ಎತ್ತರ ಇರುತ್ತದೆ.
ಆದರೆ ಅಗಲಗಳಲ್ಲಿ ವ್ಯತ್ಯಾಸ ಇರುತ್ತದೆ. 4 ಇಂಚು, 6 ಇಂಚು ಮತ್ತು 8 ಇಂಚು ಅಗಲ ಇರುವ ಸಿಮೆಂಟ್ ಸಾಲಿಡ್ ಬ್ರಿಕ್ಸ್ ಗಳು ಇರುತ್ತವೆ. 4 ಇಂಚು ಅಗಲ ಇರುವ ಇಟ್ಟಿಗೆಗಳನ್ನು ಮನೆ ಒಳಗಿನ ಗೋಡೆಗಳಿಗೆ ಬಳಸುತ್ತಾರೆ, ಯಾವುದೇ ಕಾರಣಕ್ಕೂ ಹೊರಗಿನ ಗೋಡೆಗಳಿಗೆ ಉಪಯೋಗಿಸಬಾರದು. 6 ಇಂಚು ಅಥವಾ 8 ಇಂಚು ಅಗಲ ಇರುವ ಬ್ರಿಕ್ಸ್ ಗಳನ್ನು ಹೊರಗೋಡೆಗಳಿಗೆ ಬಳಸಿದರೆ ಒಳ್ಳೆಯದು.
ಈ ಸಿಮೆಂಟ್ ಸಾಲಿಡ್ ಬ್ರಿಕ್ಸ್ ಗಳನ್ನು ಬಳಸಿ ಗೋಡೆ ನಿರ್ಮಿಸಿದ ಮೇಲೆ ಆ ಎಲ್ಲ ಗೋಡೆಗಳಿಗೂ ಪ್ಲಾಸ್ಟಿಂಗ್ ಮಾಡಲೇಬೇಕು. ಇವುಗಳ ಬೆಲೆ ಬಗ್ಗೆ ಹೇಳುವುದಾದರೆ 4 ಇಂಚುಗಳ ಸಿಮೆಂಟ್ ಸಾಲಿಡ್ ಬ್ರಿಕ್ಸ್ ಬೆಲೆ 23 ರೂಗಳು, 6 ಇಂಚು ಸಿಮೆಂಟ್ ಬ್ರಿಕ್ಸ್ ಬೆಲೆ 31 ರೂ. ಮತ್ತು 8 ಇಂಚು ಈ ಸಿಮೆಂಟ್ ಸಾಲಡ್ ಬ್ರಿಕ್ ಬೆಲೆ 45 ರುಪಾಯಿ.
30-40 ಸೈಟ್ ಅಲ್ಲಿ 1000 sq.ft ನಲ್ಲಿ 2BHK ಮನೆ ಕಟ್ಟಬೇಕು ಎಂದುಕೊಂಡರೆ ಈ 6 ಇಂಚು ಸಿಮೆಂಟ್ ಸಾಲಿಡ್ ಬ್ರಿಕ್ಸ್ ಅಂದಾಜು 3000 ಬೇಕಾಗಬಹುದು. ಅವುಗಳ ಬೆಲೆ ಲೆಕ್ಕಾಚಾರ ಹಾಕುವುದಾದರೆ 3000 ಇಂಟು 31 ಆದರೂ 93,000 ದಿಂದ 1,00,000 ಹಣವನ್ನು ಬ್ರಿಕ್ಸ್ ಗಳಿಗಾಗಿಯೀ ಖರ್ಚು ಮಾಡಬೇಕಾಗುತ್ತದೆ. AAC ಬ್ರಿಕ್ಸ್ ಗಳು ಕೂಡ ಇತ್ತೀಚಿಗೆ ತುಂಬಾ ಪೋಪುಲಯ್ ಆಗಿವೆ.
ಇವು ಕಡಿಮೆ ತೂಕ ಇರುತ್ತವೆ. ಇದರ ಮತ್ತೊಂದು ಪ್ಲಸ್ ಪಾಯಿಂಟ್ ಏನೆಂದರೆ ಫಿನಿಶಿಂಗ್ ಚೆನ್ನಾಗಿ ಬರುತ್ತದೆ ಮತ್ತು ಬೇಗ ಕನ್ಸ್ಟ್ರಕ್ಷನ್ ಮಾಡಬಹುದು. ಇವುಗಳ ಅಳತೆ ಬಗ್ಗೆ ನೋಡುವುದಾದರೆ ಸಾಮಾನ್ಯವಾಗಿ ಇವು 8 ಇಂಚು ಎತ್ತರ, 24 ಇಂಚು ಉದ್ದ ಇರುತ್ತದೆ. ಅಗಲ ಮಾತ್ರ ಬೇರೆ ಬೇರೆ ಸೈಝ್ ಸಿಗುತ್ತದೆ. 4 ಇಂಚು, 6 ಇಂಚು, 8 ಇಂಚು ಈ ಮೂರು ರೀತಿಯಲ್ಲಿ ಸಿಗುತ್ತದೆ.
ಇವುಗಳ ಬೆಲೆ ಬಗ್ಗೆ ನೋಡುವುದಾದರೆ AAC 4 ಇಂಚಿನ ಬ್ರಿಕ್ ಬೆಲೆ 40 ರುಪಾಯಿ, 6 ಇಂಚಿನದಕ್ಕೆ 60ರೂ. ಹಾಗೂ 8 ಇಂಚಿನದು ಬ್ರಿಕ್ ಗೆ 80 ರೂಪಾಯಿ ಬೆಲೆ ಇರುತ್ತದೆ. ಈ AAC ಬ್ರಿಕ್ ಗಳನ್ನು ಒಳ ಗೋಡೆಗಳಿಗೆ ಅಥವಾ ಕಾಂಪೌಂಡ್ ಗೋಡೆಗಳಿಗೆ ಅಥವಾ ಮೇಲಿನ ಫ್ಲೋರ್ ಗೋಡೆಗಳಿಗೆ ಕನ್ಸ್ಟ್ರಕ್ಷನ್ಗಳಿಗೆ ಬಳಸುವುದು ಉತ್ತಮ. ಗ್ರೌಂಡ್ ಫ್ಲೋರ್ ಹೊರಗೋಡೆಗಳಿಗೆ ಈ ಬ್ರಿಕ್ ಗಳನ್ನು ಬಳಸಿ ಗೋಡೆ ನಿರ್ಮಿಸುವುದು ಅಷ್ಟು ಸೂಕ್ತವಲ್ಲ. ಬ್ರಿಕ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿ ನೋಡಿ.