ವೈದ್ಯರು ಹೇಳುವ ಪ್ರಕಾರ ಮನುಷ್ಯರು ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಮಕ್ಕಳು ಹಾಗೂ ವೃದ್ಧರ ವಿಷಯದಲ್ಲಿ ಈ ಸಮಯ ಇನ್ನೂ ಹೆಚ್ಚಿಗೆ ಇರುತ್ತದೆ. ನಾವು ಮಲಗುವುದು ಬೇಡ, ನಿದ್ರಿಸುವುದು ಬೇರೆ. ಮಲಗಿದ ತಕ್ಷಣ ನಿದ್ರೆ ಬಂದರೆ ಆರೋಗ್ಯ ಚೆನ್ನಾಗಿದೆ ಎಂದು ಅರ್ಥ ದಿನಪೂರ್ತಿ ಆಯಾಸವಾಗಿದ್ದರೆ ಅದು ಕೂಡ ಈ ರೀತಿ ನಿದ್ರೆಗೆ ಕಾರಣ ಆಗಬಹುದು.
ನಿದ್ರೆ ಮಾತ್ರವಲ್ಲದೆಯೂ ನಿದ್ರೆಯಲ್ಲಿ ನಾವು ಮಲಗಿರುವ ಭಂಗಿಯೂ ಕೂಡ ನಮ್ಮ ಆರೋಗ್ಯದ ಮೇಲೆ ಕೆಲವು ಪರಿಣಾಮವನ್ನು ಬೀರುತ್ತದೆ. ಈ ವಿಚಾರದಲ್ಲಿ ವೈದ್ಯರು ಹೇಳುವ ಪ್ರಕಾರ ನಾವು ಯಾವಾಗಲೂ ಬಲಗಡೆಗೆ ತಿರುಗಿ ಮಲಗಬೇಕು. ಬೆನ್ನಿನ ಮೇಲೆ ಅಥವಾ ಬಲ ಭಾಗದಲ್ಲಿ ತಿರುಗಿ ಮಲಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀಳುತ್ತವೆ. ಯಾವ ರೀತಿ ಪರಿಣಾಮಗಳು ಆಹಾರದ ಮೇಲೆ ಉಂಟಾಗಬಹುದು ಮಾಹಿತಿ ಇಲ್ಲಿದೆ ನೋಡಿ.
* ಆಹಾರ ತಿಂದ ನಂತರ ತಕ್ಷಣ ಹೊಟ್ಟೆಯ ಒಳಪದರದಲ್ಲಿ ಉಂಟಾಗುವ ಆಮ್ಲಿಯ ಅಂಶಗಳು ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ ಅದು ಪೂರ್ತಿ ಆಹಾರವನ್ನು ಜೀರ್ಣಸಲು ಬಳಕೆಯಾಗದೆ ಇದ್ದರೆ ಎದೆಯ ಭಾಗಕ್ಕೆ ತಲುಪುವ ಸಾಧ್ಯತೆ ಇರುತ್ತದೆ, ಇದರಿಂದ ಎದೆ ಉರಿ ಬರಬಹುದು. ಹಾಗಾಗಿ ಊಟ ಮಾಡಿದ ತಕ್ಷಣ ಹಾಸಿಗೆ ಮೇಲೆ ಬಲಗಡೆ ತಿರುಗಿ ಕೊಂಡು ಮಲಗುವವರಿಗೆ ಈ ಸಮಸ್ಯೆ ಸಾಮಾನ್ಯ ಎಂದು ಹೇಳಬಹುದು. ಹಾಗಾಗಿ ಸಾಧ್ಯವಾದಷ್ಟು ಎಡಗಡೆಗೆ ತಿರುಗಿಕೊಂಡು ಮಲಗಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ.
* ಕೆಲವು ಜನರಿಗೆ ರಾತ್ರಿ ನಿದ್ರೆಯ ಸಮಯದಲ್ಲಿ ವಿಪರೀತ ಗೊರಕೆ ಹೊಡೆಯುತ್ತಾರೆ. ನಾವು ಬೆನ್ನಿನ ಭಾಗದಲ್ಲಿ ಮಲಗಿಕೊಂಡರೆ ನಾಲಿಗೆಯ ಮಾಂಸಖಂಡಗಳು ಗಂಟಲಿನ ಭಾಗಕ್ಕೆ ಒತ್ತಿ, ಉಸಿರಾಡುವಾಗ ಗಂಟಲಿನ ಭಾಗದಿಂದ ಶಬ್ದ ಕೇಳಿ ಬರುತ್ತದೆ. ಅದನ್ನೇ ಗೊರಕೆ ಎನ್ನುತ್ತೇವೆ. ಎಡ ಮಗ್ಗಲಿನಲ್ಲಿ ತಿರುಗಿಕೊಂಡು ಮಲಗಿಕೊಳ್ಳುವುದರಿಂದ ಶ್ವಾಸಕೋಶದ ಭಾಗದ ಮಾಂಸಖಂಡಗಳಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹಾಗಾಗಿ ನಿದ್ರೆ ಮಾಡುವಾಗ ಗೊರಕೆ ಶಬ್ದ ಬರುವುದಿಲ್ಲ.
* ಸಾಧ್ಯವಾದಷ್ಟು ಎಡಗಡೆಗೆ ತಿರುಗಿ ಮಲಗಿಕೊಳ್ಳಿ, ಇದರಿಂದ ಕರುಳಿನ ಚಲನೆ ಉತ್ತಮವಾಗುತ್ತದೆ. ಇದರಿಂದ ನಮ್ಮ ದೇಹದಿಂದ ಬೇಡದ ಆಹಾರ ತ್ಯಾಜ್ಯಗಳು ಸುಲಭವಾಗಿ ಸಣ್ಣ ಕರುಳಿನಿಂದ ದೊಡ್ಡ ಕರುಳಿನ ಭಾಗಕ್ಕೆ ತಲುಪಲು ಸಹಾಯವಾಗುತ್ತದೆ. ಎಡಬಾಗದಲ್ಲಿ ತಿರುಗಿ ಮಲಗುವುದರಿಂದ ಹೊಟ್ಟೆಯಲ್ಲಿ ಜೀರ್ಣ ಶಕ್ತಿ ಅಭಿವೃದ್ಧಿ ಆಗಿ ದೇಹದ ಮೆಟಬಾಲಿಸಂ ಪ್ರಕ್ರಿಯೆ ಕೂಡ ಚುರುಕುಗೊಳ್ಳುತ್ತದೆ.
* ಗರ್ಭಿಣಿ ಮಹಿಳೆಯರು ಬೆನ್ನಿನ ಮೇಲೆ ಅಥವಾ ಬಲಭಾಗದಲ್ಲಿ ಮಲಗಿಕೊಳ್ಳುವುದಕ್ಕಿಂತ, ಎಡಗಡೆಗೆ ತಿರುಗಿ ಮಲಗಿಕೊಳ್ಳುವ ಕಾರಣದಿಂದ ಹೃದಯ, ಮೂತ್ರಪಿಂಡಗಳು ಮತ್ತು ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಭ್ರೂಣದ ಬಳಿಗೆ ಉತ್ತಮವಾದ ರಕ್ತಸಂಚಾರ ಉಂಟಾಗುತ್ತದೆ ಎಂದು ಹೇಳುತ್ತಾರೆ. ಮಗುವಿನ ಬೆಳವಣಿಗೆ ಇದು ಅನುಕೂಲಕರ ಹಾಗೂ ಮಗುವಿಗೆ ಎಲ್ಲ ರೀತಿಯ ಪೋಷಕಾಂಶಗಳು ಚೆನ್ನಾಗಿ ಹಿಡಿಯುತ್ತದೆ.
* ವೆರಿಕೋಸ್ ವೈನ್ಸ್ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಈ ರೀತಿ ಎಡ ಭಾಗದಲ್ಲಿ ತಿರುಗಿ ಮಲಗುವುದರಿಂದ ಕಾಲಿನ ರಕ್ತ ಸಂಚಾರಕ್ಕೆ ಉಂಟಾಗಿರುವ ಅಡೆತಡೆ ನಿವಾರಣೆ ಆಗುತ್ತದೆ, ಕಾಲಿನ ನೋ’ವು ಕಡಿಮೆ ಆಗುತ್ತದೆ
* ಎಡಭಾಗದಲ್ಲಿ ತಿರುಗಿ ಮಲಗಿಕೊಂಡರೆ ನಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಬೆನ್ನು ನೋ’ವು ಮತ್ತು ಕುತ್ತಿಗೆ ನೋ’ವು ದೂರವಾಗುತ್ತದೆ ಇದರ ಜೊತೆಗೆ ಬೆನ್ನುಹುರಿಯ ಮೇಲೆ ಬೀಳುವ ಒತ್ತಡವು ಕಡಿಮೆಯಾಗುತ್ತದೆ. ಇವುಗಳನ್ನು ತಿಳಿದುಕೊಂಡು ಇನ್ನು ಮುಂದೆಯಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸಿ, ಈ ಸ್ವಲ್ಪ ಬದಲಾವಣೆಯಿಂದ ಬಹಳ ಪ್ರಯೋಜನ ಸಿಗುತ್ತದೆ.