ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಕಾಯ್ದೆ, ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಪಾಲೆಷ್ಟು ಗೊತ್ತಾ.?

 

WhatsApp Group Join Now
Telegram Group Join Now

ನಮ್ಮ ಭಾರತದ ಕಾನೂನಿನಲ್ಲಿ ಆಸ್ತಿ ಹಂಚಿಕೆ ಕುರಿತು ಕೂಡ ನಿಯಮಗಳು ಇವೆ. ಹಿಂದೂ ಉತ್ತರಾದಿತ್ವದ ಕಾಯಿದೆ ಇದನ್ನೆ ಸೂಚಿಸುತ್ತಿದ್ದು ಒಂದು ಅವಿಭಜಿತ ಕುಟುಂಬದ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ಇರುತ್ತದೆ ಎನ್ನುವುದನ್ನು ಹೇಳುತ್ತದೆ. ಪ್ರತಿಯೊಬ್ಬ ನಾಗರೀಕನು ಕೂಡ ಈ ರೀತಿ ಆಸ್ತಿ ಮೇಲಿನ ಹಕ್ಕು ಅಧಿಕಾರಿಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು.

ಆಗ ವಿನಾಕಾರಣ ಕೋಟು ಕಚೇರಿ ಅಲೆಯುವುದು ತಪ್ಪುತ್ತದೆ ಮತ್ತು ನಮ್ಮ ಅಧಿಕಾರ ಇದೆಯೋ ಇಲ್ಲವೋ ಎನ್ನುವುದರ ಮನವರಿಕೆ ಆಗುತ್ತದೆ. ಇದರಿಂದ ವ್ರತಾ ಕಾರಣ ಮನಸ್ತಾಪವಾಗುವುದು ತಪ್ಪುತ್ತದೆ. ಕಾನೂನಿನಲ್ಲಿ ಏನಿದೆ ಎನ್ನುವ ಅಂಶ ಪ್ರತಿಯೊಬ್ಬರಿಗೂ ತಿಳಿಯಲಿ ಎನ್ನುವ ಕಾರಣಕ್ಕಾಗಿ ಈ ಅಂಕಣದಲ್ಲಿ ಒಬ್ಬ ತಂದೆಯ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಮತ್ತು ಗಂಡು ಮಕ್ಕಳಿಗೆ ಎಷ್ಟು ಅಧಿಕಾರವಿದೆ ಎನ್ನುವುದರ ಕುರಿತು ಕೆಲ ಪ್ರಮುಖ ಅಂಶಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿದ್ದೇವೆ.

2005ರಲ್ಲಿ ತಿದ್ದುಪಡಿ ಆದ ಹಿಂದೂ ಉತ್ತರಾದಿತ್ವದ ಕಾಯ್ದೆಯ ಪ್ರಕಾರ ತಂದೆಯ ಮರಣದ ನಂತರ ತಂದೆಯ ಸ್ವಯಾರ್ಜಿತ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಷ್ಟೇ ಸಮಾನ ಅಧಿಕಾರ ಹೊಂದಿರುತ್ತಾರೆ.

ಆದರೆ ಒಬ್ಬ ತಂದೆಯು ಸ್ವಯಾರ್ಜಿತವಾಗಿ ಆಸ್ತಿ ಸಂಪಾದನೆ ಮಾಡಿ ಅವರು ಬದುಕಿರುವಾಗಲೇ ಆ ಆಸ್ತಿಯನ್ನು ತಮ್ಮ ಇಚ್ಛೆಯ ಯಾವುದೋ ಒಬ್ಬ ಮಗನಿಗೆ ಅಥವಾ ಮಗಳಿಗೆ ಅಥವಾ ಮೊಮ್ಮಗಳಿಗೆ ಅಥವಾ ಇನ್ನಾರಿಗೋ ದಾನವಾಗಿ ಕೊಟ್ಟರೆ ಆಗ ಯಾರಿಗೂ ಅದರ ಬಗ್ಗೆ ಪ್ರಶ್ನೆ ಮಾಡಲು ಅಧಿಕಾರ ಇರುವುದಿಲ್ಲ.

ಇಲ್ಲವಾದರೆ ತಮ್ಮ ಸ್ವಯಾರ್ಜಿತ ಆಸ್ತಿ ಯಾರಿಗೆ ಸೇರಬೇಕು ಎಂದು ವಿಲ್ ಮಾಡಿ ಇಟ್ಟರು ಕೂಡ ಅವರ ನಂತರ ಆಸ್ತಿ ಹಕ್ಕು ವಿಲ್ ನಂತೆ ಬರೆದಿರುವಂತೆಯೇ ವರ್ಗಾವಣೆ ಆಗುತ್ತದೆ. ಆದರೆ ತಂದೆಯ ಪಿತ್ರಾರ್ಜಿತಾ ಆಸ್ತಿಯಲ್ಲಿ ಆ ತಂದೆಯ ಎಲ್ಲಾ ಮಕ್ಕಳಿಗೂ ಕೂಡ ಸಮಾನ ಅಧಿಕಾರ ಇರುತ್ತದೆ.

ಉದಾಹರಣೆಗೆ ಒಬ್ಬ ತಂದೆಗೆ ಐದು ಜನ ಮಕ್ಕಳಿದ್ದು ಆರು ಎಕರೆ ಜಮೀನು ಇದ್ದರೆ ತಂದೆ ಬದುಕಿರುವಾಗಲೇ ಪಿತ್ರಾರ್ಜಿತ ಆಸ್ತಿ ವಿಭಾಗವಾದರೆ ಒಟ್ಟು ಆರು ಪಾಲು ಆಗುತ್ತದೆ. ಐದು ಮಕ್ಕಳಿಗೆ ಒಂದೊಂದು ಎಕರೆ ಹಾಗೂ ತಂದೆಗೂ ಒಂದು ಎಕರೆ ಬರುತ್ತದೆ. ತಂದೆಯು ತನಗೆ ಬಂದ ಆ ಪಾಲನ್ನು ತಮ್ಮ ಇಚ್ಛೆಯ ಯಾವುದೇ ಮಕ್ಕಳಿಗೆ ಬೇಕಾದರೂ ಕೊಡಬಹುದು.

ಆಗ ಉಳಿದ ಮಕ್ಕಳು ಪ್ರಶ್ನೆ ಮಾಡಲು ಬರುವುದಿಲ್ಲ. ಒಂದು ವೇಳೆ ಆ ಆಸ್ತಿಯನ್ನು ತಂದೆ ಯಾರಿಗೂ ಕೊಡದೆ ಮರಣ ಹೊಂದಿದ್ದರೆ ಆ ಆಸ್ತಿ ಕೂಡ ಉಳಿದ ಮಕ್ಕಳಿಗೂ ಸಮಾನವಾಗಿ ವಿಭಾಗ ಆಗುತ್ತದೆ. ಒಬ್ಬ ತಂದೆಗೆ ಒಂದು ಹೆಣ್ಣು ಹಾಗು ಒಂದು ಗಂಡು ಮಗು ಇದ್ದರೆ ಆ ಹೆಣ್ಣು ಮಗಳು ತನ್ನ ಇಚ್ಛೆಯಿಂದಾಗಿ ತನ್ನ ಸಹೋದರನಿಗೆ ಆಸ್ತಿ ಹಕ್ಕನ್ನು ಬಿಟ್ಟು ಕೊಟ್ಟರೆ ತಂದೆಯ ಒಬ್ಬನೇ ಮಗ ಇಡೀ ಆಸ್ತಿಗೆ ವಾರಸುದಾರನಾಗುತ್ತಾನೆ.

ಇಲ್ಲವಾದಲ್ಲಿ ಆಕೆಗೂ ಕೂಡ ಅದರಲ್ಲಿ ಸಮಾನವಾದ ಪಾಲು ಕೊಡಬೇಕು. ಹಾಗೆಯೇ ತಂದೆಗೆ ಒಬ್ಬಳೇ ಮಗಳಿದ್ದು ಪಿತ್ರಾರ್ಜಿತ ಆಸ್ತಿಯಲ್ಲಿ ಆಕೆ ಪಾಲು ಬೇಡ ಎಂದಾಗ ಮಾತ್ರ ಆ ತಂದೆಯ ಸಹೋದರನ ಮಕ್ಕಳಿಗೆ ಅಧಿಕಾರ ವರ್ಗಾವಣೆ ಆಗುತ್ತದೆ. ಈ ವಿಚಾರವಾಗಿ ಯಾವುದೇ ಗೊಂದಲಗಳು ಇದ್ದರೂ ಕೂಡ ಅಥವಾ ಯಾವುದೇ ರೀತಿ ಸಮಸ್ಯೆ ಅಥವಾ ಮೋ’ಸ ನಡೆದರೆ ನೀವು ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಸಲಹೆ ಪಡೆದು ನಂತರ ವಕೀಲರನ್ನು ಸಂಪರ್ಕಿಸಿ ನ್ಯಾಯಾಲಯಗಳಲ್ಲಿ ದಾವೆ ಹೂಡುವ ಮೂಲಕ ನಿಮ್ಮ ಪಾಲಿನ ಆಸ್ತಿಯನ್ನು ಪಡೆದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now