ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲ್ ಕಾರ್ಪೋರೇಷನ್ ಗಳು, BDA, BBMP ಈ ರೀತಿ ಸಂಸ್ಥೆಗಳು ತಮ್ಮ ವ್ಯಾಪ್ತಿಗೆ ಒಳಪಡುವ ಸೈಟ್ ಹಾಗೂ ನಿವೇಶನಗಳ ರಿಜಿಸ್ಟರ್ ಹೊಂದಿರುತ್ತವೆ. ಇವುಗಳನ್ನು ಖಾತಗಳು ಎನ್ನುತ್ತಾರೆ ಮತ್ತು ಆ ಖಾತಾಗಳ ಅಂದರೆ ಸಂಬಂಧಪಟ್ಟ ಸೈಟ್ ಹಾಗೂ ನಿವೇಶನಗಳ ಮಾಲೀಕರಿಗೆ ಪ್ರಮಾಣ ಪತ್ರವನ್ನು ಕೂಡ ಕೊಡುತ್ತಾರೆ ಅದನ್ನು ಖಾತಾಪತ್ರ ಎನ್ನುತ್ತಾರೆ.
ಇದರಲ್ಲಿ ಎಲ್ಲವೂ A ಖಾತಾ ಆಗಿರುತ್ತವೆ ರೆವೆನ್ಯೂ ಸೈಟ್ಗಳಿಗೆ ಸಂಬಂಧಪಟ್ಟ ಆಸ್ತಿಗಳು B ಖಾತಾ ಹಾಗೂ ಡಿಜಿಟಲ್ ರೂಪದಲ್ಲಿ ಮಾಹಿತಿ ಲಭ್ಯವಿರುವವು E ಖಾತಾಗಳಾಗಿರುತ್ತವೆ. ಸದ್ಯಕ್ಕೆ ಎಲ್ಲ ಗ್ರಾಮ ಪಂಚಾಯಿತಿಗಳನ್ನು ಕೂಡ ಮಾಹಿತಿಗಳನ್ನು ಡಿಜಿಟಲೀಕರಣ ಗೊಳಿಸುತ್ತಿರುವುದರಿಂದ ಇವುಗಳನ್ನು ಗ್ರಾಮ ಪಂಚಾಯಿತಿ ಮಟ್ಟದ ಎಲ್ಲವೂ ಇ-ಖಾತಾ ಆಗಿರುತ್ತದೆ.
ಒಂದು ನಿರ್ದಿಷ್ಟ ನಗರ ವ್ಯಾಪ್ತಿಗೆ ಒಳಪಡುವ ಎಲ್ಲಾ ಚರಂಡಿ, ನೀರಿನ ವ್ಯವಸ್ಥೆ, ಸರಿಯಾದ ಕಂದಾಯ ಪಾವತಿ ವಿಧಾನ ಮುಂತಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಸೈಟ್ ಗಳು A ಖಾತಾ ಆಗಿರುತ್ತವೆ. A ಖಾತಾ ಸೈಟ್ ಎಂದರೆ ಆಸ್ತಿಗೆ ಸರ್ಕಾರದಿಂದ ಯಾವುದೇ ರೀತಿಯ ಲಿಟಿಕೇಶನ್ ಮುಂದೆ ಎದುರಾಗುವುದಿಲ್ಲ.
ಒಂದರ್ಥದಲ್ಲಿ ಪ್ರಾಪರ್ಟಿ ಸಂಪೂರ್ಣ ಕಾನೂನು ಬದ್ಧವಾಗಿದೆ ಎಂದು ಅರ್ಥ ಮತ್ತು ಇಂತಹ A ಖಾತ ಆಸ್ತಿಗಳಿಗೆ ಬ್ಯಾಂಕ್ ಸಾಲ ಸೌಲಭ್ಯ ಕೂಡ ಶೀಘ್ರವಾಗಿ ಸಿಗುತ್ತದೆ. B ಖಾತಾ ಎಂದರೆ A ಖಾತಾ ಅಲ್ಲದ ಎಲ್ಲವೂ ಕೂಡ B ಖಾತಾ. ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಆಸ್ತಿಗಳು, Un Authorised, incomplete layout ಗಳು ಇದೆಲ್ಲವೂ B ಖಾತಾ.
ಇವುಗಳನ್ನು ರೆವೆನು ಸೈಟ್ ಗಳು ಎಂದು ಕೂಡ ಕರೆಯುತ್ತಾರೆ. ಇವುಗಳಲ್ಲಿ ಮೂಲಭೂತ ಸೌಕರ್ಯಗಳು ಸರಿಯಾಗಿ ಅಭಿವೃದ್ಧಿ ಆಗಿರುವುದಿಲ್ಲ ಮತ್ತು ಸರ್ಕಾರದಿಂದ ಪರ್ಮಿಷನ್ ಗಳನ್ನು ಕೂಡ ಪಡೆದುಕೊಂಡಿರುವುದಿಲ್ಲ. ಆದರೆ ಈಗ ಗ್ರಾಮ ಪಂಚಾಯಿತಿ ಮಟ್ಟಕ್ಕೆ ಬಂದ ಆಸ್ತಿಯನ್ನು ಕಂಪ್ಯೂಟರೈಜ್ ಡ್ ಮಾಡಿ, ಇ-ಖಾತಾ ಎಂದು ಪ್ರತ್ಯೇಕವಾಗಿ ಮಾಡಿಕೊಳ್ಳುತ್ತಿದ್ದಾರೆ.
ಆದರೆ ಇದು ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿರುತ್ತದೆ ಆಸ್ತಿಯ ವಿವರದ ಜೊತೆ ನಿಮ್ಮ ಫೋಟೋ ಸಮೇತ ಇ-ಖಾತೆಯಲ್ಲಿ ಮಾಹಿತಿ ಸಿಗುತ್ತದೆ ನೀವು A ಖಾತಾ ಹಾಗೂ ಇ-ಖಾತಾವನ್ನು ಆನ್ಲೈನ್ನಲ್ಲಿ ಚೆಕ್ ಮಾಡಿ ನೋಡಬಹುದು. ಆದರೆ B-ಖಾತಾ ಎಂದು ಹೇಳಲಾಗುವ ಆಸ್ತಿಗಳ ಬಗ್ಗೆ ಖರೀದಿ ಮಾಡುವ ಎಚ್ಚರಿಕೆಯಿಂದ ಇರಬೇಕು.
ಯಾಕೆಂದರೆ ಗೌರ್ಮೆಂಟ್ ನಿಂದ ಲಿಟಿಕೇಶನ್ ಗಳು ಕೂಡ ಬರಬಹುದು ಹಾಗೆಯೇ ರಾಷ್ಟ್ರೀಕದ ಬ್ಯಾಂಕ್ ಗಳಲ್ಲಿ ಇವುಗಳಿಗೆ ಸಾಲ ಸೌಲಭ್ಯ ಸಿಗುವುದಿಲ್ಲ. ಇನ್ನಿತರ ಹಣಕಾಸು ಸಂಸ್ಥೆಗಳು ಒದಗಿಸಿದರು ಹೆಚ್ಚಿನ ಬಡ್ಡಿ ಹೇರುತ್ತವೆ. ಹಾಗಾದರೆ B ಖಾತಾ ಸ್ವತ್ತುಗಳನ್ನು ಖರೀದಿಸುವುದು ತಪ್ಪಾ ಎಂದರೆ ಆ ರೀತಿ ಸಂಪೂರ್ಣವಾಗಿ ಹೇಳಲು ಆಗುವುದಿಲ್ಲ.
ಆದರೆ ನೀವು ಖರೀದಿಸುತ್ತಿರುವ ಜಾಗಗಳಲ್ಲಿ ಮುಂದೆ ಅರಣ್,ಯ ರಾಜಕಾಲುವೆ, ಕೆರೆ ಒತ್ತುವರಿ,BaESCOM, KPTCL, ಸೈನ್ಯ ಇವುಗಳಿಗೆ ಸಂಬಂಧಪಟ್ಟ ಯಾವುದಾದರು ಯೋಜನೆ ಇದೆ ಎನ್ನುವುದನ್ನು ಕ್ರಾಸ್ ಎಕ್ಸಾಮಿನೇಷನ್ ಮಾಡಿ ತೊಂದರೆ ಇಲ್ಲ ಎನ್ನುವುದಕ್ಕೆ ಸರ್ಟಿಫಿಕೇಟ್ ಇರುವುದನ್ನು ದೃಢಪಡಿಸಿಕೊಂಡು ಖರೀದಿಸಬಹುದು.
ನಗರ ಪ್ರದೇಶಗಳಲ್ಲಿ ಹತ್ತಿರದಲ್ಲಿ ಖರೀದಿಸುವ B ಖಾತಾ ಪ್ರಾಪರ್ಟಿ ಗಳನ್ನು ಕಡಿಮೆ ಖರೀದಿಸಬಹುದು ಮತ್ತು ಶೀಘ್ರವಾಗಿ ಬೆಲೆ ಏರಿಕೆ ಕೂಡ ಆಗುತ್ತದೆ. ಮುಂದೆ ಸರ್ಕಾರ A ಖಾತೆ ಮಾಡಿಕೊಳ್ಳುವುದಕ್ಕೆ ಅನುಮತಿ ಕೂಡ ಕೊಡುತ್ತದೆ. ಸರ್ಕಾರಕ್ಕೆ ಬೆಟರ್ಮೆಂಟ್ ಚಾರ್ಜಸ್ ಕಟ್ಟಿ ಕನ್ವರ್ಟ್ ಮಾಡಿಕೊಳ್ಳಬಹುದು. ಆದರೆ ಈ ಮೇಲೆ ತಿಳಿಸಿದ ರೀತಿ ಗೌರ್ಮೆಂಟ್ ರಿಟಿಗೇಷನ್ಸ್ ಇದೆಯೋ ಇಲ್ಲವೋ ಎನ್ನುವುದನ್ನು ದೃಢಪಡಿಸಿಕೊಂಡು ಮುಂದುವರೆಯಿರಿ.