ಭೂಮಿ ಮೇಲೆ ನೀರು ಅತಿ ಅಮೂಲ್ಯವಾದ ವಸ್ತು. ನೀರಿಲ್ಲದ ಭೂಮಿಯಲ್ಲಿ ಊಹಿಸಿಕೊಳ್ಳಲು ಕೂಡ ಅಸಾಧ್ಯ. ಅಲ್ಲದೇ, ಮನುಷ್ಯನ ಜೀವನ ನೀರಿಲ್ಲದೆ ಕ್ಷಣ ಘಳಿಗೆಯೂ ನಡೆಯಲಾರದು ಎಂದರೆ ತಪ್ಪಾಗಲಾರದು. ಯಾಕೆಂದರೆ ಕೃಷಿ ಚಟುವಟಿಕೆಗೆ, ಕೈಗಾರಿಕೆಗೆ, ಹೆಚ್ಚಾಗಿ ದೈನಂದಿನ ಬಳಕೆಗೆ ಮತ್ತು ನಮ್ಮ ದೇಹಕ್ಕೆ ನೀರು ಬೇಕೆ ಬೇಕು.
ಮನುಷ್ಯನ ದೇಹದ ಆರೋಗ್ಯದ ಬಗ್ಗೆ ಹೇಳುವುದಾದರೆ ಮನುಷ್ಯ ಸ್ವಚ್ಛವಾಗಿರಲು, ಆರೋಗ್ಯವಾಗಿರಲು, ದೇಹದ ಅಂಗಾಂಗಗಳು ಸರಿಯಾದ ರೀತಿ ಕಾರ್ಯನಿರ್ವಹಿಸಲು ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ನೀರಿನ್ನು ಕುಡಿಯಲೇ ಬೇಕು. ನೀರು ಕುಡಿಯದೇ ಇರುವ ಕಾರಣಕ್ಕಾಗಿ ದೇಹ ಅನೇಕ ಖಾಯಿಲೆಗೆ ತುತ್ತಾಗಿರುವ ಉದಾಹರಣೆಗಳನ್ನು ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ.
ಗ್ಯಾಸ್ಟ್ರಿಕ್ ಪ್ರಾಬ್ಲಂ ಬರಲು ಈ ಮೂರು ಅಂಶಗಳೇ ಕಾರಣ, ಟ್ಯಾಬ್ಲೆಟ್ ತಗೋಬೇಡಿ.! ಡಾಕ್ಟರ್ ಹೇಳಿದ ಸತ್ಯ
ಹಾಗಾದರೆ ಮನುಷ್ಯನ ದೇಹಕ್ಕೆ ಎಷ್ಟು ನೀರು ಅವಶ್ಯಕತೆ ನಿಮಗೆ ಗೊತ್ತಾ, ಇಲ್ಲಿದೆ ನೋಡಿ ಮಾಹಿತಿ. ಅಧ್ಯಯನಗಳ ಹೇಳುವ ಪ್ರಕಾರ ಮನುಷ್ಯನ ದೇಹದಲ್ಲಿ 70%ರಷ್ಟು ನೀರಿದೆ. ಒಬ್ಬ 70kg ಮಧ್ಯಮ ವಯಸ್ಸಿನ ವ್ಯಕ್ತಿಯನ್ನು ಅಂದಾಜಿಸಿ ಹೇಳುವುದಾದರೆ ಆತನ ದೇಹದಲ್ಲಿ 40 ರಿಂದ 42 ಲೀಟರ್ ನೀರು ಇರುತ್ತದೆ ಎಂದು ಹೇಳಲಾಗುತ್ತದೆ.
ವಿಜ್ಞಾನ ಹೇಳುವುದೇನೆಂದರೆ ದೇಹದ ಪ್ರತಿಯೊಂದು ಜೀವಕೋಶವು ಕೂಡ ನೀರಿನಾಂಶವನ್ನು ಹೊಂದಿರುತ್ತದೆ ಎಂದು. ಈ ರೀತಿ ನೀರು ದೇಹಕ್ಕೆ ಯಾವ ಮೂಲದಿಂದ ಹೋಗುತ್ತದೆ, ಅದರ ಸರಿಯಾದ ಪ್ರಮಾಣ ಯಾವುದು? ಜೊತೆಗೆ ಒಬ್ಬ ಆರೋಗ್ಯವಂತ ಮನುಷ್ಯ ದಿನಕ್ಕೆ ಎಷ್ಟು ಲೀಟರ್ ನೀರನ್ನು ದೇಹದಿಂದ ಹೊರ ಆಗಬೇಕು ಎನ್ನುವುದಕ್ಕೂ ಕೂಡ ನಿಯಮಗಳು ಇದೆ.
ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಬರುತ್ತೆ.? ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
ಮನುಷ್ಯ ಆರೋಗ್ಯವಾಗಿರಬೇಕು ಆದಷ್ಟು ಕಾಯಿಲೆಗಳಿಂದ ದೂರ ಇರಬೇಕು ಎನ್ನುವುದಾದರೆ ಈ ವಿಷಯಗಳನ್ನು ತಿಳಿದುಕೊಂಡು ತಪ್ಪದೆ ಪಾಲಿಸಬೇಕು. ಒಬ್ಬ ಮನುಷ್ಯ ಒಂದು ದಿನಕ್ಕೆ ಎರಡೂವರೆಯಿಂದ ಮೂರೂವರೆ ಲೀಟರ್ ನಷ್ಟು ನೀರು ಕುಡಿಯಬೇಕು ನೀರನ್ನು ಒಂದೇ ಬಾರಿಗೆ ಕುಡಿಯುವುದಲ್ಲ.
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಕನಿಷ್ಠ ಅರ್ಧ ಲೀಟರ್ ಬೆಚ್ಚಗಿನ ನೀರು, ಬಳಿಕ ಟಿಫನ್ ಗೆ ಮೊದಲು ಟಿಫನ್ ಆದ ನಂತರ ಬಾಯಾರಿಕೆ ಆದಾಗ, ಸುಸ್ತಾದಾಗ, ಊಟಕ್ಕೆ ಮೊದಲು, ಊಟದ ನಂತರ, ಮತ್ತೆ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರು ಈ ರೀತಿಯಾಗಿ ನೀರನ್ನು ದೇಹಕ್ಕೆ ಸೇರಿಸಬೇಕು.
ದೇಹದ ಚಯಾಪಚಯ ಕ್ರಿಯೆಗಳು ಸರಿಯಾಗಿ ನಡೆಯಲು ಮತ್ತು ದೇಹ ಶುದ್ದಿ ಆಗಲು ನೀರಿನ ಅವಶ್ಯಕತೆ ಬಹಳ ಇರುತ್ತದೆ. ನಮ್ಮ ದೇಹಕ್ಕೆ ನೀರಿಪಾಂಶವು ನಾವು ಕುಡಿಯುವ ನೀರಿನ ಮೂಲಕ ಮಾತ್ರವಲ್ಲದೆ ನಾವು ಸೇವಿಸುವ ಆಹಾರದಲ್ಲೂ ಕೂಡ ಸೇರುತ್ತದೆ. ನೀರಿನಾಂಶಯುಕ್ತ ಆಹಾರ ಪದಾರ್ಥಗಳನ್ನು ನಾವು ನೇವಿಸುವುದರಿಂದ ಕೂಡ ದೇಹಕ್ಕೆ ನೀರು ಸಿಗುತ್ತದೆ.
ಜೊತೆಗೆ ನಮ್ಮ ದೇಹದಲ್ಲಿಯೇ ಲಾಲರಸ, ಹೈಡ್ರೋಕ್ಲೋರಿಕ್ ಆಸಿಡ್ ಮುಂತಾದ ಗ್ರಂಥಿಗಳ ಸ್ರವಿಸುವಿಕೆಯಿಂದಲೂ ದೇಹಕ್ಕೆ ನೀರು ಸೇರುತ್ತದೆ. ಹಾಗಾದರೆ ಹೊರ ಹೋಗಬೇಕಾದ ನೀರಿನ ಪ್ರಮಾಣ ಎಷ್ಟು ಎಂದು ನೋಡುವುದಾದರೆ ಆತ ಎಷ್ಟು ನೀರು ಕುಡಿಯುತ್ತಾನೆ ಅಷ್ಟೇ ಪ್ರಮಾಣದಲ್ಲಿ ನೀರು ಹೊರ ಹೋಗಬೇಕು.
ತವರು ಮನೆಯಿಂದ ಈ ವಸ್ತುಗಳನ್ನು ತಂದರೆ ಗಂಡನಿಗೆ ಕಷ್ಟ ತಪ್ಪಿದ್ದಲ್ಲ.! ಯಾವ್ಯಾವ ವಸ್ತುಗಳು ಗೊತ್ತಾ.?
ಎರಡೂವರೆ ಲೀಟರ್ ನೀರು ಕುಡಿಯುವ ವ್ಯಕ್ತಿ ಎರಡೂವರೆ ಲೀಟರ್ ನೀರನ್ನು ಹೊರಹಾಕಿದರೆ ಅದು ಸರಿಯಾದ ಪದ್ಧತಿಯಂತೆ ಎಂದು ಹೇಳಬಹುದು. ಮೂತ್ರ ವಿಸರ್ಜನೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ದೇಹದಿಂದ ಹೊರ ಹೋಗುತ್ತದೆ, ಮಲದ ಮೂಲಕ ಬೆವರಿನ ಮೂಲಕ ಹೀಗೆ ದೇಹದಿಂದ ನೀರು ಹೊರ ಹೋಗುತ್ತದೆ. ಈ ರೀತಿ ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇವಿಸದೆ ಇರುವುದು ಹಾಗೂ ಹೊರ ಹಾಕದೆ ಇರುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ.