ದೇವರು ಯಾರಿಗೆ ಸಹಾಯ ಮಾಡುತ್ತಾರೆ ಗೊತ್ತಾ.? ನಾವು ಕಷ್ಟದಲ್ಲಿ ಇದ್ದೇವೆ ಎಂದು ದೇವರಿಗೆ ಹೇಗೆ ತಿಳಿಯುತ್ತದೆ ನೋಡಿ.!

ನಾವಿಂದು 20ನೇ ಶತಮಾನದಲ್ಲಿ ಇದ್ದರೂ ಕೂಡ ದೇವರ ಮೇಲಿನ ನಂಬಿಕೆ ಕಡಿಮೆಯಾಗಿಲ್ಲ. ಹಾಗೆ ಕಾಲಕಾಲದಿಂದಲೂ ಕೂಡ ಈ ರೀತಿ ದೇವರು ಇಲ್ಲ ಎಂದು ವಾದಿಸುವ ನಾಸ್ತಿಕರು ಕೂಡ ಇದ್ದಾರೆ. ಆದರೆ ಇವರ ಸಂಖ್ಯೆ ಎಂದು ಕೂಡ ಆಸ್ತಿಕರನ್ನು ಮಿರಲಾರದು ಯಾವುದೇ ಜಾತಿ, ಧರ್ಮ, ದೇಶಕ್ಕೆ ಸೇರಿದವರಾದರು ಅವರ ಪಾಲಿನ ದೇವರ ಮೇಲೆ ನಂಬಿಕೆ ಇಡುತ್ತಾರೆ.

WhatsApp Group Join Now
Telegram Group Join Now

ನಮ್ಮ ಹಿಂದುಗಳ ಪಾಲಿಗೆ ಹೇಳುವುದಾದರೆ ನಮ್ಮನ್ನು ಕಾಯಲು ಮುನ್ನೂರು ಕೋಟಿ ದೇವತೆಗಳು ಇದ್ದಾರೆ ಎಂದು ಹೇಳಲಾಗುತ್ತದೆ ಮತ್ತು ಪ್ರತಿಯೊಬ್ಬ ಮನುಷ್ಯನ ಹಿಂದೆಯೂ ಕೂಡ ಒಬ್ಬ ದೇವತೆ ಇರುತ್ತಾನೆ. ಆತನ ಒಳ್ಳೆಯದ ಕೆಟ್ಟದ್ದು ಎಲ್ಲವನ್ನು ಗಮನಿಸಿ ಎಚ್ಚರಿಸುತ್ತಿದ್ದಾನೆ ಎಂದು ಸಹ ಹೇಳಲಾಗುತ್ತದೆ.

ಹಾಗೆಯೇ ನಮ್ಮ ಕಷ್ಟಕಾಲಕ್ಕೆ ದೇವರು ನೇರವಾಗಿ ಬಂದು ಸಹಾಯ ಮಾಡದೆ ಇದ್ದರೂ ತನ್ನ ರೂಪದಲ್ಲಿ ಮತ್ತೊಬ್ಬರನ್ನು ಕಳುಹಿಸಿಕೊಟ್ಟು ಕಷ್ಟ ತೀರುವಂತೆ ಮಾಡುತ್ತಾನೆ ಎನ್ನುವುದಕ್ಕೆ ನಮ್ಮ ಕಣ್ಣೆದುರಿಗೆ ಎಷ್ಟೋ  ಸಾಕ್ಷಿಗಳು ನಡೆದಿರುತ್ತವೆ. ಆದರೆ ಕೆಲವರಿಗೆ ಎಷ್ಟು ಕಷ್ಟಪಟ್ಟು ಅವರು ಮುಳುಗುತ್ತಿದ್ದರೂ ಕೂಡ ಅವರಿಗೆ ನೆರವಿನ ಹಸ್ತ ಸಿಗುವುದಿಲ್ಲ ಆಗ ದೇವರಿಗೆ ಯಾಕೆ ಇವರ ಕೂಗು ಕೇಳುವುದಿಲ್ಲ ಎನ್ನುವ ಅನುಮಾನ ಹುಟ್ಟದೆ ಇರದು.

ಆದರೆ ದೇವರು ಅವರವರ ಕರ್ಮ ಧರ್ಮಗಳಿಗೆ ಅನುಸಾರವಾಗಿ ಫಲ ಕೊಡುತ್ತಿರುತ್ತಾನೆ. ಭಗವಾನ್ ಶ್ರೀ ಕೃಷ್ಣ ಕೂಡ ತನ್ನ ಭಗವದ್ಗೀತೆಯಲ್ಲಿ ಇದನ್ನೇ ಹೇಳಿರುವುದು ನೀನು ನಿನ್ನ ಪಾಲಿನ ಕರ್ಮವನ್ನು ಮಾಡು ಅದರ ಫಲಾಪೇಕ್ಷೆಗಳನ್ನು ನನಗೆ ಬಿಡು ಎಂದು, ಆ ಪ್ರಕಾರವಾಗಿ ನಡೆದುಕೊಂಡಾಗ ಬದುಕು ನಿರಾಯಾಸವಾಗಿರುತ್ತದೆ.

ಇನ್ನು ಸರಳವಾಗಿ ಅರ್ಥವಾಗುವ ರೀತಿ ಹೇಳಬೇಕು ಎಂದರೆ ಕರ್ಮ ಎಂದರೆ ನಾವು ಮಾಡುವ ಕೆಲಸ ಕರ್ಮ, ಧರ್ಮ ಎಂದರೆ ಅದನ್ನು ಯಾವಾಗಲು ಧರ್ಮದ ಹಾದಿಯಲ್ಲಿ ಮಾಡುವುದು. ಧರ್ಮದ ಹಾದಿ ಎಂದರೆ ನಾವು ಮಾಡುವ ಕಾರ್ಯದಿಂದ ಯಾರಿಗೂ ಕೂಡ ನೋವಾಗಬಾರದು, ನಷ್ಟವಾಗಬಾರದು, ಮಾಡುವ ಕಾರ್ಯದಿಂದ ಒಂದಷ್ಟು ಜನರಿಗೆ ಒಳಿತಾಗಬೇಕು, ಒಳಿತಾಗದಿದ್ದರೂ ನಷ್ಟವಿಲ್ಲ ಕೆಡುಕಂತೂ ಆಗಬಾರದು.

ಇದಿಷ್ಟನ್ನೇ ಸರಳವಾಗಿ ಧರ್ಮ ಎನ್ನಬಹುದು. ಈ ರೀತಿ ಧರ್ಮದಿಂದ ಬದುಕುತ್ತಾ ಭಗವಂತನ ಮೇಲೆ ಅಪಾರವಾದ ನಂಬಿಕೆ ಇಟ್ಟಿದ್ದರೆ ಖಂಡಿತವಾಗಿಯೂ ಕೂಡ ನಂಬಿಕೆಗೆ ಪ್ರತಿಫಲ ಸಿಗುತ್ತದೆ. ನಾವೆಲ್ಲರೂ ಒಂದು ಚಿಕ್ಕ ಕಥೆಯನ್ನು ಕೇಳಿಯೇ ಇರುತ್ತೇವೆ ಒಂದು ಊರಿನಲ್ಲಿ ಕೆಲವು ವರ್ಷಗಳ ವರೆಗೆ ಮಳೆ ಬರದ ಕಾರಣ ಊರಿನ ಜನರೆಲ್ಲರೂ ಸೇರಿ ಭಗವಂತನಲ್ಲಿ ಮಳೆಗಾಗಿ ಪ್ರಾರ್ಥಿಸಲು ಒಂದು ಕಡೆ ಸೇರೋಣ ಎಂದು ನಿರ್ಧರಿಸಿರುತ್ತಾರೆ ಆದರೆ ಅವರೆಲ್ಲಾ ಬಲಿ ಗೈ ನಲ್ಲಿ ಬಂದಿರುತ್ತಾರೆ.

ಆದರೆ ಆ ಗುಂಪಿನಲ್ಲಿದ್ದ ಒಬ್ಬ ಚಿಕ್ಕ ಬಾಲಕ ಮಾತ್ರ ಕೈಯಲ್ಲಿ ಕೊಡೆ ತೆಗೆದುಕೊಂಡು ಹೋಗಿರುತ್ತಾನೆ. ಅದು ಆತನಿಗೆ ಭಗವಂತನ ಮೇಲಿದ್ದ ನಂಬಿಕೆಯನ್ನು ಸಾರುತ್ತದೆ, ಮತ್ತು ಆತನು ತನ್ನ ಕಾರ್ಯದ ಬಗ್ಗೆ ಜವಾಬ್ದಾರಿ ಹೊಂದಿರುತ್ತಾನೆ. ಆಗ ದೇವರು ಆ ಪುಟ್ಟ ಬಾಲಕನ ಮುಗ್ಧ ಹೃದಯಕ್ಕೆ ನಂಬಿಕೆಗೆ ಒಲಿದು ಭೋರ್ಗರೆವಂತೆ ಮಳೆ ಸುರಿಸುತ್ತಾನೆ. ಈ ಸಣ್ಣ ಕಥೆ ಸಾಕು ಭಗವಂತನ ಸಾಕ್ಷಾತ್ಕಾರ ಯಾವಾಗ ಯಾವ ರೀತಿ ಆಗುತ್ತದೆ ಎನ್ನುವುದನ್ನು ಹೇಳುವುದಕ್ಕೆ.

ಹಾಗಾಗಿ ಕಷ್ಟ ಬಂತು ಎಂದು ಹೆದರಬೇಡಿ ಧೈರ್ಯದಿಂದ ಇರಿ ಮತ್ತು ಆ ಕಷ್ಟ ಪರಿಹಾರ ಆಗುವುದಕ್ಕೆ ಭಗವಂತನನ್ನು ಪ್ರಾರ್ಥಿಸುತ್ತಾ ತಪ್ಪದೆ ನೀವು ನಿಮ್ಮ ಜವಾಬ್ದಾರಿಗಳನ್ನು, ಕರ್ತವ್ಯಗಳನ್ನು ಹಾಗೂ  ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸಿ ಮತ್ತು ಸನ್ಮಾರ್ಗದಲ್ಲಿ ನಡೆಯಿರಿ. ಆಗಪ್ರತಿ ಹೆಜ್ಜೆಯಲ್ಲಿ ಭಗವಂತ ಜೊತೆಗಿರುತ್ತಾನೆ. ನೀವು ಎಡವಿದರೂ ಬೀಳದಂತೆ ಆತ ತಡೆಯುತ್ತಾನೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now