ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಮನೆ ಕಟ್ಟುವವರಿಗೆ ಸಹಾಯಧನ ಘೋಷಣೆ ಮನೆ ಕಟ್ಟುವ ಆಲೋಚನೆಯಲ್ಲಿ ಇರುವವರು ಅರ್ಜಿ ಸಲ್ಲಿಸಿ ಹಣ ಪಡೆಯಿರಿ.

ಜ್ಯೋತಿಷ್ಯ ಜಾಹೀರಾತು
ಜ್ಯೋತಿಷ್ಯ ಜಾಹೀರಾತು

ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು ಜೊತೆಗೆ ನಿವಾಸ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಕೂಡ ಒಂದು. ಇಂದಿನ ಯುಗಮಾನದಲ್ಲಿ ನೆಲೆಸಲು ಒಂದು ಸೂರು ಇಲ್ಲ ಎಂದರೆ ಬಾಡಿಗೆ ಕಟ್ಟಿ ಬದುಕು ನಡೆಸುವುದು ಬಲು ಕಷ್ಟಕರ. ಹಾಗಾಗಿ ಪ್ರತಿಯೊಬ್ಬರೂ ಕೂಡ ಸಣ್ಣದಾದರೂ ಸರಿ ಒಂದು ಮನೆ ಕಟ್ಟುಕೊಂಡು ನೆಮ್ಮದಿಯಾಗಿರಬೇಕು ಎಂದು ವರ್ಷಗಳ ಹಿಂದೆಯಿಂದಲೇ ಹಣ ಕೂಡಿರುತ್ತಾರೆ.

ಆದರೆ ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎನ್ನುವ ಗಾದೆ ಇರುವದರಿಂದ ಮನೆ ಕಟ್ಟುವುದಕ್ಕೆ ಎಷ್ಟು ಹಣ ಇದ್ದರೂ ಸಾಲುವುದಿಲ್ಲ. ಆಗ ಸಾಲಕ್ಕಾಗಿ ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ಬರುತ್ತದೆ. ಅದರ ಬದಲು ಸರ್ಕಾರ ಕೂಡ ಮನೆ ಕಟ್ಟಿಕೊಳ್ಳುವವರಿಗೆ, ಸ್ವಂತ ಸೂರು ನಿರ್ಮಿಸಿಕೊಳ್ಳುವವರಿಗೆ ಹಲವಾರು ರೀತಿಯ ಯೋಜನೆಗಳ ಮೂಲಕ ಸಹಾಯಧನ ನೀಡುತ್ತಿದೆ ಅದರ ಬಗ್ಗೆ ತಿಳಿದುಕೊಂಡು ನೀವು ಫಲಾನುಭವಿಗಳಾಗಬಹುದು.

ಈಗಾಗಲೇ ರಾಜೀವ್ ಗಾಂಧಿ ಯೋಜನೆ ಪಿಎಂ ಆವಾಸ್ ಯೋಜನೆ ಇಂತಹದ ಯೋಜನೆಗಳ ಮೂಲಕ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಲಕ್ಷಗಟ್ಟಲೇ ಹಣ ಸಹಾಯಧನವಾಗಿ ದೊರೆಯುತ್ತಿದೆ. ಅದರೊಂದಿಗೆ ಹಲವಾರು ಬ್ಯಾಂಕುಗಳು ಮನೆ ಕಟ್ಟಿಕೊಳ್ಳುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ನೆರವನ್ನು ಸಹ ನೀಡುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿಗಮ ಒಂದು ಇಂತಹ ಕನಸಿಗೆ ಕೈಗೂಡಿಸುತ್ತಿದೆ.

ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ದೊಡ್ಡ ಮಟ್ಟದ ಹಣವನ್ನು ನೀಡುವ ಮೂಲಕ ಸ್ವಂತ ಮನೆ ಕನಸನ್ನು ನನಸು ಮಾಡಿಕೊಳ್ಳಲು ಹಲವರಿಗೆ ಅನುಕೂಲ ಮಾಡಿಕೊಡುತ್ತಿದೆ. ಈ ಸಹಾಯಧನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಪೂರ್ತಿ ಓದಿ. ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಇಂತಹ ಒಂದು ಮಹತ್ವಪೂರ್ಣ ನಿರ್ಧಾರ ಮಾಡಿದೆ. ಇದರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಳ್ಳುವವರಿಗೆ ಕೆಲ ಕಂಡಿಷನ್ ಮೇರೆಗೆ ರೂ.1,75,000ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುತ್ತಿದೆ.

ಇದು ಕೂಡ ರಾಜೀವ್ ಗಾಂಧಿ ಯೋಜನೆ ಅಡಿಯೇ ಬರುತ್ತದೆ ಎಂದು ಹೇಳಬಹುದು. ಮತ್ತು ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡುವ ಖರ್ಚು, ಗ್ರಾಮೀಣ ಪ್ರದೇಶಕ್ಕಿಂತ ಹೆಚ್ಚಾಗಿರುವುದರಿಂದ ನಗರ ಪ್ರದೇಶದಲ್ಲಿ ಮನೆ ನಿರ್ಮಿಸುವವರಿಗೆ ಎರಡು ಲಕ್ಷ ರೂಗಳನ್ನು ಈ ರೀತಿ ಸಹಾಯಧನವಾಗಿ ನೀಡುತ್ತಿದೆ. ಇದರೊಂದಿಗೆ ಪಿಎಂ ಆವಾಸ್ ಯೋಜನೆ ಸಂಯೋಜನೆಯೊಂದಿಗೆ ಇವರಿಗೆ ಒಂದೂವರೆ ಲಕ್ಷ ಹೆಚ್ಚಿನ ಹಣ ಕೂಡ ಸಿಗಲಿದೆ. ಆದರೆ ಈ ಯೋಜನೆಯ ಫಲಾನುಭವಿಗಳು ಆಗಬೇಕು ಎಂದರೆ ಕೆಲ ನಿಯಮ ಕೂಡ ಇದೆ.

ಅದೇನೆಂದರೆ ನಿಮ್ಮ ಬಳಿ ಕಡ್ಡಾಯವಾಗಿ ಖಾಲಿ ಜಾಗ ಇರಬೇಕು. ಈವರೆಗೆ ನೀವು ಮನೆ ನಿರ್ವಹಿಸುವುದಕ್ಕಾಗಿ ಈ ಹಿಂದೆ ಯಾವುದೇ ಯೋಜನೆಗಳ ಉಪಯೋಗ ಪಡೆದಿರಬಾರದು. ನಿಮ್ಮ ಹೆಸರಿನಲ್ಲಿ ಯಾವುದೇ ಮನೆ ಇರಬಾರದು ಗ್ರಾಮೀಣ ಭಾಗದವರಾದರೆ ಆರ್ಥಿಕವಾಗಿ ಹಿಂದುಳಿದಿದ್ದು, ವಾರ್ಷಿಕ ವರಮಾನ 32,000 ಒಳಗಿರಬೇಕು ಮತ್ತು ನಗರ ಪ್ರದೇಶದವರಿಗೆ ವಾರ್ಷಿಕ ವರಮಾನ 87,600 ಒಳಗೆ ಇಡಬೇಕು‌.

ಇಷ್ಟಿದ್ದರೆ ನೀವು ನಿಮ್ಮ ಹತ್ತಿರದ ತಾಲೂಕು ಅಥವಾ ಜಿಲ್ಲಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಭೇಟಿಯಾಗಿ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಫೋಟೋ ಮತ್ತು ಖಾಲಿ ಜಾಗಕ್ಕೆ ಸಂಬಂಧಿಸಿದ ದಾಖಲೆ ಇವುಗಳನ್ನು ಲಗತ್ತಿರಿಸಿದ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಬಹುದು. ಈ ಹಣವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ ನಂತರ ನೀವು ಸ್ವಂತವಾಗಿ ಮನೆ ಕಟ್ಟಿಕೊಳ್ಳಬಹುದು ಅಥವಾ ಏಜೆನ್ಸಿ ಮೂಲಕ ಮನೆ ಕಟ್ಟಿಸಿಕೊಳ್ಳಬಹುದು.

Leave a Comment

%d bloggers like this: