ಒಂದು ಜಮೀನು ದಾನ, ಕ್ರಯ, ವಿಭಾಗ, ಪೌತಿ ಹಾಗೂ ಪೋಡಿ ರೂಪದಲ್ಲಿ ಹಕ್ಕು ವರ್ಗಾವಣೆಯಾಗುತ್ತದೆ. ಒಂದು ಜಮೀನಿನಲ್ಲಿ ಈ ಹಿಂದೆ ಯಾವ ಕಾರಣದಿಂದ ಯಾವ ರೂಪದಲ್ಲಿ ಹಕ್ಕು ವರ್ಗಾವಣೆ ಆಗಿದೆ ಎನ್ನುವುದನ್ನು ತಿಳಿಸುವುದೇ ಮ್ಯೂಟೇಷನ್ ರಿಪೋರ್ಟ್ ಈ ಮ್ಯೂಟೇಷನ್ ರಿಪೋರ್ಟ್ ನಿಂದ ಸಾಕಷ್ಟು ಅನುಕೂಲತೆಗಳಿವೆ.
ಇದು ಒಬ್ಬ ವ್ಯಕ್ತಿಗೆ ಹೇಗೆ ಬಳಕೆಗೆ ಬರುತ್ತದೆ ಮತ್ತು ಮೊಬೈಲ್ ಮೂಲಕವೇ ಇವುಗಳನ್ನು ಪರಿಶೀಲನೆ ಮಾಡಿ ನೋಡಬಹುದಾದ್ದರಿಂದ ಯಾವ ವಿಧಾನದ ಮೂಲಕ ಇದನ್ನು ಪರಿಶೀಲಿಸಬಹುದು? ಎನ್ನುವ ಮಾಹಿತಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ಜಮೀನು ಇರುವ ಮಾತ್ರವಲ್ಲದೇ ಪ್ರತಿಯೊಬ್ಬರು ಈ ಮಾಹಿತಿಯನ್ನು ತಿಳಿದುಕೊಂಡಿರಬೇಕು ಆದ್ದರಿಂದ ತಪ್ಪದೇ ಹೆಚ್ಚಿನ ಜನರೊಡನೆ ಈ ಮಾಹಿತಿಯನ್ನು ಶೇರ್ ಮಾಡಿ.
ಮ್ಯೂಟೇಶನ್ ರಿಪೋರ್ಟ್ ನಿಂದ ಆಗುವ ಉಪಯೋಗಗಳು:-
* ಬೆಳೆ ಸಾಲ ಪಡೆದುಕೊಳ್ಳುವ ಸಮಯದಲ್ಲಿ ಕೇಳುತ್ತಾರೆ
* ಜಮೀನು ಖರೀದಿ ಮಾಡುವ ಸಮಯದಲ್ಲಿ ಇದಕ್ಕೂ ಹಿಂದೆ ಈ ಜಮೀನು ಯಾರ ಹೆಸರಿನಲ್ಲಿ ಇತ್ತು, ಈಗ ಯಾರ ಹೆಸರಿಗೆ ಇದೆ ಎನ್ನುವ ಸರಿಯಾದ ಮಾಹಿತಿ ಮ್ಯೂಟೇಶನ್ ರಿಪೋರ್ಟ್ ಮೂಲಕ ತಿಳಿಯುತ್ತದೆ
* ಯಾವ ರೂಪದಲ್ಲಿ ಜಮೀನು ಪರಭಾರೆ ಆಗಿದೆ ಎನ್ನುವ ಮಾಹಿತಿಯು ತಿಳಿಯುತ್ತದೆ.
* ಜಮೀನಿನ ಮೇಲೆ ಸಾಲ ಹಾಗೂ ಇನ್ನಿತರ ಋಣಗಳು ಇದ್ದರೆ ತಿಳಿಯುತ್ತದೆ
* ಜಿಲ್ಲಾಧಿಕಾರಿಗಳು ಭೂ ಪರಿವರ್ತನೆ ಮಾಡುವಾಗ ಸದರಿ ಜಮೀನಿನ ಮ್ಯೂಟೇಷನ್ ರಿಪೋರ್ಟ್ ಗಳು ಕಡ್ಡಾಯವಾಗಿ ಬೇಕಾಗುತ್ತವೆ
* ಜಮೀನಿಗೆ ಸಂಬಂಧಪಟ್ಟ ಹಾಗೆ ಕೋರ್ಟ್ ಗಳಲ್ಲಿ ತಕರಾರುಗಳು ಇದ್ದರೆ ಮ್ಯೂಟೇಷನ್ ಪ್ರತಿಗಳನ್ನು ಕೇಳುತ್ತಾರೆ.
ಮ್ಯೂಟೇಶನ್ ರಿಪೋರ್ಟ್ ಪಡೆದುಕೊಳ್ಳುವ ವಿಧಾನ:-
* ಮೊದಲಿಗೆ ಗೂಗಲ್ ಬಾರ್ ನಲ್ಲಿ https://landrecords.karnataka.gov.in ಎಂದು ಟೈಪ್ ಮಾಡಿ ಸರ್ಚ್ ಕೊಡಿ
* Government of Karnataka Revenue Department Services ವೆಬ್ಸೈಟ್ ತಲುಪುತ್ತೀರಿ
* ಮೊದಲ ಆಪ್ಷನ್ ಆಗಿ ಇರುವ view RTC and MR ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* Bhoomi online / land records / View ಎಂಬ ಮತ್ತೊಂದು ಟ್ಯಾಬ್ ಓಪನ್ ಆಗುತ್ತದೆ.
* ಇದರಲ್ಲಿ MR ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ಭೂಮಿ ಆನ್ಲೈನ್ ಮ್ಯೂಟೇಷನ್ ಪ್ರತಿ (Bhoomi Online Mutation Extract) ಎಂಬ ಮತ್ತೊಂದು ಟ್ಯಾಬ್ ಓಪನ್ ಆಗುತ್ತದೆ. ಇದರಲ್ಲಿ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಇವುಗಳನ್ನು ಸರಿಯಾಗಿ ಸೆಲೆಕ್ಟ್ ಮಾಡಿ ಸರ್ವೇ ನಂಬರ್ ನಮೂದಿಸಿ ವಿವರಗಳನ್ನು ಕರೆತರು (fetch details) ಎನ್ನುವುದರ ಮೇಲೆ ಕ್ಲಿಕ್ ಮಾಡಿ
* ತಕ್ಷಣ ಸ್ಕ್ರೀನ್ ಮೇಲೆ ನೀವು ಎಂಟರ್ ಮಾಡಿದ ಸರ್ವೆ ನಂಬರ್ ಮ್ಯೂಟೇಷನ್ ರಿಪೋರ್ಟ್ ಬರುತ್ತದೆ.
ಈ ಸುದ್ದಿ ಓದಿ:- KAS ಪರೀಕ್ಷೆಗೆ ಉಚಿತ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ.!
* ಇದರಲ್ಲಿ ಮುಖ್ಯವಾಗಿ ಸರ್ವೇ ನಂಬರ್, ಮ್ಯೂಟೇಶನ್ ಆದ ವರ್ಷ, ಮ್ಯೂಟೇಶನ್ ಸಂಖ್ಯೆ, MR ನಂಬರ್, ಮ್ಯೂಟೇಷನ್ ರೀತಿ, ಸ್ವಾಧೀನತೆ ರೀತಿ, ತಹಶೀಲ್ದಾರ್ ಅನುಮೋದಿಸಿದ ದಿನಾಂಕ ಇತ್ಯಾದಿ ಪ್ರಮುಖ ವಿವರಗಳು ಇರುತ್ತವೆ.
* ಈ ಪಟ್ಟಿಯಲ್ಲಿ ಪ್ರಮುಖವಾಗಿ ಯಾವ ಹಿಸ್ಸಾ ಸಂಖ್ಯೆಯ ಪೂರ್ತಿ ಮಾಹಿತಿ ಬೇಕು ಅದರ ಮುಂದೆ ಆಯ್ಕೆ ಎಂದು ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು.
* ಸ್ಕ್ರೀನ್ ಎಡ ಭಾಗದಲ್ಲಿ Preview ಬರುತ್ತದೆ, ಮುನ್ನೋಟ ಎನ್ನುವುದರ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿದರೆ ಮ್ಯುಟೇಶನ್ ರಿಜಿಸ್ಟರ್ ಪ್ರತಿ ಓಪನ್ ಆಗುತ್ತದೆ. ಇದರಲ್ಲಿ ಮ್ಯುಟೇಶನ್ ಪ್ರಕ್ರಿಯೆಗೆ ಸಂಬಂಧಪಟ್ಟ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.