ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಸಂದರ್ಭದಲ್ಲಿ ಸಾಲ ಮಾಡುವ ಪರಿಸ್ಥಿತಿ ಬಂದೇ ಬರುತ್ತದೆ. ಬ್ಯಾಂಕ್ ಗಳಿಂದ, ಹಣಕಾಸು ಸಂಸ್ಥೆಗಳಿಂದ ಅಥವಾ ಖಾಸಗಿ ವ್ಯಕ್ತಿಗಳಿಂದ, ಸ್ನೇಹಿತರ ಸಂಬಂಧಿಕರಿಂದ ಸಾಲ ಮಾಡಿರುತ್ತೇವೆ. ಆ ಸಾಲಕ್ಕೆ ಬಡ್ಡಿ ರೂಪದಲ್ಲಿ ಹಣ ನೀಡಬೇಕಾದ್ದರಿಂದ ದಿನದಿಂದ ದಿನಕ್ಕೆ ಆ ಸಾಲದ ಮೊತ್ತ ಹೆಚ್ಚಾಗುತ್ತದೆ.
ಒಂದು ವೇಳೆ ಸಾಲ ತೆಗೆದುಕೊಂಡಿದ್ದ ಹಣ ಒಂದೊಳ್ಳೆ ಕೆಲಸಕ್ಕೆ ಪ್ರಯೋಜನವಾಗಿ ಅದರಿಂದ ಲಾಭ ಬಂದರೆ ಯಾವುದು ಕಷ್ಟ ಎನಿಸುವುದಿಲ್ಲ, ಆದರೆ ಪಡೆದುಕೊಂಡ ಸಾಲವನ್ನು ತೀರಿಸಲಾಗದ ಪರಿಸ್ಥಿತಿ ಬಂದುಬಿಟ್ಟರೆ ಅಂಥವರ ಬದುಕು ನರಕವೇ ಆಗಿರುತ್ತದೆ. ಹಣಕಾಸಿನ ಸಮಸ್ಯೆ ವ್ಯಕ್ತಿಯ ನೆಮ್ಮದಿ, ಆರೋಗ್ಯ, ಸಂತೋಷ ಎಲ್ಲವನ್ನು ಕೂಡ ಕಿತ್ತುಕೊಳ್ಳುತ್ತದೆ. ಈ ರೀತಿ ನೀವು ಯಾವುದಾದರೂ ಕಾರಣಕ್ಕಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಕಷ್ಟಪಡುತ್ತಿದ್ದರೆ ಈ ಐದು ನಿಯಮಗಳನ್ನು ಪಾಲಿಸಿ ನೋಡಿ ನಿಮ್ಮ ಬದುಕು ಬದಲಾಗುತ್ತದೆ.
1. ಜೀವನದಲ್ಲಿ ಯಾವುದೇ ರೀತಿ ದೊಡ್ಡ ಸಮಸ್ಯೆ ಬಂದರೂ ಎದುರಿಸಲು ಧೈರ್ಯ ಮುಖ್ಯ. ಹಾಗಾಗಿ ಧೈರ್ಯವಂತ ಸಾಹಸವಂತ ತೀಕ್ಷ್ಣ ಬುದ್ಧಿಯುಳ್ಳ ಆಂಜನೇಯನನ್ನು ಪ್ರಾರ್ಥಿಸಿ, ನಿಮ್ಮ ಕಷ್ಟಕ್ಕೆ ದಾರಿ ಸಿಗುತ್ತದೆ. ಅದರಲ್ಲೂ ಸಾಲ ಪರಿಹಾರ ಆಗಬೇಕು ಅಥವಾ ಭೂಮಿಗೆ ಸಂಬಂಧಪಟ್ಟ ಸಮಸ್ಯೆ ಪರಿಹಾರ ಆಗಬೇಕು ಎನ್ನುವುದಾದರೆ ತಪ್ಪದೆ ಮಂಗಳವಾರ ಹಾಗೂ ಶನಿವಾರ ಆಂಜನೇಯ ದೇವಸ್ಥಾನದಲ್ಲಿ ಸಿಂಧೂರವನ್ನು ಅರ್ಪಿಸಿ ಭಕ್ತಿಯಿಂದ ಹನುಮಾನ್ ಚಾಲೀಸವನ್ನು ಪಠಿಸಿ, ಸಾಲ ತೀರಿಸುವ ಮಾರ್ಗ ನಿಮಗೆ ಹೊಳೆಯುತ್ತದೆ. ನಿಮ್ಮ ಸಾಲ ಕೂಡ ಕರಗುತ್ತದೆ.
2. ಮಹಾದೇವನ ಆರಾಧನೆ ಕೂಡ ನಿಮಗೆ ಸಾಲದ ಋಣದಿಂದ ಮುಕ್ತಿ ನೀಡುತ್ತದೆ. ಸೋಮವಾರದ ಪ್ರದೋಷವು ಇದಕ್ಕೆ ಇನ್ನೂ ವಿಶೇಷ. ಸೋಮವಾರದ ಕಾಲ ಪ್ರದೋಷ ಸಮಯದಲ್ಲಿ ಹೋಗಿ ಶಿವಲಿಂಗಕ್ಕೆ ಹಾಲು ಮತ್ತು ನೀರಿನಿಂದ ಅಭಿಷೇಕ ಮಾಡಿ ಭಕ್ತಿಯಿಂದ 108 ಬಾರಿ ಓಂ ಋಣಮುಕ್ತಾಯ ನಮಃ ಎಂದು ಪಠಣೆ ಮಾಡಿದರೆ ಸಾಲದ ಸಮಸ್ಯೆಯಿಂದ ಹೊರಬರಲು ಮಾರ್ಗ ಸಿಗುತ್ತದೆ.
3. ಬುಧವಾರ ಗೋವುಗಳಿಗೆ ಹೆಸರುಕಾಳುವನ್ನು ಬೇಯಿಸಿ ಅದರ ಜೊತೆ ಬೆಲ್ಲ ಮತ್ತು ತುಪ್ಪ ವನ್ನು ಸೇರಿಸಿ ತಿನಿಸುವುದರಿಂದ ಕೂಡ ಶೀಘ್ರವಾಗಿ ಸಾಲದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
4. ಮನೆಯಲ್ಲಿರುವ ಈಶಾನ್ಯ ದಿಕ್ಕಿನ ದೋಷದಿಂದ ಕೂಡ ಈ ರೀತಿ ಕುಟುಂಬಕ್ಕೆ ಸಾಲದ ಭಾದೆ ಆವರಿಸುತ್ತದೆ ಎನ್ನುವುದನ್ನು ಶಾಸ್ತ್ರ ಹೇಳುತ್ತದೆ. ಹಾಗಾಗಿ ಯಾವಾಗಲೂ ಈಶಾನ್ಯ ಮೂಲೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಅದರಲ್ಲಿ ಧೂಳು, ಕಸ ಇರಬಾರದು ಮತ್ತು ಹಳೆಯ ವಸ್ತುಗಳನ್ನು ಹಾಳಾದ ವಸ್ತುಗಳನ್ನು ಆ ಮೂಲೆಯಲ್ಲಿ ಎಸೆಯಬಾರದು. ಸಾಮಾನ್ಯವಾಗಿ ಈಶಾನ್ಯ ಮೂಲೆಯಲ್ಲೇ ಹೆಚ್ಚಿನ ಮನೆಗಳಲ್ಲಿ ದೇವರ ಕೋಣೆ ಇರುತ್ತದೆ. ಇಲ್ಲದವರು ಒಂದು ಹಿತ್ತಾಳೆ ತಾಮ್ರದ ಚಂಬಿನಲ್ಲಿ ನೀರು ತುಂಬಿ ಇಟ್ಟು ಪೂಜಿಸಿದರೆ ಶುಭವಾಗುತ್ತದೆ.
5. ಒಳ್ಳೆವರೆಗೆ ಕಷ್ಟಗಳು ಹೆಚ್ಚಾಗಿ ಬರುತ್ತವೆ ಎನ್ನುವುದು ಜನಜನಿತ ಮಾತು. ಆದರೆ ಅವರ ಒಳ್ಳೆಯತನವೇ ಅದನ್ನು ಬಗೆಹರಿಸುತ್ತದೆ. ಹಾಗಾಗಿ ಭಗವಂತನಿಗೆ ಹತ್ತಿರವಾಗುವುದು ಮುಖ್ಯ. ಭಗವಂತನಿಗೆ ಹತ್ತಿರವಾಗಬೇಕು ಎಂದರೆ ಮೂಕ ಪ್ರಾಣಿ ಪಕ್ಷಿಗಳಿಗೆ ದಯೆ ತೋರಬೇಕು. ನೊಂದವರಿಗೆ ಕೈಲಾದಷ್ಟು ನೆರವಾಗಬೇಕು. ಈ ರೀತಿ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬಂದರೆ ಒಳ್ಳೆಯತನದಿಂದ ಬದುಕಿದರೆ ದೇವರು ನಿಮ್ಮ ಸಮಸ್ಯೆಗೂ ಕೂಡ ಪರಿಹಾರ ಕೊಡುತ್ತಾರೆ. ಈ ಸರಳ ವಿಧಾನಗಳನ್ನು ಪಾಲಿಸಿ, ನಿಮ್ಮ ಸಾಲದ ಸಮಸ್ಯೆಯಿಂದ ಹೊರ ಬನ್ನಿ.