ಮೀನು ಕೃಷಿಯನ್ನು (fish farming) ಮಡ್ ಪಾಂಟ್ (Mud pont) ಅಂದರೆ ಮಣ್ಣಿನ ತೊಟ್ಟಿಗಳಲ್ಲೂ ಕೂಡ ಮಾಡುತ್ತಾರೆ. ಕೆಲವರು ನೀರಿನ ಹೊಂಡಗಳಿಗೆ ಟಾರ್ಪಲ್ (tarpaulin) ಹಾಕಿ ಕೂಡ ಮಾಡುತ್ತಾರೆ. ಈ ಎರಡರಲ್ಲಿ ಯಾವುದು ಸೂಕ್ತ ಮತ್ತು ಅನುಕೂಲಕರ ಎನ್ನುವುದು ಹಲವರ ಗೊಂದಲ.
ಇದರ ಬಗ್ಗೆ ಹೇಳುವುದಾದರೆ ಮೀನು ಕೃಷಿ ಮಾಡುವಾಗ ಆಗುವ ಪ್ರಮುಖ ಸಮಸ್ಯೆ ಏನೆಂದರೆ, ಮೀನುಗಳು ತಿಂದ ಆಹಾರ ನಂತರ ಸ್ಲಡ್ಜ್ ಗಳಾಗಿ ನೀರಿನ ತಳ ಭಾಗದಲ್ಲಿ ಶೇಖರಣೆ ಆಗುತ್ತದೆ ನಂತರ ಇದನ್ನು ಕ್ಲೀನ್ ಮಾಡುವಾಗ ಬಹಳ ಕಷ್ಟ ಆಗುತ್ತದೆ. ಸ್ಲಡ್ಜ್ ಮೋಟಾರ್ ವೈಪರ್ ಬಳಸಿ ಆ ಗಲೀಜು ಕ್ಲೀನ್ ಮಾಡಬೇಕು.
ಬ್ರೋ ಬಯೋಟೆಕ್, ಜಿಯೋಲಿಟ್ ಅಪ್ಲಿಕೇಶನ್ ಕೊಡಬೇಕು, ವಾಟರ್ ಸ್ಯಾನಿಟೈಸಿಂಗ್ ಮಾಡಬೇಕು ಇಷ್ಟೆಲ್ಲ ಮಾಡಯೂಿ ಡೀ ಕಾಂಪೋಸ್ ಕೆಲವೊಮ್ಮೆ ಆಗುತ್ತದೆ, ಕೆಲವೊಮ್ಮೆ ಆಗುವುದಿಲ್ಲ. ಆದರೆ ಟಾರ್ಪಲ್ ಪಾಯಿಂಟ್ ಅಳವಡಿಸಿಕೊಳ್ಳುವುದರಿಂದ ಆಗುವ ಒಂದು ಪ್ಲಸ್ ಪಾಯಿಂಟ್ ಏನೆಂದರೆ ಇದರಲ್ಲಿ ಸ್ಲಡ್ಜ್ ಪೈಪ್ ಸಿಸ್ಟಮ್ ನೀಡಲಾಗಿರುತ್ತದೆ.
ಈ ಸುದ್ದಿ ಓದಿ:- 2024ರಲ್ಲಿ 1000sq.ft ಮನೆ ಕಟ್ಟುವುದಾದರೆ ಎಷ್ಟು ಖರ್ಚು ಆಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಸ್ಲಡ್ಜ್ ಪೈಪ್ ಸಿಸ್ಟಮ್ ಇಲ್ಲದೆ ಇದ್ದರೂ ಸ್ಲಡ್ಜ್ ಮೋಟಾರ್ ಬಳಸಿ ಕೂಡ ಕ್ಲೀನ್ ಮಾಡಬಹುದು. 100% ವೈಪ್ ಆಗುತ್ತದೆ ಎನ್ನುವ ಸಮಾಧಾನ. ಹಾಗಾಗಿ ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವವರು ಅದರಲ್ಲೂ ಮುರ್ರಾಲ್ ತಳಿ (Murrel Breed) ಏನಾದರೂ ನೀವು ಕೃಷಿ ಮಾಡುವುದಾದರೆ ಟಾರ್ಪಲ್ ಬಳಸಿ ಮಾಡುವುದೇ ಉತ್ತಮ. ಎನ್ನುವುದೇ ತಜ್ಞರ ಸಲಹೆ.
ಮೀನುಗಾರಿಕೆ ಬಗ್ಗೆ ಇನ್ನು ಡಿಟೇಲಾಗಿ ಹೇಳುವುದಾದರೆ ನೀವು ಯಾವ ಸ್ಟೇಜ್ ನಲ್ಲಿ ಸೀಡ್ ತೆಗೆದುಕೊಳ್ಳಬೇಕು ಎನ್ನುವುದರಿಂದ ಹಿಡಿದು ಮಾರ್ಕೆಟಿಂಗ್ ಮಾಡಿ ಕಳಿಸುವವರೆಗೂ ಕೂಡ ಡೀಟೇಲ್ ಗೊತ್ತಿರಬೇಕು ಹತ್ತಿರದಲ್ಲಿರುವ ಮೀನುಗಾರಿಕೆ ಇಲಾಖೆ ಭೇಟಿ ನೀಡಿದರೆ ಅಥವಾ ಹತ್ತಿರದಲ್ಲಿರುವ ಯಾವುದೇ ಫಾರ್ಮ್ ಗಳಿಗೆ ಭೇಟಿ ನೀಡಿದರೆ ಲೈವ್ ಆಗಿ ಮಾಹಿತಿ ಸಿಗುತ್ತದೆ.
ಮುರ್ರಾಲ್ ಕೃಷಿಗೆ ಸೀಡ್ ಬಳಸುವುದಾದರೆ ನಿಮಗೆ 2 ಇಂಚೆಸ್ ಇಂದ ಕೂಡ ನಿಮಗೆ ಕೃಷಿ ಮಾಡಲು ಸೀಡ್ ಸಿಗುತ್ತದೆ. ಆದರೆ ಹೆಚ್ಚಿನ ಜನರು 4 ಇಂಚಿನ ಸೀಡ್ ಖರೀದಿಸುತ್ತಾರೆ. ಯಾಕೆಂದರೆ 2 ಇಂಚಿನ ಸೀಡ್ ಖರೀದಿಸಿದರೆ ಸರ್ವೈವಲ್ ಕೆಪ್ಯಾಸಿಟಿ ಕಡಿಮೆ ಇರುತ್ತದೆ.
ಈ ಸುದ್ದಿ ಓದಿ:- ಮೋಸದಿಂದ ಹಕ್ಕು ಬಿಡುಗಡೆ ಪತ್ರ ಬರೆಸಿಕೊಂಡರೆ ಪರಿಹಾರ ಏನು ನೋಡಿ
ಎಲ್ಲರಿಗೂ ಸರಿಯಾಗಿ ನಿಭಾಯಿಸಲು ಬರುವುದಿಲ್ಲ ಮತ್ತು ಅದು ಬೆಳೆಯುವುದಕ್ಕೆ ಒಂದು ವರ್ಷ ಕಾಲ ಟೈಮ್ ತೆಗೆದುಕೊಳ್ಳುತ್ತದೆ ಅದರ ಫೀಡಿಂಗ್ ಖರ್ಚು ಕೂಡ ಹೆಚ್ಚಾಗುತ್ತದೆ ಹಾಗಾಗಿ ರೇಟ್ ಕಡಿಮೆ ಇದ್ದರೂ 2 ಇಂಚಿನ ಬದಲು 3 ಇಂಚಿನ ಅಥವಾ 4 ಇಂಚಿನ ಸೀಡ್ ಗಳನ್ನು ಖರೀದಿಸಲು ರೆಫರ್ ಮಾಡಲಾಗುತ್ತದೆ.
3 ಇಂಚಿನ ಮರಿ ತೆಗೆದುಕೊಳ್ಳುವುದಾದರೆ 9 ರುಪಾಯಿ ರೇಟಿಗೆ ಸಿಗುತ್ತದೆ ಮತ್ತು ಇದಕ್ಕೆ 1 KG ಗೆ 300 ಗ್ರಾಂ ಫೀಡ್ ಇನ್ ಟೇಕ್ ಆಗುತ್ತದೆ. 9 ರಿಂದ 10 ತಿಂಗಳಿನಲ್ಲಿ ಇದು ಬೆಳೆಯುತ್ತದೆ ಇನ್ನು ನಾಲ್ಕು ಇಂಚಿನ ಸೀಡ್ ತೆಗೆದುಕೊಳ್ಳುವುದಾದರೆ 7-8 ತಿಂಗಳಿಗೆ ಇದು ಬೆಳೆಯುತ್ತದೆ.
ಇನ್ನೂ ಬೇಗನೆ ಬೆಳೆಯಬೇಕು ಎನ್ನುವುದಾದರೆ 5-6 ಇಂಚಿನ ಸೀಡ್ ಖರೀದಿಸಬಹುದು. ಈ ಸೀಡ್ ಗಾತ್ರ ಹೆಚ್ಚಾಗುತ್ತಾ ಹೋದಂತೆ ಅದರ ಬೆಲೆಗಳು ಕೂಡ ಹೆಚ್ಚಾಗುತ್ತದೆ. ಈ ವಿಚಾರದ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.