ರೈತ ಭಾಂದವರಿಗೆ ಅವರ ಉನ್ನತೀಕರಣಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ರೈತ ಜನತೆಯ ಬೆಳೆ ಸಾಲ ಮನ್ನಾ ಯೋಜನೆಯಡಿ ಅಲ್ಲಿ ಸಾಲ ಪಡೆದಿದ್ದರೆ ಅದರ ಸ್ಟೇಟಸ್ ಅನ್ನು ಆಧಾರ್ ಕಾರ್ಡ್ ನಂಬರ್ ಬಳಸಿ ಹೇಗೆ ಚೆಕ್ ಮಾಡುವುದು ಎಂಬುದನ್ನು ಇಲ್ಲಿ ನೋಡೋಣ.
ರಾಜ್ಯ ಸರ್ಕಾರವು ಕೃಷಿ ಚಟುವಟಿಕೆಗಳನ್ನು ನಡೆಸಲು ಅವರಿಗೆ ಆರ್ಥಿಕ ಸಹಾಯಧನ ಮಾಡುವ ನಿಟ್ಟಿನಲ್ಲಿ ಇದಕ್ಕೆ ಪೂರಕವಾಗಿ ರೈತರ ಜಮೀನಿನ ಆಧಾರದ ಮೇಲೆ ಅಲ್ಪ ಅವಧಿ ಸಾಲ, ದೀರ್ಘ ಅವಧಿ ಸಾಲ ಮತ್ತು ಮಧ್ಯಮ ಅವಧಿ ಸಾಲಗಳನ್ನು ಸಾಲದ ರೂಪದಲ್ಲಿ ನೀಡುವ ಮೂಲಕ ಆರ್ಥಿಕವಾಗಿ ಸಹಕರಿಸುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು 2022 ರಲ್ಲಿ ರೈತರ ಬೆಳೆ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದು ಇದರ ಯೋಜನೆ ಅಡಿಯಲ್ಲಿ ಹಲವಾರು ರೈತ ಬಾಂಧವರಿಗೆ ಸಾಲ ನೀಡಿರುತ್ತದೆ.
ರೈತರು ಈ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. ಆದರೆ ಪ್ರಕೃತಿಯ ವಿಕೋಪದಂತಹ ನೈಸರ್ಗಿಕ ಕಾರಣದಿಂದಾಗಿ ನಿರೀಕ್ಷಿತ ಬೆಳೆ ಬಾರದೆ ರೈತರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ಸಾಲ ಭಾದೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭಗಳು ಬಂದಿವೆ. ಇದನ್ನೆಲ್ಲಾ ಗಮನದಲ್ಲಿ ಇರಿಸಿಕೊಂಡು ರಾಜ್ಯ ಸರ್ಕಾರವು ರೈತರ ಬೆಳೆ ಸಾಲ ಮನ್ನ ಯೋಜನೆಯನ್ನು ಜಾರಿಗೆ ತಂದಿತ್ತು.
ಈ ಯೋಜನೆಯನ್ನು ಹಲವಾರು ರೈತರು ಬಳಸಿಕೊಂಡಿದ್ದಾರೆ ಆದರೆ ಕೆಲವು ರೈತರಿಗೆ ಈ ಯೊಜನೆಯ ಸಂಪೂರ್ಣ ಮಾಹಿತಿ ಇಲ್ಲದೆ ಅಥವಾ ಕೆಲವು ತಾಂತ್ರಿಕ ದೋಷಗಳಿಂದಾಗಿ ಸಾಲ ಪಡೆಯಲು ಸಾಧ್ಯವಾಗಿರುವುದಿಲ್ಲ. ಹೀಗೆ ರೈತ ಸಾಲ ಮನ್ನಾ ಯೋಜನೆ ಅಡಿಯಲ್ಲಿ ಸಾಲ ಪಡೆದಿರುವ ರೈತರ ಸಾಲ ಮನ್ನಾದ ಸ್ಥಿತಿಯನ್ನು ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ನಂಬರ್ ಬಳಸಿ ತಿಳಿದುಕೊಳ್ಳಬಹುದಾಗಿದೆ. ಅದಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರದ ಬೆಳೆ ಸಾಲ ಮನ್ನಾ ಯೋಜನೆಯ ಅಧಿಕೃತ ಜಾಲತಾಣವನ್ನು ಓಪನ್ ಮಾಡಬೇಕು.
ಈ ಜಾಲತಾಣವನ್ನು ನಾವು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿ ನೋಡಬಹುದು. ಕನ್ನಡ ಭಾಷೆಯಲ್ಲಿ ಓಡಲು ಬೇಕಾದರೆ ಜಾಲತಾಣದ ಬಲ ಭಾಗದಲ್ಲಿ ಕನ್ನಡ ಭಾಷೆ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಅಧಿಕೃತ ಜಾಲತಾಣವು ಕನ್ನಡದಲ್ಲಿ ಕಾಣಿಸುತ್ತದೆ. ನಂತರ ಅಲ್ಲಿ ನಾಗರೀಕ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮುಂದೆ ನಾಗರಿಕ ಸೇವೆಗಳು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರ ಕೆಳಗೆ ಇರುವ ಸಿ ಎಲ್ ಡಬ್ಲ್ಯೂ ಎಸ್ ನಾಗರೀಕ ವರದಿ ಮೇಲೆ ಕ್ಲಿಕ್ ಮಾಡಿದಾಗ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಆಪ್ಷನ್ ಕಾಣಿಸಿಕೊಳ್ಳುತ್ತವೆ.
ಅದರಲ್ಲಿ ನಿಮಗೆ ಅಗತ್ಯವಾದ ಆಪ್ಷನ್ ಆಯ್ಕೆ ಮಾಡಿ ಅದರ ನಂಬರ್ ಅನ್ನು ದಾಖಲಿಸಿ, ನಂತರ fetch ರಿಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ಪಡೆದಿರುವ ಸಾಲಕ್ಕೆ ಸಂಬಂಧಿಸಿದಂತೆ ನಿಮ್ಮ ಹೆಸರು, ಸಾಲ ಪಡೆದ ಬ್ಯಾಂಕ್ ಹೆಸರು, ಪಡೆದ ಸಾಲದ ಮೊತ್ತ, ಸಾಲ ಮನ್ನಾ ಆದ ಮೊತ್ತದ ವಿವರ ದೊರಕುತ್ತದೆ. ಹೀಗೆ ರೈತರ ಬೆಳೆ ಸಾಲ ಮನ್ನಾದ ಸ್ಥಿತಿಯ ಮಾಹಿತಿಯನ್ನು ಒಂದೇ ನಿಮಿಷದಲ್ಲಿ ಕುಳಿತಲ್ಲಿಯೇ ತಿಳಿದುಕೊಳ್ಳಬಹುದಾಗಿದೆ.