ಸ್ವಂತ ಭೂಮಿ ಹೊಂದಿರುವವರಿಗೆ ಸರ್ಕಾರದಿಂದ ಮಹತ್ವದ ಘೋಷಣೆ ಈಗಾಗಲೇ ಆಧಾರ್ ಕಾರ್ಡ್ ಕುರಿತು ಸರ್ಕಾರದಿಂದ ನಾನಾ ರೀತಿಯ ನಿಯಮಗಳು ಜಾರಿ ಆಗಿದೆ. ಆಧಾರ್ ಕಾರ್ಡ್ ರೀತಿಯ ಪ್ರಮುಖ ದಾಖಲೆಗಳಾಗಿರುವ ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ವೋಟರ್ ಐಡಿ ಮುಂತಾದ ದಾಖಲೆಗಳಿಗೆಲ್ಲಾ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎನ್ನುವುದನ್ನು ಕೂಡ ಘೋಷಣೆ ಮಾಡಿ ಅದಕ್ಕೆ ಗಡುವನ್ನು ಕೂಡ ನೀಡಿದೆ.
ಈಗ ಇನ್ನೊಂದು ಪ್ರಮುಖ ದಾಖಲೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದು ಸ್ವಂತ ಭೂಮಿ ಹೊಂದಿರುವವರು ಅಗತ್ಯವಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿಯಾಗಿದೆ. ಸ್ವಂತ ಭೂಮಿ ಹೊಂದಿರುವವರು ತಮ್ಮ ಭೂಮಿ ದಾಖಲೆ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯ ಮಾಡಿ ಅದಕ್ಕೆ ನಿಯಮಗಳನ್ನು ಕೂಡ ತಂದಿದೆ. ಅದರಿಂದ ಏನು ಲಾಭ ಮತ್ತು ಯಾರಿಗೆ ಉಪಯೋಗ ಎನ್ನುವ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಇದು ಕೇಂದ್ರ ಸರ್ಕಾರದ ಯೋಜನೆ ಆಗಿದ್ದು, ಒಂದು ದೇಶ ಒಂದು ನೋಂದಣಿ ಯೋಜನೆ ಅಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲಾಗುವುದು. ಹಾಗಾಗಿ ಇದಕ್ಕೆ ಭೂ ಮಾಲೀಕರ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಅಗತ್ಯ ಆಗಿದೆ. ಈ ಯೋಜನೆ ಅಡಿ ಭೂ ಆಧಾರಿತ ದಾಖಲೆಗಳನ್ನು ಡಿಜಿಟಲ್ ಆಗಿ ಮಾರ್ಪಾಡಿಸುವುದಕ್ಕೆ ಐಪಿ ಆಧರಿತ ತಂತ್ರಜ್ಞಾನವನ್ನು ಬಳಸಲಾಗುತ್ತದೆ.
ಈ ರೀತಿ ಭೂ ದಾಖಲೆಗಳು ಡಿಜಿಟಲ್ ಆಗುವದರಿಂದ ಹಲವಾರು ರೀತಿಯ ಅನುಕೂಲಗಳು ಆಗಲಿದೆ. ಇದನ್ನು 3C ಸೂತ್ರದ ಅಡಿಯಲ್ಲಿ ವಿತರಣೆ ಮಾಡುವುದಾಗಿ ಸರ್ಕಾರ ಹೇಳಿದೆ. 3C ಸೂತ್ರದ ಅಡಿಯಲ್ಲಿ ವಿತರಣೆ ಮಾಡುವುದರಿಂದ ಮೂರು ರೀತಿಯ ಅನುಕೂಲ ಆಗಲಿದೆ. ಸೆಂಟ್ರಲ್ ಆಫ್ ರೆಕಾರ್ಡ್, ಕಲೆಕ್ಷನ್ ಆಫ್ ರೆಕಾರ್ಡ್ ಮತ್ತು ನಾಗರಿಕರು ಎಲ್ಲರಿಗೂ ಸಹ ಇದರಿಂದ ಹೆಚ್ಚಿನ ಮಟ್ಟದ ಉಪಯೋಗ ಆಗಲಿದೆ.
ಭೂಮಿ ನೋಂದಣಿ ಅಡಿಯಲ್ಲಿ ಜಮೀನಿಗೂ ಸಹ ಆಧಾರ್ ಕಾರ್ಡ್ ರೀತಿ 14 ಅಂಕೆಗಳುಳ್ಳ ULPIN ಸಂಖ್ಯೆಯನ್ನು ನೀಡಲಾಗುವುದು. ಇದಕ್ಕೆ ಮಾಲಿಕನ ಆಧಾರ್ ಲಿಂಕ್ ಆದರೆ ಒಂದೇ ಲಿಂಕ್ ಅಲ್ಲಿ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಗಳು ಕೂಡ ಸಿಗಲಿದೆ. ಮನೆಯಲ್ಲೇ ಕುಳಿತು ಒಂದೇ ಕ್ಲಿಕ್ ಅಲ್ಲಿ ಇದೆಲ್ಲವನ್ನು ಪರಿಶೀಲಿಸಲೂಬಹುದು. ULPIN ಸಂಖ್ಯೆಯೊಂದಿಗೆ ಭಾರತ ದೇಶದ ಒಳಗೆ ಎಲ್ಲಿ ಬೇಕಾದರೂ ಭೂಮಿ ಖರೀದಿಸಬಹುದು ಮತ್ತು ಮಾರಲೂಬಹುದು.
ಜಮೀನು ಮಾರಾಟ ಮಾಡುವವರ ಮತ್ತು ಖರೀದಿ ಮಾಡುವವರ ಸಂಪೂರ್ಣ ವಿವರಣವನ್ನು ಸಹ ತಿಳಿದುಕೊಳ್ಳಬಹುದು. ಕೇಂದ್ರ ಸರ್ಕಾರ ಕಡೆಯಿಂದ ಕೃಷಿ ಭೂಮಿಗೆ ಸಂಬಂಧಿತವಾಗಿ ಆಗಾಗ ಮಾಡುವ ಹೊಸ ಹೊಸ ಯೋಜನೆಗಳ ಫಲಾನುಭವಿಗಳ ಆಗಲು ಕೂಡ ULPIN ಸಂಖ್ಯೆ ಅನುಕೂಲಕ್ಕೆ ಬರಲಿದೆ. ಭೂಮಿಯ ದಾಖಲೆಗಳನ್ನು ಡಿಜಿಟಲ್ ಮಾಡುವುದರಿಂದ ಅಗತ್ಯ ಬಿದ್ದಾಗ ಜಮೀನಿನ ಯಾವುದೇ ವಿವರ ಬೇಕಾದಾಗ.
ಹತ್ತಿರದಲ್ಲಿರುವ ಸೇವಾ ಸಿಂಧು ಕೇಂದ್ರಕ್ಕೆ ಭೇಟಿಕೊಟ್ಟು ಭೂಮಿಯ ಎಲ್ಲ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಇಂತಹ ಒಂದು ಉತ್ತಮವಾದ ದೂರಾಲೋಚನೆಯಿಂದ ಸರಕಾರ ಈ ರೀತಿ ನಿಯಮ ಜಾರಿಗೆ ತಂದಿದೆ. ಈ ಅಗತ್ಯ ಮಾಹಿತಿಯನ್ನು ಹೆಚ್ಚಿನ ಜನಕ್ಕೆ ತಲುಪಿಸಬೇಕಾಗಿದೆ. ಆದ್ದರಿಂದ ಸ್ವಂತ ಭೂಮಿ ಹೊಂದಿರುವ ರೈತರು ಮತ್ತು ಇನ್ನಿತರ ಎಲ್ಲರ ಜೊತೆ ಈ ವಿಷಯ ಶೇರ್ ಮಾಡುವ ಮೂಲಕ ಅನುಕೂಲ ಮಾಡಿ ಕೊಡಿ.