ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಅರ್ಹ ರೈತರಿಗೆ ಪಶು ಸಂಗೋಪನೆ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲು ಅರ್ಜಿ ಆಹ್ವಾನ, ರೈತರು ತಪ್ಪದೆ ಈ ಪ್ರಯೋಜನ ಪಡೆದುಕೊಳ್ಳಿ.!
ರೈತರಿಗೆ ಕೃಷಿ ಚಟುವಟಿಕೆ ಪಶುಸಂಗೋಪನೆ, ಹೈನುಗಾರಿಕೆ ಇವುಗಳು ಕೂಡ ಕೃಷಿ ಬೆಂಬಲಿತ ಚಟುವಟಿಕೆಗಳಾಗಿದ್ದು ರೈತನ ಆರ್ಥಿಕತೆಗೆ ನೆರವಾಗುತ್ತದೆ. ಹಾಗಾಗಿ ಕೃಷಿ ಚಟುವಟಿಕೆಯನ್ನು ಸದಾ ಪ್ರೋತ್ಸಾಹಿಸುವ ಸರ್ಕಾರವು ರೈತನಿಗೆ ಅನುಕೂಲವಾಗಲಿ ಎಂದು ಕೃಷಿ ಆಧಾರಿತ ಇತರೆ ಚಟುವಟಿಕೆಗಳಿಗೂ ಕೂಡ ಯೋಜನೆಗಳನ್ನು ರೂಪಿಸಿ ನೆರವು ನೀಡುತ್ತಿದೆ.
2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ವಯ (Kisan Credit Card) ರಾಜ್ಯದ ರೈತರಿಗೆ ಸಾಲ ಸೌಲಭ್ಯವನ್ನು (loan for farmers) ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರವು (government) ಮುಂದಾಗಿದೆ. ಪಶು ಸಂಗೋಪನಾ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ನಿರ್ವಹರ್ಣಾ ವೆಚ್ಚ ಭರಿಸಲುಭಾರತ ಸರ್ಕಾರದ, ಹಣಕಾಸು ಸೇವೆಗಳ ಇಲಾಖೆಯು ರಾಷ್ಟ್ರೀಕೃತ ಬ್ಯಾಂಕ್/ಸಹಕಾರ ಸಂಸ್ಥೆಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಮುಂದಾಗಿದೆ.
ಸೌಲಭ್ಯಗಳ ವಿವರ ಹೀಗಿದೆ:-
● ಹೈನುಗಾರಿಕೆ:-
1. ಮಿಶ್ರತಳಿ ದನಗಳ ನಿರ್ವಹಣೆಗೆ (1+1) ಪ್ರತಿ ಹಸುವಿಗೆ ಗರಿಷ್ಠ 18,000 ರೂಪಾಯಿಗಳಂತೆ, ಎರಡು ಹಸುಗಳಿಗೆ 36,000 ರೂಪಾಯಿ ಸಾಲ ಸೌಲಭ್ಯ.
2. ಸುಧಾರಿತ ಎಮ್ಮೆಗಳ ನಿರ್ವಹಣೆಗೆ (1+1) ಪ್ರತಿ ಎಮ್ಮೆಗೆ ಗರಿಷ್ಠ 21,000 ರೂಪಾಯಿಗಳಂತೆ, ಎರಡು ಎಮ್ಮೆಗಳಿಗೆ 42,000 ರೂಪಾಯಿ ಸಾಲಸೌಲಭ್ಯ.
● ಕುರಿ ಸಾಕಾಣಿಕೆ:-
1. ಕುರಿಗಳ ನಿರ್ವಹಣೆಗಾಗಿ (10+1) 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವಂತಹ ಕುರಿಗಳಿಗೆ 29,950 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 14,700 ರೂ. ಸಾಲ ಸೌಲಭ್ಯ.
2. ಕುರಿಗಳ ನಿರ್ವಹಣೆಗಾಗಿ (20+1) 8 ತಿಂಗಳ ಸಾಕಾಣಿಕೆ ಅವಧಿ ಕಟ್ಟಿ ಮೇಯಿಸುವಂತಹ ಕುರಿಗಳಿಗೆ 57,200 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ 28,200 ರೂ. ಸಾಲಸೌಲಭ್ಯ.
3. ಕುರಿಮರಿಗಳನ್ನು ಕೊಬ್ಬಿಸುವುದಕ್ಕೆ (10+1) 13,120 ರೂ. ಸಾಲಸೌಲಭ್ಯ.
4. ಕುರಿಮರಿಗಳನ್ನು ಕೊಬ್ಬಿಸುವುದಕ್ಕೆ (20) 26,200 ರೂ. ಸಾಲಸೌಲಭ್ಯ.
● ಮೇಕೆ ಸಾಕಾಣಿಕೆ:-
1. ಮೇಕೆಗಳ ನಿರ್ವಹಣೆಗಾಗಿ (10+1) 8 ತಿಂಗಳ ಸಾಕಾಣಿಕೆ ಅವಧಿಗೆ
ಕಟ್ಟಿ ಮೇಯಿಸುವಂತಹ ಮೇಕೆಗಳಿಗೆ 29,250 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 14,700 ರೂ. ಸಾಲಸೌಲಭ್ಯ.
2. ಮೇಕೆಗಳ ನಿರ್ವಹಣೆಗಾಗಿ (20+1) 8 ತಿಂಗಳ ಸಾಕಾಣಿಕೆ ಅವಧಿಗೆ ಕಟ್ಟಿ ಮೇಯಿಸುವಂತಹ ಮೇಕೆಗಳಿಗೆ 57,200 ರೂ. ಮತ್ತು ಬಯಲಿನಲ್ಲಿ ಮೇಯಿಸುವ ಮೇಕೆಗಳಿಗೆ 28,200ರೂ. ಸಾಲಸೌಲಭ್ಯ.
● ಹಂದಿ ನಿರ್ವಹಣೆ:-
10 ಕೊಬ್ಬಿಸುವ ಹಂದಿಗಳ ಸಾಕಾಣಿಕೆ ಖರ್ಚಿಗಾಗಿ 60,000 ರೂ. ಸಾಲಸೌಲಭ್ಯ
● ಕೋಳಿ ಸಾಕಾಣಿಕೆಗೆ:-
1. ಮಾಂಸದ ಕೋಳಿ ಸಾಕಾಣಿಕೆ 1 ಕೋಳಿಗೆ 80 ರೂ. ನಂತೆ
1000 ಕೋಳಿಗಳಿಗೆ ಗರಿಷ್ಠ 80,000 ರೂ. ಸಾಲಸೌಲಭ್ಯ.
2. ಮೊಟ್ಟೆ ಕೋಳಿ ಸಾಕಾಣಿಕೆ 1 ಕೋಳಿಗೆ 180 ರೂ. ನಂತೆ
1000 ಕೋಳಿಗಳಿಗೆ ಗರಿಷ್ಠ 1,80,000 ರೂ. ಸಾಲಸೌಲಭ್ಯ.
● ಮೊಲ ಸಾಕಾಣಿಕೆಗೆ:-
ಮೊಲ ಸಾಕಾಣಿಕೆಗೆ (50+1) ಗರಿಷ್ಠ 50,000 ರೂ. ವರೆಗೆ ಸಾಲಸೌಲಭ್ಯ.
ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಬಡ್ಡಿ ರಿಯಾಯಿತಿ ಸೌಲಭ್ಯವು ಗರಿಷ್ಠ 3 ಲಕ್ಷ ರೂಪಾಯಿವರೆಗೆ ದೊರೆಯಲಿದೆ. ಪ್ರತಿ ರೈತನಿಗೆ 1.60 ಲಕ್ಷ ರೂಪಾಯಿವರೆಗೆ ಯಾವುದೇ ಭದ್ರತೆಯಿಲ್ಲದೆ ಸಾಲ ಪಡೆಯುವ ಅವಕಾಶವಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆಯುವ ಸಾಲಕ್ಕೆ ಸರ್ಕಾರವು 2%ರಷ್ಟು ಬಡ್ಡಿ ಸಹಾಯಧನ ನೀಡಲಿದೆ.
ಈ ಸಾಲವನ್ನು ಸಕಾಲದಲ್ಲಿ ತೀರಿಸಿದರೆ ಹೆಚ್ಚುವರಿಯಾಗಿ ವಾರ್ಷಿಕ 3%ರಷ್ಟು ಬಡ್ಡಿ ಸಹಾಯಧನ ಸೌಲಭ್ಯವನ್ನು ಸಹ ಪಡೆಯಬಹುದಾಗಿದೆ. ರೈತರ ಅವರು ಕಾರ್ಯ ವ್ಯಾಪ್ತಿಯ ಬ್ಯಾಂಕ್ ಗಳಿಂದ ಪಡೆಯುವ ಸಾಲದ ಬಡ್ಡಿದರಕ್ಕೆ ಒಟ್ಟಾರೆ 5% ಬಡ್ಡಿದರವನ್ನು ಭಾರತ ಸರ್ಕಾರದಿಂದ ಪಡೆಯಬಹುದಾಗಿರುತ್ತದೆ.
● ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ:-
8277100200