ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನವಾದ ಹಕ್ಕಿದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ, ಅಳಿಯನಿಗೆ ಮಾವನ ಮನೆಯ ಆಸ್ತಿಯ ಮೇಲೆ ಹಕ್ಕಿದೆಯೇ ಎನ್ನುವ ಪ್ರಶ್ನೆಯೊಂದು ಮೂಡಬಹುದು. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಈ ಹಿಂದೆ ಕೇರಳ ಹೈ ಕೋರ್ಟ್ ತೀರ್ಪು ನೀಡಿತ್ತು. ಆ ಕುರಿತಾದ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಮಾವನ ಆಸ್ತಿಯ ಮೇಲೆ ಹಕ್ಕಿನ ಕುರಿತು ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗಿದ್ದ ಅಳಿಯ:
ಕೇರಳದಲ್ಲಿ ಅಳಿಯನೊಬ್ಬ ತನ್ನ ಮಾವನ ಮನೆಯ ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದ. ಆದರೆ, ಮಾವನ ಮನೆಯ ಆಸ್ತಿಯ ಮೇಲೆ ಹಕ್ಕನ್ನು ಪಯ್ಯನ್ನೂರು ಉಪ ನ್ಯಾಯಾಲಯ ನಿರಾಕರಿಸಿತ್ತು.
ಹೌದು, ಈ ಹಿಂದೆ ಕೇರಳದಲ್ಲಿ ಮಾವನ ಆಸ್ತಿಗಾಗಿ ಅಳಿಯ ತಲಿಪರಂಬದ ಡೇವಿಸ್ ರಾಫೆಲ್ ನು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದನು. ಆದರೆ, ಮಾವನ ಮನೆಯ ಆಸ್ತಿಯ ಮೇಲೆ ಹಕ್ಕನ್ನು ಪಯ್ಯನ್ನೂರು ಉಪ ನ್ಯಾಯಾಲಯವು ನಿರಾಕಣೆ ಮಾಡಿತ್ತು. ಕೊನೆಗೆ ಈ ಆದೇಶವನ್ನು ಪ್ರಶ್ನಿಸುವ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದನು. ಈತನ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶ ಎನ್ ಅನಿಲ್ ಕುಮಾರ್ ವಜಾಗೊಳಿಸಿದ್ದರು. ಆದರೆ, ಈ ಡೇವಿಸ್ ನ ಮಾವ ಥಾಮಸ್ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ತಮ್ಮ ಆಸ್ತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಹಾಗೂ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಡೇವಿಸ್ ಪ್ರಯತ್ನಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಮಾವ ಥಾಮಸ್ ತಮ್ಮ ಆಸ್ತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಹಾಗೂ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ಡೇವಿಸ್ ಪ್ರಯತ್ನಕ್ಕೆ ತಡೆ ನೀಡಬೇಕು ಎಂದು ಕೋರಿದ್ದರು. ಸೇಂಟ್ ಪಾಲ್ಸ್ ಚರ್ಚ್ ಪರವಾಗಿ ಫ್ರಾಸ್ ಜೇಮ್ಸ್ ನಸ್ರತ್ ಅವರು ಉಡುಗೊರೆ ಪತ್ರದ ಮೂಲಕ ಆಸ್ತಿ ನೀಡಿದ್ದಾರೆ. ಇಲ್ಲಿ ನಾನು ಸ್ವಂತ ಹಣದಿಂದ ಮನೆ ನಿರ್ಮಾಣ ಮಾಡಿದ್ದೇನೆ. ಈ ಆಸ್ತಿಯ ಮೇಲೆ ನನ್ನ ಅಳಿಯನಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು ವಾದಿಸಿದ್ದರು.
ಈ ಆಸ್ತಿಯನ್ನು ಕುಟುಂಬಕ್ಕೆ ಚರ್ಚ್ ಉಡುಗೊರೆಯಾಗಿ ನೀಡಿರುವುದರಿಂದ ಆಸ್ತಿಯ ಶೀರ್ಷಿಕೆಯೇ ವಿವಾದಾತ್ಮಕವಾಗಿದೆ. ಹೆಂಡ್ರಿಯ ಏಕೈಕ ಪುತ್ರಿಯನ್ನು ನಾನು ವರಿಸಿದ್ದೇನೆ. ಮದುವೆಯ ನಂತರ ನಾನು ಇದೇ ಕುಟುಂಬಕ್ಕೆ ಸೇರಿದ್ದೇನೆ. ಆದ್ದರಿಂದ ಈ ಮನೆಯಲ್ಲಿ ವಾಸಿಸುವ ಹಕ್ಕನ್ನು ನಾನು ಹೊಂದಿದ್ದೇನೆ ಎಂದು ಅಳಿಯ ಡೇವಿಸ್ ವಾದಿಸಿದ್ದರು. ಈ ವಾದ ವಿವಾದ ಆಲಿಸಿದ್ದ ವಿಚಾರಣಾ ನ್ಯಾಯಾಲಯ ಅಳಿಯನಿಗೆ ಆಸ್ತಿಯ ಮೇಲೆ ಹಕ್ಕಿಲ್ಲ ಎಂದು ಹೇಳಿತ್ತು.
ಎರಡೂ ಕಡೆಯ ವಾದ ಆಲಿಸಿದ ಹೈಕೋರ್ಟ್, ಅಳಿಯನನ್ನು ಮಾವನ ಮನೆಯ ಸದಸ್ಯ ಎಂದು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ವಿವಾಹದ ನಂತರ ತನ್ನನ್ನು ಕುಟುಂಬ ಸದಸ್ಯನಾಗಿ ದತ್ತು ತೆಗೆದುಕೊಳ್ಳಲಾಗಿದೆ ಎಂಬ ಅಳಿಯನ ವಾದವೇ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಛೀಮಾರಿ ಹಾಕಿದೆ. ಈ ಮೂಲಕ ಅಳಿಯನಿಗೆ ಮಾವನ ಆಸ್ತಿಯ ಮೇಲೆ ಯಾವುದೇ ಹಕ್ಕಿಲ್ಲ ಎಂದಿದೆ.
ಅಳಿಯನಿಗೆ ಹೈ ಕೋರ್ಟ್ ನೀಡಿದ ತೀರ್ಪು ಏನು?
ಅಳಿಯ ಹಾಗೂ ಮಾವ ಈ ಇಬ್ಬರ ವಾದವನ್ನು ಪರಿಶೀಲನೆ ಮಾಡಿದ ಹೈಕೋರ್ಟ್, “ಅಳಿಯನನ್ನು ಮಾವನ ಮನೆಯ ಸದಸ್ಯ ಎಂದು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ವಿವಾಹದ ನಂತರ ತನ್ನನ್ನು ಕುಟುಂಬ ಸದಸ್ಯನಾಗಿ ದತ್ತು ತೆಗೆದುಕೊಳ್ಳಲಾಗಿದೆ ಎಂಬ ಅಳಿಯನ ವಾದವೇ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಮಾವನ ಆಸ್ತಿಯಲ್ಲಿ ಅಳಿಯನಿಗೆ ಯಾವುದೇ ಹಕ್ಕಿಲ್ಲ ಎನ್ನುವ ತೀರ್ಪು ನೀಡಿತ್ತು.