ಯಾರಿಗೆಲ್ಲ JCB ಆಪರೇಟರ್ ಆಗಿ ಕೆಲಸ ಮಾಡಲು ಆಸಕ್ತಿ ಇದೆಯೋ ಅಂತಹವರಿಗೆ ಇದೊಂದು ಸುವರ್ಣ ಅವಕಾಶ. ಈ ಒಂದು ಟ್ರೈನಿಂಗ್ ನಿಮಗೆ ಉಚಿತವಾಗಿದ್ದು ಊಟ ವಸತಿ ಎಲ್ಲವೂ ಸಹ ನಿಮಗೆ ಫ್ರೀ ಆಗಿ ದೊರೆಯುತ್ತದೆ. ಸಾಕಷ್ಟು ಜನ ಯುವಕರಿಗೆ JCB ಆಪರೇಟರ್ ಆಗಿ ಕೆಲಸ ಮಾಡಬೇಕು ಎನ್ನುವಂತಹ ಆಸಕ್ತಿ ಇರುತ್ತದೆ ಆದರೆ ಅವರು ಈ ಒಂದು ಟ್ರೈನಿಂಗ್ ಪಡೆದುಕೊಳ್ಳಲು ಸಾಕಷ್ಟು ಹಣವನ್ನು ನೀಡಬೇಕಾಗುತ್ತದೆ.
ಕೆನರಾ ಬ್ಯಾಂಕ್ ಹಾಗೆಯೇ ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಇವರ ಸಂಯುಕ್ತಾಶ್ರಯದಲ್ಲಿ 30 ದಿನಗಳ ಕಾಲ JCB ಆಪರೇಟರ್ ಆಗಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ ಆಸಕ್ತಿ ಇರುವಂತಹ ಯುವಕರು ಈ ಒಂದು ಸೇವೆಯನ್ನು ಪಡೆದುಕೊಳ್ಳಬಹುದು. JCB ಆಪರೇಟರ್ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ದಾಖಲಾತಿಗಳನ್ನು ಕೇಳಲಾಗುತ್ತದೆ.
ಇಲ್ಲಿ ಉಚಿತ ತರಬೇತಿ ಪಡೆದುಕೊಳ್ಳಲು 18 ರಿಂದ 45 ವರ್ಷದ ಒಳಗೆ ವಯೋಮಿತಿ ಇರಬೇಕು ಹಾಗೆಯೇ ಅವರ ಹೆಸರು ಮತ್ತು ಅವರು ಹುಟ್ಟಿದಂತಹ ದಿನಾಂಕದ ಜೊತೆಗೆ ಅವರ ಪೂರ್ಣ ವಿಳಾಸ ಅಂದರೆ ಪೋಸ್ಟಲ್ ವಿಳಾಸವನ್ನು ನೀವು ತಿಳಿಸಬೇಕಾಗುತ್ತದೆ. ಮೊಬೈಲ್ ನಂಬರ್ ಅವರ ವಿದ್ಯಾರ್ಹತೆ ತರಬೇತಿಯ ಅವಶ್ಯಕತೆ ಮತ್ತು ಈಗ ಮಾಡುತ್ತಿರುವಂತಹ ಕೆಲಸ ಈ ಎಲ್ಲಾ ವಿವರಗಳನ್ನು ನೀವು ತಿಳಿಸಿದ ನಂತರ ಉಚಿತ JCB ಆಪರೇಟರ್ ತರಬೇತಿಯನ್ನು ಪಡೆದುಕೊಳ್ಳಬಹುದು.
ಕೆನರಾ ಬ್ಯಾಂಕ್ ಮತ್ತು ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಇವರ ವತಿಯಿಂದ ಏನು ಉಚಿತವಾಗಿ ತರಬೇತಿಯನ್ನು ನೀಡಲು ಅವಕಾಶವನ್ನು ನೀಡಿದ್ದಾರೋ ಇದಕ್ಕೆ ಅರ್ಜಿಯನ್ನು ಸಹ ಸಲ್ಲಿಸಬೇಕಾಗುತ್ತದೆ ಈ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 25ರ ಒಳಗೆ ದಾಂಡೇಲಿಯ ಹಸನಮಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ವಿಸ್ತರಣಾ ಕೇಂದ್ರ ಇಲ್ಲಿಗೆ ಸಲ್ಲಿಸಬಹುದಾಗಿದೆ.
ನೀವು ಇಲ್ಲಿ ಉಚಿತವಾಗಿ JCB ತರಬೇತಿಯನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಉಚಿತ ಊಟ ಉಪಚಾರ ಹಾಗೆ ನೀವು ಅಲ್ಲಿ ಉಳಿದುಕೊಳ್ಳಲು ವಸತಿಯು ಸಹ ಅಂದರೆ ಮನೆಯು ಸಹ ನಿಮಗೆ ದೊರೆಯುತ್ತದೆ. ಇದೊಂದು ಸುವರ್ಣ ಅವಕಾಶ ಯಾರು ಸಹ ಈ ರೀತಿಯಾದಂತಹ ಉಚಿತ ತರಬೇತಿ ಮತ್ತು ಊಟ ವಸತಿಯನ್ನು ನೀಡುವುದಿಲ್ಲ ಆದ್ದರಿಂದ ಯಾರಿಲ್ಲ JCB ತರಬೇತಿಯನ್ನು ಪಡೆದುಕೊಳ್ಳಬೇಕು ಎಂದುಕೊಳ್ಳುತ್ತೀರಾ ಅವರು ತಪ್ಪದೇ ಅರ್ಜಿಯನ್ನು ಸಲ್ಲಿಸಿ.
ನಿಮ್ಮಲ್ಲಿ ಒಂದು ಗೊಂದಲ ಸೃಷ್ಟಿಯಾಗುತ್ತದೆ ಅರ್ಜಿಯನ್ನು ಎಲ್ಲಿ ಹಾಗೂ ಯಾರಿಗೆ ಸಲ್ಲಿಸಬೇಕು ಎಂದು ನೀವು ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ನಂಬರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಇವರ ಮೊಬೈಲ್ ನಂಬರ್ 9632149217 ಹಾಗೆಯೇ 9449782425 ಈ ಒಂದು ನಂಬರಿಗೆ ನೀವು ವಾಟ್ಸಪ್ ಮಾಡುವ ಮೂಲಕ ನಿಮ್ಮ ಎಲ್ಲಾ ಡೀಟೇಲ್ಸ್ ಅನ್ನು ಕೊಟ್ಟು ಅರ್ಜಿಯನ್ನು ಸಲ್ಲಿಸಬಹುದು.
ನಿಮಗೆ ಆದರೂ ಸಹ ಗೊಂದಲಗಳು ಇದ್ದರೆ ಹೆಚ್ಚಿನ ಮಾಹಿತಿಗಾಗಿ ನೀವು ಇವರ ದೂರವಾಣಿ ಸಂಖ್ಯೆಗೂ ಸಹ ಕರೆ ಮಾಡಬಹುದು 08284-298547, 9632149217, 9449782425 ಈ ನಂಬರಿಗೆ ಕರೆ ಮಾಡಿ ಸಹ ನೀವು ಸಂಪರ್ಕ ಮಾಡಬಹುದು. ಇದೊಂದು ಉತ್ತಮ ಅವಕಾಶ ಉಚಿತ ತರಬೇತಿ ಉಚಿತ ಊಟ ಉಚಿತ ವಸತಿ ಈ ಅವಕಾಶವನ್ನು ಯಾರು ನೀಡುವುದಿಲ್ಲ ಆದ್ದರಿಂದ ಸುವರ್ಣ ಅವಕಾಶವನ್ನು ಆಸಕ್ತಿ ಇದ್ದವರು ಮಿಸ್ ಮಾಡಿಕೊಳ್ಳಬೇಡಿ.