ದೀಪಾವಳಿ ಹಬ್ಬದ ಪ್ರಯುಕ್ತ ಕಡಿಮೆ ಬಡ್ಡಿಗೆ ಸಾಲ ಕೊಡಲು ಮುಂದೆ ಬಂದ Flipkart, ಮೊಬೈಲ್ ನಲ್ಲಿಯೇ ಅರ್ಜಿ ಹಾಕಿ.!

 

WhatsApp Group Join Now
Telegram Group Join Now

ಶಾಪಿಂಗ್ ಮಾಡಲು ಹೊರಟರೆ ಹಣ ಹೇಗೆ ಖರ್ಚಾಗುತ್ತದೆ ಎನ್ನುವುದೇ ಗೊತ್ತಾಗುವುದಿಲ್ಲ. ಅದರಲ್ಲೂ ಈಗ ಮೊಬೈಲ್ ಮೂಲಕ ಆನ್ಲೈನ್ ಶಾಪಿಂಗ್ (Online Shopping ) ಮಾಡುವುದರಿಂದ ನಮ್ಮ ಶಾಪಿಂಗ್ ನ ಖರ್ಚು ವೆಚ್ಚ ಲೆಕ್ಕಕ್ಕೆ ಸಿಗುತ್ತಿಲ್ಲ ಎನ್ನಬಹುದು. ಅದರಲ್ಲೂ ಮಾಸಾಂತ್ಯದ ದಿನಗಳಂತೂ ಅಕೌಂಟ್ ನಲ್ಲಿ ಒಂದು ರೂಪಾಯಿ ಕೂಡ ಇರುವುದಿಲ್ಲ.

ಅಂತಹ ಸಮಯದಲ್ಲಿಯೇ ಹಬ್ಬ, ಹುಟ್ಟು ಹಬ್ಬ ಅಥವಾ ವಿಶೇಷ ಸಂದರ್ಭಗಳು ಬಂದರೆ ಅಗತ್ಯವಾಗಿ ಖರ್ಚು ಮಾಡಲೇಬೇಕು. ಆಗ ತಕ್ಷಣಕ್ಕೆ ಪರ್ಸನಲ್ ಸಾಲ (personal loan ) ಸಿಗುತ್ತದೆ ಎನ್ನುವುದು ಅನುಮಾನ. ಇಂತಹ ಸಂದರ್ಭಗಳಲ್ಲಿ ಇ-ಕಾಮರ್ಸ್ (e-commerce) ವೇದಿಕೆಗಳು ಸಾಲ ಕೊಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತೆ ಅಲ್ಲವೇ ಎನ್ನುವ ಯೋಚನೆ ನಿಮಗೂ ಬಂದಿದ್ದರೆ ಅದಕ್ಕೆ ಅಸ್ತು ಎಂದಿದ್ದಾರೆ ಅಂದುಕೊಳ್ಳಿ.

ಯಾಕೆಂದರೆ ನಮ್ಮ ಭಾರತ ಮೂಲದ ಇ-ಕಾಮರ್ಸ್ ಸಂಸ್ಥೆಯಾದ ಬೆಂಗಳೂರಿನಿಂದ ಕಾರ್ಯ ಶುರು ಮಾಡಿರುವ ಫ್ಲಿಪ್ಕಾರ್ಟ್ (Flipcart) ಸಂಸ್ಥೆಯು ದೇಶದಾದ್ಯಂತ ಯಶಸ್ವಿಯಾಗಿ ಹೆಸರು ಮಾಡಿದ್ದು ಈಗ ತನ್ನ ಗ್ರಾಹಕರಿಗಾಗಿ ಇಂತಹದೊಂದು ಅನುಕೂಲತೆ ಮಾಡಿಕೊಡುತ್ತಿದೆ.

ನೀವೇನಾದರೂ ಫ್ಲಿಪ್ಕಾರ್ಟ್ ಮೂಲಕ ಶಾಪಿಂಗ್ ಮಾಡುತ್ತಿದ್ದು ಯಾವುದಾದರೂ ಸಂದರ್ಭದಲ್ಲಿ ನಿಮ್ಮ ಬಳಿ ಅದಕ್ಕೆ ಪಾವತಿ ಮಾಡಲು ಹಣ ಇಲ್ಲದೆ ಹೋದರೆ ಗರಿಷ್ಠ 50 ಸಾವಿರದವರೆಗೆ 10 ನಿಮಿಷದಲ್ಲಿ ಒಳಗೆ ಸಾಲ ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಹಣ ಆಸ್ತಿ ಅಂತಸ್ತು ಅಡ ಇಡುವ ಅವಶ್ಯಕತೆ ಇಲ್ಲ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ (Adhar proof ) ನೀಡಿ ಕೆಲವು ನಿಮಿಷಗಳಲ್ಲಿಯೇ ಸಾಲ ಪಡೆಯಬಹುದು.

ಆದರೆ ಅವರು ಅಗತ್ಯವಾಗಿ ನಿಮ್ಮ ಸಿಬಿಲ್ ಸ್ಕೋರ್ (Cibil score) ನೋಡುತ್ತಾರೆ ನಿಮ್ಮ ಕ್ರೆಡಿಟ್ ಸ್ಥಿತಿಗತಿಗಳ ಬಗ್ಗೆ ವಿವರ ಕೊಡುವಂತಹ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಸಾಕು. ನಿಮಗೆ ಸಾಲ ಸಿಕ್ಕಂತೆಯೇ ಮತ್ತು ಕೆಲವೊಂದು ಸಂದರ್ಭದಲ್ಲಿ ಈ ಸಾಲದ ಮಿತಿ 5 ಲಕ್ಷದವರೆಗೂ ಕೂಡ ಇರುತ್ತದೆ ಈ ಸಾಲವನ್ನು ತೀರಿಸಲು 12 ರಿಂದ 60 ತಿಂಗಳ ಅವಕಾಶ ಕೂಡ ನೀಡಲಾಗುತ್ತದೆ ಮತ್ತು EMI ಸೌಲಭ್ಯ ಕೂಡ ಇರುತ್ತದೆ.

ಕಡಿಮೆ ಕಂತುಗಳಲ್ಲಿ ನೀವು ನಿಮ್ಮ ಸಾಲವನ್ನು ಸಲೀಸಾಗಿ ತೀರಿಸಿಕೊಳ್ಳಬಹುದು. ನಿಜಕ್ಕೂ ಫ್ಲಿಪ್ಕಾರ್ಟ್ ನಂತಹ ಇ-ಕಾಮರ್ಸ್ ಸಂಸ್ಥೆಯೊಂದು ಇಂತಹ ಆಯ್ಕೆ ನೀಡುವುದು ಅನೇಕರ ಪಾಲಿಗೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಇನ್ನುಳಿದ ಇ-ಕಾಮರ್ಸ್ ಸಂಸ್ಥೆಗಳು ಇದನ್ನು ಅನುಸರಿಸಿದರೆ ಅನುಮಾನವಿಲ್ಲ. ಹಾಗಾದರೆ ಫ್ಲಿಪ್ಕಾರ್ಟ್ ಮೂಲಕ ಯಾವ ರೀತಿ ಸಾಲ ಪಡೆದುಕೊಳ್ಳಬಹುದು ಎನ್ನುವುದರ ವಿವರ ಹೀಗಿದೆ ನೋಡಿ.

* ಮೊದಲಿಗೆ playstore ನಿಂದ ಫ್ಲಿಪ್ಕಾರ್ಟ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಬೇಕು.
* ಹೋಂ ಪೇಜ್ ನಲ್ಲಿ ಅಕೌಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿಯೇ ಪರ್ಸನಲ್ ಲೋನ್ (personal loan) ಆಪ್ಷನ್ ಸಿಗುತ್ತದೆ.

* ಆ ಆಪ್ಷನ್ ನಲ್ಲಿ ಕೇಳಲಾಗುವ ಮಾಹಿತಿಗಳನ್ನು ಭರ್ತಿ ಮಾಡಿದರೆ ನಂತರ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಆಧರಿಸಿ ನಿಮಗೆ ಲೋನ್ ಸಿಗುತ್ತದೆ.
* EMI ಆಪ್ಷನ್ ಕೂಡ ಇರುತ್ತದೆ. ನಿಮ್ಮ ಅನುಕೂಲಕರ ಮೊತ್ತವನ್ನು ಆಯ್ಕೆ ಮಾಡಿ, ನೀವು ನಿಮ್ಮ ಪರ್ಸನಲ್ ಲೋನ್ ಹಣವನ್ನು ಪಡೆದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now