ಅನ್ನಭಾಗ್ಯ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ಶಾ’ಕ್ ಈ 6 ಮಾನದಂಡಗಳನ್ನಿಟ್ಟುಕೊಂಡು ಆಹಾರ ಇಲಾಖೆ ಸರ್ವೆ ಮಾಡುತ್ತಿದೆ. ಇಂಥವರಿಗೆ ದಂಡದ ಜೊತೆಗೆ ರೇಷನ್ ಕಾರ್ಡ್ ರದ್ದು ಆಗಲಿದೆ.!

 

ಕರ್ನಾಟಕ ಸರ್ಕಾರದ ಗ್ಯಾರಂಟಿ ಕಾರ್ಡ್ ಯೋಜನೆಗಳು (Karnataka government Gyarantee Scheme) ಒಂದಾದರ ಮೇಲೆ ಒಂದಂತೆ ಜಾರಿಯಾಗುತ್ತಿವೆ ನಿಜ. ಆದರೆ ಚುನಾವಣೆಗೆ ಪೂರ್ವವಾಗಿ ಕಾಂಗ್ರೆಸ್ ಪಕ್ಷವನ್ನು (Congress Party manofesto) ಭರವಸೆಯೇ ಬೇರೆ, ಆದರೆ ಈಗ ಅದಕ್ಕೆ ಸೇರ್ಪಡೆ ಮಾಡುತ್ತಿರುವ ಮಾನದಂಡಗಳೇ (Criterion) ಬೇರೆ ಎಂದು ಜನಸಾಮಾನ್ಯರಿಂದ ವಿಪರೀತವಾದ ವಿ’ರೋ’ಧ ವ್ಯಕ್ತವಾಗುತ್ತಿದೆ.

ಅನ್ನ ಭಾಗ್ಯ ಯೋಜನಯಡಿ (Annabhagya Scheme) ಪ್ರತಿ ಸದಸ್ಯನಿಗೂ ಕೂಡ 10Kg ಅಕ್ಕಿ ನೀಡಲಾಗುವುದು ಎಂದು ಸರ್ಕಾರ ಹೇಳುತ್ತಾದರೂ ಈಗ ಅದಕ್ಕೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಮಾತ್ರ ಪರಿಗಣಿಸಿದೆ. ಅದರಲ್ಲೂ ಸಹ ಕೇಂದ್ರದಿಂದ ಆಹಾರ ಭದ್ರತಾ ಕಾಯ್ದೆ ಪ್ರಕಾರ ನೀಡುತ್ತಿರುವ 5Kg ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ 5Kg ಅಕ್ಕಿ ಕೊಡಲಾಗದೆ ಒದ್ದಾಡುವ ಪರಿಸ್ಥಿತಿ ಬಂದಿದೆ.

ಗೃಹಲಕ್ಷ್ಮೀ ಯೋಜನೆಯ ಅನರ್ಹರ ಪಟ್ಟಿ ಬಿಡುಗಡೆ, ಈ ಪಟ್ಟಿಯಲ್ಲಿ ಇರುವವರಿಗೆ 2000 ಸಿಗಲ್ಲ, ನಿಮ್ಮ ಹೆಸರು ಈ ಲಿಸ್ಟ್ ನಲ್ಲಿದಿಯೇ ಚೆಕ್ ಮಾಡುವ ವಿಧಾನ ಇಲ್ಲಿದೆ ನೋಡಿ.!

ಎಲ್ಲಾ ಕಡೆಯಲ್ಲೂ ಅಕ್ಕಿ ಖರೀದಿಗಾಗಿ ಪ್ರಯತ್ನ ಪಟ್ಟ ಸರ್ಕಾರವು ಅಂತಿಮವಾಗಿ ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣಕ್ಕೆ ಪ್ರತಿ ಸದಸ್ಯನಿಗೆ 5Kg ಅಕ್ಕಿ ಹಾಗೂ ಹೆಚ್ಚುವರಿ 5Kg ಅಕ್ಕಿ ಬದಲಿಗೆ 170ರೂಗಳನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ (head of the family account) DBT ಮೂಲಕ ಹಣ ವರ್ಗಾವಣೆ ಮಾಡುವುದು ಎಂದು ತಿಳಿಸಿದೆ. ಇದಕ್ಕೂ ಕೂಡ ಸಾಕಷ್ಟು ಗೊಂದಲಗಳಾಗಿದ್ದು ಇನ್ನೂ ಸಹ ಅನೇಕ ಫಲಾನುಭವಿಗಳಿಗೆ ಹಣ ದೊರೆತಿಲ್ಲ.

ಅದರಲ್ಲೂ ಸಹ BPL ಕಾರ್ಡ್ ಹೊಂದಿರುವವರಿಗೆ ಮಾತ್ರ ಹಣ ವರ್ಗಾವಣೆ ಆಗಿದೆ. AAY ಕಾರ್ಡ್ ಹೊಂದಿರುವವರಿಗೆ ಮೂರು ಸದಸ್ಯರಿಗಿಂತ ಹೆಚ್ಚು ಸದಸ್ಯರು ಇದ್ದರೆ ಮಾತ್ರ ಅನ್ನಭಾಗ್ಯ ಹಣ ಸಿಗುತ್ತಿದೆ. APL ಕಾರ್ಡ್ ಹೊಂದಿರುವವರಿಗಂತೂ ಅಕ್ಕಿಯೂ ಇಲ್ಲ ಹಣವೂ ಇಲ್ಲ ಎನ್ನುವ ಪರಿಸ್ಥಿತಿ ಎದುರಾಗಿದೆ. ಇದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೂ ಕೂಡ ರೇಷನ್ ಕಾರ್ಡ್ ಕಡ್ಡಾಯ (Gruhalaksmi ration card compulsory) ಆಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಕೇವಲ 4 ದಿನ ಮಾತ್ರ ಸಮಯಾವಕಾಶ ನೀಡಿದ್ದಾರೆ. ತಿದ್ದುಪಡಿ ಮಾಡಿಸುವವರು ತಪ್ಪದೆ ಈ ದಾಖಲೆ ತೆಗೆದುಕೊಂಡು ಹೋಗಿ.!

ರೇಷನ್ ಕಾರ್ಡ್ ಅಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರು ಇಲ್ಲದಿದ್ದರೆ ಅವರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಂಡು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ಇದೆ. ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ವೇಳೆ ಕೂಡ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ ಪ್ರತಿ ತಿಂಗಳು 2000 ಸಹಾಯಧನವನ್ನು ಕುಟುಂಬ ನಿರ್ವಹಣೆಯ ಖರ್ಚಿಗಾಗಿ ನೀಡಲಾಗುವುದು ಎಂದು ಸರ್ಕಾರ ಘೋಷಿಸುತ್ತಾದರೂ.

ಈಗ ಹೊರಬಿದ್ದಿರುವ ಆದೇಶ ಪತ್ರದಲ್ಲಿ ರೇಷನ್ ಕಾರ್ಡ್ ಹೊಂದಿರುವ ಅದರಲ್ಲೂ ಆದಾಯ ತೆರಿಗೆ ಕಟ್ಟುವವರು, ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರು ವೈಯಕ್ತಿಕ ತೆರಿಗೆ ಕಟ್ಟುವವರು ಹಾಗೂ ಸರ್ಕಾರಿ ಉದ್ಯೋಗ ಹೊಂದಿರುವ ಕುಟುಂಬಗಳನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಾಗಲು ಅವಕಾಶ ಎಂದು ತಿಳಿಸಲಾಗಿದೆ.

ರೈತರಿಗೆ ಗುಡ್ ನ್ಯೂಸ್, ರಸಗೊಬ್ಬರಗಳ ಬೆಳೆ ಇಳಿಕೆ, ಯೂರಿಯ ಹಾಗೂ DAP ಬೆಲೆ ಎಷ್ಟಾಗಿದೆ ನೋಡಿ.!

ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ APL ಕಾರ್ಡ್ ಹೊಂದಿರುವವರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ಜೊತೆಗೆ ಆಹಾರ ಇಲಾಖೆಯು (food department) ಕೂಡ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಹಾಗೂ ಈಗಾಗಲೇ ರೇಷನ್ ಕಾರ್ಡ್ ಪಡೆದಿರುವವರ ಸರ್ವೇ (survey) ಮಾಡುವ ವಿಚಾರವಾಗಿ ಮತ್ತೊಂದು ಶಾ’ಕ್ ನೀಡಿದೆ.

ಈ ಬಗ್ಗೆ ಕಳೆದವಾರ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ನಾಲ್ಕು ಚಕ್ರಗಳ ವೈಟ್ ಬೋರ್ಡ್ ವಾಹನಗಳನ್ನು (4 wheeler white bord vehicle) ಹೊಂದಿರುವವರಿಗೆ BPL ಕಾರ್ಡ್ ನೀಡಲಾಗುವುದಿಲ್ಲ, ಈ ಹಿಂದೆ ಅವರು ಕಾರ್ಡ್ ಪಡೆದಿದ್ದರು ಕೂಡ ಪರಿಶೀಲನೆ ನಡೆಸಿ ರದ್ದು ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಈಗ ಆ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಹೃದಯಘಾ-ತ ಉಂಟು ಮಾಡುವ ಅಪಾಯಕಾರಿ ಅಂಶಗಳು ಇವು, ಒಮ್ಮೆ ಡಾಕ್ಟರ್ ಅಂಜನಪ್ಪ ಅವರ ಮಾತು ಕೇಳಿ.!

ಆಹಾರ ಇಲಾಖೆಗೆ ಆದರೆ ಇದ್ಯಾವುದು ಹೊಸದಾಗಿ ಮಾಡಿರುವ ನಿಯಮವಲ್ಲ 2016ರ BPL ರೇಷನ್ ಕಾರ್ಡ್ ಮಾನದಂಡಗಳಲ್ಲಿ ಈ ಅಂಶಗಳು ಇದ್ದವು. ಹಾಗಾದರೆ ಅವುಗಳ ಪ್ರಕಾರ ಯಾವ ಮನದಂಡಗಳನ್ನು ಮೀರಿದರೆ BPL ಕಾರ್ಡ್ ರದ್ದಾಗುತ್ತದೆ (BPL card Cancel) ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಮಾನದಂಡಗಳು

● ವಾರ್ಷಿಕ ಆದಾಯ 1.2 ಲಕ್ಷ ಹೊಂದಿರುವ ಕುಟುಂಬಗಳು
● 3 ಹೆಕ್ಟರಿಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬಗಳು
● ವೈಟ್ ಬೋರ್ಡ್ ಕಾರ್ ಹೊಂದಿರುವ ಕುಟುಂಬಗಳು
● ಕುಟುಂಬಸ್ಥರಲ್ಲಿ ಯಾರಾದರೂ ಸರ್ಕಾರಿ ನೌಕರಿಯಲ್ಲಿದ್ದರೆ
● ನಗರ ಪ್ರದೇಶಗಳಲ್ಲಿ 1000 Sq.ft ಗಿಂತ ಹೆಚ್ಚಿನ ವಿಸ್ತೀರ್ಣದ ಮನೆ ಹೊಂದಿದ್ದರೆ
● ವಾಣಿಜ್ಯ ತೆರಿಗೆ, ಆದಾಯ ತೆರಿಗೆ, ಐಟಿ ರಿಟರ್ನ್ ಸಲ್ಲಿಸುವ ಕುಟುಂಬಗಳು BPL ಕಾರ್ಡ್ ಹೊಂದಿದ್ದರೆ ಅವುಗಳು ರದ್ದಾಗಲಿವೆ.

Leave a Comment

%d bloggers like this: