ಕರ್ನಾಟಕದ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ಕೂಡ ಸಿಹಿ ಸುದ್ದಿ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವವರು ಅಥವಾ ಸರ್ಕಾರಿ ಹುದ್ದೆ ಹೊಂದುವ ಆಸಕ್ತಿ ಹೊಂದಿರುವವರು, ಖಾಸಗಿ ಸಂಸ್ಥೆಯ ಉದ್ಯೋಗ ಬಿಟ್ಟು ಸರ್ಕಾರಿ ಹುದ್ದೆಗೆ ಸೇರಬೇಕು ಎಂದುಕೊಂಡಿರುವವರ ಪಾಲಿಗೆ ಸುವರ್ಣ ಅವಕಾಶ. ಏಕೆಂದರೆ ಕರ್ನಾಟಕದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಇರುವ ಹುದ್ದೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಿದೆ.
ಕರ್ನಾಟಕದ ಎಲ್ಲಾ ಅರ್ಹ ಮತ್ತು ಆಸಕ್ತ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು ಅದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಂಕಣದಲ್ಲಿ ಹುದ್ದೆಗಳ ವಿವರ, ಹುದ್ದೆಗಳ ಸಂಖ್ಯೆಯನ್ನು ಸಂಬಂಧಪಟ್ಟ ಇಲಾಖೆವಾರು ತಿಳಿಸಲಾಗಿದೆ .ಇವುಗಳ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಅಧಿಸೂಚನೆಯಲ್ಲಿರುವ ಸಂಪೂರ್ಣ ಅಂಶವನ್ನು ತಿಳಿದುಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಆದ www.kea.kar.nic.in ಗೆ ಭೇಟಿಕೊಡಿ.
ಮತ್ತು ಈ ಸೂಚನೆಯಲ್ಲಿರುವ ಅಂಶಗಳನ್ನು ಅರ್ಥೈಸಿಕೊಂಡು ಆ ಪ್ರಕಾರ ಅರ್ಜಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಳ್ಳಿ.
● ಪರೀಕ್ಷೆ ನಡೆಸುವ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ
● ಉದ್ಯೋಗ ಖಾಲಿ ಇರುವ ಇಲಾಖೆ:-
1. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
2. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ
3. ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
4. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ
5. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
● ಹುದ್ದೆಗಳ ಸಂಖ್ಯೆ:- 741
ಹುದ್ದೆಗಳ ವಿವರ ಇಲಾಖೆವಾರು:-
1. ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
● ಕಲ್ಯಾಣ ಅಧಿಕಾರಿ – 12
● ಕ್ಷೇತ್ರ ನಿರೀಕ್ಷಕರು – 60
● ಪ್ರಥಮ ದರ್ಜೆ ಸಹಾಯಕರು -12
● ಆಪ್ತ ಸಹಾಯಕರು – 02
● ದ್ವಿತೀಯ ದರ್ಜೆ ಸಹಾಯಕರು – 100
2.ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
● ಸಹಾಯಕ ವ್ಯವಸ್ಥಾಪಕರು – 10
● ಗುಣಮಟ್ಟ ನಿರೀಕ್ಷಕರು – 23
● ಹಿರಿಯ ಸಹಾಯಕರು (ಲೆಕ್ಕ) – 33
● ಹಿರಿಯ ಸಹಾಯಕರು – 57
● ಕಿರಿಯ ಸಹಾಯಕರು – 263
3.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ:-
● ಜೂನಿಯರ್ ಪ್ರೋಗ್ರಾಮರ್ (ಗ್ರೂಪ್ ಬಿ) – 10
● ಸಹಾಯಕ ಇಂಜಿನಿಯರ್ (ಸಿವಿಲ್) (ಗ್ರೂಪ್ ಬಿ) – 01
● ಸಹಾಯಕ ಗ್ರಂಥಪಾಲಕ (ಗ್ರೂಪ್ – ಸಿ) – 01
● ಸಹಾಯಕ (ಗ್ರೂಪ್ ಸಿ) – 27
● ಕಿರಿಯ ಸಹಾಯಕ (ಗ್ರೂಪ್ ಸಿ) – 49
4.ಬೆಂಗಳೂರು ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು:-
● ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) ಗ್ರೂಪ್ ಬಿ – 02
● ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ) ಗ್ರೂಪ್ ಬಿ – 01
● ಆಪ್ತ ಕಾರ್ಯದರ್ಶಿ ಗ್ರೂಪ್ ಸಿ – 01
● ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್ ಸಿ – 02
● ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ – 02
● ಸಹಾಯಕರು (ತಾಂತ್ರಿಕ) ಗ್ರೂಪ್ ಸಿ – 1
● ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ – 1
5. ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್, ಬೆಂಗಳೂರು
● ಸಹಾಯಕ ವ್ಯವಸ್ಥಾಪಕರು – 23
● ಮೇಲ್ವಿಚಾರಕರು – 23
● ಪದವೀಧರ ಗುಮಾಸ್ತರು – 6
● ಗುಮಾಸ್ತರು – 13
● ಮಾರಾಟ ಪತಿನಿಧಿ / ಪ್ರೋಗ್ರಾಮರ್ – 6