ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕ ಸರ್ಕಾರವು (Karnataka Government) ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನತೆಗಾಗಿ ಜಾರಿ ಮಾಡಿದೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆಯು (Gruhalakshmi) ಕೂಡ ಒಂದು. ಗೃಹಲಕ್ಷ್ಮಿ ಯೋಜನೆಯ ಮೂಲಕ ಕುಟುಂಬದ ಹಿರಿಯ ಮಹಿಳೆಯು ಸರ್ಕಾರದಿಂದ ಪ್ರತಿ ತಿಂಗಳು 2000ರೂ ಸಹಾಯಧನವನ್ನು ಪಡೆಯುತ್ತಿದ್ದಾರೆ.
ಆಗಸ್ಟ್ ತಿಂಗಳನಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗುತ್ತಿದ್ದು ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಮತ್ತು ಎಲ್ಲಾ ದಾಖಲೆಗಳು ಸರಿಯಾಗಿರುವ ಮಹಿಳೆಯರಿಗೆ DBT ಮೂಲಕ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ (Adhar link bank account) ಹಣ ವರ್ಗಾವಣೆ ಆಗುತ್ತಿದೆ.
ಇದಾಗಲೇ ಅರ್ಹ ಫಲಾನುಭವಿಗಳು ಎರಡು ಬಾರಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದಿದ್ದಾರೆ. ಈಗ ಸರ್ಕಾರ ಮೂರನೇ ಕಂತಿನ ಹಣ ಕೂಡ ಬಿಡುಗಡೆ ಮಾಡುತ್ತಿದೆ. ಆದರೆ ಅನೇಕ ಮಹಿಳೆಯರು ಇನ್ನೂ ಹಣ ಪಡೆಯಲಾಗದೆ ಸಮಸ್ಯೆಯಲ್ಲಿದ್ದಾರೆ. ಕೆಲವರಿಗೆ ಒಂದು ತಿಂಗಳ ಹಣ ಸಹ ಬಂದಿಲ್ಲ, ಇನ್ನು ಕೆಲವರಿಗೆ ಮೊದಲ ತಿಂಗಳ ಹಣ ಮಾತ್ರ ಬಂದಿದೆ ಉಳಿದ ತಿಂಗಳುಗಳಲ್ಲಿ ಬಂದಿಲ್ಲ.
ಈ ರೀತಿ ಸಮಸ್ಯೆ ಇದ್ದವರು ತಪ್ಪದೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಏನಾಗಿದೆ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬೇಕು. ಯಾಕೆಂದರೆ ಸರ್ಕಾರವು ಗೃಹಲಕ್ಷ್ಮಿ ಯೋಜನೆ ಹಣವನ್ನು ರೇಷನ್ ಕಾರ್ಡ್ ಆಧರಿಸಿ (Rationcard base) ಕೊಡುತ್ತಿದೆ. ರೇಷನ್ ಕಾರ್ಡ್ ನಲ್ಲಿ ಕುಟುಂಬದ ಹಿರಿಯ ಮಹಿಳೆಯ ಸ್ಥಾನದಲ್ಲಿರುವ ಮಹಿಳೆಗೆ ಹಣ ವರ್ಗಾವಣೆ ಮಾಡುತ್ತಿದೆ.
ನೀವೇನಾದರೂ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಈಗ ನಿಮ್ಮ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಯಾರ ಹೆಸರಿದೆ ಎಂದು ಒಮ್ಮೆ ಚೆಕ್ ಮಾಡಿಕೊಳ್ಳಬೇಕು ಮತ್ತು ಪ್ರತಿ ತಿಂಗಳು ಕೂಡ ಆಹಾರ ಇಲಾಖೆಯು ಹಲವಾರು ಸಕಾರಣಗಳಿಂದ ಅನೇಕ ರೇಷನ್ ಕಾರ್ಡ್ಗಳ ಮಾನ್ಯತೆಯನ್ನು ರದ್ದು ಮಾಡುತ್ತಿದೆ.
ಈ ರೀತಿಯಾಗಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಸ್ಥಗಿತವಾಗಿದ್ದರೆ ಆ ತಿಂಗಳ ಗೃಹಲಕ್ಷ್ಮಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಒಮ್ಮೆ ನೀವು ಈ ವಿಧಾನದ ಮೂಲಕ ನಿಮ್ಮ ರೇಷನ್ ಕಾರ್ಡ್ ಸ್ಥಿತಿ (ration card status) ಏನಾಗಿದೆ ಎಂದು ಚೆಕ್ ಮಾಡಿ. ಸದ್ಯಕ್ಕೆ ಮೂರನೇ ಕಂತಿನ ಹಣ ಪಡೆಯಲು ಇದನ್ನು ಚೆಕ್ ಮಾಡಿ ನೋಡಿ.
* https://mahitikanaja.karnataka.gov.in ಲಿಂಕ್ ಕ್ಲಿಕ್ ಮಾಡಿ ಕರ್ನಾಟಕ ಸರ್ಕಾರದ ಮಾಹಿತಿ ಕಣಜ ವೆಬ್ಸೈಟ್ ಅಧಿಕೃತ ಪೇಜ್ ಓಪನ್ ಆಗುತ್ತದೆ.
* ಮೆನು ಬಾರ್ ನಲ್ಲಿ ಇರುವ ಆಯ್ಕೆಗಳಲ್ಲಿ ಕಾರ್ಯಕ್ರಮಗಳು ಎನ್ನುವುದನ್ನು ಕ್ಲಿಕ್ ಮಾಡಿ, ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಸೇವೆಗಳು ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
* ಇದರಲ್ಲಿ ಇರುವ ಎಲ್ಲಾ ಸೇವೆಗಳ ಪಟ್ಟಿ ಬರುತ್ತದೆ ನೀವು ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವ ಆಪ್ಷನ್ ಹುಡುಕಿ ಸೆಲೆಕ್ಟ್ ಮಾಡಿ
* ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ ಸೆಲೆಕ್ಟ್ ಮಾಡಿ ರೇಷನ್ ಕಾರ್ಡ್ ನಂಬರ್ ಹಾಕಿ, ಸಲ್ಲಿಸಿ ಎನ್ನುವುದನ್ನು ಕ್ಲಿಕ್ ಮಾಡಿ.
* ತಕ್ಷಣ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಜಿಲ್ಲೆ, ನಿಮ್ಮ ಪಡಿತರ ಚೀಟಿ ಸಂಖ್ಯೆ ಮತ್ತು ನಿಮ್ಮ ನ್ಯಾಯಬೆಲೆ ಅಂಗಡಿ ವಿವರ ಇರುತ್ತದೆ. ಅದರಲ್ಲಿ ನಿಮ್ಮ ತಾಲೂಕು, ಗ್ರಾಮ, ಪ್ರದೇಶ, ಕಾರ್ಡ್ ಪ್ರಕಾರ, ಅಂಗಡಿ ಹೆಸರು, ಕಾರ್ಡಿನ ಸ್ಥಿತಿ ಎಲ್ಲಾ ವಿವರ ಇರುತ್ತದೆ. ಇಲ್ಲಿ ಕಾಡಿನ ಸ್ಥಿತಿ ಸಕ್ರಿಯ ಎಂದು ಇದೆಯೇ ಎನ್ನುವುದನ್ನು ಚೆಕ್ ಮಾಡಿ, ಸಕ್ರಿಯ ಎಂದು ಇದ್ದರೆ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದೆ ಹಣ ಬರುತ್ತದೆ ಎಂದರ್ಥ
* ರೇಷನ್ ಕಾರ್ಡ್ ನ ಎಲ್ಲಾ ಸದಸ್ಯರ ವಿವರ ಇರುತ್ತದೆ. ಅದರಲ್ಲಿ ಕುಟುಂಬದ ಮುಖ್ಯಸ್ಥರ ಹೆಸರು ಮತ್ತು ಉಳಿದ ಸದಸ್ಯರಿಗೆ ಅವರ ಜೊತೆ ಇರುವ ಸಂಬಂಧ ಇತ್ಯಾದಿ ಮಾಹಿತಿಗಳು ಇರುತ್ತವೆ. ಇದರಲ್ಲಿ ಮುಖ್ಯಸ್ಥರ ಸ್ಥಾನದಲ್ಲಿರುವವರ ಖಾತೆಗೆ ಹಣ ಬರಲಿದೆ.
* ಈಗಾಗಲೇ ಹಣ ಬಂದಿರಬಹುದು, SMS ಸಂದೇಶ ಬರದೆ
ಇದ್ದವರು ಬ್ಯಾಂಕ್ ಗಳಿಗೆ ಹೋಗಿ ಚೆಕ್ ಮಾಡುವ ಮೂಲಕ ಮಾಹಿತಿ ತಿಳಿದುಕೊಳ್ಳಬಹುದು ಮತ್ತು ಇಂದು ಕೂಡ ಬಾಗಲಕೋಟೆ, ವಿಜಯಪುರ, ಕೊಪ್ಪಳ, ಬಳ್ಳಾರಿ, ಗದಗ, ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ, ಕಲ್ಬುರ್ಗಿ, ಶಿವಮೊಗ್ಗ, ಯಾದಗಿರಿ, ಉಡುಪಿ ಜಿಲ್ಲೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಹಂತ ಹಂತವಾಗಿ ಉಳಿದ ಜಿಲ್ಲೆಯವರಿಗೂ ಹಣ ತಲುಪಲಿದೆ.