ಎಲ್ಲರಿಗೂ ತಿಳಿದಿರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Government ) ಅಧಿಕಾರ ವಹಿಸಿಕೊಂಡ ಮೇಲೆ ತಾನು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಕೂಡ ಒಂದು.
ಈ ಯೋಜನೆ ಮೂಲಕ ಕುಟುಂಬದ ಹಿರಿಯ ಮಹಿಳೆಗೆ 2,000 ಸಹಾಯಧನವನ್ನು ಪ್ರತಿ ತಿಂಗಳ ಕುಟುಂಬ ನಿರ್ವಹಣೆಗಾಗಿ ಸರ್ಕಾರ ನೀಡುತ್ತಿದೆ. ಆಗಸ್ಟ್ 30ರಂದು ಮೊದಲನೇ ಕಂತಿನ ಹಣವು ಫಲಾನುಭವಿಗಳಿಗೆ ವರ್ಗಾವಣೆಯಾಗಿತ್ತು, ಆವರೆಗೆ ಯೋಜನೆಗೆ ನೋಂದಾಯಿಸಿಕೊಂಡಿದ್ದ ಮಹಿಳೆಯರಲ್ಲಿ 80% ಫಲಾನುಭವಿಗಳು ಮಾತ್ರ ಹಣವನ್ನು ಪಡೆದಿದ್ದರು.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಆಗಿರದ ಕಾರಣ, ಬ್ಯಾಂಕ್ ಖಾತೆ ಸ್ಥಗಿತವಾಗಿರುವ ಕಾರಣ, ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಗಳಲ್ಲಿರುವ ಮಾಹಿತಿ ಹೊಂದಾಣಿಕೆ ಆಗದ ಕಾರಣ, ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ ಆಗದ ಕಾರಣ ಇನ್ನಿತರ ತಾಂತ್ರಿಕ ದೋಷಗಳಿಂದಾಗಿ (not reaches to all beneficiares because of Technical issues) 9, 44,173 ಮಹಿಳೆಯರು ವಂಚಿತರಾಗಿದ್ದರು.
ಈ ಮೇಲೆ ತಿಳಿಸಿದ ಕಾರಣ ತಿದ್ದುಪಡಿ ಮಾಡಿಸಿಕೊಂಡರೆ 2ನೇ ಕಂತಿನ ಹಣ ಪಡೆಯುವ ಸಮಯದಲ್ಲಿ ಒಟ್ಟಿಗೆ ನೀಡುವುದಾಗಿ ಘೋಷಿಸಲಾಗಿತ್ತಾದರೂ ಇನ್ನು ಸಂಪೂರ್ಣವಾಗಿ ಮಹಿಳೆಯರಿಗೆ ತಮ್ಮ ಸಮಸ್ಯೆ ಬಗ್ಗೆ ತಿಳಿದಿಲ್ಲ ಹೀಗಾಗಿ ರಾಜ್ಯದಾದ್ಯಂತ ಯೋಜನೆ ಬಗ್ಗೆ ದೂರು ಕೇಳಿ ಬರುತ್ತಿದೆ.
ಇದರ ಬಗ್ಗೆ ಗಮನಹರಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ (KWCWD Minister Lakshmi Hebbalkar) ಅವರು ನವೆಂಬರ್ 2 ರಂದು ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆ (Pragathi Parisheelana Sabhe) ನಡೆಸಿ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈವರೆಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲಾಗದ ಮಹಿಳೆಯರು ತಮಗಾಗಿರುವ ಸಮಸ್ಯೆ ತಿಳಿದುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ತಾಲೂಕು ವ್ಯಾಪ್ತಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ CDPO ಅಧಿಕಾರಿಗಳಿಗೆ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಅರ್ಜಿ ಸಲ್ಲಿಕೆ ಪತ್ರವನ್ನು ನೀಡಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಲಾಗಿತ್ತು.
ಆದರೆ ಮಹಿಳೆಯರಿಗೆ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಇದು ಅವರಿಗೆ ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಮನೆ ಬಾಗಿಲಿಗೆ ಹೋಗಿ ಮಹಿಳೆಯರ ಸಮಸ್ಯೆ ಪರಿಹಾರ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಆ ಪ್ರಕಾರವಾಗಿ ಸಭೆಯಲ್ಲಿ ಇದ್ದ ಇಲಾಖೆ ಅಧಿಕಾರಿಗಳಿಗೆ ಹಾಗೂ ಇ-ಗವರ್ನರ್ ಗಳಿಗೆ ಮಹಿಳೆಯರಿಗೆ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ತೆರಳಿ ಪರಿಹಾರ ಮಾಡಬೇಕು.
ಇದಕ್ಕೆ ಆಯಾ ಗ್ರಾಮಗಳಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ತೆಗೆದುಕೊಳ್ಳಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಯಾರೆಲ್ಲಾ ಇನ್ನೂ ಸಹ ಮೊದಲನೇ ಕಂತಿನ ಹಣವನ್ನು ಪಡೆಯಲಾಗಿಲ್ಲ ಅಥವಾ ಒಂದು ಕಂತಿನ ಹಣವನ್ನು ಪಡೆದು ಎರಡನೇ ಕಂತಿನ ಹಣ ಪಡೆಯಲಾಗಿಲ್ಲ ಅಂತಹವರು ನಿಮ್ಮ ಮನೆ ಬಾಗಿಲಲ್ಲೇ ಪರಿಹಾರ ಪಡೆದುಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆ ಮೊದಲ ಕಂತಿನ ಹಣವನ್ನು ಶೇಕಡ 80ರಷ್ಟು ಮಹಿಳೆಯರು ಪಡೆದಿದ್ದರು, ಎರಡನೇ ಕಂತಿನಲ್ಲಿ 90% ಹಣವನ್ನು ತಲುಪಿಸಲಾಗಿತ್ತು ಈಗ ಅಕ್ಟೋಬರ್ ತಿಂಗಳ ಸಹಾಯಧನಗಳನ್ನು ಸಂಪೂರ್ಣವಾಗಿ ನೂರಕ್ಕೆ ನೂರರಷ್ಟು ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೂ ತಲುಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಇಂಥ ಒಂದು ಕ್ರಮ ಕೈಗೊಂಡಿದೆ ಎಂದು ಸಚಿವೆ ತಿಳಿಸಿದ್ದಾರೆ.