ಕರ್ನಾಟಕ ರಾಜ್ಯದಲ್ಲಿ ಪ್ರತಿ ಮನೆಗೂ ಕೂಡ 200 ಯೂನಿಟ್ ವಿದ್ಯುತ್ ಅನ್ನು ಸರ್ಕಾರ ಉಚಿತವಾಗಿ ಕೊಡಲಿದೆ ಎನ್ನುವ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ಸದ್ಯಕ್ಕೆ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್ ಸರ್ಕಾರವು 2023 ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಇಂತಹದೊಂದು ಭರವಸೆಯನ್ನು ನೀಡಿ ಜನರಿಂದ ಮತಯಾಚನೆ ಮಾಡಿದ್ದದು ಈಗ ಗೆದ್ದ ಬಳಿಕ ಆ ಗ್ಯಾರೆಂಟಿ ಕಾರ್ಡ್ ಭರವಸೆಯನ್ನು ನೆರವೇರಿಸುತ್ತದೆ.
ಈ ಮೂಲಕ ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡಬೇಕು ಎನ್ನುವುದು ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಹಾಗೆ ಸರ್ಕಾರವೇ ಒಂದು ಅಧಿಕೃತ ಆದೇಶ ಪತ್ರವನ್ನು ಕೂಡ ಹೊರಡಿಸಿದೆ. ಅದರಲ್ಲಿ ಗೃಹಜ್ಯೋತಿ ಯೋಜನೆಗೆ ಸಂಬಂಧಪಟ್ಟ ನಿಬಂಧನೆಗಳು ಹಾಗೂ ಮಾರ್ಗಸೂಚಿಯನ್ನು ಕೂಡ ತಿಳಿಸಿದೆ.
ಪ್ರತಿ ಮನೆಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ ಸರ್ಕಾರ ಆ ಮಿತಿಯನ್ನು ಮೀರಿದವರಿಗೆ ಪೂರ್ತಿ ಕರೆಂಟ್ ಬಿಲ್ ಅನ್ನು ಅವರೇ ಕಟ್ಟಬೇಕು ಎಂದು ಷರತ್ತು ವಿಧಿಸಿದೆ. ಜೊತೆಗೆ ಕಳೆದ ಒಂದು ವರ್ಷದ ವಿದ್ಯುತ್ ಬಳಕೆ ಸರಾಸರಿಗಿಂತ 10% ಹೆಚ್ಚು ವಿದ್ಯುತ್ ಬಳಸಿದ್ದಲ್ಲಿ ಹೆಚ್ಚಿನ ವಿದ್ಯುತ್ ಗೂ ಕೂಡ ಗ್ರಾಹಕರೇ ಹಣ ಕಟ್ಟಬೇಕು ಎನ್ನುವುದನ್ನು ಕೂಡ ಹೇಳಿದೆ.
ಆದ್ದರಿಂದ ಇನ್ನು ಮುಂದೆ ಕರ್ನಾಟಕದಲ್ಲಿ ಪ್ರತಿ ಮನೆಯಲ್ಲೂ ಲೆಕ್ಕಾಚಾರ ಹಾಕಿ ಕರೆಂಟ್ ಬಳಕೆ ಮಾಡುವ ಪರಿಸ್ಥಿತಿ ಬರಬಹುದು. ಸರ್ಕಾರದ ಈ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳು ಆಗಬೇಕು ಎಂದರೆ ಇಂತಹ ನಿಯಮಳನ್ನು ಪಾಲಿಸಲೇಬೇಕು. ಹೀಗಾಗಿ ಪ್ರತಿದಿನವೂ ಕೂಡ ಎಷ್ಟು ವಿದ್ಯುತ್ ಬಳಸುತ್ತೇವೆ, ತಿಂಗಳಿಗೆ ಎಷ್ಟು ವಿದ್ಯುತ್ ಬಳಸುತ್ತೇವೆ ಎಂದು ಜನಸಾಮಾನ್ಯರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಇದಕ್ಕೂ ಕೂಡ ಸರಳವಾದ ವಿಧಾನ ಇದೆ. ಮೀಟರ್ ಬಾಕ್ಸ್ ನೋಡಿ ಇದರ ರೀಡಿಂಗ್ ತೆಗೆದುಕೊಳ್ಳಬಹುದು. ಪ್ರತಿನಿತ್ಯವೂ ರೀಡಿಂಗ್ ತೆಗೆದುಕೊಂಡು ಹಿಂದಿನ ದಿನದ ರೀಡಿಂಗ್ ಮೈನಸ್ ಮಾಡಿದರೆ ಆ ದಿನದ ವಿದ್ಯುತ್ ಬಳಕೆ ಎಷ್ಟು ಎಂದು ತಿಳಿಯುತ್ತದೆ. ಇದನ್ನು ಬಿಟ್ಟು ಮತ್ತೊಂದು ವಿಧಾನದ ಕೂಡ ವಿದ್ಯುತ್ ಬಳಕೆಯನ್ನು ಲೆಕ್ಕ ಹಾಕಬಹುದು. ನಿಮ್ಮ ಬಳಿ ಸ್ಮಾರ್ಟ್ಫೋನ್ ಇದ್ದರೆ ಸಾಕು ನೀವು ಮೊಬೈಲ್ ಅಲ್ಲಿಯೇ ಇದರ ಲೆಕ್ಕಾಚಾರ ತಿಳಿದುಕೊಳ್ಳಬಹುದು.
ಈಗ ತಂತ್ರಜ್ಞಾನ ಯುಗ ಆಗಿರುವುದರಿಂದ ಎಲ್ಲಾ ವಿಭಾಗದಲ್ಲೂ ಕೂಡ ತಂತ್ರಜ್ಞಾನದ್ದೇ ಮೇಲುಗೈ. ಹಾಗಾಗಿ ಕೇಂದ್ರ ವಿದ್ಯುತ್ ಇಲಾಖೆ ಕೂಡ ಇನ್ನು ಮುಂದೆ ಸ್ಮಾರ್ಟ್ ಮೀಟರ್ ಅಳವಡಿಸಲಿದೆ. ಈ ಸ್ಮಾರ್ಟ್ ಮೀಟರ್ಗೆ ಇಂಟರ್ನೆಟ್ ಅವಶ್ಯಕತೆ ಇರುವುದರಿಂದ ಅದರ ಸಂಪರ್ಕದ ಮೂಲಕ ಸ್ಮಾರ್ಟ್ ಫೋನ್ ಅಲ್ಲಿಯೇ ಮೀಟರ್ ಮಾಲೀಕ ತನ್ನ ಖಾತೆಯಲ್ಲಿ ಎಷ್ಟು ವಿದ್ಯುತ್ ಇದೆ, ಎಷ್ಟು ಖರ್ಚಾಗಿದೆ ಎನ್ನುವುದರ ವಿವರವನ್ನು ನೋಡಿಕೊಳ್ಳಬಹುದು.
ಗುರುವಾರದಂದು ಕೇಂದ್ರ ವಿದ್ಯುತ್ ಇಲಾಖೆ ಇದರ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಇದು ಜಾರಿಯಾದರೆ DISCOM ಸ್ಮಾರ್ಟ್ ಮೀಟರ್ ಗಳನ್ನು ಪ್ರತಿ ದಿನ ರಿಮೋಟ್ ಮೂಲಕ ಪರಿಶೀಲಿಸಿ ಸ್ಮಾರ್ಟ್ ಮೀಟರ್ ಗಳನ್ನು ಪ್ರತಿದಿನ ನವೀಕರಿಸಲಾಗುತ್ತದೆ ಮತ್ತು ಆ ಡಾಟಾವನ್ನು ವೆಬ್ಸೈಟ್ ಅಲ್ಲಿ ಹಾಗೂ ಆಪ್ ಗಳಲ್ಲಿ ಸ್ಟೋರ್ ಮಾಡಿ ಇಡಲಾಗುತ್ತದೆ. ಇದರ ಸಹಾಯದಿಂದ ಪ್ರತಿಯೊಂದು ಮನೆಯ ಮೀಟರ್ ರೀಡಿಂಗ್ ಅನ್ನು ವೆಬ್ಸೈಟ್ ಅಲ್ಲಿಯೇ ಗ್ರಾಹಕ ಚೆಕ್ ಮಾಡಿಕೊಳ್ಳುವುದು ಅನುಕೂಲವಾಗುತ್ತದೆ. ಸದ್ಯಕ್ಕೆ ಇನ್ನೂ ಇದಕ್ಕೆ ಸಂಬಂಧಪಟ್ಟ ತಯಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ದಿನದಲ್ಲಿ ಇಂತಹದೊಂದು ಅನುಕೂಲತೆ, ದೇಶದ ನಾಗರಿಕರಿಗೆ ಸಿಗಲಿದೆ.