ಮಹಿಳೆಯರೇ ಇಲ್ಲಿ ಗಮನಿಸಿ, ಫ್ರೀ ಬಸ್​ ಹತ್ತೋ ಮುನ್ನ ಈ 9 ಅಂಶಗಳನ್ನು ಮರೆಯಬೇಡಿ. ಮರೆತರೆ ದಂಡ ಕಟ್ಟಬೇಕಾಗುತ್ತದೆ ಎಚ್ಚರ.!

ಮಹಿಳೆಯರೇ ಇಂದಿನಿಂದ ಬಸ್ ಟಿಕೆಟ್​ ತಗೋಬೇಡಿ, ಕರ್ನಾಟಕದಲ್ಲಿ ಎಲ್ಲೇ ಬಸ್ ಹತ್ತಿಳಿದ್ರೂ ಫ್ರೀ. ರಾಜ್ಯದ ಗಡಿ ಒಳಗೆ ಎಲ್ಲಿಗೆ ಬೇಕಾದ್ರೂ ಹೋಗ್​ ಬನ್ನಿ, ಗಂಡನ ಮನೆಗೂ ಫ್ರೀ.. ಅಪ್ಪನ ಮನೆಗೂ ಫ್ರೀ, ದೇವಸ್ಥಾನಕ್ಕೂ ಫ್ರೀ.. ಪ್ರವಾಸಕ್ಕೂ ಫ್ರೀ . KSRTCಯಲ್ಲೂ ಉಚಿತ.. BMTC ಯಲ್ಲೂ ಫ್ರೀ ಖಚಿತವಿದೆ. ಖಾಲಿ ಪರ್ಸ್​ ಇದೆ ಅಂತಾ ಫಜೀತಿ ಬೀಳೋದು ಬೇಡ.

WhatsApp Group Join Now
Telegram Group Join Now

ಹೌದು, ಯಾವುದೇ ಭೇದವಿಲ್ಲದೆ ರಾಜ್ಯದ ಎಲ್ಲ ಮಹಿಳೆಯರಿಗೂ ಅನ್ವಯವಾಗುವ ಉಚಿತ ಬಸ್‌ ಪ್ರಯಾಣದ ಐತಿಹಾಸಿಕ ಕಾರ್ಯಕ್ರಮ ‘ಶಕ್ತಿ’ ಜೂನ್ 11 (ಭಾನುವಾರ) ದಿಂದ ಜಾರಿಗೆ ಬರಲಿದ್ದು, ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಏಕಕಾಲದಲ್ಲಿಅನುಷ್ಠಾನಕ್ಕೆ ಬರಲಿದೆ. ಉಚಿತ ಪ್ರಯಾಣ- ನಮ್ಮ ಪ್ರಮಾಣ ಎಂದು ರಾಜ್ಯ ಸರಕಾರ ಈ ಯೋಜನೆಯನ್ನು ಬಣ್ಣಿಸಿಕೊಂಡಿದ್ದು, ರಾಜ್ಯದ ಹಳ್ಳಿ ಹಳ್ಳಿಯ ಪ್ರತೀ ಮನೆಯ ಮಹಿಳೆಗೂ ಈ ಯೋಜನೆ ತಲುಪಲು, ಯೋಜನೆ ಜಾರಿಯನ್ನು ಹಬ್ಬದಂತೆ ಆಚರಿಸಲು ನಿರ್ಧರಿಸಲಾಗಿದೆ.

ಉಚಿತ ಬಸ್​ ಹತ್ತೋ ಮುನ್ನ ಈ 9 ಅಂಶಗಳನ್ನು ಮರೆಯಬೇಡಿ

1. ಗುರುತಿನ ಚೀಟಿ ಕಡ್ಡಾಯ
ಉಚಿತ ಪ್ರಯಾಣಕ್ಕೆ ಹೊರಟ ಮಹಿಳೆಯರು ಕಡ್ಡಾಯವಾಗಿ ಯಾವುದಾದರೊಂದು ಮನೆ ವಿಳಾಸ/ ಭಾವ ಚಿತ್ರ ಇರುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಟಿಕೆಟ್‌ ಶುಲ್ಕ ಪಾವತಿಸಬೇಕಾಗುತ್ತದೆ. ವೋಟರ್‌ ಐಡಿ, ಆಧಾರ್‌ ಕಾರ್ಡ್‌, ವಾಹನ ಚಾಲನಾ ಪರವಾನಗಿ, ರೇಷನ್‌ ಕಾರ್ಡ್‌ ಸೇರಿದಂತೆ ಸರ್ಕಾರದಿಂದ ನೀಡಲಾಗುವ ಇತರೆ ಗುರುತಿನ ಚೀಟಿಗಳಲ್ಲಿ ಒಂದನ್ನು ಪ್ರಯಾಣ ಸಂದರ್ಭದಲ್ಲಿ ಹೊಂದಿರಬೇಕು.

2. ಐಶಾರಾಮಿ ಬಸ್‌ ಹತ್ತುವಂತಿಲ್ಲ
ಮಹಿಳೆಯರು ಉಚಿತ ಬಸ್‌ ಪ್ರಯಾಣ ಸೌಲಭ್ಯ ಬೇಕು ಅಂದರೆ ಕೇವಲ ನಗರ ಸಾರಿಗೆ, ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ಮಾತ್ರ ಸಂಚರಿಸಬೇಕು. ಐಶಾರಾಮಿ ಬಸ್‌ಗಳಾದ ರಾಜಹಂಸ, ಎಸಿ ಬಸ್‌, ಸ್ಲೀಪರ್‌, ವಾಯುವಜ್ರ, ಐರಾವತ, ಅಂಬಾರಿ ಡ್ರೀಮ್‌ ಕ್ಲಾಸ್‌, ವೋಲ್ವೋ ಮಾದರಿಯ ಬಸ್‌ಗಳನ್ನು ಹತ್ತಬಾರದು.

3. ಅಂತರ್‌ರಾಜ್ಯ ಬಸ್‌ಗಳಲ್ಲಿ ಅವಕಾಶ ಇಲ್ಲ
ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯವಿದೆ ಎಂದು ಅಂತರ್‌ರಾಜ್ಯದ ಸಾರಿಗೆ ಬಸ್‌ಗಳನ್ನು ಹತ್ತುವಂತಿಲ್ಲ ಕೇವಲ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಾಹನಗಳಿಗೆ ಮಾತ್ರ ಉಚಿತ ಸೌಲಭ್ಯ ಅನ್ವಯವಾಗುತ್ತದೆ.

4. ಅಂತರ್‌ರಾಜ್ಯ ಪ್ರಯಾಣ ಇಲ್ಲ
ಸಾರಿಗೆ ಬಸ್‌ಗಳಲ್ಲಿ ಕೇವಲ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ಇರುತ್ತದೆ. ನೆರೆಯ ರಾಜ್ಯದ ಸ್ಥಳಗಳಿಗೆ ತೆರಳಬೇಕು ಎಂದರೆ ಹಣ ಪಾವತಿಸಬೇಕಾಗುತ್ತದೆ.

5. ಮೂರು ತಿಂಗಳೊಳಗೆ ಪಡೆಯಿರಿ ಶಕ್ತಿ ಸ್ಮಾರ್ಟ್‌ ಕಾರ್ಡ್
ಉಚಿತ ಪ್ರಯಾಣ ಸೌಲಭ್ಯ ಇದೆ ಎಂದು ಕೇವಲ ಗುರುತಿನ ಚೀಟಿ ತೋರಿಸಿಕೊಂಡು ಪ್ರಯಾಣ ಮಾಡುವಂತಿಲ್ಲ. ಮುಂದಿನ ಮೂರು ತಿಂಗಳಲ್ಲಿ ಸಾರಿಗೆ ಸಂಸ್ಥೆಗಳಿಂದ ನೀಡುವ ಶಕ್ತಿ ಸ್ಮಾರ್ಟ್‌ ಕಾರ್ಡ್‌ ಪಡೆದುಕೊಳ್ಳಬೇಕು. ‘ಶಕ್ತಿ’ ಸ್ಮಾರ್ಟ್‌ ಕಾರ್ಡ್‌ಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿಅರ್ಜಿ ಸಲ್ಲಿಸಲು ಜೂ.15ರಿಂದ ಅವಕಾಶ ನೀಡಲಾಗಿದೆ.

6. ಶೇ.50 ರಷ್ಟು ಆಸನಗಳನ್ನು ಪುರುಷರಿಗೆ ಮೀಸಲಿಡಬೇಕು
ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಉಚಿತ ಸೌಲಭ್ಯ ಇರುವುದರಿಂದ ಶುಲ್ಕ ಪಾವತಿಸುವ ಪುರುಷರಿಗೆ ಶೇ.50 ರಷ್ಟು ಆಸನ ಮೀಸಲಿಡಲಾಗಿದೆ. ಹೀಗಾಗಿ, ಅಗತ್ಯ ಬಿದ್ದರೆ ಪುರುಷರಿಗೆ ಸೀಟ್‌ ಬಿಟ್ಟುಕೊಡಬೇಕು.

7. ಉಚಿತವಿದ್ದರು ಟಿಕೆಟ್‌ ಪಡೆದುಕೊಳ್ಳುವುದು ಕಡ್ಡಾಯ
ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿಯ ಪ್ರಯಾಣ ಸೌಲಭ್ಯ ಇದ್ದರೂ ಶೂನ್ಯ ಶುಲ್ಕ ನಮೂದಿಸಿದ ಬಸ್‌ ಟಿಕೆಟ್‌ ನೀಡಲಾಗುತ್ತದೆ. ಬಸ್‌ ಹತ್ತಿದ ಪ್ರತಿಯೊಬ್ಬ ಮಹಿಳೆಯರು ಈ ಟಿಕೆಟ್‌ ಹೊಂದಿರಬೇಕು. ಇಲ್ಲವಾದರೆ ತಪಾಸಣೆ ಸಂದರ್ಭದಲ್ಲಿ ದಂಡ ಕಟ್ಟಬೇಕಾಗುತ್ತದೆ.

8. ಲಗೇಜ್‌ ಶುಲ್ಕ ಪಾವತಿಸಬೇಕು
ಒಬ್ಬ ಪ್ರಯಾಣಿಕರಿಗೆ ಸಾರಿಗೆ ಬಸ್‌ಗಳಲ್ಲಿ 30 ಕೆ.ಜಿವರೆಗೂ ಅಗತ್ಯ ಸಾಮಗ್ರಿಗಳನ್ನು ಉಚಿತವಾಗಿ ಲಗೇಜ್‌ ಸಾಗಿಸಲು ಅವಕಾಶವಿದೆ. ಅದರ ಮೇಲಿನ ಲಗೇಜ್‌ಗೆ ಶುಲ್ಕ ಪಾವತಿಸಬೇಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಎಂಬ ಕಾರಣಕ್ಕೆ ಲಗೇಜ್‌ ಉಚಿತವಲ್ಲ. 30 ಕೆ.ಜಿ ಮೇಲಿದ್ದರೆ ಶುಲ್ಕ ಕಟ್ಟಬೇಕು.

9. ಉಚಿತ ಪ್ರಯಾಣವೆಂದು ಟಿಕೆಟ್‌ ಪಡೆದಕ್ಕಿಂತ ಹೆಚ್ಚು ಪ್ರಯಾಣ ಇಲ್ಲ
ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯವಿದೆ ಎಂಬ ಕಾರಣಕ್ಕೆ ಟಿಕೆಟ್‌ ಪಡೆದುಕೊಂಡ ಸ್ಥಳಕ್ಕಿಂತ ಹೆಚ್ಚಿನ ದೂರ ಕ್ರಮಿಸುವಂತಿಲ್ಲ. ಒಂದು ವೇಳೆ ಟಿಕೆಟ್‌ ಪಡೆದ ಸ್ಥಳದಲ್ಲಿ ಬಸ್‌ ಇಳಿಯದೇ ಹೆಚ್ಚುವರಿ ದೂರು ತೆರಳಬೇಕಿದ್ದರೆ ಮತ್ತೆ ಟಿಕೆಟ್‌ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now