ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ಮಾಡಿತ್ತು. ಅಂತೆಯೇ 135 ಸೀಟ್ ಗಳ ಸ್ಪಷ್ಟ ಬಹುಮತ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವೇ ಕರ್ನಾಟಕದಲ್ಲಿ ಅಧಿಕಾರ ಸ್ಥಾಪಿಸಿದೆ ಹೀಗಾಗಿ ಕಾಂಗ್ರೆಸ್ ಪಕ್ಷವು ಗ್ಯಾರಂಟಿಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಮೇ 20ನೇ ತಾರೀಕಿನಂದು ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಪ್ರಮಾಣ ವಚನ ಸ್ವೀಕರಿಸಿದ್ದರು ಹಾಗೆ ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿ ಅಂದೇ ಮೊದಲ ಸಚಿವ ಸಂಪುಟ ಸಭೆ ನಡೆಸಿ ಈ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತರುವುದಕ್ಕೆ ತಾತ್ವಿಕ ಅನುಮೋದನೆಯನ್ನು ಸಹ ನೀಡಿದ್ದರು. ಇದಕ್ಕಾಗಿ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಚಿವರಿಗೆ ಸಾಧಕ ಬಾಧಕಗಳನ್ನು ಪಟ್ಟಿ ಮಾಡಿ ತರುವಂತೆ ಸೂಚಿಸಿದ್ದರು.
ಬಲವಾದ ಮೂಲಗಳ ಪ್ರಕಾರ ಜೂನ್ 1ನೇ ತಾರೀಖಿನಂದು ನಡೆಯುವ ಮತ್ತೊಂದು ಸುತ್ತಿನ ಕ್ಯಾಬಿನೆಟ್ ಮೀಟಿಂಗ್ ಬಳಿಕ ಮುಖ್ಯಮಂತ್ರಿಗಳೇ ಈ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆರುವ ಮಾರ್ಗಸೂಚಿಗಳನ್ನು ಹಾಗೂ ರೂಪುರೇಷೆಗಳನ್ನು ಅಫಿಷಿಯಲ್ ಆಗಿ ಅನೌನ್ಸ್ ಮಾಡಲಿದ್ದಾರೆ ಅದಕ್ಕೂ ಮುನ್ನ ಸಂಬಂಧ ಪಟ್ಟ ಸಚಿವರೂ ಕೂಡ ಈ ಯೋಜನೆಗಳು ಗ್ಯಾರಂಟಿಯಾಗಿ ಜಾರಿಗೆ ಬರುವ ಬಗ್ಗೆ ಮಾಧ್ಯಮಗಳಿಗೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
ಈಗ ಹೇಳಿರುವ 5 ಗ್ಯಾರಂಟಿ ಯೋಜನೆಗಲ್ಲಿ ಮೊದಲ ಮೂರು ಗ್ಯಾರಂಟಿಗಳಾಗಿ ಶಕ್ತಿ ಯೋಜನೆ ಅಡಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಕೂಡ ಉಚಿತವಾಗಿ ಕರ್ನಾಟಕ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣ ಮಾಡುವುದಕ್ಕೆ ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳ ಮುಖ್ಯಸ್ಥರ ಹಾಗೂ ಅಧಿಕಾರಿಗಳ ಜೊತೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಚರ್ಚೆ ನಡೆಸಿ ಅಂಕಿ ಅಂಶಗಳನ್ನು ಕಲೆ ಹಾಕಿದ್ದಾರೆ.
ಯಾವುದೇ ಕಂಡೀಶನ್ ಇಲ್ಲದೆ ಕರ್ನಾಟಕದ ಎಲ್ಲ ಮಹಿಳೆಯರಿಗೂ ಕೂಡ ಕರ್ನಾಟಕ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ BPL ಕಾರ್ಡ್ ಹೊಂದಿರುವ ಕುಟುಂಬಗಳ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡುವುದಾಗಿ ಗ್ಯಾರಂಟಿ ಕೊಟ್ಟಿದ್ದ ಸರ್ಕಾರದ ಈ ಯೋಜನೆಗೆ ಈಗ ನೂತನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾಗಿರುವ ಕೆ.ಎಚ್ ಮುನಿಯಪ್ಪ ಅವರು ಮಾಹಿತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದಿದ್ದಾರೆ.
ಕರ್ನಾಟಕದಲ್ಲಿ ಎಷ್ಟು BPL ಕಾರ್ಡ್ ಗಳಿವೆ ಮತ್ತು ಯಾವ ರೀತಿ ಇದನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎನ್ನುವುದಕ್ಕೆ ತಯಾರು ಮಾಡಿಕೊಂಡಿರುವ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿ ಜೊತೆ ಇನ್ನೂ 5 ಕೆಜಿ ಅಕ್ಕಿಯನ್ನು ಅವರಿಗೆ ಕೊಡಲು ಹೇಳಿದ್ದೇವೆ ಅದಕ್ಕೆ ತಗಲುವ ವೆಚ್ಚವನ್ನು ನಾವು ಕೇಂದ್ರಕ್ಕೆ ಕೊಡಲು ತಯಾರಿದ್ದೇವೆ. ಒಂದು ವೇಳೆ ಅವರು ಒಪ್ಪದೆ ಇದ್ದಲ್ಲಿ ಟೆಂಡರ್ ಕರೆಸಿ ಆದರೂ ಇದನ್ನು ಪೂರ್ತಿಗೊಳಿಸುತ್ತೇವೆ.
ರಾಗಿ ಗೋಧಿ ಜೋಳ ಈ ರೀತಿ ಯಾವುದನ್ನಾದರೂ ಉಚಿತವಾಗಿ ಕೊಡುವ ಚಿಂತನೆ ನಡೆಸಿದರೆ ಎಲ್ಲವೂ ಸೇರಿ 10 ಕೆಜಿ ಪ್ಯಾಕೇಜ್ ಒಳಗೆ ಇರುತ್ತದೆ ಎಂದು ಸ್ಪಷ್ಟತೆ ಕೊಟ್ಟಿದ್ದಾರೆ. ಹಾಗೆಯೇ ಗೃಹಲಕ್ಷ್ಮಿ ಯೋಜನೆಯಲ್ಲಿ ಸಹಾಯಧನವನ್ನು ಮನೆ ಒಡತಿಯಾಗಿ ಅತ್ತೆಗೆ ಕೊಡಬೇಕೋ ಸೊಸೆಗೆ ಕೊಡಬೇಕೋ ಎನ್ನುವ ಗೊಂದಲ ಬಹಳ ಕಾಡಿತ್ತು.
ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟತೆ ಕೊಟ್ಟಿದ್ದು ನಮ್ಮ ಸಂಸ್ಕೃತಿ ಪ್ರಕಾರ ಅತ್ತೆಯೇ ಮನೆಯ ಒಡತಿ ಹಾಗಾಗಿ ಅವರಿಗೆ ಕೊಡುತ್ತೇವೆ. ಆದರೆ ಅವರು ಬ್ಯಾಂಕ್ ಖಾತೆ ಹೊಂದಿರಬೇಕು ಒಂದು ವೇಳೆ ಅತ್ತೆ ಪ್ರೀತಿಯಿಂದ ಸಹಿ ಮಾಡಿ ಸೊಸೆಗೆ ಬಿಟ್ಟುಕೊಟ್ಟರೆ ಆಕ್ಷೇಪವಿರುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾಗಿ ಮೊದಲ ಮೂರು ಗ್ಯಾರಂಟಿಗಳಾಗಿ ಈ ಯೋಜನೆಗಳು ಜೂನ್ 1ರಿಂದಲೇ ಜಾರಿಗೆ ಬರುವುದು ಬಹುತೇಕ ಸ್ಪಷ್ಟವಾಗಿದೆ.