ರೂಟ್ ಸೆಡ್ ಸಂಸ್ಥೆಯ ಬಗ್ಗೆ ಕರ್ನಾಟಕ ಎಲ್ಲರಿಗೂ ಕೂಡ ತಿಳಿದೇ ಇದೆ. ಧರ್ಮಸ್ಥಳದ ರುಡ್ ಸೆಡ್ ಸಂಸ್ಥೆಯೆಂದೇ ಖ್ಯಾತಿ ಹೊಂದಿ ಈ ಸಂಸ್ಥೆಯು ಕರ್ನಾಟಕದಾದ್ಯಂತ ಎಲ್ಲಾ ಗ್ರಾಮದ ಯುವಕ ಯುವತಿಯರಿಗೆ ಪರಿಚಯವಾಗಿದೆ. ಯಾಕೆಂದರೆ ಈ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗ ಯುವಕ ಯುವತಿಯರಿಗೆ ಉಚಿತ ತರಬೇತಿಗಳನ್ನು ಕೊಟ್ಟು, ಅವರಿಗೆ ಮಾರ್ಗದರ್ಶನ ನೀಡಿ ಸ್ವಯಂ ಉದ್ಯೋಗ ಸ್ಥಾಪಿಸುವಂತೆ ಪ್ರೇರೇಪಿಸಲಾಗುತ್ತಿದೆ.
ಅದಕ್ಕಾಗಿ 45 ದಿನಗಳ ಉಚಿತ ಕಾರ್ಯಗಾರ ನಡೆಸಿ ಅವರಿಗೆ ಬದುಕು ಬದುಕಟ್ಟಿಕೊಳ್ಳಲು ಈ ಸಂಸ್ಥೆ ಸಹಾಯ ನೀಡುತ್ತಿದೆ. ಇದುವರೆಗೆ ಕರ್ನಾಟಕದ ಎಲ್ಲ ಪ್ರಮುಖ ನಗರಗಳಲ್ಲೂ ಕೂಡ ಈ ಸಂಸ್ಥೆಯ ತರಬೇತಿ ಕೇಂದ್ರಗಳು ಸ್ಥಾಪನೆಯಾಗಿ ಕರ್ನಾಟಕದ ಲಕ್ಷಾಂತರ ಯುವಕ ಯುವತಿಯರು ಇದರ ಪ್ರಯೋಜನ ಪಡೆದು ಜೀವನ ಕಟ್ಟಿಕೊಂಡಿದ್ದಾರೆ.
ಈವರೆಗೆ ಸಂಸ್ಥೆ ಮೂಲಕ ಮಹಿಳೆಯರಿಗೆ ಉಚಿತವಾಗಿ ಹೋಲಿಗೆ ತರಬೇತಿ ಮತ್ತು ಬ್ಯೂಟಿ ಪಾರ್ಲರ್ ತರಬೇತಿ ಇನ್ನು ಮುಂತಾದ ತರಬೇತಿಗಳನ್ನು ನೀಡಲಾಗುತ್ತಿತ್ತು. ಹಾಗೂ ಪುರುಷ ಮತ್ತು ಮಹಿಳಾ ಆಸಕ್ತ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಜ್ಞಾನದ ಕುರಿತು ಉಚಿತ ತರಬೇತಿ ಮತ್ತು ಕೃಷಿ ಚಟುವಟಿಕೆ ಕುರಿತು ತರಬೇತಿ ಹೀಗೆ ಗ್ರಾಮೀಣ ಭಾಗದಲ್ಲಿಯೇ ಇದ್ದುಕೊಂಡು ಯುವಕ ಯುವತಿಯರು ಯಾವೆಲ್ಲ ಉದ್ಯಮಿಗಳನ್ನು ಮಾಡಿ ಮುಂದೆ ಬರುವುದು ಬರಬಹುದು ಎನ್ನುವುದಕ್ಕೆ ಸಂಬಂಧಪಟ್ಟ ಹಾಗೆ ಯೋಜನೆ ರೂಪಿಸಿ ಆ ರೀತಿ ನುರಿತ ಶಿಕ್ಷಕರಿಂದ ತರಬೇತಿ ಕೊಡಿಸಲಾಗುತ್ತಿತ್ತು.
ಈ ಸಮಯದಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯು ಇರುತ್ತಿತ್ತು. ಇದರಿಂದ ಗ್ರಾಮೀಣ ಭಾಗದ ಜನರು ತರಬೇತಿ ಕೇಂದ್ರಗಳಿಗೆ ತೆರಳಿ 45 ದಿನಗಳ ಕಾಲ ಟ್ರೈನಿಂಗ್ ಪಡೆದು ನಂತರ ತಮ್ಮ ಗ್ರಾಮಗಳಿಗೆ ಹಿಂತಿರುಗಿ ಭೇಟಿಯಲ್ಲಿ ತರಬೇತಿಯಲ್ಲಿ ಕಲಿತದ್ದನ್ನು ಬಳಸಿಕೊಂಡು ಜೀವನ ನಡೆಸುವುದಕ್ಕೆ ಅನುಕೂಲವಾಗುತ್ತಿತ್ತು.
ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಆಧರಿತ ಉದ್ಯೋಗಗಳು ಹೆಚ್ಚಾಗಿರುವುದರಿಂದ ಮತ್ತು ಎಲ್ಲಾ ಕಡೆಯೂ ಇದಕ್ಕೆ ಬೇಡಿಕೆ ಇರುವುದರಿಂದ ಹಳ್ಳಿಗಳ ತನಕ ಕೂಡ ಕಂಪ್ಯೂಟರ್ ಪರಿಣಾಮ ಬೀರಿರುವುದರಿಂದ ಈ ಬಾರಿ ಉಚಿತ ಕಂಪ್ಯೂಟರ್ DTP ತರಬೇತಿಯನ್ನು ಸಂಸ್ಥೆಯು ನೀಡುತ್ತಿದೆ. ಅದಕ್ಕಾಗಿ ಆಸಕ್ತರಿಂದ ಅರ್ಜಿ ಕೂಡ ಆಹ್ವಾನಿಸಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದೆ. ಇದಕ್ಕೆ ಸಂಬಂಧ ಪಟ್ಟ ವಿವರಗಳನ್ನು ಈ ಅಂಕಣದಲ್ಲಿ ನೀಡುತ್ತಿದ್ದೇವೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಾವು ನೀಡುವ ಮೊಬೈಲ್ ಸಂಖ್ಯೆಗೆ ಅಥವಾ ವೆಬ್ ಸೈಟ್ ಅಡ್ರೆಸ್ಸಿಗೆ ಸಂಪರ್ಕಿಸುವ ಮೂಲಕ ಹೆಚ್ಚಿನ ವಿವರ ಪಡೆಯಿರಿ.
ತರಬೇತಿ ನೀಡುವ ಸಂಸ್ಥೆ:- ರುಡ್ ಸೆಟ್
ತರಬೇತಿ ಪಡೆಯಲು ಬೇಕಾದ ಅರ್ಹತೆಗಳು:-
● ಗ್ರಾಮೀಣ ಭಾಗದ ಅಭ್ಯರ್ಥಿಗಳಿಗಷ್ಟೇ ಅವಕಾಶ. ಅದರಲ್ಲೂ, ದಕ್ಷಿಣ ಕನ್ನಡ ಭಾಗದವರಿಗೆ ಮೊದಲ ಆದ್ಯತೆ.
● ಬಿಪಿಎಲ್ ರೇಷನ್ ಕಾರ್ಡ್ ಹೊಂದಿರಬೇಕು ಅಥವಾ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಚೀಟಿ ಹೊಂದಿರಬೇಕು.
● 18 ವರ್ಷದಿಂದ 45 ವರ್ಷದ ಒಳಗಿನ ವಯೋಮನದ ಒಳಗೆ ಇರಬೇಕು.
ತರಬೇತಿ ನೀಡಲಾಗುವ ವಿಷಯ:-
● ಉಚಿತ ಕಂಪ್ಯೂಟರ್ ಡಿಟಿಪಿ ತರಬೇತಿ
● ಕಂಪ್ಯೂಟರ್ ಬೇಸಿಕ್
● ಕೊರಲ್ ಡ್ರಾ
●ಪೇಜ್ ಮೇಕರ್
● ಫೋಟೋಶಾಪ್
ತರಬೇತಿ ಕಾಲ:- 45 ದಿನಗಳು,
15.05.2023 ರಿಂದ 28.06.2023 ರವರೆಗೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
● ಮೊಬೈಲ್ ಸಂಖ್ಯೆ – 9591044014, 9900793675, 9448484237, 9980885900, 9902594791.
● ವೆಬ್ ಸೈಟ್ ವಿಳಾಸ – www.rudsetujire.com