ನಮ್ಮ ದೇಶದಲ್ಲಿ ಇಂದಿಗೂ ಸಹ ಅದೆಷ್ಟೋ ಜನರು ಸ್ವಂತ ಮನೆಗಳಿಲ್ಲದೆ ಸ್ವಂತ ಜಾಗಗಳಿಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಅಂತಹವರಿಗೆ ಇದು ಸಿಹಿ ಸುದ್ದಿ. ಮಾರ್ಚ್ 21ಕ್ಕೆ ಸರ್ಕಾರ ಹೊಸ ಮನೆಗಳನ್ನು ಬಿಡುಗಡೆ ಮಾಡಲಿದೆ ವಸತಿ ಸಚಿವರಾದ ಬಿ ಸೋಮಣ್ಣ ಅವರು ನಿರ್ಧಾರವನ್ನು ಕೈಗೊಂಡಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜು ಬೊಮ್ಮಾಯಿಯವರು ಮಾರ್ಚ್ 21 ಹೊಸ ಮನೆಗಳ ಬಿಡುಗಡೆಯ ಉದ್ಘಾಟನೆ ಸಮಾರಂಭವನ್ನು ನೆರವೇರಿಸಲಿದ್ದಾರೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೆಯೇ ಇದಕ್ಕೆ ಬೇಕಾಗಿರುವಂತಹ ಕೆಲವೊಂದು ದಾಖಲಾತಿಗಳು ನೋಡುವುದಾದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಗಾಗ ಕೆಲವೊಂದು ಹೊಸ ನಿಯಮಗಳನ್ನು ರೂಪಿಸುತ್ತಲೇ ಇರುತ್ತದೆ. ಇದೀಗ ಬಡ ಜನರಿಗೆ ಅಂದರೆ ಮನೆಗಳು ಇಲ್ಲದಂತಹ ಜನರಿಗೆ ಕುಟುಂಬಗಳಿಗೆ ಹೊಸ ಮನೆಗಳನ್ನು ರೂಪಿಸಬೇಕು ಎನ್ನುವಂತಹ ಮಹತ್ವಾಕಾಂಕ್ಷೆ ಒಳಗೊಂಡಿದ್ದಾರೆ ಈಗಾಗಲೇ ಸಾಕಷ್ಟು ವಸತಿ ಯೋಜನೆಗಳು ಬಿಡುಗಡೆಯಾಗಿದ್ದು.
ಬಡವರಿಗೆ ಈ ಯೋಜನೆಯಿಂದ ಲಾಭ ಪಡೆಯುತ್ತಿಲ್ಲ ಬದಲಿಗೆ ಬಡತನದ ರೇಖೆಯಿಂದ ಮೇಲೆ ಇರುವಂತಹ ಸಾಕಷ್ಟು ಜನರು ಈ ಯೋಜನೆಯ ಫಲವನ್ನು ಪಡೆದುಕೊಂಡಿದ್ದಾರೆ ಆದರೆ ಇದೀಗ ಯಾರೆಲ್ಲಾ ಬಡವರು ಇರುತ್ತಾರೆ ಅಂತಹವರಿಗೆ ಮಾತ್ರ ಈ ಯೋಜನೆಯ ಫಲ ದೊರೆಯಬೇಕು ಎನ್ನುವಂತಹ ಉದ್ದೇಶದಿಂದ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧಡೆ ಮನೆಗಳನ್ನು ಮಾರ್ಚ್ 21 ರಂದು ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರ ಮಾಡಲಿದ್ದಾರೆ.
ಸಿಎಮ್ ಬಸವರಾಜು ಬೊಮ್ಮಾಯಿಯವರು ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ ಪ್ರಧಾನಮಂತ್ರಿಯ ಆವಾಜ್ ಯೋಜನೆಯಿಂದ 5,24,426 ಮನೆಗಳನ್ನು ನಿರ್ಮಿಸಿ ಅರ್ಹರಿಗೆ ನೀಡಲಾಗುತ್ತದೆ. ಈ ಯೋಜನೆಗೆ ಖರ್ಚಾಗಿರುವಂತಹ ಬರೋಬ್ಬರಿ ಹಣ 8,381 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಬೆಂಗಳೂರು ರಾಜ್ಯದ ವಿವಿದೆಡೆ ಮನೆಗಳು ನಿರ್ಮಾಣವಾಗಿದ್ದು ಬೆಂಗಳೂರಿನಲ್ಲಿ 2,360 ಮನೆಗಳು ಕರ್ನಾಟಕದ ವಿವಿದೆಡೆ 7,746 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು ಯಾರು ಬಡವರು ಇರುತ್ತಾರೆ ಅಂತಹವರಿಗೆ ಮನೆಗಳನ್ನು ಹಸ್ತಾಂತರ ಮಾಡಲಾಗುತ್ತಿದೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂದಿಗೂ ಸಹ ಬಡತನದ ಸೆಲಿಯಿಂದ ಹೊರಗೆ ಬಂದಿಲ್ಲ ಎಷ್ಟೋ ಜನರು ಮನೆಗಳು ಇಲ್ಲದೆ ಫುಟ್ಪಾತ್ ನಲ್ಲಿ ಮಲಗಿ ಜೀವನವನ್ನು ನಡೆಸುತ್ತಿದ್ದಾರೆ ಅಥವಾ ಬಾಡಿಗೆ ಮನೆಗಳಲ್ಲಿ ವಾಸವಿದ್ದು ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಅಂತಹವರಿಗೆ ಇದೊಂದು ಉತ್ತಮ ಅವಕಾಶ ಯಾರು ಬಡತನದಲ್ಲಿ ಇರುತ್ತಾರೆ ಅಂತಹವರಿಗೆ ಮನೆಗಳನ್ನು ನೀಡುವುದರಿಂದ ಅವರ ಕಷ್ಟ ನಿವಾರಣೆಯಾಗುತ್ತದೆ.
ಈವರೆಗೆ ಅದೆಷ್ಟೋ ವಸತಿ ಯೋಜನೆಗಳು ನಿರ್ಮಾಣವಾಗಿದ್ದು ಅರ್ಹ ಫಲಾನುಭವಿಗಳಿಗೆ ವಸತಿ ನೀಡಲಾಗಿಲ್ಲ ಆದ್ದರಿಂದ ಈ ಬಾರಿ ಯಾರೆಲ್ಲಾ ಅರ್ಹರು ಇರುತ್ತಾರೆ ಅಂತಹವರಿಗೆ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿ ನಂತರ ಮನೆಗಳನ್ನು ವಿತರಣೆ ಮಾಡಲಾಗುತ್ತದೆ. ವಸತಿ ಸಚಿವ ಸೋಮಣ್ಣ ಮತ್ತು ಸಿಎಂ ಬಸವರಾಜು ಬೊಮ್ಮಾಯಿ ಅವರ ನೇತೃತ್ವದಲ್ಲಿ ಈ ಒಂದು ಕಾರ್ಯಕ್ರಮ ಜರುಗಲಿದ್ದು ಬೆಂಗಳೂರಿನಲ್ಲಿ ಯಲಹಂಕಲ, ಗೋವಿಂದ್ ರಾಜ್ ನಗರ, ಮುದ್ದಯ್ಯನಪಾಳ್ಯ, ಆನೇಕಲ್. ಕೆ ಆರ್ ಪುರದಲ್ಲಿ ಮನೆಗಳ ಹಸ್ತಾಂತರ ಮಾಡಲಾಗಿದೆ.
ಚಹಾಪುರ, ಚಿತ್ತಾಪುರ ಉಡುಪಿ ಹುಬ್ಬಳ್ಳಿ, ಶೀರ, ಬಂಗಾರಪೇಟೆ, ಮಂಡ್ಯ ಸೇರಿದಂತೆ ಮೊದಲಾದ ಕಡೆಗಳಲ್ಲಿ ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಖುದ್ದಾಗಿ ಈ ಕಾರ್ಯಕ್ರಮವನ್ನು ಸಿಎಂ ಬಸವರಾಜು ಬೊಮ್ಮಾಯಿ ಅವರೇ ನಡೆಸಿಕೊಡಲಿದ್ದಾರೆ. ನೀವು ವಸತಿ ಸೌಲಭ್ಯವನ್ನು ಪಡೆದುಕೊಳ್ಳಲು ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬೇಕು.