ಸರ್ಕಾರವು ರೈತರಿಗೆ ಬೆಳೆ ಪರಿಹಾರ ಹಾಗೂ ಬರ ಪರಿಹಾರದ ಹಣವನ್ನು DBT ಮೂಲಕ ವರ್ಗಾವಣೆ ಮಾಡುತ್ತಿದೆ, ಅರ್ಜಿ ಸಲ್ಲಿಸಿದ್ದ ಅರ್ಹ ರೈತರು ಈ ಹಣವನ್ನು ಪಡೆಯುತ್ತಿದ್ದಾರೆ. ನೀವು ಕೂಡ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎಂದು ಅಥವಾ ನಿಮ್ಮ ಖಾತೆಗೂ ಹಣ ವರ್ಗಾವಣೆ ಆಗಿದೆಯೇ ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಬರ ಪರಿಹಾರದ ಹಣ ಸಿಕ್ಕಿದೆ ಎಂದು ತಿಳಿದುಕೊಳ್ಳಬಹುದು.
ಸರ್ಕಾರ ಹಂತ ಹಂತವಾಗಿ ಎಲ್ಲ ರೈತರಿಗೂ ಹಣ ತುಂಬಿಸುತ್ತಿದೆ ಒಂದು ವೇಳೆ ಪರಿಹಾರದ ಹಣ ಬಂದಿಲ್ಲ ಎಂದರೆ ಶೀಘ್ರದಲ್ಲಿ ನಿಮ್ಮ ಖಾತೆಗೂ ಕೂಡ ವರ್ಗಾವಣೆ ಆಗಲಿದೆ. ಮೊಬೈಲ್ ನಲ್ಲಿಯೇ ನೀವು ಈ ಕೆಳಗಿನ ವಿಧಾನದಲ್ಲಿ ನಿಮಗೂ ಬರ ಪರಿಹಾರದ ಹಣ ಬಂದಿದೆಯೇ ಎಂದು ಚೆಕ್ ಮಾಡಿ ತಿಳಿದುಕೊಳ್ಳಿ.
ಈ ಸುದ್ದಿ ಓದಿ:- ಮನೆಯಲ್ಲಿಯೇ ಪೇಪರ್ ಪ್ಲೇಟ್ ಮಾಡಿ ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ದುಡಿಯಬಹುದು, ಮಹಿಳೆಯರು ಪುರುಷರು ಹಳ್ಳಿಯವರು ಎಲ್ಲರೂ ಕೂಡ ಮಾಡಬಹುದು.!
* Google ನಲ್ಲಿ ಬರ ಪರಿಹಾರ ಎಂದು ಟೈಪ್ ಮಾಡಿ, ಪರಿಹಾರ ಭೂಮಿ ಆನ್ಲೈನ್ (Parihara Bhoomi Online) ಎನ್ನುವ ಸರ್ಕಾರದ ವೆಬ್ ಸೈಟ್ ಲಿಂಕ್ ಸಿಗುತ್ತದೆ, ಲಿಂಕ್ ಕ್ಲಿಕ್ ಮಾಡಿ ಈ ವೆಬ್ಸೈಟ್ ಅಧಿಕೃತ ಪೇಜ್ ಓಪನ್ ಆಗುತ್ತದೆ. ಕನ್ನಡ / ಇಂಗ್ಲೀಷ್ ನಿಮ್ಮ ಆಯ್ಕೆಯ ಭಾಷೆ ಸೆಲೆಕ್ಟ್ ಮಾಡಿ.
* ಮುಖಪುಟದ ಎಡಭಾಗದಲ್ಲಿ ಪರಿಹಾರ ಸೇವೆಗಳ ಲಿಸ್ಟ್ ನಲ್ಲಿ ಪರಿಹಾರ ಪಾವತಿ (Parihara Payment) ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ಮುಂದಿನ ಹಂತದಲ್ಲಿ ಪರಿಹಾರ ನಮೂದು ಸಂಖ್ಯೆ / ಆಧಾರ್ ಸಂಖ್ಯೆ ಈ ಎರಡರಲ್ಲಿ ಯಾವುದರ ಮೂಲಕ ಚೆಕ್ ಮಾಡುತ್ತೀರಾ ಎನ್ನುವುದನ್ನು ಸೆಲೆಕ್ಟ್ ಮಾಡಿ Category type ಆಪ್ಷನ್ ನಲ್ಲಿ Flood ಎಂದು ಸೆಲೆಕ್ಟ್ ಮಾಡಿ, Year 2023-24 ಆಯ್ಕೆ ಮಾಡಿ ನೀವು ಆಧಾರ್ ಸಂಖ್ಯೆ ಮೂಲಕ ಚೆಕ್ ಮಾಡಲು ನಿರ್ಧರಿಸಿದರೆ.
ಈ ಸುದ್ದಿ ಓದಿ:- ಹೊಸ ಡಿಜಿಟಲ್ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ಮೊಬೈಲ್ ನಲ್ಲಿ ಅಪ್ಲೈ ಮಾಡಿ ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರಲಿದೆ.!
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಅಥವಾ ಪರಿಹಾರ ನಮೂದು ಸಂಖ್ಯೆ ಆರಿಸಿದ್ದರೆ ಆ ಸಂಖ್ಯೆ ನಮೂದಿಸಿ Captcha code ಎಂಟ್ರಿ ಮಾಡಿ ವಿವರಗಳನ್ನು ಪಡೆಯಲು (View details) ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಯಾವೆಲ್ಲ ರೈತರ ಹೆಸರಿಗೆ ಬೆಳೆ ಪರಿಹಾರ ಹಾಗೂ ಬರ ಪರಿಹಾರದ ಹಣ ವರ್ಗಾವಣೆ ಆಗಿದೆ ಅದರ ಡೀಟೇಲ್ಸ್ ಪೂರ್ತಿ ಬರುತ್ತದೆ.
* ಬಹಳ ಸುಲಭವಾಗಿ ಇದನ್ನು ನೋಡಬೇಕು ಎಂದರೆ ಹಿಂದಿನ ಮೆನುವಿಗೆ ಹೋಗಿ ಮುಖಪುಟದ ಮೊದಲ ಪೇಜ್ ನಲ್ಲಿ ಪರಿಹಾರ ಸೇವೆಗಳು ಎನ್ನುವುದರಲ್ಲಿ ಪರಿಹಾರ ಪಾವತಿ ಕೆಳಗಿನ ಆಪ್ಷನ್ ಗಳಲ್ಲಿ ಪರಿಹಾರ ಡೇಟಾ ಎಂಟ್ರಿ, ಡೇಟಾ ಎಂಟ್ರಿ ಪ್ರಗತಿ ವರದಿ, ತಾಲೂಕು ವರ್ಗೀಕರಣವಾರು ವರದಿ, ಗ್ರಾಮ ವರ್ಗೀಕರಣವಾರು ಫಲಾನುಭವಿಗಳ ವರದಿ, ಪೇಮೆಂಟ್ ಸ್ಟೇಟಸ್, ಫಲಾನುಭವಿಗಳ ಸ್ಟೇಟಸ್ ರಿಪೋರ್ಟ್ ಇತ್ಯಾದಿ ಮಾಹಿತಿಗಳನ್ನು ಇನ್ನು ಸುಲಭವಾಗಿ ನೇರವಾಗಿ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- ಹೆಣ್ಣು ಮಕ್ಕಳ ಆಸ್ತಿ ವಿಚಾರವಾಗಿ ಮಹತ್ತರದ ತೀರ್ಪು ನೀಡಿದ ಹೈಕೋರ್ಟ್.!
* ಗ್ರಾಮ ವರ್ಗೀಕರಣವಾರು ಫಲಾನುಭವಿಗಳ ವರದಿ ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ Parihara Beneficiary Payment Reorts As on dated ಇರುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಸೆಲೆಕ್ಟ್ ಮಾಡಿ ನಿಮ್ಮ ಗ್ರಾಮ ಪಂಚಾಯಿತಿಯನ್ನು ಸೆಲೆಕ್ಟ್ ಮಾಡಿ Year, Season, Category ಆಯ್ಕೆ ಮಾಡಿ Get report ಸೆಲೆಕ್ಟ್ ಮಾಡುವ ಮೂಲಕ.
ನಿಮ್ಮ ಗ್ರಾಮದಲ್ಲಿ ಯಾರಿಗೆಲ್ಲ ಪರಿಹಾರದ ಹಣ ಬಂದಿದೆ ಅವರ ಹೆಸರು, ಕೊನೆಯ 4 ಆಧಾರ್ ಸಂಖ್ಯೆ, Amout paid details, Payment Status, Action ಎಲ್ಲವನ್ನು ಕೂಡ ನೋಡಬಹುದು ಈ ಮೂಲಕ ನಿಮಗೂ ಬರ ಪರಿಹಾರದ ಹಣ ಬಂದಿದೆಯೇ ಎಷ್ಟು ಹಣ ಜಮೆ ಆಗಿದೆ ಎಂದು ತಿಳಿದುಕೊಳ್ಳಬಹುದು. Action ಆಪ್ಷನ್ ನಲ್ಲಿ ಇರುವ View Status ಕ್ಲಿಕ್ ಮಾಡಿದರೆ ಇನ್ನು ವಿವರವಾಗಿ ಆ ರೈತನ ಯಾವ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿದೆ ಯಾವ ಬೆಳೆ ಹಾಕಿದ್ದರು ಎಂಬ ಸಮಗ್ರ ಮಾಹಿತಿಯನ್ನು ಪಡೆಯಬಹುದು.
ಈ ಸುದ್ದಿ ಓದಿ:- ಈ ಮಹಿಳೆಯರ ಗೃಹಲಕ್ಷ್ಮಿ ಹಣ ಮತ್ತು ಅಕ್ಕಿ ಹಣ ಬಂದ್, 5 ಲಕ್ಷ BPL ಕಾರ್ಡ್ ಕ್ಯಾನ್ಸಲ್, ಹೊಸ ಪಟ್ಟಿ ಬಿಡುಗಡೆ ನಿಮ್ಮ ಕಾರ್ಡ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿಕೊಳ್ಳಿ.!
ಮತ್ತೊಂದು ವಿಚಾರವೇನೆಂದರೆ ನೀವು ಈ ವರ್ಷದ ಈ ಸೀಸನ್ ಮಾತ್ರವಲ್ಲದೆ ಹಿಂದಿನದ್ದು ಕೂಡ ಚೆಕ್ ಮಾಡಬಹುದು.
* https://fruitspmk.karnataka.gov.in ಈ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಕೂಡ ನೇರವಾಗಿ ಪರಿಹಾರ ಹಣದ ಸ್ಟೇಟಸ್ ಬಗ್ಗೆ ಚೆಕ್ ಮಾಡಬಹುದು.