ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಯೋಚನೆಗಳನ್ನು ಜಾರಿಗೆ ತಂದಿವೆ. ರೈತರು, ಕಟ್ಟಡ ಕಾರ್ಮಿಕರು, ವಿದ್ಯಾರ್ಥಿಗಳು ಹೀಗೆ ಎಲ್ಲರ ಏಳಿಗೆಗಳನ್ನು ಬಯಸುತ್ತಿರುವ ಸರ್ಕಾರವು ಎಲ್ಲರನ್ನೂ ಗಮನದಲ್ಲಿ ಇಟ್ಟುಕೊಂಡು ಪ್ರೋತ್ಸಾಹಿಸುವ ಸಲುವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಈಗಾಗಲೇ ಸ್ಕಾಲರ್ಶಿಪ್, ಸೈಕಲ್ ವಿತರಣೆ, ವಿದ್ಯಾರ್ಥಿ ಕಿಟ್, ಬಿಸಿಯೂಟ ಕಾರ್ಯಕ್ರಮ, ಉಚಿತ ಸಮವಸ್ತ್ರ ಇವುಗಳ ಪ್ರಯೋಜನ ಸಿಗುತ್ತಿತ್ತು.
ಇನ್ನು ಮುಂದೆ ಸ್ಕೂಟಿ ಕೂಡ ಸಿಗಲಿದೆ. ಸರ್ಕಾರಿ ಮಾತ್ರವಲ್ಲದೆ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೂ ಕೂಡ ಈ ಪ್ರಯೋಜನ ಸಿಗಲಿದೆ. ಅದಕ್ಕಾಗಿ ಸರ್ಕಾರ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಉಚಿತ ಸ್ಕೂಟಿ ಯೋಜನೆ ಮತ್ತು ಮೆರಿಟೋರಿಯಸ್ ವಿದ್ಯಾರ್ಥಿ ಸ್ಕೂಟಿ ಯೋಜನೆ ಮೂಲಕ ಸ್ಕೂಟಿಗಳನ್ನು ವಿದ್ಯಾರ್ಥಿನಿಯರಿಗೆ ಕೊಡುವ ನಿರ್ಧಾರವನ್ನು ಸರ್ಕಾರ ಮಾಡಿದೆ.
ಈ ಹಿಂದೆ ವಾರ್ಷಿಕವಾಗಿ 20 ಸಾವಿರ ಸ್ಕೂಟಿಗಳನ್ನು ವಿತರಣೆ ಮಾಡಬೇಕು ಎಂದು ಯೋಚನೆ ಮಾಡಿತ್ತು, ಆದರೆ ಸರ್ಕಾರದ 2023-24 ನೇ ಆರ್ಥಿಕ ವರ್ಷದ ಬಜೆಟ್ ಅನೌನ್ಸ್ ಆದ ವೇಳೆ 390 ಕೋಟಿ ರೂ ವೆಚ್ಚ ಮಾಡಿ ಅದನ್ನು ಇನ್ನೂ 10,000 ಸಂಖ್ಯೆಗೆ ಹೆಚ್ಚಿಸಿದೆ. ಇದರಿಂದ ಹೆಚ್ಚುವರಿ ಆಗಿ ರಾಜ್ಯದ 10,000 ವಿದ್ಯಾರ್ಥಿನಿಯರು ಉಚಿತ ಸ್ಕೂಟಿ ಯೋಜನೆ ಅಡಿಯಲ್ಲಿ ಈ ಸ್ಕೂಟಿಗಳನ್ನು ಪಡೆಯಬಹುದಾಗಿದೆ.
ಅದಕ್ಕಾಗಿ “ದಿ ಸ್ಕೂಟಿ ಯೋಜನೆಗೆ” ಅರ್ಜಿ ಸಲ್ಲಿಸಿ ವಿದ್ಯಾರ್ಥಿನಿಯರು ಸ್ಕೂಟಿ ಪಡೆಯಬೇಕಾಗುತ್ತದೆ, ಆದರೆ ಇದಕ್ಕೆ ಕೆಲ ನಿಯಮಗಳು ಇವೆ. ರಾಜ್ಯದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದ್ದು, ಅದಕ್ಕಾಗಿ ಇರುವ ನಿಯಮದ ಕೆಲ ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ. ಇದನ್ನು ಓದಿ ತಕ್ಷಣವೇ ಅರ್ಜಿ ಸಲ್ಲಿಸಿ ಇದರ ಫಲಾನುಭವಿಗಳಾಗಿ ಮತ್ತು ಈ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಉಚಿತ ಸ್ಕೂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ನಿಯಮಗಳು:-
●ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬೇಕು.
●ವಿದ್ಯಾರ್ಥಿನಿಯರು SC&ST ಅಥವಾ OBC ವರ್ಗಕ್ಕೆ ಸೇರಿದವರಾಗಿರಬೇಕು.
●ಈ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಯಲ್ಲಿ 65% ಗಿಂತ ಹೆಚ್ಚು ಅಂಕ ಪಡೆದಿರಬೇಕು ಅಥವಾ ಸಿಬಿಎಸ್ಸಿ ಯ 12ನೇ ತರಗತಿ ಪರೀಕ್ಷೆಯಲ್ಲಿ 75% ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.
●ವಿದ್ಯಾರ್ಥಿನಿಯರು ಕಳೆದ ವರ್ಷದಲ್ಲಿ ಯಾವುದೇ ಖಾಸಗಿ ಅಥವಾ ಸರ್ಕಾರಿ ಕಾಲೇಜಿನಲ್ಲಿ ನಿಯಮಿತವಾಗಿ ಶಿಕ್ಷಣ ಪಡೆದಿರಬೇಕು.
●ಅರ್ಜಿ ಸಲ್ಲಿಸುವ ವಿದ್ಯಾರ್ಥಿನಿಯರ ಪೋಷಕರ ವಾರ್ಷಿಕ ಆದಾಯ ಎರಡೂವರೆ ಲಕ್ಷ ಮೀರಿರಬಾರದು.
●ಗ್ರಾಮೀಣ ಅಥವಾ ನಗರ ಪ್ರದೇಶದ ಯಾವ ವಿದ್ಯಾರ್ಥಿನಿ ಬೇಕಾದರೂ ರಾಜ್ಯ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ಫಲಾನುಭವಿ ಆಗಬಹುದು.
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು :-
●ವಿದ್ಯಾರ್ಥಿನಿಯ ಆಧಾರ್ ಕಾರ್ಡ್
●ವಿದ್ಯಾರ್ಥಿನಿಯು ಸದಸ್ಯೆ ಆಗಿರುವ ಬಿಪಿಎಲ್ ರೇಷನ್ ಕಾರ್ಡ್
●ಪೋಷಕರ ಆದಾಯ ಪ್ರಮಾಣ ಪತ್ರ
●ವಿದ್ಯಾರ್ಥಿನಿಯ ಜಾತಿ ಪ್ರಮಾಣ ಪತ್ರ
●ವಿದ್ಯಾರ್ಥಿನಿಯ ಪಾಸ್ಪೋರ್ಟ್ ಅಳತೆಯ ಫೋಟೋ
●12ನೇ ತರಗತಿಯ ಅಂಕಪಟ್ಟಿ
●ನಿಯಮಿತವಾಗಿ ಕಾಲೇಜು ಶಿಕ್ಷಣ ಪಡೆದಿರುವ ಬಗ್ಗೆ ಹಾಜರಾತಿ ಪ್ರಮಾಣ ಪತ್ರ
●ವಿದ್ಯಾರ್ಥಿನಿಯು ಅಂಗವಿಕಲೆ ಆಗಿದ್ದಲ್ಲಿ ವೈದ್ಯರಿಂದ ದೃಢೀಕರಣ ಪತ್ರ
●ಮೊಬೈಲ್ ಸಂಖ್ಯೆ
●ಬ್ಯಾಂಕ್ ಖಾತೆ ವಿವರ