ಜಮೀನಿನ ಪಹಣಿ ಇದ್ದ ರೈತರಿಗೆ ಬಂಪರ್ ಗುಡ್ ನ್ಯೂಸ್.! ಕೃಷಿಗೆ ಬೇಕಾದ ಯಂತ್ರೋಪಕರಣಗಳನ್ನು ಉಚಿತವಾಗಿ ಪಡೆಯಲು ಹೀಗೆ ಮಾಡಿ.

 

WhatsApp Group Join Now
Telegram Group Join Now

ರಾಜ್ಯ ಸರ್ಕಾರದಿಂದ ರೈತ ಬಾಂಧವರಿಗೆ ಸಂತಸದ ಸುದ್ದಿ ಎಂದೇ ಹೇಳಬಹುದು. ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಪಡೆಯಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಆದ್ದರಿಂದ ರೈತರು ನಿಮಗೇನಾ ದರೂ ಖುಷಿಯ ಯಂತ್ರೋಪಕರಣಗಳನ್ನು ಪಡೆಯಬೇಕು ಎಂದಿದ್ದರೆ ಈ ಒಂದು ಉಪಯೋಗವನ್ನು ಬಳಸಿಕೊಂಡು ಅರ್ಜಿಯನ್ನು ಹಾಕಬಹುದಾಗಿದೆ. ಸರ್ಕಾರವು ರೈತರ ಹಿತಕ್ಕಾಗಿ ಇಂತಹ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಪ್ರತಿಯೊಬ್ಬ ರೈತರು ಕೂಡ ಈ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರವು ತಿಳಿಸಿದೆ. ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾರೆಲ್ಲ ಅರ್ಹರು ಹಾಗೂ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು ಹಾಗೂ ಯಾರೆಲ್ಲ ಎಷ್ಟು ಅರ್ಹರಾಗಿರಬೇಕು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ರಾಜ್ಯ ಸರ್ಕಾರವು ರೈತರಿಗೆ ಈ ರೀತಿಯಾದಂತಹ ಅವಕಾಶವನ್ನು ಕೊಡುತ್ತಿದ್ದು ಪ್ರತಿಯೊಬ್ಬ ರೈತರು ಕೂಡ ಇದನ್ನು ಉಪಯೋಗಿಸಿ ಕೊಂಡು ಋಷಿಯಲ್ಲಿ ಅಭಿವೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ಇಷ್ಟೆಲ್ಲ ರೀತಿಯ ಅವಕಾಶಗಳನ್ನು ಮಾಡಿಕೊಡುತ್ತಿದೆ.ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ಇದನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಹೊಂದುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಈ ಒಂದು ಅರ್ಜಿಯನ್ನು ಹಾಕುವುದರಿಂದ ಯಾವು ದೆಲ್ಲ ರೀತಿಯ ಕೃಷಿಗೆ ಬೇಕಾಗಿರುವಂತಹ ಯಂತ್ರೋಪಕರಣಗಳು ಸಿಗುತ್ತದೆ ಎಂದು ನೋಡುವುದಾದರೆ.ಯಂತ್ರೋಪಕರಣಗಳು ಅಂದರೆ ಕಳೆ ಕತ್ತರಿಸುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ರೋಟರಿ ಪವರ್ ವೀಡರ್, ಯಂತ್ರ ಚಾಲಿತ ಕೈಗಾಡಿಗಳು, ಔಷಧಿ ಸಿಂಪಡಣೆ ಯಂತ್ರ, ಡೀಸಲ್ ಪಂಪ್ ಸೆಟ್, ಗುಂಡಿ ತೆಗೆಯುವ ಡಿಗ್ಗರ್, ಗಿರಣಿ ಯಂತ್ರ, ರೋಟೋವೇಟರ್.

ಟ್ರ್ಯಾಕ್ಟರ್, ಪವರ್ ಟಿಲ್ಲರ್,ಈ ಎಲ್ಲ ಯಂತ್ರಗಳನ್ನು ಕೂಡ ರಿಯಾಯಿತಿ ದರದಲ್ಲಿ ನೀಡಲಾಗುವುದು. ಕೃಷಿ ಇಲಾಖೆಯಲ್ಲಿ SMAM ಯೋಜನೆ ಯಡಿಯಲ್ಲಿ ಕೃಷಿ ಯಂತ್ರೋಪಕರಣಗಳಿಗೆ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ಈ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಈ ಕೆಳಕಂಡ ಉಪಕರಣ ಗಳನ್ನು ಸಾಮಾನ್ಯ ರೈತರಿಗೆ ಶೇಕಡ 50 % ಹಾಗೂ ಪರಿಶಿಷ್ಟ ಜಾತಿ ಪಂಗಡದ ರೈತರಿಗೆ ಶೇಕಡ 90% ವರೆಗೆ ಸಬ್ಸಿಡಿ ದರದಲ್ಲಿ ನೀಡಲಾಗುವುದು.

ಹಾಗಾದರೆ ಈ ಒಂದು ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ ಪಹಣಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲಾತಿ ಪತ್ರಗಳು ರೈತರಿಂದ ಬೇಕಾಗಿರುತ್ತದೆ. ಈ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ಎಲ್ಲಿ ಅರ್ಜಿಯನ್ನು ಹಾಕಬೇಕು ಎಂದು ನೋಡುವುದಾದರೆ.

ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಈ ಒಂದು ವಿಷಯವಾಗಿ ಅರ್ಜಿಯನ್ನು ಪ್ರತಿಯೊಬ್ಬ ರೈತರು ಕೂಡ ಸಲ್ಲಿಸಬಹುದಾಗಿದೆ. ಈಗಾಗಲೇ ಈ ಸೌಲಭ್ಯ ಪಡೆದಂತಹ ರೈತರಿಗೆ ಸಬ್ಸಿಡಿಯನ್ನು ನೀಡಲಾಗುವುದಿಲ್ಲ, ಅನುದಾನ ಲಭ್ಯತೆ ಹಾಗೂ ಜೇಷ್ಠತೆ ಆಧಾರದ ಮೇಲೆ ಸಬ್ಸಿಡಿಯನ್ನು ನೀಡಲಾಗುವುದು ಎಂದು ಕೃಷಿ ಇಲಾಖೆ ತಿಳಿಸಿದೆ.

ದರ ಅರ್ಥ ಈಗಾಗಲೇ ಬೇರೆ ರೈತರು ಸಬ್ಸಿಡಿ ಹಣವನ್ನು ಉಪಯೋಗಿಸಿ ಕೊಂಡು ಮೇಲೆ ಹೇಳಿದಂತೆ ಯಂತ್ರೋಪಕರಣಗಳನ್ನು ಪಡೆದುಕೊಂಡಿದ್ದರೆ ಮತ್ತೆ ಇನ್ನೊಂದು ಅರ್ಜಿಯನ್ನು ಹಾಕುವುದರ ಮೂಲಕ ಮತ್ತೆ ಬೇರೆ ಯಂತ್ರೋಪಕರಣಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬದಲಿಗೆ ಬೇರೆ ಹೊಸದಾಗಿ ಅರ್ಜಿಯನ್ನು ಹಾಕುವವರಿಗೆ ಈ ಒಂದು ಅವಕಾಶ ಉಪಯೋಗವಾಗುತ್ತದೆ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now